ಶಾಕಿಂಗ್ ನ್ಯೂಸ್..ಬೆಂಗಳೂರಲ್ಲಿ ತಯರಾಗೊ ಐಫೋನ್ ಬೆಲೆ ಕೇವಲ 10,000!!

ಭಾರತಕ್ಕೆ ಅವಶ್ಯಕತೆ ಇರುವಷ್ಟು ಐಫೋನ್‌ಗಳನ್ನು ಬೆಂಗಳೂರಿನಲ್ಲಿಯೇ ತಯಾರಿಸಲು ಆಪಲ್ ಕಂಪೆನಿ ಮುಂದಾಗಿದೆ.!!

Written By:

ಜಗತ್ತಿನ ನಂಬರ್ ಒನ್ ಸ್ಮಾರ್ಟ್‌ಫೋನ್‌ ಕಂಪೆನಿ ಆಪಲ್ ಭಾರತದಲ್ಲಿಯೇ ಮೊದಲ ಭಾರಿ ತನ್ನ ಮೊಬೈಲ್ ತಯಾರಿಕಾ ಕಂಪೆನಿಯನ್ನು ಬೆಂಗಳೂರಿನಲ್ಲಿ ಆರಂಭಿಸುತ್ತಿದೆ.! ಮೇ ತಿಂಗಳ ಮೊದಲ ವಾರದಿಂದ ಸಾಫ್ಟ್‌ವೇರ್ ಹಬ್ ಬೆಂಗಳೂರು ಆಪಲ್‌ ಸಿಟಿಯಾಗಿ ಬದಲಾಗುತ್ತದೆ.!!

ಭಾರತದಲ್ಲಿ ಐಫೋನ್ ಕಾರ್ಯಾಚರಣೆಯ ಉಪಾಧ್ಯಕ್ಷೆ ಪ್ರಿಯಾ ಬಾಲಸುಬ್ರಮಣಿಯಂ ನೇತೃತ್ವದ ತಂಡ ಬೆಂಗಳೂರಿನಲ್ಲಿ ಆಪಲ್ ಕಂಪೆನಿ ಹೂಡಿಕೆಗೆ ಆಸಕ್ತಿ ತೋರಿದ್ದು, ಭಾರತಕ್ಕೆ ಅವಶ್ಯಕತೆ ಇರುವಷ್ಟು ಐಫೋನ್‌ಗಳನ್ನು ಬೆಂಗಳೂರಿನಲ್ಲಿಯೇ ತಯಾರಿಸಲು ಆಪಲ್ ಕಂಪೆನಿ ಮುಂದಾಗಿದೆ.!!

ಓದಿರಿ: ಈ ಆಪ್ ಇದ್ದರೆ ಸ್ಮಾರ್ಟ್‌ಫೋನ್ ಕಳೆದುಹೋಗಲು ಸಾಧ್ಯವೇ ಇಲ್ಲ!!

ಬೆಂಗಳೂರಿನಲ್ಲಿ ತಯಾರಾಗುವ ಆಪಲ್ ಸ್ಮಾರ್ಟ್‌ಫೋನ್‌ಗಳ ಬೆಲೆ ಕೇವಲ 10 ಸಾವಿರ ರೂಪಾಯಿಗಳಿಂದ ಶುರುವಾಗಲಿದೆ ಎಂಬ ಮಾಹಿತಿ ಹೊರಬಿದ್ದಿದ್ದು, ಈಗಾಗಲೇ ಸುದ್ದಿ ವೈರಲ್ ಆಗಿದೆ.ಹಾಗಾಗಿ, ಬೆಂಗಳೂರಿನಲ್ಲಿ ಆಪಲ್ ಕಂಪೆನಿಯ ಗುರಿಗಳೇನು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ನಿರ್ಮಾಣದ ಕಾರ್ಯ ಅಂತಿಮ!!

ಈಗಾಗಲೇ ನಗರದ ಇಂಡಸ್ಟ್ರಿಯಲ್ ಏರಿಯಾ "ಪೀಣ್ಯ"ದಲ್ಲಿ ಆಪಲ್ ಕಂಪೆನಿ ನಿರ್ಮಾಣದ ಕಾರ್ಯಗಳು ಮುಗಿದ್ದಿದ್ದು, ಕೈಗಾರಿಕಾ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಂಡಿದೆ ಎಂದು ವರದಿಬಂದಿದೆ. ಹಾಗಾಗಿ, ಮೇ ಮೊದಲವಾರ ಭಾರತದಲ್ಲಿಯೇ ಮೊದಲು ಬೆಂಗಳೂರು ಆಪಲ್‌ ತಯಾರಿಕೆಯ ಗರಿ ಹೊಂದುತ್ತಿದೆ.!!

ಐಫೋನ್ ಬೆಲೆ 10000

ವಿದೇಶದಲ್ಲಿ ಉತ್ತಪಾದನೆಯಾಗುತ್ತಿದ್ದ ಆಪಲ್ ಬೆಲೆ ಭಾರತಕ್ಕೆ ಬರುವವೇಳೆಗೆ ದರ ಎರಡರಷ್ಟಾಗುತ್ತಿತ್ತು. ಹಾಗಾಗಿ, ಆಪಲ್ ಮೊಬೈಲ್‌ಗಳು ಭಾರತದಲ್ಲಿ ದುಬಾರಿಯಾಗಿದ್ದವು. ಇನ್ನು ಆಪಲ್‌ ಮೊಬೈಲ್‌ಗಳು ಇಲ್ಲಿಯೇ ತಯಾರಾಗುವುದರಿಂದ ಐಫೋನ್ ಕೇವಲ 10000 ರೂಪಾಯಿಗಳಿಗೆ ಭಾರತೀಯರ ಕೈಸೇರುತ್ತಿದೆ.!!

ಆಪಲ್ ಸ್ಮಾರ್ಟ್‌ಫೋನ್ ಮಾತ್ರವಲ್ಲ.!!

ಇನ್ನು ಬೆಂಗಳೂರಿನಲ್ಲಿ ಕೇವಲ ಆಪಲ್ ಸ್ಮಾರ್ಟ್‌ಫೋನ್‌ಗಳಲ್ಲದೇ, ಆಪಲ್ ಟಿವಿ, ಆಪಲ್ ವಾಚ್‌ಗಳು ಸಹ ಇಲ್ಲೇ ತಯಾರಾಗುತ್ತವೆ ಎಂದು ಆಪಲ್ ತಿಳಿಸಿದೆ. ಸರ್ಕಾರಕ್ಕೆ ಸಲ್ಲಿಸುತ್ತಿರುವ ಆಮದು ತೆರಿಗೆ ಹಣವನ್ನು ಉಳಿಸಲು ಆಪಲ್ ಕಂಪೆನಿ ಎಲ್ಲಾ ಉತ್ಪನ್ನಗಳನ್ನು ಇಲ್ಲಿಯೇ ತಯಾರಿಸುತ್ತಿದೆ.!!

ಆಪಲ್ ಆದಾಯ ಹೆಚ್ಚುತ್ತದೆ!!

ಭಾರತದಲ್ಲಿ ಆಪಲ್‌ ಐಫೋನ್‌ಗಳಿಗೆ ಉತ್ತಮ ಮಾರುಕಟ್ಟೆ ಇದ್ದು, ಆಪಲ್‌ಗೆ ಪ್ರತಿವರ್ಷವೂ ಶೇ 21 ಪರ್ಸೆಂಟ್‌ನಷ್ಟು ಆದಾಯ ಹೆಚ್ಚುತ್ತಿದೆ. ಆದರೆ, ಈ ಮೊದಲು ಆಪಲ್ ಸ್ಮಾರ್ಟ್‌ಫೋನ್‌ಗಳ ದರ ಹೆಚ್ಚಾಗಿರುವುದರಿಂದ ಲಾಭದ ಪ್ರಮಾಣ ಕಡಿಮೆಯಾಗಿದೆ ಎಂದು ವರದಿಯಿಂದ ತಿಳಿದುಬಂದಿತ್ತು.

ಓದಿರಿ: ಜಿಯೋ DTH ಬೆಲೆ ಎಷ್ಟು..ಎಷ್ಟು ಚಾನೆಲ್..ಆನ್‌ಲೈನ್‌ ಬುಕ್ಕಿಂಗ್ ಹೇಗೆ? ಫುಲ್ ಡೀಟೆಲ್ಸ್ ಇಲ್ಲಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
Could manufacture midrange devices like iPhoneSE in India. to know more visit to kannada.gizbot.com
Please Wait while comments are loading...
Opinion Poll

Social Counting