ರಿಲಾಯನ್ಸ್ ಜಿಯೋ ಸಿಮ್ ಆಕ್ಟಿವೇಟ್ ಮಾಡಿ ಬಳಸಲು ಈ 5 ಅಂಶಗಳು ಅತ್ಯಗತ್ಯ

By Suneel
|

4G ಡಾಟಾ ಅನ್‌ಲಿಮಿಟೆಡ್, ಉಚಿತ ವಾಯ್ಸ್ ಕರೆ ಮತ್ತು ಮೆಸೇಜ್‌ಗಳು ಎಂದು ರಿಲಾಯನ್ಸ್ ಜಿಯೋ ಪ್ರಕಟಣೆಗೊಳಿಸಿದಾಗಿನಿಂದ ಪ್ರಾರಂಭವಾದ ಸಾಲುಗಳು, ರಿಲಾಯನ್ಸ್ ಜಿಯೋ ಸ್ಟೋರ್‌ಗಳ ಮುಂದೆ ಇನ್ನು ಸಹ ಕಡಿಮೆಯಾಗಿಲ್ಲ. ಈ ಪ್ರಕಟಣೆ ಭಾರತದ ಇತರೆ ಟೆಲಿಕಾಂ ಉದ್ಯಮಗಳಿಗೂ ಸ್ವಲ್ಪ ಮಟ್ಟದಲ್ಲಿ ಬಿಸಿಯನ್ನು ಸಹ ಮುಟ್ಟಿಸಿದೆ.

ವಿಶೇಷ ಅಂದ್ರೆ ರಿಲಾಯನ್ಸ್ ಜಿಯೋ(Jio) ದಿನದಿಂದ ದಿನಕ್ಕೆ ಸುನಾಮಿ ರೀತಿಯಲ್ಲಿ ಅಪ್ಲಿಕೇಶನ್‌ಗಳನ್ನು ಹೊಸ ಸಂಪರ್ಕಕ್ಕೆ ಪಡೆಯುತ್ತಿದೆ. ಜೊತೆಗೆ ಹಲವು ಅರ್ಜಿದಾರರಿಂದ ಆಕ್ಟಿವೇಶನ್‌ ಸಮಸ್ಯೆಯಿಂದ ರಿಜೆಕ್ಟ್ ಸಹ ಆಗುತ್ತಿದೆ.

ರಿಲಾಯನ್ಸ್ ಜಿಯೋ 4G ನೆಟ್‌ವರ್ಕ್‌ಗೆ ಆಕರ್ಷಿಸುವ 7 ಬೆನಿಫಿಟ್‌ಗಳು

ಹೊಸದಾಗಿ ರಿಲಾಯನ್ಸ್ ಜಿಯೋ ಸಂಪರ್ಕ ಪಡೆಯಲು ಬಯಸುವವರು 5 ಅಗತ್ಯ ಅಂಶಗಳನ್ನು ನೆನಪಿಡಬೇಕಿದೆ. ಈ ಅಂಶಗಳನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದು ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ. ನಾನು ರಿಲಾಯನ್ಸ್ ಜಿಯೋ ಸಿಮ್‌ ಪಡೆಯಬಹುದೇ ಎಂಬ ಪ್ರಶ್ನೆಯನ್ನು ಹೊಂದಿರುವವರು ಸಹ ಲೇಖನದಲ್ಲಿನ ಅಂಶಗಳನ್ನು ಗಮನದಲ್ಲಿಟ್ಟು ಓದಿರಿ.

ಆಧಾರ್ ಕಾರ್ಡ್‌ನಲ್ಲಿ ಸ್ಥಳೀಯ ವಿಳಾಸ

ಆಧಾರ್ ಕಾರ್ಡ್‌ನಲ್ಲಿ ಸ್ಥಳೀಯ ವಿಳಾಸ

ಇದು ಹಲವರು ತಿಳಿಯದ ವಿಷಯವು ಆಗಿರಬಹುದು. ವ್ಯಕ್ತಿಯು ನಿರ್ದಿಷ್ಟ ರಾಜ್ಯಕ್ಕೆ ಸಂಬಂಧಿಸಿದಂತೆ ಖಾಯಂ ವಿಳಾಸವನ್ನು ಆಧಾರ್‌ ಕಾರ್ಡ್‌ನಲ್ಲಿ ಹೊಂದಿಲ್ಲದಿದ್ದರೆ, ರಿಲಾಯನ್ಸ್ ಜಿಯೋ ಸಿಮ್ ಅಪ್ಲಿಕೇಶನ್‌ eKYC ಸಿಸ್ಟಮ್‌ ಮೂಲಕ ರಿಜೆಕ್ಟ್ ಆಗುತ್ತದೆ. ಆದ್ದರಿಂದ ಆಧಾರ್‌ಕಾರ್ಡ್‌ನಲ್ಲಿ ಖಾಯಂ ಸ್ಥಳೀಯ ವಿಳಾಸ ಇರುವಂತೆ ನೋಡಿಕೊಳ್ಳಿ.

ಉದಾಹರಣೆಗೆ ನೀವು ಬೆಂಗಳೂರಿಗೆ ವಲಸೆ ಬಂದಿರುತ್ತೀರಿ. ರಿಲಾಯನ್ಸ್ ಜಿಯೋಗೆ ಸಲ್ಲಿಸುವ ಆಧಾರ್‌ ಕಾರ್ಡ್‌ನಲ್ಲಿ ಬೆಂಗಳೂರು ಅಥವಾ ಕರ್ನಾಟಕದ ವಿಳಾಸ ಇಲ್ಲದಿದ್ದಲ್ಲಿ, ಭಾಗಶಃ ನಿಮ್ಮ ಅಪ್ಲಿಕೇಶನ್‌ eKYC ಅಪ್ಲಿಕೇಶನ್ ರಿಜೆಕ್ಟ್ ಆಗಬಹುದು.

ಮಾಹಿತಿ ನಿಖರವಾಗಿರಬೇಕು

ಮಾಹಿತಿ ನಿಖರವಾಗಿರಬೇಕು

ರಿಲಾಯನ್ಸ್ ಜಿಯೋ ಸಿಮ್‌ ಖರೀದಿದಾರರು ರಿಲಾಯನ್ಸ್ ಡಿಜಿಟಲ್‌ ಸ್ಟೊರ್‌ಗಳ ಮುಂದೆ ಅರ್ಜಿಯನ್ನು ನಿಖರ ಮಾಹಿತಿಯೊಂದಿಗೆ, 'ಪ್ರೂಫ್ ಆಫ್‌ ಅಡ್ರೆಸ್(POA), ಪ್ರೂಫ್ ಆಪ್‌ ಐಡೆಂಟಿಟಿ(POI)' ಅನ್ನು ಫಿಲ್‌ ಮಾಡಬೇಕು. ಮಾಹಿತಿಗಳು ಕಡ್ಡಾಯವಾಗಿ ನಿಖರವಾಗಿರಲೇಬೇಕು.

ನಂಬರ್ ಪೋರ್ಟಿಂಗ್‌ಗೆ 90 ದಿನಗಳ ಅಂತಹ ಕಡ್ಡಾಯ

ನಂಬರ್ ಪೋರ್ಟಿಂಗ್‌ಗೆ 90 ದಿನಗಳ ಅಂತಹ ಕಡ್ಡಾಯ

ಹೊಸ ರಿಲಾಯನ್ಸ್ ಜಿಯೋ ಸಿಮ್‌ ಖರೀದಿಸದೇ, ನಿಮ್ಮ ಹಳೆಯ ಮೊಬೈಲ್‌ ನಂಬರ್‌ಅನ್ನೇ ಜಿಯೋಗೆ ಪೋರ್ಟ್‌ ಮಾಡುವುದು ಉಚಿತ. ಆದರೆ ನೀವು ಪೋರ್ಟ್‌ ಮಾಡಬೇಕಾದರೆ ಹಿಂದಿನ ಪೋರ್ಟ್ ಪಡೆದು ಅಥವಾ ಸಿಮ್‌ ಬಳಸಿ 90 ದಿನಗಳು ಮುಗಿದಿರಬೇಕು. ಇಲ್ಲವಾದಲ್ಲಿ ಪೋರ್ಟ್‌ಗಾಗಿ ಜಿಯೋಗೆ ಸಲ್ಲಿಸಿದ ಅರ್ಜಿ ರಿಜೆಕ್ಟ್ ಆಗುತ್ತದೆ.

ಬಾರ್‌ಕೋಡ್‌ ನಂಬರ್‌ ತಪ್ಪಿರಬಾರದು

ಬಾರ್‌ಕೋಡ್‌ ನಂಬರ್‌ ತಪ್ಪಿರಬಾರದು

ಹೊಸ ಜಿಯೋ ಸಿಮ್‌ ಅರ್ಜಿದಾರರು, MyJio ಆಪ್‌ನಿಂದ ಬಾರ್‌ಕೋಡ್‌ ನಂಬರ್‌ ಅನ್ನು ಜೆನೆರೇಟ್ ಮಾಡಬೇಕು. ಆದರೆ ಇತ್ತೀಚೆಗೆ ತಪ್ಪು ಡಿಜಿಟ್‌ಗಳನ್ನು ಎಂಟರ್‌ ಮಾಡುವುದರ ಮುಖಾಂತರ ಅರ್ಜಿಗಳು ರಿಜೆಕ್ಟ್‌ ಆಗುತ್ತಿವೆ. ಆದ್ದರಿಂದ ಎರಡು ಬಾರಿ ಅರ್ಜಿ ಚೆಕ್‌ ಮಾಡಿ.

ಜಿಯೋ ಸಿಮ್  ಸಪೋರ್ಟ್ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳು

ಜಿಯೋ ಸಿಮ್ ಸಪೋರ್ಟ್ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳು

ರಿಲಾಯನ್ಸ್ ಜಿಯೋ ಸಿಮ್ ಪಡೆಯಲು ಪ್ರಾಥಿಮಿಕವಾಗಿ 4G VoLTE ಸಪೋರ್ಟ್‌ ಮಾಡುವ ಸ್ಮಾರ್ಟ್‌ಫೋನ್ ಅನ್ನು ಹೊಂದಿರಬೇಕು. ರಿಲಾಯನ್ಸ್ ಜಿಯೋ ಸಿಮ್‌ ಸಪೋರ್ಟ್‌ ಮಾಡುವ ಬ್ಯಾಂಡ್‌ಗಳೆಂದರೆ ಸ್ಯಾಮ್‌ಸಂಗ್‌, ಎಲ್‌ಜಿ, ಮೈಕ್ರೋಮ್ಯಾಕ್ಸ್, ಯು, ಅಸೂಸ್, ಪ್ಯಾನಸೋನಿಕ್‌, ವಿವೊ, ಇಂಟೆಕ್ಸ್, ಎಚ್‌ಟಿಸಿ, ಸ್ಯಾನ್ಸೂಯಿ, ಸೋನಿ, ವೀಡಿಯೊಕಾನ್‌, ಮತ್ತು ಟಿಸಿಎಲ್.

Best Mobiles in India

English summary
Are You Eligible to Get A Reliance Jio SIM Card? Check Here. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X