ಅಮೆಜಾನ್‌ ಪ್ರಯೋಗ:ಡ್ರೋನ್‌ ಮೂಲಕ ವಸ್ತುಗಳು ಮನೆ ಬಾಗಿಲಿಗೆ!

By Ashwath
|

ಆನ್‌ಲೈನ್‌ ಶಾಪಿಂಗ್‌ನಲ್ಲಿ ಬುಕ್‌ ಮಾಡಿದ ವಸ್ತುಗಳನ್ನು ಸೇಲ್ಸ್‌ ಬಾಯ್‌ ನಮಗೆ ವಿತರಿಸುತ್ತಾನೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇನ್ನು ಮುಂದೆ ಆನ್‌ಲೈನ್‌ಲ್ಲಿ ಬುಕ್‌ ಮಾಡಿರುವ ವಸ್ತುಗಳು ನಿಮ್ಮ ಮನೆಗೆ ಡ್ರೋನ್‌ ಮೂಲಕ ಬಂದರೂ ಆಶ್ಚರ್ಯವಿಲ್ಲ.

ಉತ್ಪನ್ನಗಳನ್ನು ಕೇವಲ ರಿಟೇಲ್‌ ಅಂಗಡಿಗಳಲ್ಲಿ ಮಾತ್ರ ಖರೀದಿಸದೇ ಆನ್‌ಲೈನ್‌ಲ್ಲೂ ಖರೀದಿಸಬಹುದು ಎಂದು ಸಾಧಿಸಿ ತೋರಿಸಿದ ಅಮೆಜಾನ್‌ ಸಂಸ್ಥಾಪಕ ಜೆಫ್ ಬಿಝಾಸ್ ಈಗ ಉತ್ಪನ್ನಗಳನ್ನು ಗ್ರಾಹಕರ ಮನೆಗೆ ಪುಟ್ಟ ಡ್ರೋನ್‌ ಹೆಲಿಕಾಪ್ಟರ್‌ ಮೂಲಕ ತಲುಪಿಸಲು ಯೋಜನೆ ರೂಪಿಸಿದ್ದಾರೆ.

ಆನ್‌ಲೈನ್‌ ಶಾಪಿಂಗ್‌ನಲ್ಲಿ ಖರೀದಿಸಿದ ವಸ್ತುಗಳು ತುಂಬಾ ತಡವಾಗಿ ವಿತರಣೆಯಾಗುತ್ತಿದೆ ಎನ್ನುವ ದೂರು ಗ್ರಾಹಕರಿಂದ ಕೇಳಿಬರುತ್ತಿದೆ. ಜೊತೆಗೆ ಬುಕ್‌ ಮಾಡಿದ ವಸ್ತುಗಳ ಬದಲಿಗೆ ಬೇರೆ ವಸ್ತುಗಳು ಪ್ಯಾಕ್‌ ಆಗಿ ಬರುತ್ತಿವೆ ಎನ್ನುವ ಆರೋಪ ಸಹ ಗ್ರಾಹಕರು ಮಾಡುತ್ತಿದ್ದಾರೆ. ಈ ಎಲ್ಲಾ ದೂರುಗಳ ನಿವಾರಣೆಗೆ ಕಂಪೆನಿಯ ಗೋದಾಮಿನಿಂದ ನೇರವಾಗಿ ವಸ್ತುಗಳನ್ನು ಕೇವಲ 30 ನಿಮಿಷದಲ್ಲೇ ಗ್ರಾಹಕರ ಮನೆಗೆ ತಲುಪಿಸಲು ಅಮೆಜಾನ್‌.ಕಾಂ ಡ್ರೋನ್‌ ಗಳ ಮೂಲಕ ವಸ್ತುಗಳ ಸಾಗಾಟಕ್ಕೆ ಮುಂದಾಗಿದೆ.

ಅಕ್ಟಾಕಾಪ್ಟರ್‌(octocopter)ಹೆಸರಿನ ಪುಟ್ಟ ಹೆಲಿಕಾಪ್ಟರ್‌ನಂತಿರುವ ವಾಹನದಲ್ಲಿ ವಸ್ತುಗಳನ್ನು ಗ್ರಾಹಕರ ಮನೆಯ ಬಾಗಿಲಿಗೆ ತಲುಪಿಸಲು ಮುಂದಾಗಿದ್ದು,ಈ ಸಂಬಂಧ ಅಮೆಜಾನ್‌.ಕಾಂ ಅಮೆರಿಕದ ಎಫ್‌ಎಎ(Federal Aviation Administration) ಚರ್ಚಿಸುತ್ತಿದೆ. ಒಂದು ವೇಳೆ ಸಮಸ್ಯೆಗಳು ಎಲ್ಲಾ ನಿವಾರಣೆಯಾದಲ್ಲಿ2015 ರಲ್ಲಿ ಅಕ್ಟಾಕಾಪ್ಟರ್‌ ಮೂಲಕ ವಸ್ತುಗಳು ಅಮೆರಿಕದ ಗ್ರಾಹಕರ ಮನೆಯ ಬಾಗಿಲಿಗೆ ತಲುಪಲಿದೆ.

ಇದನ್ನೂ ಓದಿ: ಅಮೆಜಾನ್.ಕಾಂ ಗೋದಾಮು ಹೇಗಿದೆ ಗೊತ್ತಾ ?

ಡ್ರೋನ್‌ ಮೂಲಕ ವಸ್ತುಗಳು ಮನೆ ಬಾಗಿಲಿಗೆ!

ಡ್ರೋನ್‌ ಮೂಲಕ ವಸ್ತುಗಳು ಮನೆ ಬಾಗಿಲಿಗೆ!

ಡ್ರೋನ್‌‌ಗಳಿಗಾಗಿ ಪ್ರತ್ಯೇಕ ಇಂಟರ್‌ನೆಟ್ ಸಂಚಾರ­ಜಾಲವನ್ನು ರಚಿಸಲಾಗುತ್ತದೆ. ಜಿಪಿಎಸ್ ಸಂಕೇತಗಳನ್ನು ಗ್ರಹಿಸಿ ಗ್ರಾಹಕನ ಮನೆಯನ್ನು ತಲುಪಿ ವಸ್ತುಗಳನ್ನು ಇಳಿಸಿ ಪುನಃ ತಮ್ಮ ಗೋದಾಮಿಗೆ ಇವುಗಳು ತೆರಳುವಂತೆ ವ್ಯವಸ್ಥೆ ರೂಪಿಸಲಾಗುತ್ತದೆ.

ಡ್ರೋನ್‌ ಮೂಲಕ ವಸ್ತುಗಳು ಮನೆ ಬಾಗಿಲಿಗೆ!

ಡ್ರೋನ್‌ ಮೂಲಕ ವಸ್ತುಗಳು ಮನೆ ಬಾಗಿಲಿಗೆ!


ಈಗಾಗಲೇ 2.3ಕೆ.ಜಿ ತೂಗುವ ವಸ್ತುವನ್ನುಈ ಡ್ರೋನ್‌ಗಳು ಹೊತ್ತುಕೊಂಡುವಂತೆ ರೂಪಿಸಲಾಗಿದೆ.ಅಮೆಜಾನ್‌‌.ಕಾಂನಲ್ಲಿ ಮಾರಾಟವಾಗುತ್ತಿರುವ ಶೇ.86ರಷ್ಟು ವಸ್ತುಗಳು 2.3 ಕೆ.ಜಿಗಿಂತ ಕಡಿಮೆ ತೂಕವನ್ನು ಹೊಂದಿರುವುದರಿಂದ ಕ್ಷಿಪ್ರ ಸಾಗಾಟಕ್ಕೆ ಇದು ತುಂಬಾ ಸಹಕಾರಿ ಎನ್ನುವ ಭಾವನೆಯನ್ನು ಜೆಫ್ ಬಿಝಾಸ್ ಹೊಂದಿದ್ದಾರೆ.
ಡ್ರೋನ್‌ ಮೂಲಕ ವಸ್ತುಗಳು ಮನೆ ಬಾಗಿಲಿಗೆ!

ಡ್ರೋನ್‌ ಮೂಲಕ ವಸ್ತುಗಳು ಮನೆ ಬಾಗಿಲಿಗೆ!


ಈ ಡ್ರೋನ್‌‌ಗಳಲ್ಲಿ ವಸ್ತುಗಳನ್ನು ಸಾಗಿಸಲು ಪ್ರತ್ಯೇಕ ಇಂಟರ್‌ನೆಟ್ ಸಂಚಾರ­ಜಾಲವನ್ನು ರಚಿಸಲಾಗುತ್ತದೆ.ಇಂದಿನ ಕಾಲದಲ್ಲಿ ಟೆಕ್‌ ಕಂಪೆನಿಗಳು ಎಷ್ಟೇ ಸುರಕ್ಷತೆ ವಹಿಸಿದ್ದರೂ ವೆಬ್‌ಸೈಟ್‌ಗಳನ್ನೇ ಹ್ಯಾಕ್‌ ಮಾಡುವ ಹ್ಯಾಕರ್‌ಗಳಿದ್ದಾರೆ. ಒಂದು ವೇಳೆ ವೆಬ್‌ಸೈಟ್‌ ಹ್ಯಾಕ್‌ ಆಗಿ ಆರ್ಡರ್‌ ಮಾಡಿರುವ ವ್ಯಕ್ತಿಯ ಬದಲಾಗಿ ಬೇರೆ ವ್ಯಕ್ತಿಯ ಮನೆಗೆ ಹೋಗುವಂತೆ ಡ್ರೋನ್‌ ದಾರಿಯನ್ನೇ ಬದಲಾಯಿಸುವ ಸಾಧ್ಯತೆ ಇಲ್ಲದ್ದಿಲ್ಲ. ಹೀಗಾಗಿ ಈ ರೀತಿ ಹ್ಯಾಕ್‌ ಆಗದಂತೆ ವೆಬ್‌ಸೈಟ್‌‌ನ್ನು ರೂಪಿಸಬೇಕಾಗುತ್ತದೆ.

ಡ್ರೋನ್‌ ಮೂಲಕ ವಸ್ತುಗಳು ಮನೆ ಬಾಗಿಲಿಗೆ!

ಡ್ರೋನ್‌ ಮೂಲಕ ವಸ್ತುಗಳು ಮನೆ ಬಾಗಿಲಿಗೆ!


ಇನ್ನೂಈ ಡ್ರೋನ್‌ಗಳು ಹಾರಿಕೊಂಡು ಹೋಗುತ್ತಿರುವ ವೇಳೆ ಜನರಿಗೆ ಅಥವಾ ಕಟ್ಟಡಗಳಿಗೆ ಡಿಕ್ಕಿ ಹೊಡೆದು ಬೀಳಬಾರದು.ಬ್ಯಾಟರಿ ಚಾರ್ಜ್‌‌‌ ಖಾಲಿಯಾಗಿ ಕೆಳಗೆ ಬೀಳದಂತೆ ಎಚ್ಚರವಹಿಸಬೇಕಾಗುತ್ತದೆ.

ಡ್ರೋನ್‌ ಮೂಲಕ ವಸ್ತುಗಳು ಮನೆ ಬಾಗಿಲಿಗೆ!

ಡ್ರೋನ್‌ ಮೂಲಕ ವಸ್ತುಗಳು ಮನೆ ಬಾಗಿಲಿಗೆ!


ಡ್ರೋನ್‌ ಹಾರಾಟವನ್ನು ಆರಂಭಿಸುವುದಾದರೂ ಆಯಾ ಪ್ರದೇಶದ ವಿಮಾನ ಸಂಚಾರ ನಿಯಮಗಳಲ್ಲಿ ಬದಲಾವಣೆ ಮಾಡುವುದು ಅನಿವಾರ್ಯ. ಈಗಾಗಲೇ ಅಮೆಜಾನ್‌.ಕಾಂ ಅಮೆರಿಕದ ಎಫ್‌ಎಎ(Federal Aviation Administration) ಚರ್ಚಿಸಿದೆ ಎಂದು ಹೇಳಿದೆ.ಒಂದು ವೇಳೆ ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ ಅಮೆರಿಕದಲ್ಲಿ ಯಶಸ್ವಿಯಾದಲ್ಲಿ ನಂತರ ಎಲ್ಲಾ ದೇಶಗಳಲ್ಲೂ ಈ ಹೊಸ ಡ್ರೋನ್‌ ಪರಿಕಲ್ಪನೆ ಆರಂಭವಾಗಲಿದೆ.

ಡ್ರೋನ್‌ ಮೂಲಕ ವಸ್ತುಗಳು ಮನೆ ಬಾಗಿಲಿಗೆ!


ವಿಡಿಯೋ ವೀಕ್ಷಿಸಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X