ರೀಟೈಲ್ ತಾಣ ಅಮೆಝಾನ್ ವೈಶಿಷ್ಟ್ಯಗಳನ್ನು ನೀವೂ ತಿಳಿಯಿರಿ

By Shwetha
|

ಮಾನವನ ಬದುಕಿನ ಆಸೆ ಒಳ್ಳೆಯ ಹುದ್ದೆಯನ್ನು ಏರಿ ಸಾಕಷ್ಟು ಸಂಪಾದಿಸಿ ಒಳ್ಳೆಯ ಜೀವನವನ್ನು ನಡೆಸುವುದಾಗಿದೆ. ಈ ಆಕಾಂಕ್ಷೆ ಮನುಷ್ಯನಾದ ಎಲ್ಲರಿಗೂ ಇರುವಂತಹದ್ದೇ...

ಕೈ ತುಂಬಾ ಸಂಪಾದಿಸಿ ಐಷಾರಾಮಿ ವಸ್ತುಗಳನ್ನು ಖರೀದಿಸಿ ಸುಖದ ಜೀವನವನ್ನು ನಡೆಸುವುದಕ್ಕಿಂತಲೂ ಹಣವನ್ನು ಹೇಗೆ ವಿನಿಯೋಗಿಸಬೇಕೆಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ. ನೀವು ಬೆಲೆಬಾಳುವ ವಸ್ತುಗಳ ಖರೀದಿಗೆ ತೊಡಗುವಾಗ ಉತ್ಪನ್ನದ ಗುಣಮಟ್ಟಕ್ಕೆ ಬೆಲೆಯನ್ನು ನೀಡುವುದರ ಜೊತೆಗೂ ಅದರಿಂದ ನಿಮಗಾಗುವ ಲಾಭವನ್ನೂ ಅರಿತುಕೊಳ್ಳುತ್ತೀರಿ

ಆದ್ದರಿಂದಲೇ ನಿಮಗೆ ಲಾಭವುಂಟಾಗುವಂತೆ ಮತ್ತು ನಿಮ್ಮ ಉತ್ಪನ್ನವನ್ನು ನಿಮ್ಮ ಕೈ ಸೇರುವಂತೆ ಮಾಡಲು ಕೆಲವೊಂದು ವೆಬ್‌ಸೈಟ್‌ಗಳು ಕಾರ್ಯನಿರತವಾಗಿವೆ. ಫ್ಲಿಪ್‌ಕಾರ್ಟ್‌, ಅಮೆಝಾನ್, ಕ್ವಿಕ್ಕರ್ ಇವೇ ಮುಂತಾದ ರೀಟೈಲ್ ವೆಬ್‌ಸೈಟ್‌ಗಳು ನಿಮ್ಮ ಸಹಾಯಕ್ಕೆ ಸದಾ ನಿಂತಿರುತ್ತವೆ.

ಇಲ್ಲಿ ನೀವು ಫೋನ್‌ನಿಂದ ಹಿಡಿದು ಎಲ್ಲಾ ಉಪಕರಣಗಳನ್ನು ಖರೀದಿಸಬಹುದಾಗಿದೆ ಮತ್ತು ನಿಮಗೆ ಲಾಭಕರವಾಗಿಯೂ ಈ ವೆಬ್‌ಸೈಟ್‌ಗಳು ನಿಮ್ಮೊಂದಿಗೆ ನಿಂತಿರುತ್ತವೆ. ಇಂದಿನ ಲೇಖನದಲ್ಲಿ ಇಂತಹದೇ ಒಂದು ವೆಬ್‌ಸೈಟ್‌ನ ಪ್ರತ್ಯೇಕತೆಯ ಬಗ್ಗೆ ನಿಮಗೆ ತಿಳಿಸಹೊರಟಿದ್ದೇವೆ. ಬೇರೆಲ್ಲಾ ರೀಟೈಲ್ ವೆಬ್‌ಸೈಟ್‌ಗಿಂತ ಇದು ಏಕೆ ವಿಭಿನ್ನ ಎಂಬುದು ನಿಮಗೆ ಖಂಡಿತ ತಿಳಿಯುತ್ತದೆ.

#1

#1

ಇಲೈಟ್‌ ರಿವ್ಯೂವರ್ಸ್‌ಗಾಗಿ ಇರುವ ಸಣ್ಣ ಮಟ್ಟಿನ ಕ್ಲಬ್ ಆಗಿದೆ ಅಮೆಜಾನ್ ವೈನ್ ಮಂಡಳಿ. ಇಲ್ಲಿ ಕಂಪೆನಿ ತನ್ನ ಸದಸ್ಯರಿಗಾಗಿ ಎರಡು ಉತ್ಪನ್ನಗಳನ್ನು ನೀಡುತ್ತದೆ ಮತ್ತು ಅದನ್ನು ಅವರು ಪರಿಶೀಲಿಸಿ ಕಂಪೆನಿಗೆ ತಿಳಿಸಬೇಕಾಗುತ್ತದೆ. ವಿಮರ್ಶೆ ಚೆನ್ನಾಗಿದ್ದರೆ ಕಂಪೆನಿ ಕೊಡುವ ಬಹುಮಾನ ನಿಮ್ಮದಾಗುತ್ತದೆ.

ಅಮೆಝಾನ್ ವೈನ್ ಕುರಿತು ಇನ್ನಷ್ಟು ತಿಳಿದುಕೊಳ್ಳಿ

#2

#2

ಮೆಕ್ಯಾನಿಕಲ್ ಟರ್ಕ್ ಬಳಕೆದಾರರಿಗೆ ಸರಳ ಹಾಗೂ ತ್ವರಿತವಾದ ಆನ್‌ಲೈನ್ ಸಿಬ್ಬಂದಿಯಾಗಿ ಆದಾಯ ಗಳಿಸಲು ಸಹಾಯ ಮಾಡುತ್ತದೆ.

ಮೆಕ್ಯಾನಿಕಲ್ ಟರ್ಕ್ ಕುರಿತು ಇನ್ನಷ್ಟು ತಿಳಿದುಕೊಳ್ಳಿ

#3

#3

ಅಮೆಝಾನ್ ಲಾಕರ್ ನಿಮ್ಮ ಉತ್ಪನ್ನಗಳನ್ನು ಜೋಪಾನವಾಗಿ ಇರಿಸುತ್ತದೆ. ನಿಮ್ಮ ಪ್ಯಾಕೇಜ್‌ಗಾಗಿ ನೀವು ಕೋಡ್ ಹಾಕಬೇಕಾದ ಅನಿವಾರ್ಯತೆ ಇಲ್ಲಿರುತ್ತದೆ. ಇದು 24 ಗಂಟೆಗಳ ಸೇವೆಯನ್ನು ಗ್ರಾಹಕರಿಗೆ ಒದಗಿಸುತ್ತದೆ.

ಅಮೆಝಾನ್ ಲಾಕರ್ ಕುರಿತು ಇನ್ನಷ್ಟು ತಿಳಿದುಕೊಳ್ಳಿ

#4

#4

ಅಮೆಝಾನ್ ಸ್ಮೈಲ್ ಮೂಲಕ ಸಾವಿರಾರು ಉತ್ಪನ್ನಗಳನ್ನು ನೀವು ಖರೀದಿಸಬಹುದಾಗಿದೆ. ನಿಮ್ಮ ಆಯ್ಕೆಯ ಚ್ಯಾರಿಟಿಗೆ ಖರೀದಿಯ 0.5% ರಷ್ಟನ್ನು ವೆಬ್‌ಸೈಟ್‌ ನೀಡುತ್ತದೆ.

ಅಮೆಝಾನ್ ಸ್ಮೈಲ್ ಕುರಿತು ಇನ್ನಷ್ಟು ತಿಳಿದುಕೊಳ್ಳಿ

#5

#5

ಇದರ ಮೂಲಕ ಗ್ರಾಹಕರಿಗೆ ತ್ವರಿತ ಹಾಗೂ ಸರಳವಾದ ಉತ್ಪನ್ನ ವಿತರಣೆಯನ್ನು ಕಂಪೆನಿ ಮಾಡಹೊರಟಿದೆ. ಇದು ಅಮೆಝಾನ್‌ನ ಐಪೋನ್ ಅಪ್ಲಿಕೇಶನ್‌ನೊಂದಿಗೆ ಬಳಕೆದಾರರಿಗೆ ಲಭ್ಯವಾಗಲಿದೆ. ಇದರ ಮೂಲಕ ನಿಮಗೆ ಬೇಕಿರುವ ಉತ್ಪನ್ನದ ಫೋಟೋ ತೆಗೆದು ಅದನ್ನು ಅಮೆಝಾನ್ ಶಾಪಿಂಗ್ ಪಟ್ಟಿಯಲ್ಲಿ ಹಾಕಬಹುದಾಗಿದೆ.

ಅಮೆಝಾನ್ ಫ್ಲೋ ಕುರಿತು ಇನ್ನಷ್ಟು ತಿಳಿದುಕೊಳ್ಳಿ

#6

#6

ಇದೊಂದು ಅಮೆಝಾನ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದಾದ ಸೈಟ್ ಆಗಿದ್ದು ಪ್ರಶ್ನೆ ಉತ್ತರ ಸೆಶನ್ ಅನ್ನು ಇಲ್ಲಿ ಹಮ್ಮಿಕೊಳ್ಳಲಾಗುತ್ತದೆ.

ಆಸ್ಕ್‌ವಿಲ್ಲೆ ಕುರಿತು ಇಲ್ಲಿ ಇನ್ನಷ್ಟು ತಿಳಿದುಕೊಳ್ಳಿ

#7

#7

ನೀವೊಬ್ಬ ಬರಹಗಾರರರಾಗಿದ್ದು ಆದರೆ ಮುದ್ರಣದ ಮಾಹಿತಿ ನಿಮ್ಮಲ್ಲಿ ಲಭ್ಯವಿಲ್ಲದಿದ್ದರೆ ನಿಮ್ಮ ಪುಸ್ತಕವನ್ನು ನಿಮಗೆ ಉಚಿತವಾಗಿ ಕಿಂಡಲ್ ಡೈರೆಕ್ಟ್ ಪಬ್ಲಿಶಿಂಗ್‌ನಿಂದ ಪಡೆದುಕೊಳ್ಳಬಹುದಾಗಿದೆ.

ಕಿಂಡಲ್ ಸ್ಟೋರ್ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

#8

#8

ನೀವಿಲ್ಲಿ ನಿಮ್ಮ ಖಾತೆಯನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದಾಗಿದೆ. ನಿಮ್ಮ ಖಾತೆಯಲ್ಲಿರುವ ಸದಸ್ಯರ ಹುಟ್ಟುಹಬ್ಬ ಮದುವೆ ವಾರ್ಷಿಕೋತ್ಸವ ಮುಂತಾದ ಆಚರಣೆಗಳನ್ನು ನಿಮಗಿಲ್ಲಿ ನಡೆಸಬಹುದಾಗಿದೆ.

#9

#9

ನೀವು ಆಗಾಗ್ಗೆ ಖರೀದಿಸುವ ಉತ್ಪನ್ನದ ಮೇಲೆ ಅಮೆಝಾನ್ ಸ್ವಲ್ಪ ಮಟ್ಟಿನ ರಿಯಾಯಿತಿಯನ್ನು ನಿಮಗೆ ನೀಡುತ್ತದೆ. ನೀವು ಖರೀದಿಸಿ ಐಟಂ ಬಗ್ಗೆ ಅದು ನಿಮಗೆ ತಿಳಿಸುತ್ತದೆ ಮತ್ತು ನಿಮಗೆ ವಿತರಣೆ ಆಗುವ ಮಾಹಿತಿಯನ್ನು ಇಲ್ಲಿ ನೀಡುತ್ತದೆ.

#10

#10

ತಮ್ಮ ಆಯ್ಕೆಯ ಉಂಗುರಗಳ ವಿನ್ಯಾಸವನ್ನು ಮಾಡಬಹುದಾಗಿದ್ದು ನಂತರ ಅದನ್ನು ಕೆಂಚುಕಿ ಫುಲ್‌ಫಿಲ್‌ಮೆಂಟ್ ಸೆಂಟರ್‌ನಲ್ಲಿ ಮಾಡಬಹುದಾಗಿದೆ. ಸೆಲೆಬ್ರಿಟಿ ಪ್ಯಾರೀಸ್ ಹಿಲ್ಟನ್‌ನೊಂದಿಗೆ ಕಂಪೆನಿ ಒಪ್ಪಂದವನ್ನು ಮಾಡಿಕೊಂಡಿದ್ದು ಆಕೆ ತಯಾರಿಸಿದ ವಿನ್ಯಾಸದ ಆಭರಣಗಳನ್ನು ನೀವಿಲ್ಲಿ ಪಡೆಯಬಹುದಾಗಿದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X