ಸೆಕೆಂಡ್‌ಹ್ಯಾಂಡ್‌ ಫೋನ್‌ ಖರೀದಿಗೆ ಮುನ್ನ ನೆನಪಿಡಬೇಕಾದ ಅಂಶಗಳೇನು?

By Suneel
|

ಗ್ಯಾಜೆಟ್ಸ್‌ಗಳ ಬಳಕೆ ಇಂದು ಎಲ್ಲರ ಅನುಭವವನ್ನು ಹೆಚ್ಚಿಸುತ್ತಿದೆ. ಒಂದು ಹೊಸ ಗ್ಯಾಜೆಟ್ ತೆಗೆದುಕೊಳ್ಳದೇ ಹಲವರು ಕೇವಲ ಅನುಭವಕ್ಕಾದರೂ ಸ್ವಲ್ಪದಿನ ಬಳಕೆ ಮಾಡಬೇಕು ಎಂದು ಬಳಸಿದ ಗ್ಯಾಜೆಟ್ಸ್‌ ಕೊಳ್ಳುವುದುಂಟು. ಹಾಗೆ ಮಾರುವುದು ಉಂಟು. ಇವರಲ್ಲಿ ಹೆಚ್ಚು ಜನರು ಬಳಸಿದ ವಸ್ತುಗಳನ್ನೇ ತೆಗೆದುಕೊಳ್ಳುವುದು ತಿಳಿದಿರುವ ವಿಷಯ. ಅಂತಹವರು ಬಳಸಿದ ಗ್ಯಾಜೆಟ್ಸ್‌ಗಳನ್ನು ತೆಗೆದುಕೊಳ್ಳುವ ಮೊದಲು ಹಲವು ಎಚ್ಚರಿಕೆ ಕ್ರಮಗಳನ್ನು ನೆನಪಿಟ್ಟುಕೊಳ್ಳಬೇಕಿದೆ. ಅಂತಹ ಸಲಹೆಗಳನ್ನು ಈ ಲೇಖನದಲ್ಲಿ ನಿಮಗೆ ನೀಡಲಿದ್ದೇವೆ.

ಓದಿರಿ: ಸರಳ ವಿಧಾನದಲ್ಲಿ ಗ್ಯಾಜೆಟ್‌ಗಳ ಶುಭ್ರತೆ

 ಬಿಲ್‌, ಬಾಕ್ಸ್‌ ಮತ್ತು ಗ್ಯಾಜೆಟ್‌ನ ಇತರೆ ಉಪಕರಣಗಳನ್ನು ಕೇಳಿ

ಬಿಲ್‌, ಬಾಕ್ಸ್‌ ಮತ್ತು ಗ್ಯಾಜೆಟ್‌ನ ಇತರೆ ಉಪಕರಣಗಳನ್ನು ಕೇಳಿ

ಮೇಲಿನ ವಸ್ತುಗಳನ್ನು ಕೇಳುವುದರಿಂದ ನೀವು ಮತ್ತೊಮ್ಮೆ ಗ್ಯಾಜೆಟ್‌ಗಳನ್ನು ಇನ್ನೊಬ್ಬರಿಗೆ ಮಾರಲು ಅಥವಾ ಕಂಪನಿಯಲ್ಲಿ ಬದಲಿಸಲು ಅವಕಾಶವಿದೆ. ಹಾಗೂ ಕೆಲವೊಮ್ಮೆ ಕಳ್ಳತನ ಮಾಡಿದ ಗ್ಯಾಜೆಟ್‌ಗಳನ್ನು ಕೊಳ್ಳುವುದರಿಂದ ತಪ್ಪಿಸಿಕೊಳ್ಳಬಹುದು.

 2GB RAM

2GB RAM

ನೀವು ಕೊಳ್ಳುವ ಸ್ಮಾರ್ಟ್‌ಫೋನ್‌ಗಳು ಕನಿಷ್ಠ 2GB RAM ಹೊಂದಿರಲಿ. 10000 ಬೆಲೆಗಿಂತ ಕಡಿಮೆ ಗ್ಯಾಜೆಟ್ಸ್‌ಗಳು ಸಹ 2GB RAM ಹೊಂದಿರಲಿ. ಕೊಳ್ಳುವ ಮುನ್ನ ಪ್ರೊಸೆಸರ್‌ ಯಾವುದು ಎಂದು ತಿಳಿದುಕೊಳ್ಳಿ. ಕೆಲವು ಹಳೆ ಪ್ರೊಸೆಸರ್‌ಗಳು ಸರಿಯಾಗಿ ಕೆಲಸ ಮಾಡದ ಕಾರಣ ಇದನ್ನು ಪರೀಕ್ಷಿಸಿಕೊಳ್ಳಿ.

ಕಳ್ಳತನದ ಬಗ್ಗೆ ಪರೀಕ್ಷಿಸಿಕೊಳ್ಳಿ

ಕಳ್ಳತನದ ಬಗ್ಗೆ ಪರೀಕ್ಷಿಸಿಕೊಳ್ಳಿ

ಹಲವು ವೇಳೆ ಕಳ್ಳತನದ ಫೋನ್‌ ಮಾರುವವರಿಂದ ಎಚ್ಚರಿಕೆ ವಹಿಸಬೇಕಾಗಿದೆ. ನೀವು ಗ್ಯಾಜೆಟ್ ಕೊಳ್ಳುವವನಿಂದ ಫೋನ್‌ ಬಾಕ್ಸ್‌ ಕೇಳಿ ಪಡೆಯಿರಿ. ಇಲ್ಲವಾದಲ್ಲಿ ಅದೇ ಸ್ಮಾರ್ಟ್‌ಪೋನ್‌ನಿಂದ *#06# ಡಯಲ್‌ ಮಾಡಿ IMEI ನಂಬರ್‌ ಪರೀಕ್ಷಿಸಿ. IMEIdetective.com ನಲ್ಲಿ ಫೋನ್‌ಮಾಲಿಕ ಕಳ್ಳತನವಾಗಿದ್ದಲ್ಲಿ ಮೊಬೈಲ್‌ನ IMEI ನಂಬರ್‌ ಹಾಕಿರುತ್ತಾನೆ. ಈ ಮೂಲಕ ನೀವು ಬಚಾವ್‌ ಆಗಿ ಮತ್ತು ಮಾಲಿಕನಿಗೂ ಸಹಾಯ ಮಾಡಿ.

 ಹಾರ್ಡ್‌ವೇರ್‌ ಪರೀಕ್ಷಿಸಿ

ಹಾರ್ಡ್‌ವೇರ್‌ ಪರೀಕ್ಷಿಸಿ

ಸ್ಮಾರ್ಟ್‌ಫೋನ್‌ ತೆಗೆದುಕೊಳ್ಳುವ ವೇಳೆ ಅದರಿಂದ ವೆಬ್‌ ಸರ್ಚ್‌ಮಾಡಿ, ಕೆಲವು ಆಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ಮಾಡಿ ಇನ್‌ಸ್ಟಾಲ್‌ಮಾಡಿ ಮತ್ತು ಡಾಟಾ ಕೇಬಲ್‌ನೊಂದಿಗೆ ಲ್ಯಾಪ್‌ಟಾಪ್‌ ಮತ್ತು ಫೋನ್‌ಗೆ ಕನೆಕ್ಟ್‌ಮಾಡಿ. ಆ ಸಮಯದಲ್ಲಿ ಮೊಬೈಲ್‌ ಚಾರ್ಜ್‌ ಆದರೆ ಹಾರ್ಡ್‌ವೇರ್‌ ಉತ್ತಮವಾಗಿರುತ್ತದೆ.

ಪೇಪಾಲ್‌

ಪೇಪಾಲ್‌

ನೀವು ಫೋನ್‌ಕೊಳ್ಳುವಾಗ ವೆಬ್‌ಸೈಟ್‌ ಮೂಲಕ ಹಣ ನೀಡುವ ಪೇಪಾಲ್‌ ಬಳಸಿ. ಒಂದೊಮ್ಮೆ ನೀವು ಕೆಲವು ಕಾರಣಗಳಿಂದ ಫೋನ್‌ ವಾಪಸು ಮಾಡಿ ಹಣ ಹಿಂಪಡೆಯಲು ಅನುಕೂಲವಾಗಿದೆ.

 ಫೇಸ್‌ಬುಕ್‌ ಮೂಲಕ ಪಡೆಯಲು ಪ್ರಯತ್ನಸಿ

ಫೇಸ್‌ಬುಕ್‌ ಮೂಲಕ ಪಡೆಯಲು ಪ್ರಯತ್ನಸಿ

ಫೇಸ್‌ಬುಕ್‌ ಮೂಲಕ ಪಡೆಯುವುದರಿಂದ ಆ ವ್ಯಕ್ತಿಯ ಬಗ್ಗೆ ತಿಳಿಯಲು ಸಹಾಯವಾಗುತ್ತದೆ. ನೀವು ಕೊಳ್ಳುವ ಫೋನ್‌ಗೆ ಇತರರು ಯಾವ ಬೆಲೆ ನೀಡುತ್ತಿದ್ದಾರೆ ಎಂಬುದು ತಿಳಿಯುತ್ತದೆ.

 ವಾರಂಟಿ ಬಗ್ಗೆ ಎಚ್ಚರ

ವಾರಂಟಿ ಬಗ್ಗೆ ಎಚ್ಚರ

ಹಲವರು ಕಂಪನಿಯ ವಾರಂಟಿ ಮುಗಿಯುವ ಸಮಯದಲ್ಲಿ ಫೋನ್‌ ಮಾರಲು ಮುಂದಾಗುತ್ತಾರೆ. ಅಂತಹವರಲ್ಲಿ ಕೊಳ್ಳುವುದಕ್ಕಿಂತ ಮೊದಲು ವಾರಂಟಿ ಬಗ್ಗೆ ಎಚ್ಚರವಹಿಸಿ.

Best Mobiles in India

English summary
Thinking of buying a used smartphone because it's an awesome deal? You may be right, but it is always better to keep a checklist with you while purchasing gadgets second-hand.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X