ಮೂರೇ ಮೂರು ದಿನ ಮಾತ್ರ ಲಭ್ಯ ಹಿಂದೆಂದೂ ಕಾಣದ BSNL ಭರ್ಜರಿ ಆಫರ್..!!!

ತನ್ನ ಗ್ರಾಹಕರಿಗೆ BSNL ಮೂರೇ ಮೂರು ದಿನಕ್ಕೆ ಆಫರ್‌ವೊಂದನ್ನು ನೀಡಿದೆ.

|

ಜಿಯೋ ದೇಶದಲ್ಲಿ 4G ಸೇವೆಯನ್ನು ಆರಂಭಿಸಿದ ನಂತರದಲ್ಲಿ ದರ ಸಮರ ಮತ್ತು ಭರ್ಜರಿ ಆಫರ್‌ಗಳ ಘೋಷಣೆ ಮಾಡುವುದು ಕಾಮನ್ ಆಗಿದೆ. ಅದೇ ಮಾದರಿಯಲ್ಲಿ ಸರ್ಕಾರಿ ಸ್ವಾಮ್ಯದ BSNL ಭರ್ಜರಿ ಆಫರ್ ಘೋಷಣೆ ಮಾಡುವುದರಲ್ಲಿ ಹಿಂದೆ ಉಳಿದಿಲ್ಲ. ಈಗ ತನ್ನ ಗ್ರಾಹಕರಿಗೆ ಮೂರೇ ಮೂರು ದಿನಕ್ಕೆ ಆಫರ್‌ವೊಂದನ್ನು ನೀಡಿದೆ.

ಮೂರೇ ಮೂರು ದಿನ ಮಾತ್ರ ಲಭ್ಯ ಹಿಂದೆಂದೂ ಕಾಣದ BSNL ಭರ್ಜರಿ ಆಫರ್..!!!

ವಿಶ್ವ ದೂರಸಂಪರ್ಕ ಮತ್ತು ಮಾಹಿತಿ ಸೊಸೈಟಿ ದಿನಾಚರಣೆ ಅಂಗವಾಗಿ ಮೇ 17 ರಿಂದ 19 ರವರೆಗೂ ಮೂರು ದಿನಗಳ ಕಾಲ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. ಇದಕ್ಕಾಗಿ SVT-333 ಪ್ಲಾನ್ ಘೋಷಣೆ ಮಾಡಿದೆ.

SVT-333 ಅನ್‌ಲಿಮಿಟೆಡ್ ಪ್ಲಾನ್:

SVT-333 ಅನ್‌ಲಿಮಿಟೆಡ್ ಪ್ಲಾನ್:

SVT-333 ಪ್ಲಾನ್ 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಅನ್‌ಲಿಮಿಟೆಡ್ ಡೇಡಾ ಬಳಕೆಗೆ ಅವಕಾಶ ಮಾಡಿಕೊಡಲಿದ್ದು, ಪ್ರತಿ ನಿತ್ಯ 3GB ಡೇಟಾವನ್ನು ಬಳಕೆಗೆ ನೀಡಲಿದೆ. ಅಲ್ಲದೇ ಈ ಆಫರ್‌ನಲ್ಲಿ ಗ್ರಾಹಕರಿಗೆ ಉಚಿತ ಕರೆ ಮಾಡುವ ಅವಕಾಶವನ್ನು ಮಾಡಿಕೊಡಲಿದೆ.

ಹೊಸ ಮತ್ತು ಹಳೇ ಗ್ರಾಹಕರಿಗೆ:

ಹೊಸ ಮತ್ತು ಹಳೇ ಗ್ರಾಹಕರಿಗೆ:

ಸದ್ಯ BSNL ನೀಡಿರುವ SVT-333 ಅನ್‌ಲಿಮಿಟೆಡ್ ಪ್ಲಾನ್ ಅನ್ನು ಈಗಾಗಲೇ BSNL ಬಳಸುತ್ತಿರುವ ಗ್ರಾಹಕರು ಮತ್ತು ಹೊಸ ಗ್ರಾಹಕರು ಪಡೆಯಬಹುದಾಗಿದೆ. ಆದರೆ ಇದಕ್ಕೆ ಇರುವುದು ಮೂರು ದಿನಗಳ ಕಾಲವಕಾಶ ಮಾತ್ರ.

ಇದಲ್ಲದೇ ಇನ್ನು ಎರಡು ಪ್ಲಾನ್‌ ಇದೇ:

ಇದಲ್ಲದೇ ಇನ್ನು ಎರಡು ಪ್ಲಾನ್‌ ಇದೇ:

SVT-333 ಅನ್‌ಲಿಮಿಟೆಡ್ ಪ್ಲಾನ್ ನೊಂದಿಗೆ BSNL ಇನ್ನೇರಡು ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ. SVT 349 ಮತ್ತು STV 395 ಎಂಬ ಹೆಸರಿನ ಆಫರ್‌ಗಳನ್ನು ತನ್ನ ಗ್ರಾಹಕರಿಗೆ ಬಿಎಸ್‌ಎನ್‌ಎಲ್ ನೀಡಲು ಮುಂದಾಗಿದೆ.

 SVT 349 ಪ್ಲಾನ್:

SVT 349 ಪ್ಲಾನ್:

ಈ ಪ್ಲಾನ್ ನಲ್ಲಿ ಗ್ರಾಹಕರಿಹೆ ಪ್ರತಿ ದಿನ ಬಳಕೆಗೆ 2GB ಡೇಟಾ ದೊರೆಯಲಿದ್ದು ಅಲ್ಲದೇ ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

STV 395 ಪ್ಲಾನ್:

STV 395 ಪ್ಲಾನ್:

ಈ ಆಫರ್‌ನಲ್ಲಿ 71 ದಿನಗಳ ವ್ಯಾಲಿಡಿಟಿಗೆ ಪ್ರತಿ ನಿತ್ಯ 2GB ಡೇಟಾ ದೊರೆಯಲಿದ್ದು, BSNL ನಿಂದ BSNLಗೆ 3000 ನಿಮಿಷ ಹಾಗೂ ಇತರೆ ನೆಟ್‌ವರ್ಕ್‌ಗಳಿಗೆ 1800 ನಿಮಿಷಗಳ ಉಚಿತ ಕರೆ ಮಾಡಬಹುದಾಗಿದೆ.

ಜಿಯೋ ಆಫರ್ ಗೆ ಪ್ರತಿಯಾಗಿ:

ಜಿಯೋ ಆಫರ್ ಗೆ ಪ್ರತಿಯಾಗಿ:

ಜಿಯೋ ನೀಡಿರುವ ಆಫರ್ ಬದಲಾಗಿ BSNL ಈ ಮೂರು ಆಫರ್‌ಗಳನ್ನು ನೀಡಿದೆ ಎನ್ನಲಾಗಿದೆ. ಇದಲ್ಲದೇ ಏರ್‌ಟೆಲ್, ವೊಡಫೋನ್‌ಗಳು ಸಹ ಇಷ್ಟು ಪ್ರಮಾಣದ ಆಫರ್‌ಗಳನ್ನು ತಮ್ಮ ಗ್ರಾಹಕರಿಗೆ ನೀಡಿಲ್ಲ.

Best Mobiles in India

Read more about:
English summary
BSNL unveiled its STV333 along with STV349 or Dhil Khol Ke Bol and STV395 or Nehle per Dehla plans. to konw more visit kannada.gozbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X