ಈ ಸಾಧನಗಳು 2012ರಲ್ಲಿ ಗ್ಯಾಡ್ಜೆಟ್ ಕ್ರಾಂತಿಯನ್ನು ತರಲಿದೆಯೆ?

By Super
|

2012ರಲ್ಲಿ ತಮ್ಮ ವಸ್ತುಗಳ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲು ಅನೇಕ ಯೋಜನೆಗಳನ್ನು ರೂಪಿಸಿಕೊಂಡಿವೆ, ಅತ್ಯಾಧುನಿಕವಾದ ತಂತ್ರಜ್ಞಾನವನ್ನು ಅಳವಡಿಸಿ ಗ್ಯಾಡ್ಜೆಟ್ ಗಳು ಮತ್ತಷ್ಟು ದಕ್ಷತೆಯನ್ನು ಹೊಂದುವಂತೆ ಮಾಡಿವೆ. ಹೀಗೆ ಗ್ಯಾಡ್ಜೆಟ್ ಲೋಕದಲ್ಲಿ ಕಣ್ಣಾಡಿಸಿದಾಗ ಈ ವರ್ಷದಲ್ಲಿ ಗ್ಯಾಡ್ಜೆಟ್ ಲೋಕದಲ್ಲಿ ಕ್ರಾಂತಿಯನ್ನು ತರುವ ಉತ್ತಮ ಗುಣ ಲಕ್ಷಣಗಳನ್ನು ಹೊಂದಿರುವ ಗ್ಯಾಡ್ಜೆಟ್ ಗಳ ಪಟ್ಟಿ ಇಲ್ಲಿದೆ ನೋಡಿ.

1. ಐಫೋನ್ 5:

ಈ ಸಾಧನಗಳು 2012ರಲ್ಲಿ ಗ್ಯಾಡ್ಜೆಟ್ ಕ್ರಾಂತಿಯನ್ನು ತರಲಿದೆಯೆ?


ತೆಳ್ಳಗೆ ಆಕರ್ಷಕ ವಿನ್ಯಾಸವನ್ನು ಹೊಂದಿರುವ ಈ ಐಫೋನ್ ಈ ವರ್ಷದ ಅತ್ಯುತ್ತಮವಾದ ಇಯರ್ ಫೋನ್ ಆಗಿದ್ದು, ಇದರಲ್ಲಿ ಐಫೋನ್ 4sನಲ್ಲಿದ್ದಂತಹ ಲೋಪಗಳನ್ನು ಇದರಲ್ಲಿ ಇಲ್ಲದಂತೆ ತಯಾರಿಸಲಾಗಿದೆ. ಈ ಐಫೋನ್ ಅಲ್ಯೂಮಿನಿಯಂನ ಹೊರಮೈ ಮತ್ತು ದೊಡ್ಡ ಡಿಸ್ ಪ್ಲೇ ಹೊಂದಿದೆ ಎಂಬ ಸುದ್ಧಿ ಕೇಳಿಬರುತ್ತಿದ್ದು ಈ ಮೊಬೈಲ್ ಇನ್ನ ಸ್ವಲ್ಪ ದಿನದಲ್ಲಿಯೆ ಮಾರುಕಟ್ಟೆ ಪ್ರವೇಶಸಲಿದೆ.

2.ಎಕ್ಸ್ ಬಾಕ್ಸ್ 720:

ಎಕ್ಸ್ ಬಾಕ್ಸ್ ಅತ್ಯುತ್ತಮವಾದ ಗ್ರಾಫಿಕ್ ಸಪೋರ್ಟ್ ನೀಡಲು ತೀರ್ಮಾನಿಸಿದ್ದು , ಇದು ಇದೂವರೆಗೆ ಕಂಡಿರದಂತಹ ಸೂಪರ್ ಗ್ರಾಫಿಕ್ಸ್ ಗ್ಯಾಡ್ಜೆಟ್ ಆಗಲಿದೆ. ಇದರಲ್ಲಿ 8 ಕೋರ್ ಪ್ರೊಸೆಸರ್ ಬಳಸಲಾಗಿದೆ ಎಂಬ ಸುದ್ದಿ ಕೂಡ ಕೇಳಿ ಬರುತ್ತಿದೆ. ಅದಲ್ಲದೆ 3ಡಿ ಬೆಂಬಲ ಕೂಡ ಇರುವ ಸಾಧ್ಯತೆ ಇದೆ ಎಂದು ಕೇಳಿ ಬರುತ್ತದೆ. ಈ ಗ್ಯಾಡ್ಜೆಟ್ 2012ರಲ್ಲಿ ಗ್ಯಾಡ್ಜೆಟ್ ಲೋಕದಲ್ಲಿ ಹೊಸ ಕ್ರಾಂತಿಗೆ ತಯರಾಗಿ ಬರುತ್ತಿದೆ.

3. ಐಪ್ಯಾಡ್3:

ಐಪ್ಯಾಡ್ 2 ತನ್ನ ಅಪಾರ ಯಶಸ್ಸಿನ ನಂತರ ಆಪಲ್ ಐಪ್ಯಾಡ್ 3 ಅನ್ನು ಈ ವರ್ಷದಲ್ಲಿ ತರಲಿದೆ. ಇದು ಕೋಡ್ ಪ್ರೊಸೆಸರ್ ಬಳಸಿ ಕಾರ್ಯವನ್ನು ನಿರ್ವಹಿಸಲಿದೆ ಎಂಬ ಸುದ್ದಿ ಕೂಡ ಹೀಗಾಗಲೆ ಹಬ್ಬಿದೆ. ಅದರ ಜೊತೆಗೆ ಅತ್ಯುತ್ತಮವಾದ ಸ್ಕ್ರೀನ್ ತಂತ್ರಜ್ಞಾನವನ್ನು ಹೊಂದಿದೆ ಎಂದು ಹೇಳಲಾಗುತ್ತಿದ್ದು, ಇದು ಸಧ್ಯದಲ್ಲಿಯೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

4. ಆಪಲ್ ಎಚ್ ಡಿ ಟಿ ವಿ:

ಆಪಲ್ ಕಂಪನಿಯ ಎಲೆಕ್ಟ್ರಾನಿಕ್ ವಸ್ತುಗಳು ಹೆಚ್ಚಿನ ಗುಣಮಟ್ಟ ಹೊಂದಿರುವ ವಸ್ತುಗಳು ಎಂಬ ಹೆಗ್ಗಳಿಕೆಯನ್ನು ಗಳಿಸಿದೆ. ಆಪಲ್ ಸಾಧನಗಳ ಬೇಡಿಕೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಈ ಆಪಲ್ ಸಾಧನಗಳ ಸಾಧನೆಗೆ ಮತ್ತೊಂದು ಗರಿಯಾಗಿ ಆಪಲ್ ಎಚ್ ಡಿ ಟಿ ವಿ ಸೇರಿಕೊಂಡಿದೆ. ಇದರಲ್ಲಿ ಗೇಮ್, ಅಪ್ಲಿಕೇಶನ್, ಸಾಮಾಜಿಕ ತಾಣ ಇವುಗಳ ಸೌಲಭ್ಯ ಕೂಡ ಅದ್ಭುತವಾಗಿದೆ. ಈ ಎಲ್ಲಾ ಗುಣಗಳು ಇದನ್ನು 2012ರ ಅತ್ಯದ್ಭುತವಾದ ಗ್ಯಾಡ್ಜೆಟ್ ಸಾಧನಗಳಲ್ಲಿ ಒಂದಾಗಿಸಿದೆ.

5. ಕ್ವಾಡ್ ಕೋರ್ ಮೊಬೈಲ್ ಫೋನ್:

2012ರಲ್ಲಿ ತಂತ್ರಜ್ಞಾನ ಮತ್ಷ್ಟು ಮುಂದುವರೆದಿದೆ, ಹೊಸ ಆವಿಷ್ಕಾರಗಳು ಗ್ಯಾಡ್ಜೆಟ್ ನಲ್ಲಿ ಕಂಡು ಬರುತ್ತಿದೆ. ಮೊಬೈಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅನೇಕ ಕಂಪನಿಗಳು ತಮ್ಮ ಮೊಬೈಲ್ ಗಳಲ್ಲಿ ಕ್ವಾಡ್ ಕೋರ್ ಪ್ರೊಸೆಸರ್ ಹೊಂದಲಿದೆ. ಈ ರೀತಿಯ ಮೊಬೈಲ್ ಬಂದರೆ 2012 ಮೊಬೈಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಲಿದೆ.

Read In English:

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X