ಜಿಯೋ ನಂತರ, ಏರ್‌ಟೆಲ್‌ ಗ್ರಾಹಕರಿಗೂ ಶುರು ಈ ಪ್ರಾಬ್ಲಮ್..?

ರಿಲಾಯನ್ಸ್ ಜಿಯೋ ನಂತರ ಏರ್‌ಟೆಲ್‌ ಗ್ರಾಹಕರು ದೇಶದಾದ್ಯಂತ ಹೆಚ್ಚು ಕರೆ ಸ್ಥಗಿತ ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾಹಕ ಸಹಾಯವಾಣಿ ಇಂದಲೂ ಪ್ರಯೋಜನವಿಲ್ಲ.

Written By:

ಇಷ್ಟು ದಿನ ಚೆ... ಚೆ... ಇಂಟರ್ನೆಟ್, ಮೆಸೇಜ್‌ ಎಲ್ಲಾ ಉಚಿತ ಓಕೆ, ಆದ್ರೆ ಈ ರೀತಿ ಕರೆ ಸ್ಥಗಿತ ಸಮಸ್ಯೆ ಯಾಕೆ ಎಂದು ಆಗಾಗ ಜಿಯೋ ಸಿಮ್ ಬಳಕೆದಾರರು ಸಿಕ್ಕಾಪಟ್ಟೆ ಬೈತಿದ್ರು. ಆದ್ರೆ ಈಗ ಭಾರತದ ಅತಿದೊಡ್ಡ ನೆಟ್‌ವರ್ಕ್‌ ಮತ್ತು ಪ್ರಪಂಚದ ಮೂರನೇ ಅತಿದೊಡ್ಡ ನೆಟ್‌ವರ್ಕ್‌ ಆದ ಭಾರತಿ ಏರ್‌ಟೆಲ್ ಬಳಕೆದಾರರು ಟ್ವಿಟರ್‌ನಲ್ಲಿ ಏರ್‌ಟೆಲ್‌ ಕರೆ ಸ್ಥಗಿತ ಬಗ್ಗೆ ಸಿಕ್ಕಾಪಟ್ಟಿ ದೂರು ನೀಡುತ್ತಿದ್ದಾರೆ.

ಜಿಯೋ ನಂತರ, ಏರ್‌ಟೆಲ್‌ ಗ್ರಾಹಕರಿಗೂ ಶುರು ಈ ಪ್ರಾಬ್ಲಮ್..?

ಹೌದು, ಜಿಯೋ ಸರದಿ ಮುಗಿಯಿತು. ಈಗ ಏರ್‌ಟೆಲ್‌ ಸರದಿ. ಏರ್‌ಟೆಲ್‌ ಬಳಕೆದಾರರು ಸಹ ಈಗೀಗ ಆಗಿಂದಾಗ್ಗೆ ಕರೆ ಸ್ಥಗಿತ ಸಮಸ್ಯೆ ಅನುಭವಿಸುತ್ತಿದ್ದಾರೆ.

ಅರಿಯಲೇಬೇಕಾಗಿರುವ 'ಮೈ ಏರ್‌ಟೆಲ್ ಅಪ್ಲಿಕೇಶನ್‌'ನ ಐದು ಮಹತ್ವಗಳು

ಏರ್‌ಟೆಲ್ ಬಳಕೆದಾರರು ಟ್ವಿಟರ್‌ನಲ್ಲಿ ಉತ್ತಮ ನೆಟ್‌ವರ್ಕ್‌ ಮತ್ತು ಅತಿವೇಗದ ಇಂಟರ್ನೆಟ್ ನೀಡುತ್ತೇವೆ ಎಂದು ಫೇಕ್ ಭರವಸೆಗಳನ್ನು ನೀಡಿದೆ ಎಂದು ಆರೋಪಿಸುತ್ತಿದ್ದಾರೆ. ಅಲ್ಲದೇ ದೇಶದಾದ್ಯಂತ ಹೆಚ್ಚಿನ ನೆಟ್‌ವರ್ಕ್‌ ಸಮಸ್ಯೆಯು ಇದೆ ಎಂದು ಆರೋಪಿಸಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಏರ್‌ಟೆಲ್‌ 4G ಬಗ್ಗೆ ಏನಂತಿರಾ?

ಡಿಜಿಟಲ್ ಇಂಡಿಯಾ ಗುರಿಯೊಂದಿಗೆ, ಭಾರತಿ ಏರ್‌ಟೆಲ್‌ ಉತ್ತಮ 4G ನೆಟ್‌ವರ್ಕ್‌ ನೀಡುವ ಬಗ್ಗೆ ನಿರಂತರವಾಗಿ ಜಾಹಿರಾತು ನೀಡುತ್ತಲೇ ಇದೆ. ಆದರೆ ಟೆಲಿಕಾಂ ಆಪರೇಟರ್ ಗುಡ್‌ ನ್ಯೂಸ್ ಅನ್ನು ಉತ್ತಮ ಅನುಭವದ ಬಗ್ಗೆ ಬಳಕೆದಾರರಿಂದ ಪಡೆಯಲೇ ಇಲ್ಲ. ಅದರ ಬದಲೂ ನೆಟ್‌ವರ್ಕ್‌ ಮತ್ತು ಕರೆ ಸ್ಥಗಿತದ ಬಗ್ಗೆ ಆರೋಪಗಳನ್ನು ಪಡೆಯುತ್ತಿದೆ.

ಏರ್‌ಟೆಲ್‌ ಗ್ರಾಹಕರು 4G ಬಗ್ಗೆ ಅಸಮಾಧಾನಗೊಂಡಿದ್ದಾರೆ

ಭಾರತದ ಅತಿದೊಡ್ಡ ನೆಟ್‌ವರ್ಕ್‌ ಎಂದು ಹೇಳುವ ಏರ್‌ಟೆಲ್‌, ಇತ್ತೀಚೆಗೆ ದೆಹಲಿ ಮತ್ತು ಇತರೆ ಎನ್‌ಸಿಆರ್ ಪ್ರದೇಶಗಳಲ್ಲಿ 4G ನೆಟ್‌ವರ್ಕ್‌ ಅನ್ನು ಪರೀಕ್ಷೆ ನಡೆಸುತ್ತಿದೆ. ಆದರೆ ಬಳಕೆದಾರರು 4G ನೆಟ್‌ವರ್ಕ್‌ ಬಗ್ಗೆ ತೀರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕರೆ ಸ್ಥಗಿತದ ಬಗ್ಗೆ ಹೆಚ್ಚು ಆರೋಪಿಸಿದ್ದಾರೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

3G ಬಳಕೆದಾರರಿಗು ಕರೆ ಸ್ಥಗಿತ ಸಮಸ್ಯೆ

4G ನೆಟ್‌ವರ್ಕ್‌ ಬಳಕೆದಾರರು ಮಾತ್ರವಲ್ಲದೇ, 3G ನೆಟ್‌ವರ್ಕ್‌ ಬಳಕೆದಾರರು ಕರೆ ಸ್ಥಗಿತ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ 3G ಬಳಕೆದಾರರೇ ಅತೀ ಕಡಿಮೆ ವೇಗದ ಇಂಟರ್ನೆಟ್ ಪಡೆಯುತ್ತಿರುವ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಕರೆ ಸ್ಥಗಿತ ಸಮಸ್ಯೆ ದೇಶದಾದ್ಯಂತ

ದೆಹಲಿ ಮತ್ತು ಎನ್‌ಸಿಆರ್ ಪ್ರದೇಶಗಳಲ್ಲಿ ಏರ್‌ಟೆಲ್‌ ನೆಟ್‌ವರ್ಕ್‌ ಬಗ್ಗೆ ದೂರುಗಳು ದಾಖಲಾಗಿವೆ. ಆದರೆ ಏರ್‌ಟೆಲ್‌ ಬಳಕೆದಾರರು ಬೆಂಗಳೂರು, ಕೊಲ್ಕತ್ತ ಸೇರಿದಂತೆ ದೇಶದಾದ್ಯಂತ ಕರೆ ಸ್ಥಗಿತ ಸಮಸ್ಯೆ ಎದುರಿಸುತ್ತಿದ್ದಾರೆ. ಟ್ವಿಟರ್‌ನಲ್ಲಿ, 20 ನಿಮಿಷಗಳ ಕರೆಯಲ್ಲಿ 10 ನಿಮಿಷ ಕರೆ ಸ್ಥಗಿತ ಸಮಸ್ಯೆ ಅನುಭವದ ಬಗ್ಗೆ ಆರೋಪಿಸಿದ್ದಾರೆ.

ಗ್ರಾಹಕ ಸಹಾಯವಾಣಿ ಇಂದ ಪ್ರಯೋಜನವಿಲ್ಲ

ದೇಶದಾದ್ಯಂತ ಏರ್‌ಟೆಲ್‌ ಗ್ರಾಹಕರು, ಗ್ರಾಹಕ ಸಹಾಯವಾಣಿ ಮೂಲಕ ಕರೆ ಸ್ಥಗಿತ ಮತ್ತು ಇಂಟರ್ನೆಟ್ ಕಡಿಮೆ ವೇಗದ ಬಗ್ಗೆ ಆರೋಪಿಸಿದ್ದರು, ಟೆಲಿಕಾಂ ಆಪರೇಟರ್ ಯಾವುದೇ ಕ್ರಮ ಕೈಗೊಂಡಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 Read more about:
English summary
After Reliance Jio, Airtel Users Experience Frequent Call Drops. To know more visit kannada.gizbot.com
Please Wait while comments are loading...
Opinion Poll

Social Counting