ಸ್ಮಾರ್ಟ್‌ಫೋನ್‌ ಸ್ಪೋಟಗೊಂಡು ಬೆಂಗಳೂರಿನ ಬಾಲಕ ತಮಿಳುನಾಡಿನಲ್ಲಿ ಸಾವು!

ಸ್ಮಾರ್ಟ್‌ಫೋನ್‌ ಸ್ಪೋಟಗೊಂಡ ನಂತರ ನಂತರ ಬಾಲಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದರೂ, ಸ್ಪೋಟದಿಂದಾಗಿ ಬಾಲಕನ ಕುತ್ತಿಗೆ ಭಾಗಕ್ಕೆ ಹೆಚ್ಚು ಗಾಯವಾಗಿದ್ದು ಬಾಲಕ ಮೃತಪಟ್ಟಿದ್ದಾನೆ ಎಂದು ವರದಿ ತಿಳಿಸಿದೆ.

|

ಸ್ಮಾರ್ಟ್‌ಫೋನ್‌ ಸ್ಪೋಟಗೊಂಡು ತಮಿಳನಾಡಿನ ವೆಲ್ಲುಪುರಮ್ ಜಿಲ್ಲೆಯಲ್ಲಿ ಬೆಂಗಳೂರಿನ 15 ವರ್ಷದ ಅಭಿಲೇಶ್ ಎಂಬ ಬಾಲಕನೊರ್ವನು ಸಾವನ್ನಪ್ಪಿರುವ ಘಟನೆ ತಡವಾಗಿ ವರದಿಯಾಗಿದೆ ಸ್ಮಾರ್ಟ್‌ಫೋನ್‌ ಹಿಡಿದು ಮಾತನಾಡುವ ಸಮಯದಲ್ಲಿ ಆಕಸ್ಮಿಕವಾಗಿ ಸ್ಮಾರ್ಟ್‌ಫೋನ್‌ ಸ್ಪೊಟಗೊಂಡು ಬೆಂಗಳೂರು ಕೇಂದ್ರೀಯ ವಿಧ್ಯಾಲಯದಲ್ಲಿ 10 ನೇ ತರಗತಿ ಓದುತ್ತಿದ್ದ ಅಭಿಲೇಶ್ ಸಾವನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಇಂಡಿಯನ್ ಏರ್‌ಫೋರ್ಸ್ ಮೆಡಿಕಲ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಎಮ್‌ ರಾಜೇಶ್ ಮತ್ತು ಸಾಫ್ಟವೇರ್ ಉಧ್ಯೋಗಿಯಾಗಿರುವ ಅವರ ಪತ್ನಿ ಆರ್‌ ಲಲಿತ ಅವರು ತಮ್ಮ ಮಗ ಅಭಿಲೇಶ್ ಜೊತೆಯಲ್ಲಿ ಕ್ರಿಸ್‌ಮಸ್‌ ರಜೆಗೆಂದು ತಮಿಳುನಾಡಿನ ತಮ್ಮ ಸಂಬಂಧಿಕರ ಮನೆಗೆ ತೆರೆಳಿದ್ದಾಗ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.

ಸ್ಮಾರ್ಟ್‌ಫೋನ್‌ ಸ್ಪೋಟಗೊಂಡು ಬೆಂಗಳೂರಿನ ಬಾಲಕ ತಮಿಳುನಾಡಿನಲ್ಲಿ ಸಾವು!

ಬೆಂಗಳೂರಿನಲ್ಲಿ ತಯಾರಾಗಲಿದೆ ಆಪಲ್ ಸ್ಮಾರ್ಟ್‌ಫೋನ್!..ಸಿಲಿಕಾನ್‌ ಸಿಟಿ ಇನ್ನು "ಆಪಲ್‌ ಸಿಟಿ"!!

ಇನ್ನು ಸ್ಮಾರ್ಟ್‌ಫೋನ್‌ ಸ್ಪೋಟಗೊಂಡ ನಂತರ ನಂತರ ಬಾಲಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದರೂ, ಸ್ಪೋಟದಿಂದಾಗಿ ಬಾಲಕನ ಕುತ್ತಿಗೆ ಭಾಗಕ್ಕೆ ಹೆಚ್ಚು ಗಾಯವಾಗಿದ್ದು ಬಾಲಕ ಮೃತಪಟ್ಟಿದ್ದಾನೆ ಎಂದು ವರದಿ ತಿಳಿಸಿದೆ.

ಇನ್ನು ಘಟನೆ ಬಗ್ಗೆ ಪೊಲೀಸರು ಸೆಕ್ಷನ್ 174 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಇನ್ನೋಂದು ಪೊಲೀಸ್‌ ಮೂಲಗಳ ಪ್ರಕಾರ, ಘಟನೆ ನಡೆದ ಮನೆಯ ಮೇಲೆ ಹೈ ಟೆನ್ಷನ್ ವಿಧ್ಯುತ್ ಪ್ರವಹಿಸಿದ್ದು, ಇದು ಕೂಡ ಘಟನೆಗೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.

Best Mobiles in India

English summary
The boy died after his cellphone burst into flames inflicting severe burn injuries on him.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X