ಸೂಟ್‌ಕೇಸ್‌ನಿಂದ ಸ್ಕೂಟರ್ ಚೈನೀಸ್ ವ್ಯಕ್ತಿಯ ಪ್ರಯೋಗ

By Shwetha
|

ಚೈನಾದ ವ್ಯಕ್ತಿಯೊಬ್ಬ ತನ್ನ ಸೂಟ್‌ಕೇಸ್‌ನಿಂದ ಸ್ಕೂಟರ್ ಅನ್ನು ತಯಾರಿಸಿದ್ದಾನೆ. ಹಿ ಲಿಯಾಂಗ್‌ಕೈ ಎಂಬ ಈ ವ್ಯಕ್ತಿ ಸೂಟ್‌ಕೇಸ್‌ನಿಂದ ಸ್ಕೂಟರ್ ತಯಾರಿಸಿ ಪ್ರಸಿದ್ಧಿಗೆ ಬಂದಿದ್ದಾನೆ.

ಸೂಟ್‌ಕೇಸ್ ಸ್ಕೂಟರ್ ತೂಕ ಏಳು ಕೆಜಿಯಾಗಿದ್ದು ಇದು ಇಬ್ಬರನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಇದು ಗಂಟೆಗೆ ಇಪ್ಪತ್ತು ಕಿಲೋಮೀಟರ್‌ವರೆಗೆ ಪ್ರಯಾಣಿಸಬಹುದಾಗಿದ್ದು ಗಂಟೆಯ ವೇಗ ಅವಧಿ 50-60 ಕಿಮೀ ಆಗಿದೆ. ಇದು ಜಿಪಿಎಸ್ ನ್ಯಾವಿಗೇಶನ್ ಹಾಗೂ ಬರ್ಗಲರ್ ಅಲರಾಂ ಅನ್ನು ಹೊಂದಿದೆ. ಇದು ಬ್ಯಾಟರಿ ಆಧಾರಿತವಾಗಿರುವುದರಿಂದ ಇದನ್ನು ಚಾರ್ಜ್ ಮಾಡಬೇಕಾದ ಅವಶ್ಯಕತೆಯಿದೆ.

ಹಿ ಲಿಯಾಂಗ್ ಮೂಲತಃ ರೈತನಾಗಿದ್ದು ಏಳು ವರ್ಷಗಳಿಂದ ತನ್ನ ಸ್ಕೂಟರ್ ತಯಾರಿ ಪ್ರಯೋಗದಲ್ಲಿ ಮಗ್ನರಾಗಿದ್ದ. ಕೊನೆಗೂ ತನ್ನ ಪ್ರಯೋಗದಲ್ಲಿ ಯಶಸ್ಸನ್ನು ಗಳಿಸಿರುವ ಲಿಯಾಂಗ್ ಸೂಟ್‌ಕೇಸ್ ಸ್ಕೂಟರ್‌ನ ವಿವಿರ ಇಲ್ಲಿದೆ.

#1

#1

ಇದು ಗಂಟೆಗೆ 20 ಕಿಮೀವರೆಗೆ ಪ್ರಯಾಣ ಮಾಡಲಿದ್ದು 50-60 ಕಿಮೀ ವೇಗತೆ ಇದರ ಸಾಮರ್ಥ್ಯವಾಗಿದೆ.

#2

#2

ಜಿಪಿಎಸ್ ನ್ಯಾವಿಗೇಶನ್ ಸ್ಕೂಟರ್‌ನಲ್ಲಿದ್ದು ಬರ್ಗಲರ್ ಅಲರಾಂ ಅನ್ನು ಇದು ಹೊಂದಿದೆ.

#3

#3

ಯುಎಸ್ ಮೂಲದ ಇನ್‌ವೆಂಟ್ ಅವಾರ್ಡ್ ಅನ್ನು ಪಡೆದಿರುವ ಈ ರೈತ ತನ್ನ ಕಾರು ಭದ್ರತಾ ಸಂಶೋಧನೆಗೆ ಈ ಪ್ರಶಸ್ತಿಯನ್ನು 1999 ರಲ್ಲಿ ಪಡೆದುಕೊಂಡಿದ್ದರು.

#4

#4

ಈ ಸ್ಕೂಟರ್‌ನಲ್ಲಿ ಇಬ್ಬರು ಪ್ರಯಾಣಿಸಬಹುದಾಗಿದೆ.

#5

#5

ಯುಎಸ್‌ನಲ್ಲಿ ತನಗೆ ಬಂದ ಪ್ರಶಸ್ತಿಯನ್ನು ಸ್ವೀಕರಿಸಲು ತೆರಳಿದ್ದಾಗ ಈತ ತನ್ನ ಲಗೇಜನ್ನು ಮರೆತುಬಿಟ್ಟನಂತೆ. ಇದೇ ಸಮಯದಲ್ಲಿ ಈ ಸೂಟ್‌ಕೇಸ್ ಸ್ಕೂಟರ್ ಕಲ್ಪನೆ ತಲೆಯಲ್ಲಿ ಹೊಳೆಯಿತು ಎಂದು ತಿಳಿಸಿದ್ದಾನೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X