ಸ್ಯಾಮ್‌ಸಂಗ್ ಫೋನ್‌ ಖರೀದಿಸಿ 309 ರೂ.ಗೆ 448 GB ಜಿಯೋ ಡೇಟಾ ಪಡೆಯಿರಿ..!!

ಸ್ಯಾಮ್‌ಸಂಗ್ ಗ್ಯಾಲೆಕ್ಸಿ S8 ಮತ್ತು ಗ್ಯಾಲೆಕ್ಸಿ S8 ಪ್ಲಸ್ ಸ್ಮಾರ್ಟ್‌ಫೋನ್‌ ಕೊಂಡವರಿಗೆ ರಿಲಯನ್ಸ್ ಮಾಲೀಕತ್ವದ ಜಿಯೋ ಭರ್ಜರಿ ಆಫರ್ ನೀಡಿದೆ.

Written By:

ಭಾರತೀಯ ಮಾರುಕಟ್ಟೆಯಲ್ಲಿ ಏಪ್ರಿಲ್ 19ರಂದು ಲಾಂಚ್ ಆದ ಸ್ಯಾಮ್‌ಸಂಗ್ ಗ್ಯಾಲೆಕ್ಸಿ S8 ಮತ್ತು ಗ್ಯಾಲೆಕ್ಸಿ S8 ಪ್ಲಸ್ ಸ್ಮಾರ್ಟ್‌ಫೋನ್‌ ಕೊಂಡವರಿಗೆ ರಿಲಯನ್ಸ್ ಮಾಲೀಕತ್ವದ ಜಿಯೋ ಭರ್ಜರಿ ಆಫರ್ ನೀಡಿದೆ.

ಸ್ಯಾಮ್‌ಸಂಗ್ ಫೋನ್‌ ಖರೀದಿಸಿ 309 ರೂ.ಗೆ 448 GB ಜಿಯೋ ಡೇಟಾ ಪಡೆಯಿರಿ..!!

ಓದಿರಿ: ಬಿಡುಗಡೆಯಾಗಿದೆ ಜಿಯೋ DTH: ವಿಡಿಯೋ ನೋಡಿ..!!!!

ಸದ್ಯ ಮಾರುಕಟ್ಟೆಯಲ್ಲಿ ಗ್ಯಾಲೆಕ್ಸಿ S8 ಮತ್ತು ಗ್ಯಾಲೆಕ್ಸಿ S8 ಪ್ಲಸ್ ಸ್ಮಾರ್ಟ್‌ಫೋನ್‌ ಗಳು ರೂ. 57,900 ಹಾಗೂ ರೂ.64,900ಕ್ಕೆ ಮಾರಾಟವಾಗುತ್ತಿದೆ. ಈ ಪೋನ್‌ ಮೇ 5 ರಿಂದ ಗ್ರಾಹಕರಿಗೆ ಮುಕ್ತವಾಗಲಿದೆ. ಈ ಹಿನ್ನಲೆಯಲ್ಲಿ ಗ್ಯಾಲೆಕ್ಸಿ S8 ಮತ್ತು ಗ್ಯಾಲೆಕ್ಸಿ S8 ಪ್ಲಸ್ ಗ್ರಾಹಕರನ್ನು ಸೆಳೆಯಲು ಜಿಯೋ ಪ್ಲಾನ್ ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಡಬಲ್ ಡೇಟಾ ಆಫರ್:

ಜಿಯೋ ನೂತನವಾಗಿ ಬಿಡುಗಡೆ ಮಾಡಿದ 'ಧನ್ ಧನಾ ಧನ್' ಆಫರ್ ಅನ್ನೇ ಕೊಂಚ ಬದಲಾಯಿಸಿದ್ದು, ರೂ.309ಕ್ಕೆ ಡಬ್ಬಲ್ ಆಫರ್ ನೀಡಿಲು ಮುಂದಾಗಿದೆ. ಗ್ಯಾಲೆಕ್ಸಿ S8 ಮತ್ತು ಗ್ಯಾಲೆಕ್ಸಿ S8 ಪ್ಲಸ್ ಸ್ಮಾರ್ಟ್‌ಫೋನ್‌ ಬಳಕೆದಾರಿಗೆ ಪ್ರತಿ ನಿತ್ಯ 1 GB ಡೇಟಾ ಬದಲಿಗೆ 2GB ಡೇಟಾವನ್ನು ನೀಡಲಾಗಿದೆ.

ಮೇ 5 ರಿಂದ ಆಫರ್ ಜಾರಿ:

ಗ್ಯಾಲೆಕ್ಸಿ S8 ಮತ್ತು ಗ್ಯಾಲೆಕ್ಸಿ S8 ಪ್ಲಸ್ ಸ್ಮಾರ್ಟ್‌ಫೋನ್‌ ಮೇ.05 ರಿಂದ ಮಾರುಕಟ್ಟೆಗೆ ಆಗಮಿಸಲಿದ್ದು, ಅಂದಿನಿಂದಲೇ ಜಿಯೋ ನೀಡಿರುವ ಈ ಹೊಸ ಆಫರ್ ಜಾರಿಗೆ ಬರಲಿದೆ. ಇದು ಮುಂದಿನ ಎಂಟು ತಿಂಗಳು ಜಾರಿಯಲ್ಲಿರುತ್ತದೆ ಎನ್ನಲಾಗಿದೆ.

ರೂ.309ಕ್ಕೆ 448 GB:

ಗ್ಯಾಲೆಕ್ಸಿ S8 ಮತ್ತು ಗ್ಯಾಲೆಕ್ಸಿ S8 ಪ್ಲಸ್ ಸ್ಮಾರ್ಟ್‌ಫೋನ್‌ ಕೊಳ್ಳುವ ಜಿಯೋ ಬಳಕೆದಾರರಿಗೆ ಮಾತ್ರವೇ ಈ ಆಫರ್ ದೊರೆಯಲಿದೆ. 309 ರೂ. ಪಾವತಿ ಮಾಡಿದರೆ ಎಂಟು ತಿಂಗಳ ಅವಧಿಗೆ ಎಂದರೆ ಜನವರಿ 2018 ವರೆಗೂ ಈ ಕೊಡುಗೆಯ ಲಾಭವನ್ನು ಪಡೆಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 Read more about:
English summary
If you are buying the Galaxy S8 or Galaxy S8+, you could get 448GB Jio data. to know more visit kannada.gizbot.com
Please Wait while comments are loading...
Opinion Poll

Social Counting