ಬಿಎಸ್‌ಎನ್‌ಎಲ್ BB249 ಪ್ಯಾಕ್‌ ವೇಗ 1Mbps: ತಿಳಿಯಲೇಬೇಕಾದ 5 ಬೆನಿಫಿಟ್‌ಗಳು

Written By:

ರಾಜ್ಯ ಮಾಲೀಕತ್ವದ ಬಿಎಸ್‌ಎನ್‌ಎಲ್‌, ರಿಲಾಯನ್ಸ್ ಜಿಯೋಗೆ ಸ್ಪರ್ಧೆ ನೀಡಲು ಈಗ ತನ್ನ ನೆಟ್‌ವರ್ಕ್‌ ಸಂಪರ್ಕವನ್ನು ಈಗ ಇನ್ನಷ್ಟು ವೇಗಗೊಳಿಸಿದೆ. ಟೆಲಿಕಾಂ ಈಗ 1Mbps ಬ್ರಾಡ್‌ಬ್ಯಾಂಡ್ ವೇಗವನ್ನು ಆಫರ್‌ ಮಾಡುತ್ತಿದ್ದು, ಇದು ವೆಲ್ಕಮ್‌ ಅಪ್‌ಗ್ರೇಡ್ ಆಗಿದೆ.

ಈ ಹಿಂದೆ ಬಿಎಸ್‌ಎನ್‌ಎಲ್‌(BSNL) ಗ್ರಾಹಕರು 512kpps ಇಂಟರ್ನೆಟ್ ವೇಗವನ್ನು ಪಡೆಯುತ್ತಿದ್ದರು. ಆದರೆ ಇನ್ನುಮುಂದೆ ಗ್ರಾಹಕರು 1Mbps ಡಾಟಾ ವೇಗವನ್ನು ಸ್ವೀಕರಸಿಲಿದ್ದಾರೆ. ಈ ಮಾಹಿತಿಯನ್ನು ಈಗಾಗಲೇ ರಿಜಿಸ್ಟರ್ ಆಗಿರುವ ಎಲ್ಲಾ ಬಿಎಸ್‌ಎನ್‌ಎಲ್‌ ನಂಬರ್‌ಗಳಿಗೆ ಕಳುಹಿಸಲಾಗಿದೆ. ಈ ಆಫರ್‌ ಈ ತಿಂಗಳಿನಿಂದಲೇ ಆಕ್ಟಿವೇಟ್ ಆಗಲಿದೆ. ಅಂದಹಾಗೆ ಹೆಚ್ಚಾಗಿರುವ ಈ ಇಂಟರ್ನೆಟ್ ವೇಗವು ಕೈಗೆಟಕುವ ಬಜೆಟ್‌ ಬೆಲೆಯ BB249 ಪ್ಲಾನ್‌ ಅಡಿಯಲ್ಲಿ ಸಿಗಲಿದೆ. BB249 ಪ್ಲಾನ್ ಅಡಿಯಲ್ಲಿ ಸಿಗಬಹುದಾದ ಟಾಪ್‌ 5 ಬೆನಿಫಿಟ್‌ಗಳು ಯಾವುವು ಎಂದು ಕೆಳಗಿನ ಸ್ಲೈಡರ್‌ ಓದಿ ತಿಳಿಯಿರಿ.

ಬಿಎಸ್‌ಎನ್‌ಎಲ್ ಇಂಟರ್ನೆಟ್ ವೇಗ ಹೆಚ್ಚಿಸಿಕೊಳ್ಳುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಅನ್‌ಲಿಮಿಟೆಡ್

ಬ್ರಾಡ್‌ಬ್ಯಾಂಡ್ 249 ಖಂಡಿತವಾಗಿಯಯೂ ಅನ್‌ಲಿಮಿಟೆಡ್‌ ಆಫರ್‌ ಆಗಿದೆ. ಈ ಆಫರ್‌ನಿಂದ 2GB ವರೆಗೆ 2MBPS ಡಾಟಾ ವೇಗ ಪಡೆಯಬಹುದು. ನಂತರ ಡಾಟಾ ವೇಗ 1MBPS ಇರಲಿದೆ.

6 ತಿಂಗಳಿಗೆ ರೂ.249

ನಿಜವಾದ ಅನ್‌ಲಿಮಿಟೆಡ್‌ ಉಪಯೋಗ ಇದೆ. ಬ್ರಾಡ್‌ಬ್ಯಾಂಡ್‌ ಪ್ಯಾಕ್‌ ಬೆಲೆ ರೂ.249 ಆಗಿದ್ದು, 6 ತಿಂಗಳು ವ್ಯಾಲಿಡಿಟಿ ಇರಲಿದೆ. ಆಕ್ಟಿವೇಶನ್ ಬೆಲೆ ತಿಂಗಳಿಗೆ ರೂ.49.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಾನುವಾರ ಉಚಿತ ಕರೆಗಳು

ಇತರೆ ಸೂಪರ್‌ ಬೆನಿಫಿಟ್ ಎಂದರೆ, ಯಾವುದೇ ಮೊಬೈಲ್‌ ನಂಬರ್‌ ಅಥವಾ ಲ್ಯಾಂಡ್‌ಲೈನ್‌ಗೆ ಕರೆ ಮಾಡಿದರು ಭಾನುವಾರ ದಿನ ಉಚಿತ ಕರೆ ಸೇವೆ ಇರುತ್ತದೆ. ಈ ಸೇವೆ 6 ತಿಂಗಳವರೆಗೂ ಇರುತ್ತದೆ.

6 ತಿಂಗಳವರೆಗೆ ಉಚಿತ ರಾತ್ರಿ ಕರೆಗಳು

ಭಾನುವಾರ ಹೊರತುಪಡಿಸಿ, 6 ತಿಂಗಳವರೆಗೆ ವಾರದ 6 ದಿನಗಳಲ್ಲಿ ರಾತ್ರಿ ಕರೆ ಉಚಿತವಾಗಿರುತ್ತದೆ. ಕರೆ ಸಮಯ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 7 ಗಂಟೆವರೆಗೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೊಸ ಗ್ರಾಹಕರಿಗೆ ಮಾತ್ರ ಆಫರ್‌

ಅಂದಹಾಗೆ ಹೊಸ ಬ್ರಾಡ್‌ಬ್ಯಾಂಡ್ 249 ಪ್ಲಾನ್ ಆಫರ್ ಬಿಎಸ್‌ಎನ್‌ಎಲ್‌ನ ಹೊಸ ಗ್ರಾಹಕರಿಗೆ ಮಾತ್ರ. ಬಿಎಸ್‌ಎನ್‌ಎಲ್‌ನ ಹಳೆಯ ಗ್ರಾಹಕರು ಈ ಆಫರ್‌ಗೆ ಅಪ್‌ಡೇಟ್‌ ಆಗಲು ಸಹ ಸಾಧ್ಯವಿಲ್ಲ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
BSNL Increased the Post FUP Speed of BB249 Pack to 1Mbps: Here are the 5 Benefits! Read more about this in kannada.gizbot.com
Please Wait while comments are loading...
Opinion Poll

Social Counting