ಭಾರತದಲ್ಲಿ ಮೊಬೈಲ್ ಬಳಸಲು ಕೊನೆ ದಿನ 'ಫೆಬ್ರವರಿ 6, 2018': ಯಾಕೆ ಗೊತ್ತಾ..?

ಈಗಾಗಲೇ ಟೆಲಿಕಾಂ ಕಂಪನಿಗಳಿಗೆ ಸರಕಾರವು ಆದೇಶವನ್ನು ಹೊರಡಿಸಲಾಗಿದೆ.

|

ಕೇಂದ್ರ ಸರ್ಕಾರವು ಆಧಾರ್ ಬಳಕೆಯನ್ನು ಹೆಚ್ಚು ಮಾಡಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಎಲ್ಲಾ ಸರಕಾರಿ ಸೇವೆಗಳನ್ನು ಪಡೆಯಲು ಆಧಾರ್ ಕಡ್ಡಾಯ ಮಾಡಿದ ರೀತಿಯಲ್ಲೇ ಪಾನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಲೇಬೇಕು ಎಂಬ ಆದೇಶವನ್ನು ಹೊರಡಿಸಿತ್ತು. ಇದರ ಬೆನ್ನಲೆ ಮೊಬೈಲ್ ಫೋನ್ ಹೊಂದಲು ಆಧಾರ್ ಕಡ್ಡಾಯ ಮಾಡಿದೆ.

ಭಾರತದಲ್ಲಿ ಮೊಬೈಲ್ ಬಳಸಲು ಕೊನೆ ದಿನ 'ಫೆಬ್ರವರಿ 6, 2018': ಯಾಕೆ ಗೊತ್ತಾ..?

ಓದಿರಿ: ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಲಂಚ ನೀಡಬೇಕಾಗಿಲ್ಲ: ಅದಕ್ಕಾಗಿ ಇಲ್ಲಿದೇ ಸುಲಭ ಉಪಾಯ..!!

ಈಗಾಗಲೇ ಟೆಲಿಕಾಂ ಕಂಪನಿಗಳಿಗೆ ಸರಕಾರದಿಂದ ಸೂಚನೆಯನ್ನು ಹೊರಡಿಸಲಾಗಿದ್ದು, ಎಲ್ಲಾ ಪ್ರೀಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಗ್ರಾಹಕರ ಆಧಾರ್ ಕೆವೈಸಿಯನ್ನು ಪಡೆಯುವಂತೆ ಸೂಚಿಸಲಾಗಿದೆ, ಇನ್ನು ಮುಂದೆ ಸಿಮ್ ಕಾರ್ಡ್‌ ನೀಡಬೇಕಾದರೆ ಆಧಾರ್ ಕಾರ್ಡ್‌ ವಿವರಗಳನ್ನು ಪಡೆದೆ ನೀಡಬೇಕು ಎಂದು ತಿಳಿಸಿದೆ.

ಈ ಕುರಿತು ಆದೇಶ ನೀಡಿರುವ ಟೆಲಿಕಾಂ ಡಿಪಾರ್ಟ್‌ಮೆಂಟ್, ಈಗಾಗಲೇ ವಿತರಿಸಿರುವ ಸಿಮ್‌ಗಳ ಆಧಾರ್ ಕೆವೈಸಿಯನ್ನು ಸಂಗ್ರಹಿಸುವಂತೆ ತಿಳಿಸಿದ್ದು, ಆಧಾರ್ ಇದ್ದರೇ ಮಾತ್ರವೇ ಸಿಮ್ ಕಾರ್ಡ್ ನೀಡುವಂತೆ ಸೂಚನೆ ನೀಡಿದೆ ಎನ್ನಲಾಗಿದೆ. ಜಿಯೋ ಇದೇ ಮಾದರಿಯಲ್ಲಿ ಸಿಮ್ ಕಾರ್ಡ್ ವಿತರಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.

ಭಾರತದಲ್ಲಿ ಮೊಬೈಲ್ ಬಳಸಲು ಕೊನೆ ದಿನ 'ಫೆಬ್ರವರಿ 6, 2018': ಯಾಕೆ ಗೊತ್ತಾ..?

ಓದಿರಿ: ಜಿಯೋದಿಂದ 12೦ GB 4G ಡೇಟಾ ಉಚಿತ: ಪಡೆದುಕೊಳ್ಳುವುದು ಹೇಗೆ..?

ಸಿಮ್ ಕಾರ್ಡ್‌ ಗಳ ದುರ್ಬಳೆಕೆಯಾಗುತ್ತಿರುವ ಹಿನ್ನಲೆಯಲ್ಲಿ ಇದಕ್ಕೆ ಕಡಿವಾಣಹಾಕಲು ಈ ಕ್ರಮಕ್ಕೆ ಮುಂದಾಗಿದ್ದು, ಇದಲ್ಲದೇ ಇನ್ನು ಮುಂದೆ ಮೊಬೈಲ್ ಖರೀದಿಸುವ ಸಂದರ್ಭದಲ್ಲಿ ಆಧಾರ್ ಕಾರ್ಡ್ ವಿವರ ನೀಡಲೇಬೇಕಾಗಿದೆ. ಇಲ್ಲವಾದರೆ ಸಿಮ್ ಮತ್ತು ಮೊಬೈಲ್ ಫೋನ್ ಬಳಸಲು ಅವಕಾಶವೇ ಇರುವುದಿಲ್ಲ.

ಹೊಸ ಸಿಮ್ ಕಾರ್ಡ್‌ ಪಡೆಯಲು ಆಧಾರ್ ಪಡೆಯುವುದು ಮತ್ತು ಹಳೇ ಸಿಮ್ ಕಾರ್ಡ್‌ಗಳ ಆಧಾರ್ ಕೆವೈಸಿಯನ್ನು ಪಡೆಯಲು ಟೆಲಿಕಾಂ ಕಂಪನಿಗಳಿಗೆ 2018ರ ಫೆಬ್ರವರಿ 6ರ ವರೆಗೆ ಅವಕಾಶ ನೀಡಲಾಗಿದೆ. ಇದರೊಳಗೆ ನಿಮ್ಮ ಫೊನ್ ಗಳನ್ನು ಆಧಾರ್ ಗೆ ಲಿಂಕ್ ಮಾಡಿಕೊಳ್ಳಿ.

Best Mobiles in India

Read more about:
English summary
Now the government is said to have made Aadhaar-based e-KYC mandatory for mobile phone connections. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X