ಗೂಗಲ್ ಯೂಟ್ಯೂಬ್ ಅನ್ನು ಕಚ್ಚಿ ಬಿಸಾಡಿದ ಆಪಲ್

By Varun
|
ಗೂಗಲ್ ಯೂಟ್ಯೂಬ್ ಅನ್ನು ಕಚ್ಚಿ ಬಿಸಾಡಿದ ಆಪಲ್

ಜಗತ್ತಿನ ಖ್ಯಾತ ವೀಡಿಯೋ ಶೇರಿಂಗ್ ತಾಣ, ಗೂಗಲ್ ಒಡೆತನದ ಯೂಟ್ಯೂಬ್ ಇನ್ನು ಮೇಲೆ ಆಪಲ್ ನ ಐಫೋನ್ ಇರಲಿ ಅಥವಾ ಐಪ್ಯಾಡ್ ಇರಲಿ, ಇನ್ನು ಮುಂದೆ ಯಾವುದೇ ಆಪಲ್ ಸಾಧನದಲ್ಲಿ ಯೂಟ್ಯೂಬ್ ಪ್ರೀ- ಲೋಡೆಡ್ ಆಗಿ ಬರುವುದಿಲ್ಲ ಎಂದು ಆಪಲ್ ತಿಳಿಸಿದೆ.

ಸೋಮವಾರ iOS 6 ತಂತ್ರಾಂಶವನ್ನು ಟ್ರಯಲ್ ಆಧಾರದ ಮೇಲೆ ಬಿಡುಗಡೆ ಮಾಡಿದ ಆಪಲ್ ಈ ಸಂಧರ್ಭದಲ್ಲಿ ಇದನ್ನು ತಿಳಿಸಿದ್ದು, ಗೂಗಲ್ ನ ಒಂದೊಂದೇ ಆಪ್ ಗಳನ್ನ ಕೈಬಿಡುವ ಪ್ರವೃತ್ತಿ ಮುಂದುವರೆಸಿದೆ. ಕಳೆದ ಬಾರಿ iOS ತಂತ್ರಾಂಶ ಅಪ್ಗ್ರೇಡ್ ಮಾಡಿದಾಗ ಗೂಗಲ್ ಮ್ಯಾಪ್ ಅನ್ನು ಕಿತ್ತು ಹಾಕಿದ್ದ ಆಪಲ್, ತನ್ನದೇ ಆದ ಮ್ಯಾಪ್ ಆಪ್ ಒಂದನ್ನು ಸಿದ್ದಪದಿಸಿದ್ದನ್ನು ನೀವು ನೆನಪಿಸಿಕೊಳ್ಳಬಹುದು.

ಯೂಟ್ಯೂಬ್ ಅನ್ನು ಉಪಯೋಗಿಸಲು ಆಪಲ ಬಳಿ ಇದ್ದ ಪರವಾನಗಿ ಮುಗಿದಿದೆಯಾದರಿಂದ ಆಪಲ ಇದನ್ನು ಮಾಡಬೇಕಾಗಿದೆ ಎಂಬ ಸ್ಪಷ್ಟೀಕರಣ ನೀಡಿದರೂ ಕೂಡ, ಗೂಗಲ್ ಮೇಲಿನ ಅವಲಂಬನೆ ಹಾಗು ವೈರತ್ವವೆ ಕಾರಣ ಎನ್ನಲಾಗಿದೆ.

ಕಾಲ ಸರಿದಂತೆ ಕಂಪನಿಗಳೂ ದೈತ್ಯವಾಗಿ ಬೆಳೆದು ಹೇಗೆ ಒಂದಕ್ಕೊಂದು ವೈರತ್ವ ಬೆಳೆಸಿಕೊಳ್ಳುತ್ತವೆ ಎಂಬುದಕ್ಕೆ ಇದು ಒಂದು ಸಣ್ಣ ಉದಾಹರಣೆಯಷ್ಟೇ. ಗೂಗಲ್ ಯಾವಾಗ ತನ್ನದೇ ಆದ ಮೊಬೈಲ್ ತಂತ್ರಾಂಶವಾದ ಆಂಡ್ರಾಯ್ಡ್ ಅನ್ನು ಪರಿಚಯಿಸಿತೋ, ಆಗಿಂದ ಆಪಲ್ ಹಾಗು ಗೂಗಲ್ ಪರಸ್ಪರ ತಂತ್ರಜ್ಞಾನ ಕ್ಷೇತ್ರದಲ್ಲಿ ಯಾರು ದೈತ್ಯರು ಎಂಬುದನ್ನು ತೋರಿಸಲು ಕಚ್ಚಾಡುತ್ತಿವೆ.

ಯೂಟ್ಯೂಬ್ ಅನ್ನು ಸಫಾರಿ ಬ್ರೌಸರ್ ಮೂಲಕ ಆಪಲ್ ಬಳಕೆದಾರರು ಉಪಯೋಗಿಸಬಹುದಾದರೂ, ಆಪಲ್ ಕಂಪನಿ ಲೈಸೆನ್ಸ್ ಅನ್ನು ನವೀಕರಿಸಬಹುದಿತ್ತು ಎಂಬುದು ಬಳಕೆದಾರರ ಅಭಿಪ್ರಾಯ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X