ಬೆಂಗಳೂರು ಪೋಲೀಸರು ಇನ್ನು ವಾಟ್ಸಾಪ್‌ನಲ್ಲಿ 24x7 ಡ್ಯೂಟಿ

By Shwetha
|

ಬಹು ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತಿರುವ ವಾಟ್ಸಾಪ್ ಇಂದು ಸಮಾಜ ಸೇವೆಯಲ್ಲೂ ಮುಂದಿದೆ ಎಂಬುದಕ್ಕೆ ತಾಜಾ ಸಾಕ್ಷಿ ಇಲ್ಲಿದೆ. ಅಪರಾಧ ತಡೆ ಮತ್ತು ಜನರ ದೂರು ದಾಖಲಿಸಲು ಬೆಂಗಳೂರು ಪೋಲೀಸರು ವಾಟ್ಸಾಪ್ ಅನ್ನು ಬಳಸುತ್ತಿದ್ದು ಜನರಿಗೆ ಇನ್ನಷ್ಟು ಹತ್ತಿರವಾಗಿ ಅವರ ಸಮಸ್ಯೆಯನ್ನು ಆಲಿಸು ಕಾರ್ಯವನ್ನು ಆರಕ್ಷಕರು ಮಾಡುತ್ತಿದ್ದಾರೆ.

ಓದಿರಿ: ಜೀವನ ಶೈಲಿಯನ್ನೇ ಬದಲಾಯಿಸಿದ ವಾಟ್ಸಾಪ್ 10 ಅದ್ಭುತಗಳು

ಯಾವುದೇ ಭಯ, ಹಿಂಜರಿಕೆ ಇಲ್ಲದೆ ಸಾರ್ವಜನಿಕರು ಪೋಲೀಸರ ಸೇವೆಯನ್ನು ಪಡೆದುಕೊಳ್ಳುವಂತಾಗಬೇಕು ಮತ್ತು ಜನರಿಗೆ ಫೋಲೀಸರು ಎನ್ನುವ ಭಯ ಇರಬಾರದು ಎಂಬ ಆಕಾಂಕ್ಷೆಯಿಂದ ವಾಟ್ಸಾಪ್‌ನಲ್ಲಿ ಪೋಲೀಸರು ಇನ್ನು ಕಾರ್ಯತತ್ಪರರಾಗಲಿದ್ದಾರೆ. ಬನ್ನಿ ಕೆಳಗಿನ ಸ್ಲೈಡರ್‌ನಲ್ಲಿ ಈ ಕುರಿತ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.

ಮೊಬೈಲ್ ಫೋನ್ ಸಂಖ್ಯೆ 9480801000

ಮೊಬೈಲ್ ಫೋನ್ ಸಂಖ್ಯೆ 9480801000

ಬೆಂಗಳೂರು ಪೋಲೀಸರು ಮೊಬೈಲ್ ಫೋನ್ ಸಂಖ್ಯೆ 9480801000 ಅನ್ನು ಬಳಸಿ ಜನರಿಗೆ ದೂರನ್ನು ವಾಟ್ಸಾಪ್ ಮೂಲಕ ನೀಡುವಂತಹ ವ್ಯವಸ್ಥೆಯನ್ನು ಮಾಡಿದ್ದಾರೆ.

ವಾಟ್ಸಾಪ್‌

ವಾಟ್ಸಾಪ್‌

ನೀವು ಬೆಂಗಳೂರಿನಲ್ಲಿದ್ದು, ಯಾವುದಾದರೂ ಸಮಸ್ಯೆಯನ್ನು ಎದುರಿಸುತ್ತಿದ್ದೀರಿ ಎಂದಾದಲ್ಲಿ, ವಾಟ್ಸಾಪ್‌ನ ಈ ಸಂಖ್ಯೆಯನ್ನು ಬಳಸಿಕೊಂಡು ನೇರವಾಗಿ ಪೋಲಿಸ್ ಸ್ಟೇಶನ್‌ಗೆ ಹೋಗದೆಯೇ ನಿಮಗೆ ದೂರು ದಾಖಲಿಸಬಹುದಾಗಿದೆ.

ದೇಶದಲ್ಲೇ ಪ್ರಥಮ

ದೇಶದಲ್ಲೇ ಪ್ರಥಮ

ಈ ಅನನ್ಯ ಸೇವೆಯು ದೇಶದಲ್ಲೇ ಪ್ರಥಮವಾಗಿದ್ದು, ಶನಿವಾರ ಬೆಂಗಳೂರಿನ ಸಿಟಿ ಪೋಲೀಸ್ ಕಮೀಶನರ್ ಎನ್ ಎಸ್ ಮೆಗಾರಿಕ್ ಉದ್ಘಾಟಿಸಿದ್ದಾರೆ.

ತಾಂತ್ರಿಕ ಸೇವೆ

ತಾಂತ್ರಿಕ ಸೇವೆ

ವಾಟ್ಸಾಪ್ ಮೂಲಕ ದೂರು ದಾಖಲಿಸಿಕೊಳ್ಳುವುದು ತಾಂತ್ರಿಕ ಸೇವೆಯನ್ನು ಅಪೇಕ್ಷಿಸುವ ಜನರಿಗೆ ವರದಾನವಾಗಿ ಪರಿಣಮಿಸಿದೆ ಮತ್ತು ಟೆಕ್ನಾಲಜಿಯ ಸಹಾಯದಿಂದ ಸಮಸ್ಯೆಯನ್ನು ಬಗೆಹರಿಸುವ ಅತ್ಯುತ್ತಮ ವಿಧಾನ ಎಂದೆನಿಸಿದೆ.

ಸಂದೇಶ

ಸಂದೇಶ

ಇನ್ನು ದೂರನ್ನು ನೀಡುವ ಜನರಿಗೆ "ನಿಮ್ಮ ದೂರನ್ನು ನಾವು ಸ್ವೀಕರಿಸಿದ್ದೇವೆ ಮತ್ತು ಸಂಬಂಧಿತ ಪೋಲೀಸ್ ಸ್ಟೇಶನ್‌ಗೆ ದೂರನ್ನು ಫಾರ್ವರ್ಡ್ ಮಾಡಲಾಗುವುದು" ಎಂಬ ಸಂದೇಶ ದೊರೆಯುತ್ತದೆ.

ಸಾಮಾಜಿಕ ತಾಣ

ಸಾಮಾಜಿಕ ತಾಣ

ಸಾಮಾಜಿಕ ತಾಣವನ್ನು ಬಳಸಿಕೊಂಡು ಪೋಲೀಸ್ ಅಧಿಕಾರಿಗಳು ಜನರ ಸಮಸ್ಯೆಗೆ ಪರಿಹಾರವನ್ನು ಒದಗಿಸುವ ಹೊಸ ವಿಧಾನವನ್ನು ಅನುಸರಿಸುತ್ತಿದ್ದು ಜನರು ಈ ತಾಣಗಳಲ್ಲಿ ಹೆಚ್ಚು ವ್ಯಸ್ತರಾಗಿರುವುದರಿಂದ ಇದು ಸಾಧ್ಯವಾಗುತ್ತಿದೆ.

ವೇಗ

ವೇಗ

ಎಲ್ಲಾ ವರ್ಗದ ಜನರು ಇದೀಗ ವಾಟ್ಸಾಪ್ ಅನ್ನು ತಮ್ಮ ಫೋನ್‌ಗಳಲ್ಲಿ ಬಳಸುತ್ತಿದ್ದಾರೆ. ವಾಟ್ಸಾಪ್‌ನಲ್ಲಿ ನಾವು ಅವರ ಸಹಾಯಕ್ಕಾಗಿ ಇದ್ದೇವೆ ಎಂಬುದು ತಿಳಿದರೆ ಅವರನ್ನು ಇನ್ನಷ್ಟು ವೇಗವಾಗಿ ನಮಗೆ ತಲುಪಬಹುದಾಗಿದೆ. ಇದರಿಂದ ಎಲ್ಲಾ ವರ್ಗದ ಜನರನ್ನು ನಾವು ಸಂಪರ್ಕಿಸಬಹುದಾಗಿದೆ.

 ಸೇವೆ

ಸೇವೆ

ನಗರದ ಬಹು ಸ್ಟೇಶನ್‌ಗಳನ್ನು ಬಳಸಿ ಟ್ರಯಲ್ ಮಾಡಿದ ನಂತರವೇ ಈ ಸೇವೆಯನ್ನು ಲಾಂಚ್ ಮಾಡಲಾಗಿದೆ.

ಹಿಂಜರಿಕೆ

ಹಿಂಜರಿಕೆ

ನಮ್ಮನ್ನು ಭೇಟಿ ಮಾಡಿ ಸಮಸ್ಯೆಯನ್ನು ದಾಖಲಿಸಲು ಜನರಿಗೆ ಯಾವುದೇ ಹಿಂಜರಿಕೆ ಇನ್ನು ಉಂಟಾಗುವುದಿಲ್ಲ

ಯಾವುದೇ ಭಯವಿಲ್ಲ

ಯಾವುದೇ ಭಯವಿಲ್ಲ

ದೊಡ್ಡ ದೊಡ್ಡ ಅಧಿಕಾರಿಗಳು ವಾಟ್ಸಾಪ್‌ನಲ್ಲಿ ಯಾವಾಗಲೂ ನಮಗೆ ಲಭ್ಯವಾಗುವುದರಿಂದ ಯಾವುದೇ ದೊಡ್ಡ ಮಟ್ಟಿಗಿನ ದೂರನ್ನು ದಾಖಲಿಸಲು ನಮಗೆ ಇನ್ನು ಯಾವುದೇ ಭಯವಿಲ್ಲ ಎಂಬುದು ಜನರ ಮಾತಾಗಿದೆ.

Best Mobiles in India

English summary
If you are in Bengaluru and facing any problem, you need not visit any nearby police station to lodge a complaint. For, people can now directly connect with the Bengaluru Police on WhatsApp and lodge a complaint.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X