ಬಿಎಸ್‌ಎನ್‌ಎಲ್‌ ಪ್ರೀಪೇಡ್‌ ಸಿಮ್ ಖರೀದಿಗೆ ಮುನ್ನ ಚೆಕ್‌ ಮಾಡಲೇಬೇಕಾದ 5 ಅಂಶಗಳು

ಬಿಎಸ್‌ಎನ್‌ಎಲ್‌ ಪ್ರೀಪೇಡ್‌ ಸಿಮ್‌ ಕಾರ್ಡ್‌ ಖರೀದಿಗೆ ಮುನ್ನ ಈ 5 ಮುಖ್ಯ ಅಂಶಗಳನ್ನು ಪರಿಶೀಲನೆ ಮಾಡಿಕೊಳ್ಳಿ.

Written By:

ಭಾರತ್‌ ಸಂಚಾರ ನಿಗಮ ಲಿಮಿಟೆಡ್(ಬಿಎಸ್‌ಎನ್‌ಎಲ್‌) ರಾಜ್ಯ ಮಾಲೀಕತ್ದದ ಟೆಲಿಕಾಂ ನೆಟ್‌ವರ್ಕ್‌ ಕಂಪನಿ ಆಗಿದ್ದು, ದೆಹಲಿಯಲ್ಲಿ ತನ್ನ ಪ್ರಧಾನ ಕಚೇರಿ ಹೊಂದಿದೆ. 2015 ರ ವೇಳೆಗೆ 95 ದಶಲಕ್ಷ ಬಳಕೆದಾರರನ್ನು ಹೊಂದಿದ್ದು, ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಹಳೆಯ ಟೆಲಿಕಾಂ ಸರ್ವೀಸ್ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಂದಹಾಗೆ 2000 ಇಸವಿಯಲ್ಲಿ ಆರಂಭವಾದ ಬಿಎಸ್‌ಎನ್‌ಎಲ್‌, ಹಲವು ವರ್ಷಗಳು ಕಠಿಣ ಮಾರ್ಗವನ್ನು ಅನುಸರಿಸಿತು. ನಂತರದಲ್ಲಿ ಗ್ರಾಹಕರನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಆಕರ್ಷಕ ಆಫರ್‌ಗಳನ್ನು ನೀಡಲು ಆರಂಭಿಸಿತು. ಜಿಯೋ ಲಾಂಚ್‌ನಂತರ ಈಗ ಪ್ರತಿಯೊಂದು ಟೆಲಿಕಾಂಗಳು ಸಹ ನಾಮುಂದು ತಾಮುಂದು ಎಂದು ಹಲವು ಆಫರ್‌ಗಳನ್ನು ನೀಡುತ್ತಿರುವುದು ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ತಿಳಿದಿರುವ ವಿಷಯ.

ಬಿಎಸ್ಎನ್‌ಎಲ್ ಹೊಸ ಆಫರ್ ವಿಶೇಷತೆ ಏನು?

ನೀವು ಬಿಎಸ್‌ಎನ್ಎಲ್‌ ಟೆಲಿಕಾಂ ನೆಟ್‌ವರ್ಕ್‌ ಪಡೆಯಲು ಪ್ಲಾನ್ ಮಾಡುತ್ತಿದ್ದೀರಾ? ಅಥವಾ ಹೊಸ ಬಿಎಸ್‌ಎನ್‌ಎಲ್‌ ಸಿಮ್ ಕಾರ್ಡ್‌ ಪಡೆಯುತ್ತಿದ್ದೀರಾ? ಹಾಗಿದ್ದಲ್ಲಿ ಬಿಎಸ್‌ಎನ್‌ಎಲ್‌(BSNL) ಟೆಲಿಕಾಂ ನೆಟ್‌ವರ್ಕ್‌ ಪಡೆಯುವ ಮುನ್ನ ನೀವು ಅಗತ್ಯವಾಗಿ ತಿಳಿಯಬೇಕಾದ 5 ಮುಖ್ಯ ಅಂಶಗಳಿವೆ. ಈ ಅಂಶಗಳನ್ನು ಲೇಖನದಲ್ಲಿ ಮಿಸ್‌ ಮಾಡದೇ ಓದಿ ತಿಳಿಯಿರಿ.

ಭಾರತದಾದ್ಯಂತ ಬಿಎಸ್‌ಎನ್‌ಎಲ್‌ ಉಚಿತ ಇಂಟರ್ನೆಟ್‌ ಬಳಕೆ ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಸಿಮ್‌ ಕಾರ್ಡ್‌ ಬೆಲೆ ಜಸ್ಟ್ ರೂ.20

ಇತರೆ ಟೆಲಿಕಾಂಗಳು ಕೇವಲ ಸಿಮ್ ನೀಡಲು ಹೆಚ್ಚು ಹಣ ಪಡೆದು ನಿಮ್ಮ ಪಾಕೆಟ್ ಬರಿದಾಗಿಸುತ್ತವೆ. ಆದರೆ ಬಿಎಸ್‌ಎನ್‌ಎಲ್‌ ಸಿಮ್ ಕಾರ್ಡ್‌ ಬೆಲೆ ರೂ. 20 ಆಗಿದ್ದು, 24 ಗಂಟೆಗಳಲ್ಲಿ ಆಕ್ಟಿವೇಟ್ ಆಗುತ್ತದೆ. ನೀವು ಬಿಎಸ್‌ಎನ್‌ಎಲ್‌ ನ್ಯಾನೋ ಸಿಮ್ ಪಡೆಯಬೇಕಾದಲ್ಲಿ ಕಂಪನಿ ರೂ.59 ಚಾರ್ಜ್‌ ಮಾಡುತ್ತದೆ.

ನಿಮ್ಮ ನಂಬರ್ ಅನ್ನು ಆನ್‌ಲೈನ್‌ನಲ್ಲಿ ಆಯ್ಕೆ ಮಾಡಬಹುದು

ಬಿಎಸ್‌ಎನ್‌ಎಲ್ ಟೆಲಿಕಾಂ ಕಂಪನಿ ಆನ್‌ಲೈನ್‌ನಲ್ಲಿ ನಂಬರ್‌ ಆಯ್ಕೆ ಮಾಡಲು ಅವಕಾಶ ನೀಡಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಖರೀದಿಗೆ ಸಿಮ್ ಆಯ್ಕೆಯ ನಂಬರ್‌ನೊಂದಿಗೆ ಕಾಯ್ದಿರಿಸಬಹುದು. ಸಿಮ್‌ ಕಾರ್ಡ್‌ ಪಡೆಯಲು ನಿಮ್ಮ ಹತ್ತಿರದ ಬಿಎಸ್‌ಎನ್‌ಎಲ್‌ ಸ್ಟೋರ್‌ಗೆ ಭೇಟಿ ನೀಡಿ ಡಾಕ್ಯುಮೆಂಟ್ ನೀಡಿರಿ.

4G ಸೇವೆ ಕೇವಲ ಆಯ್ಕೆಗೊಂಡ ಪ್ರದೇಶಗಳಿಗೆ ಮಾತ್ರ

ಅಂದಹಾಗೆ ಬಿಎಸ್‌ಎನ್‌ಎಲ್‌ ದೇಶದಾದ್ಯಂತ 4G ಸೇವೆ ನೀಡುವ ಲೈಸೆನ್ಸ್ ಹೊಂದಿಲ್ಲ. ಆದ್ದರಿಂದ ಕೆಲವು ಪ್ರದೇಶಗಳಲ್ಲಿ ನೆಟ್‌ವರ್ಕ್‌ ಡ್ರಾಪ್‌, ಕರೆ ಸ್ಥಗಿತ, ಸಿಗ್ನಲ್‌ ಸಮಸ್ಯೆ ಎದುರಿಸಬೇಕಾಗುತ್ತದೆ.

ರಿಲಾಯನ್ಸ್ ಜಿಯೋದೊಂದಿಗೆ ಬಿಎಸ್‌ಎನ್‌ಎಲ್‌ 4G ಸಪೋರ್ಟ್ ಆಗುತ್ತದೆಯೇ?

ಇತ್ತೀಚೆಗಷ್ಟೆ ಬಿಎಸ್‌ಎನ್‌ಎಲ್‌ ರೋಮಿಂಗ್ ಪ್ರದೇಶಗಳಲ್ಲಿ, ರಿಲಾಯನ್ಸ್ ಜಿಯೋದ 4G ಸೇವೆಯನ್ನು ನೆಟ್‌ವರ್ಕ್‌ಗಾಗಿ ಉಪಯೋಗಿಸಿಕೊಳ್ಳಲಾಗುತ್ತದೆ. ಬಿಎಸ್‌ಎನ್‌ಎಲ್‌'ನ 2G ಡಾಟಾ ಸೇವೆಯನ್ನು ರಿಲಾಯನ್ಸ್ ಜಿಯೋ ವಾಯ್ಸ್ ಕರೆ ಸೇವೆ ನೀಡಲು ಬಳಸಿಕೊಳ್ಳುತ್ತದೆ ಎಂದು ಪ್ರಕಟಣೆ ಹೊರಡಿಸಿತ್ತು.

ಸಿಮ್ ಆಕ್ಟಿವೇಶನ್

ಬಿಎಸ್‌ಎನ್‌ಎಲ್‌ ಸಿಮ್‌ ಕಾರ್ಡ್‌ ಆಕ್ಟಿವೇಟ್‌ ಮಾಡುವುದು ಕಷ್ಟದ ಕೆಲಸವೇನು ಅಲ್ಲ. ಕೇವಲ 24 ಗಂಟೆಗಳ ಒಳಗಾಗಿ ಸಿಮ್‌ ಆಕ್ಟಿವೇಟ್ ಆಗುತ್ತದೆ. ಸಾಮಾನ್ಯವಾಗಿ ಟೆಲಿ ವೆರಿಫಿಕೇಶನ್ ಟ್ರಾಯ್‌ ನಿಯಮಗಳ ಪ್ರಕಾರ ಇದ್ದೇ ಇರುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 Read more about:
English summary
Check Out the 5 Most Important Things Before Buying a BSNL Prepaid SIM Card. To know more visit kannada.gizbot.com
Please Wait while comments are loading...
Opinion Poll

Social Counting