ಬಿಎಸ್‌ಎನ್‌ಎಲ್ 'ಫ್ರೀಡಮ್ ಪ್ಲಾನ್' ರೂ 136 ಕ್ಕೆ ಉಚಿತ ಡೇಟಾ, ಕರೆ

Written By:

ಪ್ರಸ್ತುತ ಜಿಯೋ ದೇಶದಲ್ಲಿ ಹೆಚ್ಚುವರಿ ಸಂಚಲವನ್ನುಂಟು ಮಾಡುತ್ತಿದೆ. ಟೆಲಿಕಾಮ್ ಕಂಪೆನಿಗಳಿಗೆ ಭರ್ಜರಿ ಪೈಪೋಟಿಯನ್ನು ನೀಡಿರುವ ಜಿಯೋ ಪ್ರಸ್ತುತ ಎಲ್ಲಾ ಟೆಲಿಕಾಮ್‌ಗಳನ್ನು ಹಿಂದಿಕ್ಕಿ ನಾಗಲೋಟದಲ್ಲಿ ಮುಂದಿಡುತ್ತಿದೆ. ಹೆಚ್ಚಿನ ಬಳಕೆದಾರರು ಜಿಯೋಗೆ ನೆಟ್‌ವರ್ಕ್ ಅನ್ನು ಬದಲಾಯಿಸಿಕೊಳ್ಳುತ್ತಿದ್ದು, ಏರ್‌ಟೆಲ್, ಬಿಎಸ್‌ಎನ್‌ಎಲ್, ಏರ್‌ಸೆಲ್, ವೊಡಾಫೋನ್‌ಗೆ ಇದು ನುಂಗಲಾರದ ಬಿಸಿ ತುಪ್ಪದಂತೆ ಭಾಸವಾಗಿದೆ.

ಓದಿರಿ: ಜಿಯೋ ಸಿಮ್‌ನಲ್ಲಿರುವ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ

ಈಗ ಬಿಎಸ್‌ಎನ್‌ಎಲ್ 'ಫ್ರೀಡಮ್ ಪ್ಲಾನ್' ಅನ್ನು ಪ್ರಸ್ತುತಪಡಿಸಿದ್ದು ಚಂದಾದಾರರಿಗೆ ಕಡಿಮೆ ದರದಲ್ಲಿ ಕರೆದರಗಳನ್ನು ನೀಡುತ್ತಿದೆ. ಈ ಪ್ಲಾನ್ 2 ವರ್ಷಗಳ ವ್ಯಾಲಿಡಿಟಿಯನ್ನು ಪಡೆದುಕೊಂಡಿದ್ದು 3ಜಿ ಡೇಟಾ ಟಾರಿಫ್‌ನಲ್ಲಿ 85% ಇಳಿಕೆಯನ್ನು ಮಾಡಿದೆ. ಈ ಫ್ರೀಡಮ್ ಪ್ಲಾನ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತಿದ್ದು ಇಲ್ಲಿ ತಿಳಿದುಕೊಳ್ಳಿ.

ಓದಿರಿ: ಬಿಎಸ್‌ಎನ್‌ಎಲ್ 'ಬಿಬಿ 249 ಆಫರ್' ಪಡೆದುಕೊಂಡವರೇ ಜಾಣರು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

90 ದಿನ

ಯೊಜನೆಯನ್ನು 90 ದಿನಗಳಿಗಾಗಿ ಲಾಂಚ್ ಮಾಡಿದ್ದು ಎಲ್ಲಾ ವಲಯಗಳಲ್ಲಿ ಪ್ರಮೋಶನಲ್ ಆಧಾರದಲ್ಲಿ ಇದು ಕಾರ್ಯನಿರ್ವಹಿಸಲಿದೆ.

ಫ್ರೀಡಮ್ ಪ್ಲಾನ್

ಫ್ರೀಡಮ್ ಪ್ಲಾನ್ ಬೆಲೆ ರೂ 136 ಆಗಿದ್ದು, ಪ್ರಸ್ತುತ ಹೊಸ ಮತ್ತು ಎಮ್‌ಎನ್‌ಪಿ ಗ್ರಾಹಕರಿಗೆ ಇದೇ ದರದಲ್ಲಿ ದೊರೆಯಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ಲಾನ್ ವೋಚರ್‌

ಪ್ಲಾನ್ ವೋಚರ್‌ನೊಂದಿಗೆ ಪ್ರಥಮ ತಿಂಗಳು ರಿಚಾರ್ಜ್ ಮಾಡುವಾಗ ಎಲ್ಲಾ ಸ್ಥಳೀಯ ಮತ್ತು ಎಸ್‌ಟಿಡಿ ನೆಟ್ ಮತ್ತು ಆಫ್ ನೆಟ್ ಕರೆಗಳನ್ನು ರೂ 25/ನಿಮಿಷಕ್ಕೆ ಇದರಂತೆ ರಿಚಾರ್ಜ್ ಮಾಡಬೇಕು. ತದನಂತರ ವಾಯ್ಸ್ ಮತ್ತು ವೀಡಿಯೊ ಕಾಲಿಂಗ್ ಎರಡಕ್ಕೂ 1.3ಪೈ/ಸೆಕೆಂಡ್‌ನಂತೆ ನಿಮಗೆ ದರ ವಿಧಿಸಲಾಗುತ್ತದೆ.

1ಜಿಬಿ ಉಚಿತ ಡೇಟಾ

ಮೊದಲ 30 ದಿನಗಳಲ್ಲಿ ಚಂದಾದಾರರು 1ಜಿಬಿ ಉಚಿತ ಡೇಟಾವನ್ನು ಪಡೆದುಕೊಳ್ಳಲಿದ್ದಾರೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಸ್‌ಎಮ್‌ಎಸ್ ದರ

ಎಸ್‌ಎಮ್‌ಎಸ್ ದರವು ಪ್ರತೀ ಸಂದೇಶಕ್ಕೆ ರೂ 1 ಆಗಿದ್ದು, ಲೋಕಲ್ ಮತ್ತು ಎಸ್‌ಟಿಡಿಗೆ 38 ಪೈಸೆಯಂತೆ ಪ್ರತೀ ಸಂದೇಶಕ್ಕೆ ದರ ವಿಧಿಸಲಾಗಿದೆ.

730 ದಿನಗಳ ವ್ಯಾಲಿಡಿಟಿ

ಈ ಸಂಪೂರ್ಣ ಪ್ಲಾನ್ 730 ದಿನಗಳಿಗೆ ವ್ಯಾಲಿಡಿಟಿಯನ್ನು ಪಡೆದುಕೊಂಡಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಎಸ್‌ಎನ್‌ಎಲ್ 3 ವಿಶೇಷ ಕೊಂಬೊ ವೋಚರ್

ಇಷ್ಟಲ್ಲದೆ, ಬಿಎಸ್‌ಎನ್‌ಎಲ್ 3 ವಿಶೇಷ ಕೊಂಬೊ ವೋಚರ್ ಅನ್ನು ಜಾರಿಗೆ ತಂದಿದ್ದು ನಿಮಗೆ ಪೂರ್ಣ ಟಾಕ್ ಟೈಮ್ ಅನ್ನು ಇದು ನೀಡಲಿದೆ. ರೂ 577 ವೋಚರ್‌ಗೆ ನಿಮಗೆ ಮೂಲ ಖಾತೆಯಲ್ಲಿ ರೂ 577 ಅನ್ನು ನೀವು ಪಡೆದುಕೊಳ್ಳುವುದರ ಜೊತೆಗೆ 30 ದಿನಗಳ ವ್ಯಾಲಿಡಿಟಿಯಲ್ಲಿ 1 ಜಿಬಿ ಡೇಟಾವನ್ನು ನೀವು ಪಡೆದುಕೊಳ್ಳಲಿರುವಿರಿ.

ಪೂರ್ಣ ಟಾಕ್ ಟೈಮ್

ರೂ 377 ರ ಪ್ಲಾನ್ ಪೂರ್ಣ ಟಾಕ್ ಟೈಮ್ ಅನ್ನು ನಿಮಗೆ ನೀಡಲಿದ್ದು 20 ದಿನಗಳಿಗೆ 500 ಎಮ್‌ಬಿ ಡೇಟಾವನ್ನು ಒದಗಿಸಲಿದೆ. ರೂ 178 ರ ಪ್ಯಾಕ್‌ಗೆ ಅನುಸಾರವಾಗಿ ಚಂದಾದಾರರು 200 ಎಮ್‌ಬಿ ಉಚಿತ ಡೇಟಾವನ್ನು 10 ದಿನಗಳ ವ್ಯಾಲಿಡಿಟಿಯಲ್ಲಿ ಪಡೆದುಕೊಳ್ಳಲಿದ್ದಾರೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 English summary
BSNL launches Freedom Plan for Rs. 136 with Free Data and Calls.
Please Wait while comments are loading...
Opinion Poll

Social Counting