ಮೊಬೈಲ್ ಸ್ಫೋಟಕ್ಕೆ ತುತ್ತಾದ ದುರ್ದೈವಿ ಬಾಲಕ

By Shwetha
|

ಫೋನ್ ಸ್ಫೋಟ ಕುರಿತಾದ ಹಲವಾರು ವರದಿಗಳನ್ನು ನಮ್ಮ ಲೇಖನದಲ್ಲಿ ನಾವು ಪ್ರಕಟಿಸಿದ್ದು ಇದು ಸಂಭವಿಸುವುದಕ್ಕೆ ಕಾರಣಗಳು ಮತ್ತು ಮುನ್ನೆಚ್ಚರಿಕೆಗಳನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಲೇ ಇದ್ದೇವೆ. ಆದರೂ ಸ್ಮಾರ್ಟ್‌ಫೋನ್ ಬಳಕೆದಾರರು ತಾವು ಮಾಡುವ ಸಣ್ಣ ತಪ್ಪಿನಿಂದ ತಮ್ಮ ಪ್ರಾಣವನ್ನು ಪಣಕ್ಕೆ ಒಡ್ಡುತ್ತಿದ್ದಾರೆ ಎಂಬುದು ವಿಪರ್ಯಾಸವೇ ಸರಿ.

ತಮಿಳುನಾಡಿನ ಮಧುರಕಾಂತಮ್ ನಗರದ ನಾಲ್ಕನೇ ತರಗತಿಯ ಧನುಷ್ ಸ್ಮಾರ್ಟ್‌ಫೋನ್ ಸಿಡಿತಕ್ಕೆ ಒಳಗಾಗಿ ಬಲಕಣ್ಣಿನ ಹಾನಿಗೆ ಒಳಗಾಗಿದ್ದಾನೆ. ಇಂದಿನ ಲೇಖನದಲ್ಲಿ ಈ ದುರಂತ ಕಥೆಯ ವಿವರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದರ ಜೊತೆಗೆ ನಾವು ನಿಮಗೆ ಸಂದೇಶವನ್ನು ನೀಡುತ್ತಿದ್ದೇವೆ.

ಫೋನ್ ಸ್ಫೋಟ

ಫೋನ್ ಸ್ಫೋಟ

ತನ್ನ ಮುಖದ ಬಳಿ ಫೋನ್ ಸ್ಫೋಟಗೊಂಡಿರುವುದು ಬಾಲಕನ ಬಲ ಕಣ್ಣಿಗೆ ಹಾನಿಯನ್ನುಂಟು ಮಾಡಿದೆ. ಡಿವೈಸ್ ಚಾರ್ಜ್‌ನಲ್ಲಿರುವಾಗ ಕರೆಯನ್ನು ಸ್ವೀಕರಿಸಿದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

ಬಾಲಕ ಚಿಕಿತ್ಸೆ

ಬಾಲಕ ಚಿಕಿತ್ಸೆ

ಬಲಕೈ, ಮುಖ ಮತ್ತು ಬಲಕಣ್ಣು ಸ್ಫೋಟಕ್ಕೆ ತುತ್ತಾಗಿದೆ. ಎಗ್ಮೋರ್‌ನ ಸರಕಾರಿ ಆಸ್ಪತ್ರೆಯಲ್ಲಿ ಬಾಲಕ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾನೆ.

ಘಟನೆ

ಘಟನೆ

ಶುಕ್ರವಾರ ರಾತ್ರಿ ಈ ಘಟನೆ ಸಂಭವಿಸಿದ್ದು ಕೂಡಲೇ ಆತನ ಪೋಷಕರು ಹುಡುಗನನ್ನು ಚೆಂಗಲ್ ಪೇಟ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ನಂತರ ಅಲ್ಲಿನ ವೈದ್ಯರುಗಳು ಬಾಲಕನನ್ನು ಸುಟ್ಟ ಗಾಯಗಳಿಗಾಗಿ ಕೀಳ್‌ಪಾಕ್ ಆಸ್ಪತೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ.

ಕೋರ್ನಿಯಾಗೆ ಹಾನಿ

ಕೋರ್ನಿಯಾಗೆ ಹಾನಿ

ಬಾಲಕನ ಬಲಕಣ್ಣು, ಕೋರ್ನಿಯಾಗೆ ಹಾನಿಯುಂಟಾಗಿದ್ದು ಕ್ಯಾಟರಾಕ್ಟ್ ಉಂಟಾಗಿದೆ. ಎಡಗಣ್ಣು ಕಣ್ಣು ಗೋಳ ಬಿರುಕಾಗಿದೆ. ಗಾಯಗಳು ತುಂಬಾ ತೀವ್ರವಾಗಿಸಿದೆ ಎಂಬುದು ತಿಳಿದು ಬಂದಿದೆ.

ಪ್ರಥಮ ಹಾಗೂ ದ್ವಿತೀಯ ಡಿಗ್ರಿ ಸುಡುವಿಕೆ

ಪ್ರಥಮ ಹಾಗೂ ದ್ವಿತೀಯ ಡಿಗ್ರಿ ಸುಡುವಿಕೆ

ಕೀಳ್‌ಪಾಕ್ ಆಸ್ಪತ್ರೆಯ ಸುಟ್ಟ ಗಾಯಗಳು ಮತ್ತು ಪ್ಲಾಸ್ಟಿಕ್ ಸರ್ಜರಿ ವಿಭಾಗದ ನಿರ್ಮಲಾ ಪೊನ್ನಂಬಲ ಹೇಳುವಂತೆ ಮಗುವು ತನ್ನ ಕೈ ಮತ್ತು ಮುಖದ ಮೇಲೆ ಪ್ರಥಮ ಹಾಗೂ ದ್ವಿತೀಯ ಡಿಗ್ರಿ ಸುಡುವಿಕೆಗಳನ್ನು ಹೊಂದಿದೆ.

ಬಾಲಕನಿಗೆ ಪ್ರಥಮ ಚಿಕಿತ್ಸೆ

ಬಾಲಕನಿಗೆ ಪ್ರಥಮ ಚಿಕಿತ್ಸೆ

ಬಾಲಕನಿಗೆ ಪ್ರಥಮ ಚಿಕಿತ್ಸೆಯನ್ನು ನಾವು ನೀಡಿದ್ದು ಕಣ್ಣಿನ ಚಿಕಿತ್ಸೆಗಾಗಿ ನೇತ್ರ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದಿದ್ದಾರೆ.

ಬಾಲಕನ ಕಣ್ಣುಗಳಿಗೆ ಚಿಕಿತ್ಸೆ

ಬಾಲಕನ ಕಣ್ಣುಗಳಿಗೆ ಚಿಕಿತ್ಸೆ

ಕಣ್ಣಿನ ಆಸ್ಪತ್ರೆಯಲ್ಲಿ ಬಾಲಕನ ಕಣ್ಣುಗಳಿಗೆ ಚಿಕಿತ್ಸೆಯನ್ನು ನೀಡಿದ್ದು ಆಘಾತವಾಗಿರುವ ಕಣ್ಣಿನ ಗೋಳಕ್ಕೆ ಚಿಕಿತ್ಸೆಯನ್ನು ನೀಡಲಾಗಿದೆ.

ಪ್ರಥಮ ಮೊಬೈಲ್ ಸ್ಪೋಟ

ಪ್ರಥಮ ಮೊಬೈಲ್ ಸ್ಪೋಟ

ಆಸ್ಪತ್ರೆಗೆ ಬಂದಿರುವ ಪ್ರಥಮ ಮೊಬೈಲ್ ಸ್ಪೋಟದ ವರದಿ ಇದಾಗಿದ್ದು ಬಾಲಕನಿಗೆ ಸೂಕ್ತ ಚಿಕಿತ್ಸೆಯನ್ನು ನೀಡುವುದಕ್ಕಾಗಿ ಸರ್ವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ.

ಅವಘಡ

ಅವಘಡ

ಮೊಬೈಲ್‌ಗಳಿಂದ ಉಂಟಾಗುತ್ತಿರುವ ಇಂತಹ ಅವಘಡಗಳ ಬಗ್ಗೆ ಜನರು ಹೆಚ್ಚಿನ ಜಾಗರೂಕತೆಯನ್ನು ಹೊಂದಿರಬೇಕು. ಅಂತೆಯೇ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಹೊಂದಬೇಕಾದ್ದು ಅವಶ್ಯವಿದೆ. ಎಂಬುದು ವೈದ್ಯರುಗಳು ತಿಳಿಸಿರುವ ಮಾಹಿತಿಯಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಫೇಸ್‌ಬುಕ್‌ನ 12ನೇ ಹುಟ್ಟುಹಬ್ಬ ಅಚ್ಚರಿ ವೀಡಿಯೋದಿಂದ </a><br /><a href=ಬಿದ್ದರೂ ಒಡೆಯದ ಪ್ರಪಂಚದ ಪ್ರಪ್ರಥಮ ಸ್ಮಾರ್ಟ್‌ಫೋನ್ ಯಾವುದು?
ನಿಮ್ಮ ಫೋನ್ ಅನ್ನು ಕಾಪಾಡುವ 10 ಅದ್ಭುತ ಸಲಹೆಗಳು
ಸ್ಮಾರ್ಟ್‌ಫೋನ್‌ ಬಳಕೆದಾರರು ತ್ಯಜಿಸಬೇಕಾದ ದುರಾಭ್ಯಾಸಗಳು " title="ಫೇಸ್‌ಬುಕ್‌ನ 12ನೇ ಹುಟ್ಟುಹಬ್ಬ ಅಚ್ಚರಿ ವೀಡಿಯೋದಿಂದ
ಬಿದ್ದರೂ ಒಡೆಯದ ಪ್ರಪಂಚದ ಪ್ರಪ್ರಥಮ ಸ್ಮಾರ್ಟ್‌ಫೋನ್ ಯಾವುದು?
ನಿಮ್ಮ ಫೋನ್ ಅನ್ನು ಕಾಪಾಡುವ 10 ಅದ್ಭುತ ಸಲಹೆಗಳು
ಸ್ಮಾರ್ಟ್‌ಫೋನ್‌ ಬಳಕೆದಾರರು ತ್ಯಜಿಸಬೇಕಾದ ದುರಾಭ್ಯಾಸಗಳು " loading="lazy" width="100" height="56" />ಫೇಸ್‌ಬುಕ್‌ನ 12ನೇ ಹುಟ್ಟುಹಬ್ಬ ಅಚ್ಚರಿ ವೀಡಿಯೋದಿಂದ
ಬಿದ್ದರೂ ಒಡೆಯದ ಪ್ರಪಂಚದ ಪ್ರಪ್ರಥಮ ಸ್ಮಾರ್ಟ್‌ಫೋನ್ ಯಾವುದು?
ನಿಮ್ಮ ಫೋನ್ ಅನ್ನು ಕಾಪಾಡುವ 10 ಅದ್ಭುತ ಸಲಹೆಗಳು
ಸ್ಮಾರ್ಟ್‌ಫೋನ್‌ ಬಳಕೆದಾರರು ತ್ಯಜಿಸಬೇಕಾದ ದುರಾಭ್ಯಾಸಗಳು

Best Mobiles in India

English summary
A nine-year-old boy was badly injured a few days ago, reportedly due to a mobile phone exploding in his face.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X