ಭಾರತವನ್ನು ಮುಳುಗಿಸುತ್ತಿರುವ ಚೀನಾ ಸ್ಮಾರ್ಟ್‌ಫೋನ್‌ಗಳು!!!

By Shwetha
|

4ಜಿ ರಣರಂಗದಲ್ಲಿ ಭಾರತ ಮತ್ತು ಚೀನಾ ಯುದ್ಧ ಖಾತ್ರಿಯಾಗಿದೆ. ತಮ್ಮ ಹೆಚ್ಚು ದುಬಾರಿ 4ಜಿ ಫೋನ್‌ಗಳ ಬಿಡುಗಡೆಗೆ ಭಾರತದ ಮಾರುಕಟ್ಟೆಯನ್ನು ದಾಳವನ್ನಾಗಿ ಮಾಡಿಕೊಂಡಿರುವ ಚೀನಾ ಭಾರತದ ನೆಲದಲ್ಲಿ ತಮ್ಮ ಫೋನ್‌ಗಳ ಮಾರಾಟವನ್ನು ನಡೆಸುವುದರ ಜೊತೆಗೆ ಸ್ಪರ್ಧೆಗೆ ತಡೆಯನ್ನು ಒಡ್ಡುವ ಹುನ್ನಾರದಲ್ಲಿದೆ.

ಓದಿರಿ: ಮನೆಯ ವೈಫೈ ಸೌಲಭ್ಯದ ಪ್ರಬಲತೆಗಾಗಿ ಟಿಪ್ಸ್

ಚೀನಾ ಬಿಡುಗಡೆ ಮಾಡುತ್ತಿರುವ ಸ್ಮಾರ್ಟ್‌ಫೋನ್‌ಗಳು 4ಜಿ ಯಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸುತ್ತಿಲ್ಲ ಭಾರತವನ್ನು ತ್ಯಾಜ್ಯ ತೊಟ್ಟಿಯಂತೆ ಕಾಣುತ್ತಿರುವ ಚೀನಾ ದೇಶ ಫೋನ್‌ ಮಾರಾಟವನ್ನೇ ಲಕ್ಷ್ಯವಾಗಿರಿಸಿಕೊಂಡು ಭಾರತವನ್ನು ದಾಳವನ್ನಾಗಿ ಬಳಸುತ್ತಿದೆ. ಭಾರತೀ ಏರ್‌ಟೆಲ್ ವಾಣಿಜ್ಯ ರೀತಿಯಲ್ಲಿ 4 ಜಿ ಸೇವೆಯನ್ನು ಲಾಂಚ್ ಮಾಡಿದ್ದು ರಿಲಾಯನ್ಸ್ ಜಿಯೊ, ಐಡಿಯಾ ಸೆಲ್ಯುಲಾರ್ ಮತ್ತು ವೊಡಾಫೋನ್ ಇಂಡಿಯಾ 2016 ಕ್ಕಿಂತ ಮೊದಲು ಲಾಂಚ್ ಮಾಡಲಿದೆ.

ಮಾರುಕಟ್ಟೆಯ 12%

ಮಾರುಕಟ್ಟೆಯ 12%

ಚೀನಾ ಹ್ಯಾಂಡ್‌ಸೆಟ್ ತಯಾರಕರಾದ ಲಿನೊವೊ, ಶ್ಯೋಮಿ, ಹುವಾಯಿ ಮತ್ತು ಜಿಯೋನಿ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯ 12% ವನ್ನು ಕವರ್ ಮಾಡಿದೆ.

ಕಡಿಮೆ ಪ್ರಾಬಲ್ಯ

ಕಡಿಮೆ ಪ್ರಾಬಲ್ಯ

ಇನ್ನು 4ಜಿ ಫೋನ್‌ಗಳ ಅಧಿಪತ್ಯವನ್ನು ನೋಡುವಾಗ ಚೀನಾದ ಕಂಪೆನಿ 45% ಮಾರುಕಟ್ಟೆಯನ್ನು ಗಳಿಸಿಕೊಂಡಿದ್ದರೆ ಭಾರತದ ಫೋನ್ ತಯಾರಕರು 10% ಕ್ಕಿಂತಲೂ ಕಡಿಮೆ ಪ್ರಾಬಲ್ಯವನ್ನು ಹೊಂದಿದ್ದಾರೆ.

ಸ್ಯಾಮ್‌ಸಂಗ್ ಫೋನ್ ಮಾರುಕಟ್ಟೆ

ಸ್ಯಾಮ್‌ಸಂಗ್ ಫೋನ್ ಮಾರುಕಟ್ಟೆ

ಭಾರತದ ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಫೋನ್ ಮಾರುಕಟ್ಟೆ ಪಾಲು ಅಧಿಕವಾಗಿದ್ದು 4ಜಿ ಮಾರಾಟದಲ್ಲೂ ಮುಂದಿದೆ.

ಮೈಕ್ರೋಮ್ಯಾಕ್ಸ್ 4ಜಿ

ಮೈಕ್ರೋಮ್ಯಾಕ್ಸ್ 4ಜಿ

ಭಾರತೀಯ ಮೂಲದ ಬ್ರ್ಯಾಂಡ್ ಮೈಕ್ರೋಮ್ಯಾಕ್ಸ್ 4ಜಿ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದ್ದು ಇದರ ಷೇರು 10% ದಿಂದ 6% ಕ್ಕೆ ಕುಸಿದಿದೆ.

4ಜಿ ಮಾರುಕಟ್ಟೆ

4ಜಿ ಮಾರುಕಟ್ಟೆ

ಇಂಟೆಕ್ಸ್, ಲಾವಾ ಮತ್ತು ಕಾರ್ಬನ್ 4ಜಿ ಮಾರುಕಟ್ಟೆಯಲ್ಲಿ ತಮ್ಮ ಪ್ರವೇಶವನ್ನು ಆರಂಭಿಸಿದೆ. ಇನ್ನು ಸಂಪೂರ್ಣ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇಂಟೆಕ್ಸ್ ಮೂರನೆಯ ಸ್ಥಾನದಲ್ಲಿದ್ದರೆ, ಲಾವಾ ನಾಲ್ಕನೆಯದ್ದು ಮತ್ತು ಕಾರ್ಬನ್ ಅಂಕ ಗಳಿಕೆಯಲ್ಲಿ ಕೆಳಕ್ಕೆ ಇಳಿಯುತ್ತಿದೆ

ಮಾರುಕಟ್ಟೆ ಷೇರನ್ನು ಗಳಿಸಿಕೊಳ್ಳುತ್ತಿದೆ

ಮಾರುಕಟ್ಟೆ ಷೇರನ್ನು ಗಳಿಸಿಕೊಳ್ಳುತ್ತಿದೆ

ಚೀನಾ ಮಾರಾಟಗಾರರು ತಮ್ಮ ಹೆಚ್ಚುವರಿ 4ಜಿ ಫೋನ್‌ಗಳನ್ನು ಭಾರತದ ಮಾರುಕಟ್ಟೆಯಲ್ಲಿ ಸುರಿಯುತ್ತಿದೆ ಮತ್ತು ಮಾರುಕಟ್ಟೆ ಷೇರನ್ನು ಗಳಿಸಿಕೊಳ್ಳುತ್ತಿದೆ ಎಂದು ಕಾರ್ಬನ್ ಮೊಬೈಲ್ಸ್ ಎಮ್‌ಡಿ ಪ್ರದೀಪ್ ಜೈನ್ ಮಾತಾಗಿದೆ

ಮಾರುಕಟ್ಟೆ ಮೌಲ್ಯ

ಮಾರುಕಟ್ಟೆ ಮೌಲ್ಯ

ಚೀನಾದಲ್ಲಿ ಈ ಕಂಪೆನಿಗಳು ತಪ್ಪಾಗಿ ಮಾರುಕಟ್ಟೆ ಮೌಲ್ಯವನ್ನು ಪ್ರಾಜೆಕ್ಟ್ ಮಾಡುತ್ತಿದೆ ಮತ್ತು ತಮ್ಮ ಹೆಚ್ಚುವರಿ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಭಾರತದಲ್ಲಿ ಬಿಡುಗಡೆ ಮಾಡುತ್ತಿವೆ.

ಫ್ಲ್ಯಾಶ್ ಸೇಲ್

ಫ್ಲ್ಯಾಶ್ ಸೇಲ್

ಆನ್‌ಲೈನ್ ರೀಟೈಲ್ ತಾಣಗಳಾದ ಫ್ಲಿಪ್‌ಕಾರ್ಟ್, ಸ್ನ್ಯಾಪ್‌ಡೀಲ್ ಮತ್ತು ಅಮೆಜಾನ್ ಅನ್ನು ಬಳಸಿಕೊಂಡು ಫ್ಲ್ಯಾಶ್ ಸೇಲ್ ಎಂಬ ಆಟದ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ. ಎಂಬುದು ಭಾರತದ ಸ್ಮಾರ್ಟ್‌ಫೋನ್ ಕಂಪೆನಿಗಳ ದುಃಖವಾಗಿದೆ.

4ಜಿ ಸಕ್ರಿಯ

4ಜಿ ಸಕ್ರಿಯ

ಈ ವರ್ಷದ ಕೊನೆಯಲ್ಲಿ ಮೈಕ್ರೋಮ್ಯಾಕ್ಸ್ 4ಜಿ ಸಕ್ರಿಯಗೊಂಡಿರುವ 10 ಫೋನ್‌ಗಳನ್ನು ಲಾಂಚ್ ಮಾಡುವ ನಿಟ್ಟಿನಲ್ಲಿದೆ. ಇನ್ನು ಇಂಟೆಕ್ಸ್ ಮತ್ತು ಲಾವಾ ಫೋನ್‌ಗಳು 4ಜಿ ಸಾಮರ್ಥ್ಯವುಳ್ಳ ರೂ 5,000 ಕ್ಕಿಂತ ಮೇಲಿನ ಬೆಲೆಯ ಫೋನ್‌ಗಳನ್ನು ಬಿಡುಗಡೆ ಮಾಡಲಿವೆ.

ಚೀನಾ ಸ್ಮಾರ್ಟ್‌ಫೋನ್ ಕಂಪೆನಿಯ ಮುಖ್ಯಸ್ಥರ ಮಾತು

ಚೀನಾ ಸ್ಮಾರ್ಟ್‌ಫೋನ್ ಕಂಪೆನಿಯ ಮುಖ್ಯಸ್ಥರ ಮಾತು

ಇನ್ನು ಚೀನಾ ಸ್ಮಾರ್ಟ್‌ಫೋನ್ ಕಂಪೆನಿಯ ಮುಖ್ಯಸ್ಥರು ಹೇಳುವಂತೆ ಭಾರತದ ಫೋನ್ ತಯಾರಕರಿಗಿಂತ ಡಿವೈಸ್‌ಗಳಿಗೆ ನಾವು ವಿಧಿಸುತ್ತಿರುವ ಬೆಲೆ ಅಧಿಕವಾಗಿದ್ದು, ನಮ್ಮ ಡಿವೈಸ್‌ಗಳು ವಿಶ್ವ ಕ್ಲಾಸ್ ಗುಣಮಟ್ಟದಲ್ಲಿದೆ. ಭಾರತದಲ್ಲಿ ನಾವು ನಮ್ಮ ಉತ್ಪನ್ನಗಳನ್ನು ಸುರಿಯುತ್ತಿದ್ದೇವೆ ಎಂಬ ಮಾತು ಹುರುಳಿಲ್ಲದ್ದು.

Best Mobiles in India

English summary
It's India versus China on the 4G battleground. Chinese phone makers have taken a substantial lead in the Indian smartphone market for the high-speed devices, leaving homegrown brands muttering darkly about how their rivals are dumping the handsets in the country ahead of networks being rolled out.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X