21 ವರ್ಷದ ಡೆಲ್ಲಿ ಹುಡುಗನಿಗೆ 1.25 ಕೋಟಿ ಸಂಬಳದ ಕೆಲಸ ನೀಡಿದ ಉಬರ್..!!

ದೆಹಲಿಯ ತಾಂತ್ರಿಕ ವಿಶ್ವವಿದ್ಯಾಲಯದ(ಡಿಟಿಯು) ಅಂತಿಮ ವರ್ಷದ ವಿದ್ಯಾರ್ಥಿಗೆ ಉಬರ್ ಕಂಪನಿ 1.25 ಕೋಟಿ ಮೊತ್ತದ ಕೆಲಸದ ಆಫರ್ ನೀಡಿದೆ.

Written By:

ಭಾರತದ ಯುವ ಪ್ರತಿಭೆಗಳಿಗೆ ಒಳ್ಳೆಯ ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದು, ದೆಹಲಿಯ ತಾಂತ್ರಿಕ ವಿಶ್ವವಿದ್ಯಾಲಯದ(ಡಿಟಿಯು) ಅಂತಿಮ ವರ್ಷದ ವಿದ್ಯಾರ್ಥಿಗೆ ಉಬರ್ ಕಂಪನಿ 1.25 ಕೋಟಿ ಮೊತ್ತದ ಕೆಲಸದ ಆಫರ್ ನೀಡಿದೆ.

21 ವರ್ಷದ  ಡೆಲ್ಲಿ ಹುಡುಗನಿಗೆ 1.25 ಕೋಟಿ ಸಂಬಳದ ಕೆಲಸ ನೀಡಿದ ಉಬರ್..!

ಓದಿರಿ: ಪ್ರೀ ಇಂಟರ್ನೆಟ್ ಅಂತ ವಿಡಿಯೋ ಓಪನ್ ಮಾಡೋ ಮುಂಚೇ ಈ ಸ್ಟೋರಿ ನೋಡಿ..!

ಅಮೆರಿಕ ಮೂಲದ ಉಬರ್ ಸಂಸ್ಥೆ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ಓದುತ್ತಿರುವ ಡೆಲ್ಲಿ ಹುಡುಗ ಸಿದ್ದಾರ್ಥ್‌ಅನ್ನು ತನ್ನ ಸಂಸ್ಥೆಗೆ ಸೇರಿಸಿಕೊಳ್ಳಲು ಮುಂದಾಗಿದ್ದು, ಇದಕ್ಕಾಗಿ 1.25 ಕೋಟಿ ವಾಷಿಕ ಸಂಬಳವನ್ನು ಆಫರ್ ಮಾಡಿದೆ.

ಸಿದ್ದಾರ್ಥ್ ತಂದೆ ಸಹ ದೆಹಲಿ ಪಬ್ಲಿಕ್ ಸ್ಕೂಲ್ ಹಳೆಯ ವಿದ್ಯಾರ್ಥಿಯಾಗಿದ್ದು, ಸದ್ಯ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಗನಿಗೆ ದೊಡ್ಡ ಮೊತ್ತದ ಸಂಬಂಳ ಸಿಕ್ಕಿರುವುದಕ್ಕೆ ಭಾರಿ ಸಂತಸ ವ್ಯಕ್ತಪಡಿಸಿದ್ದಾರೆ.

ಓದಿರಿ: ಹಾನರ್ 6X: ಆಟವಾಡಿದರೂ, ವಿಡಿಯೋ ನೋಡಿದರೂ ಈ ಪೋನು ಹಿಟ್ ಆಗುವುದಿಲ್ಲ..!

ಅಕ್ಟೋಬರ್ ನಲ್ಲಿ ನಿದ್ದಾರ್ಥ್ ಉಬರ್ ಸೇರಲಿದ್ದು, ಇದಕ್ಕಾಗಿ ಅಮೆರಿಕಾಗೆ ಪ್ರಯಾಣ ಬೆಳಸಲಿದ್ದಾರೆ. ಮೊದಲು ಬೆಂಗಳೂರಿನಲ್ಲಿರುವ ಉಬರ್ ಕಚೇರಿಯಲ್ಲಿ ಕೆಲಸಕ್ಕೆ ರಿಪೋರ್ಟ್ ಮಾಡಿಕೊಂಡು, ವೀಸಾ ಮುಂತಾದ ಸೌಲಭ್ಯಗಳು ಲಭ್ಯವಾದ ನಂತರ ಸ್ಯಾನ್‌ಫಾನ್ಸಿಕೋ ಗೆ ತೆರಳಲಿದ್ದಾರೆ.

ದೆಹಲಿಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ ಡೊಡ್ಡ ಮೊತ್ತದ ಸಂಬಳವನ್ನು ಪಡೆಯುತ್ತಿರುವವರಲ್ಲಿ ನಿದ್ದಾರ್ಥ್ ಎರಡನೇಯವರಾಗಿದ್ದು, ಈ ಹಿಂದೆ 2015ರಲ್ಲಿ ವ್ಯಾಸಂಗ ಮಾಡಿದ್ದ ವಿದ್ಯಾರ್ಥಿಯೋರ್ವನಿಗೆ ಸರ್ಚ್ ಇಂಜಿನ್‌ ದೈತ್ಯ ಗೂಗಲ್ 1.27 ಕೋಟಿ ಮೊತ್ತದ ಸಂಬಳಕವನ್ನು ನೀಡಿ ತನ್ನ ಕಂಪನಿಗೆ ಸೇರಿಸಿಕೊಂಡಿತ್ತು.

21 ವರ್ಷದ  ಡೆಲ್ಲಿ ಹುಡುಗನಿಗೆ 1.25 ಕೋಟಿ ಸಂಬಳದ ಕೆಲಸ ನೀಡಿದ ಉಬರ್..!

ಓದಿರಿ: ಶಾಕಿಂಗ್ ಸುದ್ದಿ: ರಿಲಯನ್ಸ್ ಜಿಯೋ ಜೊತೆಗೆ ಕೈ ಜೋಡಿಸಲಿದೆ ಸ್ಯಾಮ್‌ಸಂಗ್..?

ಕ್ಯಾಂಪಸ್ ಸಂದರ್ಶನದ ವೇಳೆ ಈ ಹಿಂದೆ ಚೇತನ್ ಕಕ್ಕರ್ ವಾರ್ಷಿಕ 1.27 ಕೋಟಿ ರೂ. ಪ್ಯಾಕೇಜ್ ಸಂಬಳದ ಉದ್ಯೋಗವನ್ನು ಗೂಗಲ್ ನಲ್ಲಿ ಗಿಟ್ಟಿಸಿಕೊಂಡಿದ್ದರು. ಇದಾದ ಬಳಿಕ ಭಾರೀ ಮೊತ್ತದ ಸಂಬಳ ಪಡೆದವರಲ್ಲಿ ಸಿದ್ದಾರ್ಥ್ ಎರಡನೇಯವರಾಗಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
The 21-year-old who bagged a Rs1.25 crore offer from Uber Technologies. to know more visit kannada.gizbot.com
Please Wait while comments are loading...
Opinion Poll

Social Counting