ಏರ್‌ಟೆಲ್‌ನಲ್ಲಿ ಹಿಂದಿಗಿಂತ ಅರ್ಧ ಬೆಲೆಯಲ್ಲಿ ಡಾಟಾ ಆಫರ್: 2GB 4G ಡಾಟಾ ರೂ.153

ಏರ್‌ಟೆಲ್‌ನ 153 ರೂನ 4G 2GB ಇಂಟರ್ನೆಟ್ ಪ್ಯಾಕ್ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಆಫರ್ ಕೇವಲ ಏರ್‌ಟೆಲ್‌ ಪ್ರೀಪೇಡ್‌ ಗ್ರಾಹಕರಿಗೆ ಮಾತ್ರ.

By Suneel
|

ರಿಲಾಯನ್ಸ್ ಜಿಯೋದ ಇತ್ತೀಚಿನ ಪ್ರಕಟಣೆಯಾದ ಲೈಫ್‌ ಟೈಮ್ ಉಚಿತ ಕರೆ ಸೇವೆ, ಈಗ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಸುಂಟರಗಾಳಿ ಅಲೆ ಶುರುವಾಗಿದೆ. ಜಿಯೋ ದೊಡ್ಡ ಪ್ರತಿಸ್ಪರ್ಧಿಯಾದ ಏರ್‌ಟೆಲ್(Airtel) ಈ ಬಾರಿ ಯಾವುದೇ ಟ್ರಿಕ್ಸ್‌ ಇಲ್ಲದ ಪ್ಲಾನ್‌ ಅನ್ನು ಹೊರತಂದಿದೆ.

ಏರ್‌ಟೆಲ್‌ ತನ್ನ ಹೊಸ ಪ್ಲಾನ್‌ನಲ್ಲಿ ಹಿಂದಿಗಿಂತ ಅರ್ಧ ಬೆಲೆಯಲ್ಲಿ 4G ಪ್ಲಾನ್‌ ಅನ್ನು ತನ್ನ ಪ್ರೀಪೇಡ್‌ ಗ್ರಾಹಕರಿಗೆ ನೀಡಲು ರೆಡಿಯಾಗಿದೆ. ಹೌದು, 153 ರೂಗೆ 2GB 4G ಡಾಟಾ ನೀಡುತ್ತಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ರಿಲಾಯನ್ಸ್ ಜಿಯೋ ಮಾತ್ರವಲ್ಲ, ಏರ್‌ಟೆಲ್‌ ಸಹ 10GB 4G ಡಾಟಾ ಉಚಿತವಾಗಿ ನೀಡುತ್ತಿದೆ

ಹೊಸ ಪ್ಲಾನ್ ಪಡೆಯುವುದು ಹೇಗೆ?

ಹೊಸ ಪ್ಲಾನ್ ಪಡೆಯುವುದು ಹೇಗೆ?

ಮೊದಲೇ ಹೇಳಿದಂತೆ ಈ ಪ್ಲಾನ್‌ ಅನ್ನು ಏರ್‌ಟೆಲ್ ಪ್ರೀಪೇಡ್‌ ಗ್ರಾಹಕರು ಮಾತ್ರ ಪಡೆಯಬಹುದು. ಏರ್‌ಟೆಲ್‌ ಪ್ರೀಪೇಡ್‌ ಗ್ರಾಹಕರು 153 ರೂ ರೀಚಾರ್ಜ್‌ ಅನ್ನು ಆನ್‌ಲೈನ್‌ ಅಥವಾ ಆಫ್‌ಲೈನ್‌ ಮೂಲಕ ಪಡೆಯಿರಿ. ನಂತರ ನಿಮ್ ನಂಬರ್‌ಗೆ 2GB 4G ಡಾಟಾ ಕ್ರೆಡಿಟ್‌ ಆಗುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

28 ದಿನಗಳ ವ್ಯಾಲಿಡಿಟಿ

28 ದಿನಗಳ ವ್ಯಾಲಿಡಿಟಿ

153 ರೂನ 2GB 4G ಡಾಟಾ ಪ್ಯಾಕ್ ಒಟ್ಟಾರೆ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಅಲ್ಲದೇ ಈ ಪ್ಲಾನ್‌ ಕೇವಲ ಕೆಲವು ಆಯ್ಕೆಗೊಂಡ ವೃತ್ತಗಳಿಗೆ ಮಾತ್ರ ವ್ಯಾಲಿಡ್ ಅಗಿವೆ. ಈ ಪ್ಯಾಕ್ ಅನ್ನು ಕಂಪನಿ ಮುಂಬರುವ ದಿನಗಳಲ್ಲಿ ಇತರೆ ವೃತ್ತಗಳಿಗೂ ಪ್ರಕಟಣೆ ಮಾಡಲಿದೆ.

ರಿಲಾಯನ್ಸ್ ಜಿಯೋಗಿಂತ ಹೇಗೆ ಭಿನ್ನ?

ರಿಲಾಯನ್ಸ್ ಜಿಯೋಗಿಂತ ಹೇಗೆ ಭಿನ್ನ?

ನೀವೆನಾದ್ರು ಈ ಪ್ಲಾನ್ ರಿಲಾಯನ್ಸ್ ಜಿಯೋಗಿಂತ ಉತ್ತಮವೇ ಎಂದು ಚಿಂತಿಸುತ್ತಿದ್ದಲ್ಲಿ ನಾವು ತಿಳಿಸುತ್ತೇವೆ. ರಿಲಾಯನ್ಸ್ ಜಿಯೋ ಈಗಾಗಲೇ 2GB 4G ಡಾಟಾ ರೀತಿಯ ಪ್ಲಾನ್ ಅನ್ನು ಅನ್‌ಲಿಮಿಟೆಡ್ ರಾತ್ರಿ ಡಾಟಾ ಆಕ್ಸೆಸ್‌ನೊಂದಿಗೆ ಪರಿಚಯಿಸಿದೆ. ಅಲ್ಲದೇ ಇತರೆ ಹಲವು ಗುಡ್ಡೀಸ್‌ಗಳಾದ ಉಚಿತ ವಾಯ್ಸ್ ಕರೆ ಮತ್ತು ಇತರೆ ಸೇವೆಗಳು ಇವೆ. ಆದರೆ ರಿಲಾಯನ್ಸ್ ಜಿಯೋದ ಈ ಪ್ಯಾಕ್‌ 21 ದಿನಗಳ ವ್ಯಾಲಿಡಿಟಿ ಹೊಂದಿದೆ ಮತ್ತು ಗ್ರಾಹಕರು 299 ರೂ ಅನ್ನು ಪ್ಯಾಕ್‌ ಹೊಂದಲು ರೀಚಾರ್ಜ್‌ ಮಾಡಿಸಬೇಕು.

ರಿಲಾಯನ್ಸ್ ಜಿಯೋಗೆ ಹೋಲಿಸಿದರೆ ಟ್ಯಾರಿಫ್‌ ಪ್ಲಾನ್ ಏರ್‌ಟೆಲ್‌ನಲ್ಲಿ ಜಿಯೋಗಿಂತ ಶೇ.50 ರಷ್ಟು ಚೀಪ್‌ ಆಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಏರ್‌ಟೆಲ್‌ V/S ಏರ್‌ಟೆಲ್‌

ಏರ್‌ಟೆಲ್‌ V/S ಏರ್‌ಟೆಲ್‌

ಈ ಆಫರ್ ಒಂದು ರೀತಿ ಏರ್‌ಟೆಲ್‌ V/S ಏರ್‌ಟೆಲ್‌ ಪೈಪೋಟಿ ಆಗಿದೆ. ಸುನಿಲ್ ಭಾರತಿ ಮಿತ್ತಲ್ ಮಾಲೀಕತ್ವದ ಏರ್‌ಟೆಲ್ 1GB ಡಾಟಾವನ್ನು 129 ರೂಗೆ ಅಥವಾ 15GB 4G ಡಾಟಾವನ್ನು 1GB ಬೆಲೆಗೆ ಆಫರ್‌ ಅನ್ನು ಲಾಂಚ್‌ ಮಾಡಿತ್ತು. ಈ ಆಫರ್ ಇನ್ನೂ ಸಹ ಟೌನ್‌ಗಳಲ್ಲಿ ಹರಿದಾಡುತ್ತಿದೆ.

ಏರ್‌ಟೆಲ್‌ ತನ್ನ ಸಾಮಾನ್ಯ 2GB ಡಾಟಾ ಬೆಲೆಗಿಂತ ಅರ್ಧ ಬೆಲೆಗೆ ಈಗ 2GB 4G ಡಾಟಾವನ್ನು ನೀಡುತ್ತಿದೆ.

ಇತರೆ ಟೆಲಿಕಾಂಗಳಿಂದ 1GB 4G/3G ಡಾಟಾಗೆ ರೂ.150 ಚಾರ್ಜ್‌

ಇತರೆ ಟೆಲಿಕಾಂಗಳಿಂದ 1GB 4G/3G ಡಾಟಾಗೆ ರೂ.150 ಚಾರ್ಜ್‌

ರಿಲಾಯನ್ಸ್ ಜಿಯೋ ಮಾತ್ರವಲ್ಲದೇ, ವೊಡಾಫೋನ್, ಐಡಿಯಾ, ಬಿಎಸ್‌ಎನ್‌ಎಲ್‌, ಎಂಟಿಎಸ್ ಇಂಡಿಯಾ ಟೆಲಿಕಾಂಗಳು 1GB 4G/3G ಡಾಟಾಗೆ ರೂ.150 ಚಾರ್ಜ್‌ ಮಾಡುತ್ತಿವೆ. ಏರ್‌ಟೆಲ್‌ನ ಈ ಬೆನಿಫಿಟ್ ಪಡೆಯಲು 250 ರೂ ಅನ್ನು ಗ್ರಾಹಕರು ಇತರೆ ಟೆಲಿಕಾಂಗಳಿಗೆ ನೀಡಬೇಕಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Airtel to Offer 2GB 4G data at Rs. 153 With No Upfront Cost. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X