
ಇವತ್ತಿನ ಬಿಪಿಒ ಕ್ಷೇತ್ರಕ್ಕೆ ಅಗತ್ಯವಾದ ಕೌಶಲ್ಯ ಹಾಗು ವಿದ್ಯಾರ್ಥಿಗಳ ಆಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಅಕ್ಸೆಂಚರ್ ಈ ಕೋರ್ಸ್ ಅನ್ನು ಸಿದ್ಧಪಡಿಸಿದ್ದು, ಬಿಪಿಒ ಫೈನಾನ್ಸ್ ಹಾಗು ಬಿಪಿಒ ಅಕೌಂಟ್ಸ್ ನಲ್ಲಿ ಕೋರ್ಸುಗಳು ಶುರುವಾಗಲಿವೆ ಎಂದು ಯೂನಿವರ್ಸಿಟಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಪಿಒ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಅಲ್ಲಿಗೆ ಬೇಕಾದ ಕೌಶಲ್ಯಗಳನ್ನು ಕಲಿಸುವ ಪ್ರಾಯೋಗಿಕ ಹಾಗು ಸಿದ್ಧಾಂತಗಳನ್ನು ಮಿಳಿತಗೊಂಡ ಉತ್ತಮ ಕೋರ್ಸ್ ಇದಾಗಿದ್ದು ಪದವಿ ಪೂರ್ವ, ಪದವಿ ಮುಗಿಸಿರುವ ಹಾಗು ಕೆಲಸ ಮಾಡುತ್ತಿರುವವರಿಗಾಗಿ ಬಹು ಉಪಯೋಗಿ ಕೋರ್ಸ್ ಇದಾಗಿದೆ.
ಕೋರ್ಸ್ ಗೆ ಅರ್ಜಿ ಸಲ್ಲಿಸಲು ಜುಲೈ 30 ಕಡೆಯ ದಿನಾಂಕವಾಗಿದ್ದು http://www.ignou.ac.in ನಲ್ಲಿ ಹೆಚ್ಚಿನ ವಿವರ ಪಡೆಯಬಹುದು.



























