ಅಮೆಜಾನ್‌ಗೆ 70 ಲಕ್ಷ ಟೋಪಿ ಹಾಕಿದ ಬೆಂಗಳೂರು ಮಹಿಳೆ: ಹೇಗೆ ಗೊತ್ತಾ,,??

ಅಮೆಜಾನ್‌ಗೆ ಬೆಂಗಳೂರು ಮೂಲಕದ ಮಹಿಳೆಯೊಬ್ಬರು 70 ಲಕ್ಷ ಟೋಪಿ ಹಾಕಿದ್ದಾರೆ ಎನ್ನಲಾಗಿದೆ.

|

ಭಾರತೀಯ ಆನ್‌ಲೈನ ಶಾಂಪಿಂಗ್ ಮಾರುಕಟ್ಟೆಯಲ್ಲಿ ದೈತ್ಯಕಾರವಾಗಿ ಬೆಳೆದಿರುವ ಅಮೆಜಾನ್‌ಗೆ ಬೆಂಗಳೂರು ಮೂಲಕದ ಮಹಿಳೆಯೊಬ್ಬರು 70 ಲಕ್ಷ ಟೋಪಿ ಹಾಕಿದ್ದಾರೆ ಎನ್ನಲಾಗಿದೆ. ಅಮೆಜಾನ್ ರಿಟರ್ನ್ ಪಾಲಿಸಿಯ ದುರುಪಯೋಗವನ್ನು ಪಡೆದುಕೊಂಡ ಮಹಿಳೆ ಓರ್ಜಿನಲ್ ಪದಾರ್ಥಗಳನ್ನು ಪಡೆದು, ನಕಲಿ ವಸ್ತುಗಳನ್ನು ಹಿಂತಿರುಗಿಸಿ ಮೋಸ ಮಾಡುತ್ತಿದ್ದರು ಎನ್ನಲಾಗಿದೆ.

ಅಮೆಜಾನ್‌ಗೆ 70 ಲಕ್ಷ ಟೋಪಿ ಹಾಕಿದ ಬೆಂಗಳೂರು ಮಹಿಳೆ: ಹೇಗೆ ಗೊತ್ತಾ,,??

ಪಶ್ವಿಮ ಬಂಗಾಳ ಮೂಲದ ದೀಪಾನ್ವತಿ ಘೋಷ್ ಹೆಸರಿನ ಮಹಿಳೆ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಈಕೆ ಅಮೆಜಾನ್ ಕಂಪನಿ ನೀಡುತ್ತಿದ್ದ ರಿಟರ್ನ್ ಪಾಲಿಸಿಯ ದುರುಪಯೋಗವನ್ನು ಪಡೆದುಕೊಂಡು ಅನೇಕ ವಸ್ತುಗಳನ್ನು ಪಡೆದುಕೊಂಡು ನಂತರ ಅವುಗಳ ಬದಲಿಗೆ ಬೇರೆ ನಕಲಿ ವಸ್ತುಗಳನ್ನು ಅಮೆಜಾನ್‌ಗೆ ಹಿಂತಿರುಗಿಸಿ ಹಣ ಮಾಡುತ್ತಿದ್ದರು ಎನ್ನಲಾಗಿದೆ.

ಅಲ್ಲದೇ ಈಕೆ ಪಡೆದುಕೊಂಡ ಅಸಲಿ ವಸ್ತುಗಳನ್ನು ಮತ್ತೊಂದು ಇ-ಕಾರ್ಮಸ್ ಪೋರ್ಟಲ್ ನಲ್ಲಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇದುವರೆಗೂ ಈಕೆ ಅಮೆಜಾನ್ ನಿಂದ 108 ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಖರೀಸಿದ್ದರು ಎನ್ನಲಾಗಿದೆ, ಪ್ರತಿ ಭಾರಿ ಈಕೆ ವಸ್ತುವನ್ನು ಪಡೆದುಕೊಂಡ ನಂತರದಲ್ಲಿ ಅದನ್ನು ರಿಟನ್ ಮಾಡುತ್ತಿದ್ದರು. ಹಾಗಾಗಿ ಆಕೆಯ ಮೇಲೆ ಕಣ್ಣಿಟ್ಟ ಸಂದರ್ಭದಲ್ಲಿ ಸತ್ಯ ಸಂಗತಿ ಬಯಲಾಗಿದೆ.

ಅಮೆಜಾನ್‌ಗೆ 70 ಲಕ್ಷ ಟೋಪಿ ಹಾಕಿದ ಬೆಂಗಳೂರು ಮಹಿಳೆ: ಹೇಗೆ ಗೊತ್ತಾ,,??

ಈಕೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಪ್ರಕರಣದ ನಂತರ ಎಚ್ಚೆತ್ತುಕೊಂಡಿರುವ ಅಮೆಜಾನ್ ತನ್ನ ರಿಟನ್ ಪಾಲಿಸಿಯನ್ನು ಮತ್ತಷ್ಟು ಬಿಗಿಗೊಳಿಸಿದೆ ಒಮ್ಮೆ ನೀವು ಹಿಂತಿರುಗಿಸಿದ ವಸ್ತುಗಳು ಸರಿಯಾಗಿವೆ ಎಂಬು ತಿಳಿದ ನಂತರವೇ ಹಣವನ್ನು ಹಿಂತಿರುಗಿಸುವ ವ್ಯವಸ್ಥೆಯನ್ನು ಮಾಡಿದೆ.

Best Mobiles in India

Read more about:
English summary
A Bengaluru woman has been apprehended for duping Amazon India and pocketing nearly Rs 70 lakh through her fraudulent dealings with the e-commerce portal. to more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X