ರೂ 3,999 ಕ್ಕೆ ಬಟ್ಟೆ ಒಗೆಯುವ ಅದ್ಭುತ ಮಂತ್ರದಂಡ!!!

By Shwetha
|

ವಾರಾಂತ್ಯದಲ್ಲಿ ಮೂಟೆಗಟ್ಟಲೆ ಬಟ್ಟೆ ಒಗೆಯುವುದು ಎಂದರೆ ಯಾರಿಗೆ ತಾನೇ ಇಷ್ಟ ಹೇಳಿ? ಅದೂ ನಿಮ್ಮ ಬಟ್ಟೆ ಕೊಳೆಯಿಂದ ಕೂಡಿದೆ ಎಂದಾದಲ್ಲಿ ಅದರಷ್ಟು ಜಟಿಲತೆ ಬೇರೊಂದಿಲ್ಲ ಎಂಬುದು ಬಟ್ಟೆ ಒಗೆಯುವವರ ಒಮ್ಮತದ ಅಭಿಪ್ರಾಯ. ಕೈಯಿಂದ ಬಟ್ಟೆ ಒಗೆಯುವುದು ಕಷ್ಟಾಸಾಧ್ಯದ ಮಾತು ಎಂಬುದಕ್ಕಾಗಿಯೇ ವಾಶಿಂಗ್ ಮೆಶೀನ್ ಯಂತ್ರವನ್ನು ಬಳಸಿಕೊಂಡರೂ ಬಟ್ಟೆ ಶುಭ್ರವಾಗುವುದಿಲ್ಲ ಎಂಬ ಅಳುಕು ಇದ್ದೇ ಇದೆ.

ಓದಿರಿ: ಶತ್ರುಗಳ ಎದೆ ನಡುಗಿಸುವ ಕಿಲ್ಲರ್ ಗ್ಯಾಜೆಟ್ಸ್

ಹಾಗಿದ್ದರೆ ಬಟ್ಟೆ ಒಗೆಯುವ ಯಜ್ಞಕ್ಕೆ ಸೂಕ್ತವಾದ ಪರಿಹಾರವನ್ನು ಒದಗಿಸುವುದು ಹೇಗೆ ಎಂಬುದೇ ತಲೆನೋವಾಗಿದೆ. ನಿಮ್ಮ ತಲೆನೋವಿಗೆಂದೇ ಸೂಕ್ತವಾದ ಪರಿಹಾರದೊಂದಿಗೆ ನಾವು ಬಂದಿರುವೆವು. ಆ ಪರಿಹಾರ ಏನು ಎಂಬುದನ್ನು ನೋಡಲು ಸ್ಪೈಡರ್ ಮಾಹಿತಿ ಓದಿರಿ.

ಓದಿರಿ: ಲೈಫ್‌ಸ್ಟೈಲ್ ಅನ್ನೇ ಮಾರ್ಪಡಿಸುವ ಟಾಪ್ ಗ್ಯಾಜೆಟ್ಸ್

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

ಹೈರ್ ಕೋಡೋ, ಸಣ್ಣದಾದ ಸಿಲಿಂಡರ್ ಡಿವೈಸ್ ಆಗಿದ್ದು ಇದನ್ನು ಸುಲಭವಾಗಿ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದಾಗಿದೆ.

ಪಿಸ್ಟನ್ ಕಾರುಬಾರು

ಪಿಸ್ಟನ್ ಕಾರುಬಾರು

ಪಿಸ್ಟನ್ ಅನ್ನು ಹೊಂದಿರುವ ವಾಟರ್ ನೋಜಲ್ ಇದು ಹೊಂದಿದ್ದು ನೀವು ಬಟ್ಟೆಗೆ ಇದನ್ನು ಬಳಸುವಾಗ ಡಿವೈಸ್‌ನಲ್ಲಿ ನೀರು ಒಸರುತ್ತದೆ. ಇದನ್ನು ಒತ್ತಿ ಹಿಡಿದುಕೊಂಡು ಕಲೆಯಾಗಿರುವ ಭಾಗಕ್ಕೆ ಹಚ್ಚಿದರೆ ಸಾಕು ನಿಮ್ಮ ಕೆಲಸ ಆರಾಮದಾಯಕ.

ಡಿಟರ್ಜೆಂಟ್ ನೀರು

ಡಿಟರ್ಜೆಂಟ್ ನೀರು

500 ಎಮ್‌ಎಲ್ ಬಾಟಲಿಯಲ್ಲಿರುವ ಡಿಟರ್ಜೆಂಟ್ ನೀರು ಕಲೆಯನ್ನು ತೆಗೆಯಲು ಹೇಗೆ ಸಮರ್ಥ ಎಂಬ ಯೋಚನೆ ನಿಮ್ಮ ಮನದಲ್ಲಿ ಮೂಡಬಹುದು. ಆದರೆ ಇದನ್ನು ಬೇರೆ ಬೇರೆ ಕಲೆಯ ಬಟ್ಟೆಗಳಿಗೆ ಬಳಸಿ ಪರೀಕ್ಷೆಯನ್ನು ಕೂಡ ಮಾಡಲಾಗಿದೆ.

200 ಗ್ರಾಮ್ ತೂಕ

200 ಗ್ರಾಮ್ ತೂಕ

ಈ ಡಿವೈಸ್ 3AAA ಬ್ಯಾಟರಿಗಳನ್ನು ಒಳಗೊಂಡಿದ್ದು ಕೇವಲ 200 ಗ್ರಾಮ್‌ ತೂಕದ್ದಾಗಿದೆ. ನಿಮ್ಮ ಫೋನ್ ತೂಕದ್ದೇ ವಸ್ತು ಇದಾಗಿದೆ.

ಬ್ಯಾಟರಿ ಶಕ್ತಿ

ಬ್ಯಾಟರಿ ಶಕ್ತಿ

ಡಿವೈಸ್‌ನ ಬ್ಯಾಟರಿ ಶಕ್ತಿಯು ಸರಿಸುಮಾರು 50 ಒಗೆತಗಳಿಗೆ ಬಳಕೆಯಾಗುತ್ತದೆ.

30 ರಿಂದ 120 ಸೆಕೆಂಡಿಗೆ ಪೂರ್ತಿ ಕಲೆ ಮಾಯ

30 ರಿಂದ 120 ಸೆಕೆಂಡಿಗೆ ಪೂರ್ತಿ ಕಲೆ ಮಾಯ

ಕಲೆಯನ್ನು ಹೋಗಲಾಡಿಸಲು ಈ ಬಾಟಲಿ ಡಿವೈಸ್‌ಗೆ 30 ರಿಂದ 120 ಸೆಕೆಂಡಿನಷ್ಟು ಕಾಲಾವಕಾಶ ಸಾಕು

ಡಿವೈಸ್ ನೋಟ

ಡಿವೈಸ್ ನೋಟ

ಮೇಲ್ಭಾಗದಲ್ಲಿ ಬ್ಯಾಟರಿಗಳು ಮತ್ತು ಪವರ್ ಬಟನ್ ಅನ್ನು ಇದು ಹೊಂದಿದೆ. ಡಿವೈಸ್‌ನ ಕೆಳಭಾಗದಲ್ಲಿ ಡಿಟರ್ಜೆಂಟ್ ನೀರು ತುಂಬಿಸಲು ಸಣ್ಣ ಟ್ಯೂಬ್ ಅನ್ನು ಇದು ಹೊಂದಿದೆ. ಇದು ಸಣ್ಣ ಸಣ್ಣ ತೂತುಗಳು ಇವೆ. ಡಿವೈಸ್ ಅನ್ನು ಒತ್ತಿಹಿಡಿದು ಕಲೆಯಾದ ಭಾಗದಲ್ಲಿ ಡಿವೈಸ್ ಅನ್ನು ಬಳಸಬಹುದು.

ಡಿವೈಸ್ ಹೇಗೆ ಕೆಲಸ ಮಾಡುತ್ತದೆ

ಡಿವೈಸ್ ಹೇಗೆ ಕೆಲಸ ಮಾಡುತ್ತದೆ

ಡಿವೈಸ್‌ನ ಒಳಭಾಗದಲ್ಲಿರುವ ಪಿಸ್ಟನ್ ವೃತ್ತಾಕಾರವಾಗಿ ಸುತ್ತಿ ಡಿವೈಸ್‌ಗೆ ಕೊಳೆ ಹೋಗಲಾಡಿಸಲು ಸಹಾಯ ಮಾಡುತ್ತದೆ. ಇನ್ನು ನೀರಿನಿಂದ ಒದ್ದೆಯಾದ ಬಟ್ಟೆಯನ್ನು ಒಣಗಿಸುತ್ತದೆ.

ಕಠಿಣ ಕಲೆಗೆ ಬದ್ಧ ವೈರಿ

ಕಠಿಣ ಕಲೆಗೆ ಬದ್ಧ ವೈರಿ

ಹೈರ್ ಕೋಡೋ ಎಷ್ಟೇ ಕಠಿಣವಾದ ಬಟ್ಟೆಯ ಕಲೆಯನ್ನು ಹೋಗಲಾಡಿಸಿ ಬಟ್ಟೆಯನ್ನು ಶುಭ್ರಗೊಳಿಸುತ್ತದೆ. ಬಳಸಲು ಹೆಚ್ಚು ಸುಲಭವಾಗಿದೆ ಕೂಡ.

ಕೈಗೆಟಕುವ ಬೆಲೆ

ಕೈಗೆಟಕುವ ಬೆಲೆ

ಇನ್ನು ಹೈರ್ ಕೋಡೋದ ಬೆಲೆ ಕೇವಲ 3,999 ಆಗಿದ್ದು ಖರೀದಿಗೆ ಹೆಚ್ಚು ಸೂಕ್ತ ಎಂದೆನಿಸಿದೆ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದೆನಿಸಿರುವ ಈ ಬಾಟಲ್ ಡಿವೈಸ್ ಕಲೆ ಹೋಗಲಾಡಿಸುವ ಅದ್ಭುತ ಮಂತ್ರದಂಡ ಎಂದೆನಿಸಿದೆ.

Best Mobiles in India

English summary
The Haier Codo is a small, cylindrical device that can easily be carried in one hand. On one side, it has a water nozzle that is also a piston, and agitates the clothing it is applied to. You just hold it on top of a stain, and move it around a little to clean up any marks.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X