ಫೋಟೋ ನೋಟವನ್ನೇ ಬದಲಾಯಿಸುವ ಎಡಿಟಿಂಗ್ ಆಪ್ಸ್

By Shwetha
|

ನೀವು ಉತ್ತಮ ಫೋಟೋ ತೆಗೆಯಲು ದುಬಾರಿ ಬೆಲೆಯ ಕ್ಯಾಮೆರಾವನ್ನೇ ಕೊಂಡುಕೊಳ್ಳಬೇಕೆಂದೇನಿಲ್ಲ. ನಿಮ್ಮ ಬಳಿ ಇರುವ ಸ್ಮಾರ್ಟ್‌ಫೋನ್‌ ಕೂಡ ಅದ್ಭುತ ಫೋಟೋ ತೆಗೆಯಲು ನೆರವು ನೀಡಬಲ್ಲುದು. ಹೌದು ನಿಮ್ಮ ಫೋನ್‌ನಲ್ಲಿ ನೀವು ತೆಗೆದ ಫೋಟೋವನ್ನು ಉತ್ತಮವಾಗಿ ಎಡಿಟ್ ಮಾಡುವ ಸಾಫ್ಟ್‌ವೇರ್ ಅನ್ನು ನೀವು ಹೊಂದಿರುವುದು ಅತ್ಯವಶ್ಯಕವಾಗಿದೆ. ಇಂದಿನ ಲೇಖನದಲ್ಲಿ ಈ ಸಾಫ್ಟ್‌ವೇರ್‌ಗಳು ಯಾವುವು ಎಂಬುದನ್ನು ಕುರಿತ ಮಾಹಿತಿಯನ್ನು ನಾವು ತಿಳಿಸಲಿರುವೆವು.

ಓದಿರಿ: ಬ್ಯಾಂಕಾಕ್‌ನಲ್ಲಿ ಹುವಾಯಿ ಮೋಡಿ: ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ ಲಾಂಚ್

ಈ ಫೋಟೋ ಎಡಿಟಿಂಗ್ ಸಾಫ್ಟ್‌ವೇರ್‌ಗಳು ಆಂಡ್ರಾಯ್ಡ್‌ಗೆ ಮಾತ್ರ ಸೀಮಿತವಾಗಿದ್ದು ನಿಮ್ಮ ಮೆಚ್ಚಿನ ಫೋಟೋಗಳನ್ನು ಇನ್ನಷ್ಟು ಉತ್ತಮವಾಗಿಸುವಲ್ಲಿ ನೆರವನ್ನು ನೀಡಲಿವೆ.

ವಾಸ್ಕೊ ಕ್ಯಾಮ್

ವಾಸ್ಕೊ ಕ್ಯಾಮ್

ಆಂಡ್ರಾಯ್ಡ್‌ನಲ್ಲಿ ಹೆಚ್ಚು ಡೌನ್‌ಲೋಡ್ ಆಗಿರುವ ಫೋಟೋ ಅಪ್ಲಿಕೇಶನ್ ವಾಸ್ಕೊ ಕ್ಯಾಮ್ ಆಗಿದೆ. ಉತ್ತಮ ಎಡಿಟಿಂಗ್ ಫೀಚರ್‌ಗಳು ಮತ್ತು ತನ್ನದೇ ಆದ ಇನ್‌ಸ್ಟಾಗ್ರಾಮ್‌ಗಳನ್ನು ಹೊಂದಿದ್ದು ಬಳಕೆದಾರರಿಗೆ ಫೋಟೋಗಳನ್ನು ಅಪ್‌ಲೋಡ್ ಮಾಡುವಲ್ಲಿ ನೆರವಾಗಲಿದೆ.

ದ ಕ್ಲಾಸಿಕ್ ಫೋಟೋಶಾಪ್ ಟಚ್ ಫಾರ್ ಫೋನ್

ದ ಕ್ಲಾಸಿಕ್ ಫೋಟೋಶಾಪ್ ಟಚ್ ಫಾರ್ ಫೋನ್

ಫೋಟೋಶಾಪ್ ಟಚ್ ಫಾರ್ ಫೋನ್ ಅಪ್ಲಿಕೇಶನ್ ಬಳಸಲು ಚಂದಾದಾರಿಕೆ ಫೀಸ್ ಅನ್ನು ಕಟ್ಟಬೇಕಾಗಿಲ್ಲ. ಲೇಯರ್‌ಗಳು, ಮುಖ್ಯ ಫಂಕ್ಶನ್‌ಗಳು, ಬಣ್ಣದ ಹೊಂದಿಸುವಿಕೆ ಮೊದಲಾದ ಮುಖ್ಯ ಕೆಲಸಗಳನ್ನು ಇದು ಮಾಡುತ್ತದೆ.

ಫೋಟೋ ಲ್ಯಾಬ್

ಫೋಟೋ ಲ್ಯಾಬ್

ಫೋಟೋ ಲ್ಯಾಬ್ ಬಳಸಿ ನಿಮ್ಮ ಫೋಟೋಗೆ ಬಣ್ಣಗಳು, ಸ್ಟಿಕ್ಕರ್‌ಗಳು, ಐಕಾನ್‌ಗಳನ್ನು ಸೇರ್ಪಡೆಗೊಳಿಸಬಹುದಾಗಿದೆ. ಇದು ಕಡಿಮೆ ವೃತ್ತಿಪರ ಅಂಶಗಳನ್ನು ಹೊಂದಿವೆ.

ಸ್ನ್ಯಾಪ್‌ಸೀಡ್

ಸ್ನ್ಯಾಪ್‌ಸೀಡ್

ವೃತ್ತಿಪರ ನಿಕ್ ಸಾಫ್ಟ್‌ವೇರ್ ಸ್ನ್ಯಾಪ್‌ಸೀಡ್ ಅನ್ನು ಅಭಿವೃದ್ಧಿಪಡಿಸಿದ್ದು ನಿಮ್ಮ ಫೋಟೋಗಳನ್ನು ಇನ್ನಷ್ಟು ನಯಗೊಳಿಸಲು ಇದು ಸಹಕಾರಿ ಎಂದೆನಿಸಿದೆ. ಫೋಟೋದ ಹೊಳೆವು, ಕಾಂಟ್ರಾಸ್ಟ್ ಹೀಗೆ ಫೋಟೋವನ್ನು ಪರಿಪೂರ್ಣಗೊಳಿಸುವಲ್ಲಿ ಇದು ಸಹಕಾರಿಯಾಗಿದೆ.

ಸಿಮೇರಾ

ಸಿಮೇರಾ

ಯಾವುದೇ ರೀತಿಯ ಫೋಟೋಗೆ ಸಿಮೇರಾ ಹೇಳಿಮಾಡಿಸಿರುವ ಅಪ್ಲಿಕೇಶನ್ ಆಗಿದೆ. ಅಪ್ಲಿಕೇಶನ್‌ನಿಂದ ನೇರವಾಗಿ ಫೋಟೋಗಳನ್ನು ತೆಗೆಯಬಹುದಾಗಿದ್ದು, ಸಿಮೇರಾ ಒದಗಿಸುವ ವಿವಿಧ ಲೆನ್ಸ್‌ಗಳನ್ನು ಬಳಸಿ ಇನ್ನಷ್ಟು ಮೋಹಕವಾಗಿ ಫೋಟೋಗಳನ್ನು ತೆಗೆಯಬಹುದಾಗಿದೆ.

ಅವಿಯಾರಿ ಫೋಟೋ ಎಡಿಟರ್

ಅವಿಯಾರಿ ಫೋಟೋ ಎಡಿಟರ್

ಅವಿಯಾರಿ ಅಪ್ಲಿಕೇಶನ್ ಫೋಕಸ್ ಫಂಕ್ಶನ್‌ಗಳನ್ನು ಪಡೆದುಕೊಂಡಿದ್ದು ಮೆಮೆ ಜನರೇಟರ್ ಮೊದಲಾದ ಅಂಶಗಳನ್ನು ಒಳಗೊಂಡಿವೆ. ಹೆಚ್ಚಿನ ಸಾಮಾಜಿಕ ತಾಣ ಅಪ್ಲಿಕೇಶನ್‌ಗಳಲ್ಲಿ ನಿಮ್ಮೆಲ್ಲಾ ಫೋಟೋಗಳನ್ನು ನಿಮಗೆ ಹಂಚಿಕೊಳ್ಳಬಹುದಾಗಿದೆ.

ಪಿಕ್ಸ್ ಆರ್ಟ್

ಪಿಕ್ಸ್ ಆರ್ಟ್

ಹೆಚ್ಚು ಜನಪ್ರಿಯ ಮತ್ತು ಉಚಿತವಾಗಿರುವ ಅಪ್ಲಿಕೇಶನ್ ಪಿಕ್ಸ್ ಆರ್ಟ್ ಆಗಿದ್ದು ಇಫೆಕ್ಟ್‌ಗಳಿಂದ ಕೂಡಿರುವ ಇಮೇಜ್ ಎಡಿಟರ್, ಕ್ಯಾಮೆರಾ ಅಪ್ಲಿಕೇಶನ್, ಡ್ರಾಯಿಂಗ್ ಟೂಲ್ ಅನ್ನು ಇದು ಒಳಗೊಂಡಿದೆ.

ಪಿಕ್ಸೆಲರ್ ಎಕ್ಸ್‌ಪ್ರೆಸ್

ಪಿಕ್ಸೆಲರ್ ಎಕ್ಸ್‌ಪ್ರೆಸ್

ನಿಮಗೆ ವೇಗವಾಗಿ ಫೋಟೋ ಎಡಿಟಿಂಗ್ ಮಾಡಬೇಕು ಎಂದಾದಲ್ಲಿ ಪಿಕ್ಸೆಲರ್ ಎಕ್ಸ್‌ಪ್ರೆಸ್ ಅಪ್ಲಿಕೇಶನ್ ಉತ್ತಮವಾಗಿದೆ. ಕಾಸ್ಮೆಟಿಕ್ ಎಡಿಟಿಂಗ್ ಮತ್ತು ಸಾಮಾಜಿಕ ತಾಣದಲ್ಲಿ ಹಂಚಿಕೆಯನ್ನು ಇದು ಒಳಗೊಂಡಿದೆ.

ವಿಗ್ನೆಟ್

ವಿಗ್ನೆಟ್

ಡಿಜಿಟಲ್ ಜೂಮ್, ಸೆಲ್ಫ್ ಟೈಮರ್ ಮತ್ತು ಟೈಮ್ ಲ್ಯಾಪ್ಸ್ ವಿಗ್ನೆಟ್‌ನಲ್ಲಿ ಲಭ್ಯ. ದ್ವಿ ಎಕ್ಸ್‌ಪೋಶರ್ ಸೆಟ್ಟಿಂಗ್ಸ್ ಹಾಗೂ ಫೋಟೋ ಮೆಶೀನ್ ಮೋಡ್ ಅನ್ನು ಈ ಫೋಟೋ ಅಪ್ಲಿಕೇಶನ್ ಹೊಂದಿದೆ.

Best Mobiles in India

English summary
Smartphone camera technology has all but replaced point-and-shoot digital cameras with comparable performance and some extra help from apps. we're here to help you make your favorite photos look even better with our list of the best photo editing apps on Android.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X