ಮುಖ್ಯವಾಗಿರುವ ಈ ಅಪ್ಲಿಕೇಶನ್‌ಗಳು ನಿಮ್ಮ ಫೋನ್‌ನಲ್ಲಿದೆಯೇ?

By Shwetha
|

ಸ್ಮಾರ್ಟ್‌ಫೋನ್ ಜಮಾನಾದಲ್ಲಿ ಅಪ್ಲಿಕೇಶನ್ ಇಲ್ಲದ ಫೋನ್ ಯಾರ ಕೈಯಲ್ಲೂ ಇರಲಾರದು ಎಂದೇ ಹೇಳಬಹುದು. ಆಂಡ್ರಾಯ್ಡ್ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳ ಮೂಲಕ ಈಗ ವಿಶಿಷ್ಟವಾದುದನ್ನು ಹಂಚಿಕೊಳ್ಳಬಹುದು. ಉಚಿತ ಕರೆ ಮತ್ತು ಉಚಿತ ಸಂದೇಶವನ್ನು ರವಾನಿಸಬಹುದು. ಬೇರೆ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ನಾವು ಸಾಮಾಜಿಕ ಜಾಲತಾಣಗಳ ಪರಿಚಯವನ್ನು ಈಗೀಗ ಚೆನ್ನಾಗಿಯೇ ಮಾಡಿಕೊಂಡಿದ್ದೇವೆ ಎಂದೇ ಹೇಳಬಹುದು.

ವಾಟ್ಸಾಪ್, ವಿ ಚಾಟ್, ಸ್ಕೈಪ್, ವೈಬರ್ ಮೊದಲಾದ ಅಪ್ಲಿಕೇಶನ್‌ಗಳು ಸುಲಭ ವಿಧಾನದಲ್ಲಿ ನಮ್ಮಲ್ಲಿರುವ ವಿಚಾರಗಳನ್ನು ಹಂಚಿಕೊಳ್ಳಲು ಸಹಾಯ ಮಾಡುವ ಮಾಧ್ಯಮಗಳು. ತ್ವರಿತ ಸಂದೇಶ ನಡೆಸುವುದು, ಮೋಜಿನ ಫೋಟೋಗಳನ್ನು ಕುಟುಂಬ ಚಿತ್ರಗಳನ್ನು ಈ ಅಪ್ಲಿಕೇಶನ್‌ಗಳನ್ನು ಬಳಸಿ ಒಬ್ಬರಿಂದ ಮತ್ತೊಬ್ಬರಿಗೆ ಹಂಚಿಕೊಳ್ಳಬಹುದು ಸಂತಸವನ್ನು ಪಡೆಯಬಹುದು.

ಹಳೆಯ ಕಾಲದಲ್ಲಿ ನಾವು ನಮ್ಮ ಅನುಭವಗಳನ್ನು ಭಾವನೆಗಳನ್ನು ಹಂಚಿಕೊಳ್ಳಲು ಪತ್ರಗಳನ್ನು ಹೇಗೆ ಬಳಸಿಕೊಳ್ಳುತ್ತಿದ್ದೇವೋ ಅದೇ ರೀತಿ ಈ ಅಪ್ಲಿಕೇಶನ್‌ಗಳು ನಿಮ್ಮ ಮನಸ್ಸಿನ ವಿಚಾರಗಳನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳಲು ಉತ್ತಮ ವೇದಿಕೆಯಾಗಿದೆ. ನೀವು ಮನಸ್ಸಿನಲ್ಲಿ ಅಂದುಕೊಂಡದ್ದನ್ನು ಕ್ಷಣದಲ್ಲಿ ಕಾರ್ಯರೂಪಕ್ಕೆ ತರುವ ತಂತ್ರಗಾರಿಕೆ ಇವುಗಳಲ್ಲಿದೆ. ಬನ್ನಿ ಸಾಮಾಜಿಕ ಜಾಲತಾಣಗಳನ್ನು ಹೇಗೆ ನಿಮ್ಮ ಭಾವನೆಗಳ ವೇದಿಕೆಯನ್ನಾಗಿಸಬಹುದು ಎಂಬುದನ್ನು ನೋಡಿ.

#1

#1

ಇದೊಂದು ಸುಲಭವಾದ ವೈಶಿಷ್ಟ್ಯಗಳನ್ನು ಹೊಂದಿರುವ ಅಪ್ಲಿಕೇಶನ್ ಆಗಿದ್ದು ಸಂದೇಶ ಕಳುಹಿಸುವುದು, ಫೋಟೋ ಹಂಚಿಕೆ, ಫೋನ್ ಕರೆ ಮೊದಲಾದ ಕಾರ್ಯಗಳನ್ನು ಇದನ್ನು ಬಳಸಿ ನಡೆಸಬಹುದಾಗಿದೆ. ಬರಿಯ ಅಂತರ್ಜಾಲ ಸಂಪರ್ಕವನ್ನು ನಿಮ್ಮ ಫೋನ್‌ಗೆ ಬಳಸಿಕೊಂಡು ಇದರ ಉಪಯೋಗವನ್ನು ಮಾಡಿ.

#2

#2

ವೈಬರ್ ಕೂಡ ವಾಟ್ಸಾಪ್‌ನಂತೆ ಒಂದು ಸಾಮಾಜಿಕ ಅಪ್ಲಿಕೇಶನ್ ಆಗಿದ್ದು ಉಚಿತ ಕರೆಯನ್ನು ವೈಬರ್ ಆಪ್ ಇರುವ ಇನ್ನೊಬ್ಬ ಸಂಗಾತಿಗೆ ನೀವು ಮಾಡಬಹುದು. ಅಂದರೆ ಸಂದೇಶದೊಂದಿಗೆ ಉಚಿತ ಕರೆಯನ್ನು ನಡೆಸುವ ಸುಲಭ ವಿಧಾನವನ್ನು ನಿಮಗೆ ಈ ಅಪ್ಲಿಕೇಶನ್ ಇಲ್ಲಿ ಒದಗಿಸಲಿದೆ.

#3

#3

ವ್ಯಾವಹಾರಿಕವಾಗಿ ಸ್ಕೈಪ್ ಬಳಕೆಯನ್ನು ನಿಮ್ಮ ಫೋನ್‌ಗಳಲ್ಲಿ ನಿಮಗೆ ಮಾಡಿಕೊಳ್ಳಬಹುದಾಗಿದೆ. ಕಚೇರಿಗಳಲ್ಲಿ ನಡೆಸುವ ಸಂವಾದ, ಗುಂಪು ಚಾಟ್ ಇದಕ್ಕೆಲ್ಲಾ ಉತ್ತಮ ವೇದಿಕೆಯನ್ನು ಸ್ಕೈಪ್ ಮಾಡಿಕೊಡುತ್ತದೆ.

#4

#4

ನಿಮ್ಮಲ್ಲಿರುವ ಫೋಟೋವನ್ನು ವೈವಿಧ್ಯಮಯವನ್ನಾಗಿಸುವ ಚತುರ ಸಂಪಾದನೆ ಅಪ್ಲಿಕೇಶನ್ ಆಗಿದೆ ಪಿಕ್ಸೆಲರ್ ಎಕ್ಸ್‌ಪ್ರೆಸ್. ಫೋಟೋ ಬ್ಲರ್ ಮಾಡುವುದು, ರೆಸಲ್ಯೂಶನ್ ಕಡಿಮೆಗೊಳಿಸುವುದು, ಕ್ರಾಪ್ ಮಾಡುವುದು ಇವೇ ಮೊದಲಾದ ಕಾರ್ಯಗಳನ್ನು ಈ ಅಪ್ಲಿಕೇಶನ್ ಮೂಲಕ ನಿಮಗೆ ನಡೆಸಬಹುದಾಗಿದೆ.

#5

#5

ಈಗೀಗ ಫೋನ್‌ಗಳಲ್ಲೇ ಲಭ್ಯವಿರುವ ಅಪ್ಲಿಕೇಶನ್‌ಗಳು ನಿಮಗೆ ಉಚಿತವಾಗಿ ಚಾಟ್ ಮಾಡುವ ಅವಕಾಶವನ್ನು ಒದಗಿಸುತ್ತದೆ. ನೀವು ಫೇಸ್‌ಬುಕ್ ಅನ್ನು ತೆರೆಯದೆಯೇ ಚಾಟ್‌ಗೆ ಹೋಗುವ ವಿಶಿಷ್ಟ ಸವಲತ್ತನ್ನು ಮೆಸೆಂಜರ್ ನಿಮಗೆ ಒದಗಿಸುತ್ತದೆ.

#6

#6

ನೀವು ಫೋಟೋವನ್ನು ತೆಗೆದ ತಕ್ಷಣವೇ ಟೈಮರ್ ಇಟ್ಟು ನಿಮ್ಮ ಸ್ನೇಹಿತರಿಗೆ ಫೋಟೋವನ್ನು ಕಳಿಸುವ ಅನನ್ಯ ವೈಶಿಷ್ಟ್ಯ ಇದರಲ್ಲಿದೆ. ಇದೊಂದು ಮೋಜಿನ ಅಪ್ಲಿಕೇಶನ್ ಆಗಿದ್ದು ಟೈಮರ್ ಮುಗಿದೊಡನೆ ಆ ಫೋಟೋ ತತ್‌ಕ್ಷಣ ಡಿಲೀಟ್ ಆಗುತ್ತದೆ.

#7

#7

ಇದರಲ್ಲಿ ಫೊಟೋ ತೆಗೆದ ಕೂಡಲೇ ವಿವಿಧ ರೀತಿಯ ಹಂತಗಳ ಮೂಲಕ ಫೋಟೋವನ್ನು ಸಂಪಾದಿಸಿ ನಿಮ್ಮ ಸ್ನೇಹಿತರಿಗೆ ಇದನ್ನು ರವಾನಿಸಬಹುದಾಗಿದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X