ಬೆಂಗಳೂರು ಕಂಪೆನಿಯಿಂದ ಹಳೆಯ ಗ್ಯಾಜೆಟ್‌ಗೆ ಉತ್ತಮ ಬೆಲೆ

By Shwetha
|

ಹೊಸ ಫೋನ್ ಅನ್ನು ಖರೀದಿಸಿದಾಗ ನಮ್ಮ ಹಳೆಯ ಫೋನ್ ಅನ್ನು ಏನು ಮಾಡುವುದು ಎಂಬ ಯೋಚನೆ ನಮ್ಮನ್ನು ಕೊರೆಯುತ್ತಲೇ ಇರುತ್ತದೆ. ಕೆಲವೊಮ್ಮೆ ಎಕ್ಸ್‌ಚೇಂಜ್ ಕೊಡುಗೆಗಳು ನಮಗೆ ದೊರಕಿದರೂ ನಿತ್ಯವೂ ಹೀಗೆಯೇ ಸಂಭವಿಸಬೇಕೆಂಬ ನಿಯಮವೇನೂ ಇಲ್ಲ ಅಲ್ಲವೇ?

ಬೆಂಗಳೂರು ಕಂಪೆನಿಯಿಂದ ಹಳೆಯ ಗ್ಯಾಜೆಟ್‌ಗೆ ಉತ್ತಮ ಬೆಲೆ

ಅದಕ್ಕೆಂದೇ ಬದ್ಲಿ ಎಂಬ ಸ್ಟಾರ್ಟಪ್ ಕಂಪೆನಿ ಬೆಂಗಳೂರಿನಲ್ಲಿ ಹುಟ್ಟಿಕೊಂಡಿದ್ದು ನಿಮ್ಮ ಹಳೆಯ ಮೊಬೈಲ್ ಸಮಸ್ಯೆಯನ್ನು ದೂರಮಾಡಲಿದೆ. ನಿಮ್ಮ ಹಳೆಯ ಗ್ಯಾಜೆಟ್ ಬದ್ಲಿಯಲ್ಲಿ ಒಮ್ಮೆ ಮಾರಾಟವಾಯಿತೆಂದರೆ ನೀವು ಕೆಲವೊಂದು ಹಂತಗಳನ್ನು ಅನುಸರಿಸಬೇಕಾಗುತ್ತದೆ. ಬೆಲೆಯನ್ನು ನಿಗದಿಪಡಿಸಿ ಮಾರಾಟಕ್ಕೆ ನಿಮ್ಮ ಡಿವೈಸ್ ಅನ್ನು ಬಿಡಿ ಮತ್ತು ಪಾವತಿಯನ್ನು ಪಡೆದುಕೊಳ್ಳಿ. ಇದಕ್ಕೆ ಯಾವುದೇ ದರವನ್ನು ನೀವು ನೀಡಬೇಕಾಗಿಲ್ಲ. ಭಾರತದ ಹೆಚ್ಚಿನ ಸ್ಥಳಗಳಲ್ಲಿ ಇದು ಉಚಿತ ಶಿಪ್‌ಮೆಂಟ್ ಅನ್ನು ಹೊಂದಿದ್ದು ಗ್ರಾಹಕರು ನಂಬಿಕೆಯ ಉತ್ಪನ್ನವನ್ನೇ ತಮ್ಮದಾಗಿಸಿಕೊಳ್ಳಬೇಕೆಂಬ ಆಕಾಂಕ್ಷೆ ಈ ಸಂಸ್ಥೆಯದ್ದಾಗಿದೆ.

ಓದಿರಿ: ಸ್ಲಿಮ್ ಫೋನ್‌ಗಳ ಸಾಲಿಗೆ ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಎ8 ಸೇರ್ಪಡೆ

ಕೆಲವು ತಿಂಗಳ ಹಿಂದೆಯೇ ಕಂಪೆನಿ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದು ದೊಡ್ಡದಾದ ಸ್ಟಾರ್ಟಪ್ ಇಕೋಸಿಸ್ಟಮ್‌ನ ಭಾಗವಾಗಿ ಹೊರಹೊಮ್ಮಿದೆ. ತಂತ್ರಜ್ಞಾನದ ಮೂಲಕ ಭಾರತದಲ್ಲಿ ಡಿಜಿಟಲ್ ಸಂಪರ್ಕವನ್ನು ಏರ್ಪಡಿಸುವುದು ಕಂಪೆನಿಯ ಉದ್ದೇಶವಾಗಿದೆ. ಪ್ರಸ್ತುತ ಇದು ಟ್ಯಾಬ್ಲೆಟ್ಸ್, ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಆಪರೇಟ್ ಮಾಡುತ್ತಿದೆ.

Best Mobiles in India

English summary
Environmentally friendly ways to refurbish your old used gadgets still seem like a distant dream. Budli, a company that started in Kolkata in 2013, aims to solve this problem with its rather simple business model.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X