ಗ್ರಾಮೀಣ ಭಾಗಕ್ಕೂ ಉಚಿತ ಇಂಟರ್ನೆಟ್: ಗೂಗಲ್‌ನ ಬಲೂನ್ ಕಮಾಲು

By Shwetha
|

ಗೂಗಲ್‌ನೊಂದಿಗೆ ಶ್ರೀಲಂಕಾ ಸರಕಾರವು ಒಪ್ಪಂದ ಮಾಡಿಕೊಂಡ ನಂತರ ಮಾರ್ಚ್ 2016 ಕ್ಕೆ ಶ್ರೀಲಂಕಾದಾದ್ಯಂತ ಉಚಿತ ವೈಫೈ ಲಭ್ಯವಾಗುತ್ತಿದೆ. ಗೂಗಲ್ ಬಲೂನ್ ಸಹಕಾರದೊಂದಿಗೆ ಉಚಿತ ವೈಫೈ ಶ್ರೀಲಂಕಾದಲ್ಲಿ ದೊರೆಯುತ್ತಿದೆ. ವಿಶ್ವದಲ್ಲೇ ಗೂಗಲ್ ಬಲೂನ್‌ಗಳ ಮೂಲಕ ಉಚಿತ ವೈಫೈಯನ್ನು ಪಡೆದುಕೊಳ್ಳುತ್ತಿರುವ ಪ್ರಥಮ ದೇಶವಾಗಿ ಶ್ರೀಲಂಕಾ ಗುರುತಿಸಿಕೊಳ್ಳಲಿದೆ.

ಓದಿರಿ: ರೂ 5,000 ದ ಒಳಗಿನ ಫೋನ್ ಖರೀದಿಯೇ ಇದುವೇ ಬೆಸ್ಟ್!

ಗೂಗಲ್ ಬಲೂನ್‌ಗಳಿಂದ ವೈಫೈ ಈ ಕಾನ್ಸೆಪ್ಟ್ ನಿಮ್ಮಲ್ಲಿ ಕೆಲವೊಂದು ಆಲೋಚನೆಗಳನ್ನು ಹುಟ್ಟುಹಾಕಿರಬಹುದು ಎಂಬ ಅಂಶ ನಮಗೆ ತಿಳಿದಿದೆ ಅದಕ್ಕಾಗಿಯೇ ಇಂದಿನ ಲೇಖನದಲ್ಲಿ ಗೂಗಲ್ ಬಲೂನ್‌ಗಳೆಂದರೇನು? ಅವುಗಳ ಪ್ರಾಮುಖ್ಯತೆ ಮತ್ತು ಅವುಗಳು ಕೆಲಸ ಮಾಡಬಹುದಾದ ವಿಧಾನಗಳನ್ನು ವಿವರವಾಗಿ ನಾವು ನಿಮಗೆ ತಿಳಿಸಲಿರುವೆವು.

ಗೂಗಲ್ ಬಲೂನ್

ಗೂಗಲ್ ಬಲೂನ್

ಜಗತ್ತಿನ ಮೂರನೇ ಎರಡು ಭಾಗದಷ್ಟು ಜನಸಂಖ್ಯೆ ಇನ್ನೂ ಅಂತರ್ಜಾಲ ವ್ಯವಸ್ಥೆಯಿಂದ ವಂಚಿತವಾಗಿವೆ. ಬಾಹ್ಯಾಕಾಶದ ಮೂಲೆಯಿಂದ ಚಲಿಸುವ ಬಲೂನ್‌ ನೆಟ್‌ವರ್ಕ್ ಇದಾಗಿದ್ದು ಗ್ರಾಮೀಣ ಮತ್ತು ಹಿಂದುಳಿದ ಸ್ಥಳಗಳಲ್ಲಿರುವ ಜನರನ್ನು ಸಂಪರ್ಕಿಸುವ ಕೆಲಸವನ್ನು ಇವುಗಳು ಮಾಡುತ್ತವೆ. ಆನ್‌ಲೈನ್‌ನಂತಹ ಪ್ರಮುಖ ವೇದಿಕೆಗೆ ಇವರನ್ನು ಕರೆತರುವ ಕೆಲಸ ಗೂಗಲ್ ಬಲೂನ್‌ನದ್ದಾಗಿದೆ.

ಕಾರ್ಯನಿರ್ವಹಣೆ ಹೇಗೆ?

ಕಾರ್ಯನಿರ್ವಹಣೆ ಹೇಗೆ?

ಏರ್‌ಪ್ಲೇನ್‌ಗಳು ಮತ್ತು ಹವಾಮಾನಕ್ಕಿಂತ ದುಪ್ಪಟ್ಟು ಎತ್ತರವಾಗಿರುವ ಪ್ರಾಜೆಕ್ಟ್ ಲೂನ್ ಆಕಾಶ ಬುಟ್ಟಿಗಳು ವಾಯುಮಂಡಲದಲ್ಲಿ ತೇಲುತ್ತಿರುತ್ತವೆ. ವಾಯುಮಂಡದಲ್ಲಿ ಗಾಳಿಯ ಬೇರೆ ಬೇರೆ ಪದರಗಳಿದ್ದು, ದಿಕ್ಕು ಮತ್ತು ವೇಗಕ್ಕೆ ಅನುಗುಣವಾಗಿ ಗಾಳಿಯ ಪದರ ಬದಲಾಗುತ್ತಿರುತ್ತವೆ.

ಗಾಳಿಯಲ್ಲೇ ಪ್ರಯಾಣ

ಗಾಳಿಯಲ್ಲೇ ಪ್ರಯಾಣ

ತಮ್ಮ ಅಗತ್ಯವಿರುವಲ್ಲಿ ಲೂನ್ ಬಲೂನ್‌ಗಳು ಗಾಳಿಯ ಪದರದೊಳಗೆ ಏರುತ್ತಾ ತಮಗೆ ಬೇಕಾದ ದಿಕ್ಕಿನಲ್ಲಿ ಪ್ರಯಾಣಿಸುತ್ತವೆ.

ಬಲೂನ್ ನೆಟ್‌ವರ್ಕ್ ಸಂಪರ್ಕ

ಬಲೂನ್ ನೆಟ್‌ವರ್ಕ್ ಸಂಪರ್ಕ

ಕಂಪೆನಿ ಟೆಲಿ ಕಮ್ಯೂನಿಕೇಶನ್ ಕಂಪೆನಿಗಳೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದ್ದು ಜನರು ತಮ್ಮ ಫೋನ್ ಮತ್ತು ಎಲ್‌ಟಿಇ ಸಕ್ರಿಯವಾಗಿರುವ ಡಿವೈಸ್‌ಗಳಿಗೆ ನೇರವಾಗಿ ಬಲೂನ್‌ ನೆಟ್‌ವರ್ಕ್‌ಗಳಿಂದ ಸಂಪರ್ಕವನ್ನು ಪಡೆದುಕೊಳ್ಳಬಹುದಾಗಿದೆ.

ಜಾಗತಿಕ ಇಂಟರ್ನೆಟ್

ಜಾಗತಿಕ ಇಂಟರ್ನೆಟ್

ಬಲೂನ್ ನೆಟ್‌ವರ್ಕ್‌ನಾದ್ಯಂತ ಸಿಗ್ನಲ್ ಹಾದುಹೋಗುತ್ತದೆ ಮತ್ತು ಭೂಮಿಯಲ್ಲಿರುವ ಜಾಗತಿಕ ಇಂಟರ್ನೆಟ್‌ಗೆ ಸಂಪರ್ಕಗೊಳ್ಳುತ್ತದೆ.

2013 ರಲ್ಲಿ ಜನನ

2013 ರಲ್ಲಿ ಜನನ

2013 ರಲ್ಲಿ ಲೂನ್ ನ್ಯೂಜಿಲೆಂಡ್‌ನಲ್ಲಿ ಅನ್ವೇಷಣೆಗಳ ಮೂಲಕ ಜನ್ಮತಾಳಿತು. ಪ್ರಾಜೆಕ್ಟ್ ಲೂನ್ ಸಣ್ಣ ಗುಂಪುಳ್ಳ ಸದಸ್ಯರ ಮೂಲಕ ಆರಂಭಗೊಂಡಿತು.

ಗೂಗಲ್ ಪ್ಲಸ್ ಸಹಾಯ

ಗೂಗಲ್ ಪ್ಲಸ್ ಸಹಾಯ

ಗೂಗಲ್ ಪ್ಲಸ್ ಪ್ರಾಜೆಕ್ಟ್ ಲೂನ್ ಯೋಜನೆಯನ್ನು ಕುರಿತು ನಿಖರ ಮಾಹಿತಿಯನ್ನು ಒದಗಿಸುತ್ತಿರುತ್ತದೆ.

ಬಲೂನ್ ಪ್ರಯಾಣ

ಬಲೂನ್ ಪ್ರಯಾಣ

ವಾಯುಮಂಡಲದಲ್ಲಿ ಭೂಮಿಯ ಮೇಲ್ಪದರದಿಂದ ಸುಮಾರು 20 ಕಿಮೀನಂತೆ ಲೂನ್ ಬಲೂನ್‌ಗಳು ಪ್ರಯಾಣಿಸುತ್ತವೆ.

ಸಾಫ್ಟ್‌ವೇರ್ ಅಲ್ಗಾರಿದಮ್‌

ಸಾಫ್ಟ್‌ವೇರ್ ಅಲ್ಗಾರಿದಮ್‌

ಸಾಫ್ಟ್‌ವೇರ್ ಅಲ್ಗಾರಿದಮ್‌ಗಳನ್ನು ಬಳಸಿಕೊಂಡು ಬಲೂನ್‌ಗಳು ಎಲ್ಲಿ ಹೋಗಬೇಕು ಎಂಬುದನ್ನು ಪ್ರಾಜೆಕ್ಟ್ ಲೂನ್ ನಿರ್ಧರಿಸುತ್ತದೆ. ಗಾಳಿಯೊಂದಿಗೆ ಸಂಚರಿಸುತ್ತಾ, ದೊಡ್ಡ ಸಂವಹನ ನೆಟ್‌ವರ್ಕ್ ರಚಿಸುವಂತೆ ಬಲೂನ್‌ಗಳನ್ನು ಹೊಂದಿಸಲಾಗುತ್ತದೆ.

ಎಲ್‌ಟಿಇ

ಎಲ್‌ಟಿಇ

ಎಲ್‌ಟಿಇ ಎಂದು ಕರೆಯಲಾದ ವೈರ್‌ಲೆಸ್ ಕಮ್ಯುನಿಕೇಶನ್ ಟೆಕ್ನಾಲಜಿಯನ್ನು ಬಳಸಿಕೊಂಡು 40 ಕಿಮೀ ವ್ಯಾಸದಲ್ಲಿ ನೆಲದ ಪ್ರದೇಶಕ್ಕೆ ಪ್ರತೀ ಬಲೂನ್ ಸಂಪರ್ಕವನ್ನು ಒದಗಿಸುತ್ತದೆ.

Best Mobiles in India

English summary
Project Loon is a network of balloons traveling on the edge of space, designed to connect people in rural and remote areas, help fill coverage gaps, and bring people back online after disasters.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X