ರಿಲಯನ್ಸ್ ಜಿಯೋ ಮತ್ತು ಏರ್ ಟೆಲ್ 4ಜಿ ನಡುವಿನ ಬೆಚ್ಚಿಬೀಳಿಸುವ 7 ವ್ಯತ್ಯಾಸಗಳು.

|

ರಿಲಯನ್ಸ್ ಜಿಯೋ ಇನ್ನೂ ಸಂಪೂರ್ಣವಾಗಿ ಅಧಿಕೃತವಾಗಿಲ್ಲ ಆದರೆ ಅದರ ಪರೀಕ್ಷಾರ್ಥ ಹಂತಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಅತ್ಯದ್ಭುತವೆನ್ನಬಹುದು. ಸ್ಯಾಮ್ಸಂಗ್, ಎಲ್.ಜಿ, ಏಸಸ್, ಪ್ಯಾನಾಸೋನಿಕ್, ಮೈಕ್ರೊಮ್ಯಾಕ್ಸ್, ಟಿ.ಸಿ.ಎಲ್ ಮತ್ತು ಯೂ ಸ್ಮಾರ್ಟ್ ಫೋನು ಹೊಂದಿರುವವರಿಗೆ ರಿಲಯನ್ಸ್ ಪ್ರಿವೀವ್ ಕೊಡುಗೆಯನ್ನು ನೀಡಿದೆ.

ರಿಲಯನ್ಸ್ ಜಿಯೋ ಮತ್ತು ಏರ್ ಟೆಲ್ 4ಜಿ ನಡುವಿನ ಬೆಚ್ಚಿಬೀಳಿಸುವ 7 ವ್ಯತ್ಯಾಸಗಳು.

ದೇಶದಲ್ಲಿ ಹಲವಾರು ಜನರು ಈಗಾಗಲೇ ರಿಲಯನ್ಸ್ ಜಿಯೋ ಸಿಮ್ ಕಾರ್ಡನ್ನು ಉಪಯೋಗಿಸುತ್ತಿದ್ದಾರೆ ಮತ್ತು ಅದರ ಅಂತರ್ಜಾಲದ ವೇಗದಿಂದ ಸಂತೃಪ್ತರಾಗಿದ್ದಾರೆ. ಎದುರಾಳಿಗಳಾದ ಏರ್ ಟೆಲ್ ಮತ್ತು ವೊಡಾಫೋನ್ ಕಂಪನಿಗಳು ಪರೀಕ್ಷಿಸುವ ಹೆಸರಿನಲ್ಲಿ ಈ ರೀತಿಯ ಕೊಡುಗೆಗಳನನ್ಉ ನೀಡಬಾರದು ಎಂದು ಹೇಳುತ್ತಿವೆ.
ಓದಿರಿ: ಜಿಯೋ 4ಜಿ ಸಿಮ್ ಅನ್ನು 3ಜಿ ಫೋನ್‌ನಲ್ಲಿ ಬಳಸುವುದು ಹೇಗೆ?

ಹಾಗಿದ್ದರೂ, ರಿಲಯನ್ಸ್ ಕೊಡುಗೆ ಕೊಡುವುದನ್ನು ನಿಲ್ಲಿಸಿಲ್ಲ ಮತ್ತು ತಮ್ಮ ಪ್ರಿವೀವ್ ಉತ್ಪನ್ನದ ಮಾರುಕಟ್ಟೆಯನ್ನು ಹಿಗ್ಗಿಸುತ್ತಲೇ ಇದೆ. ಅವರ ಪ್ರಮುಖ ಎದುರಾಳೀ ಭಾರ್ತಿ ಏರ್ ಟೆಲ್. ಎರಡೂ ನೆಟ್ ವರ್ಕ್ ಗಳು ಕೆಲವೊಂದು ಸಮಾನ ಲಕ್ಷಣಗಳನ್ನು ಹೊಂದಿದೆ, ಆದರೆ ಕೊನೆಗೆ ಇಬ್ಬರಲ್ಲೊಬ್ಬರು ಗೆಲ್ಲಬೇಕಷ್ಟೇ.

ಓದಿರಿ: ರಿಲಾಯನ್ಸ್ ಜಿಯೋ ಸಿಮ್ ಬೆಂಬಲಿಸುವ 4ಜಿ ಸ್ಮಾರ್ಟ್‌ಫೋನ್‌ಗಳು

ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್ ಟೆಲ್ 4ಜಿ ನಡುವಿನ ವ್ಯತ್ಯಾಸವನ್ನು ಅರಿಯಲು ಕೆಳಗಿನ ಸ್ಲೈಡರ್ ನೋಡಿ.

ಯಾವ ಬ್ಯಾಂಡಿನಲ್ಲಿ ಕಾರ್ಯನಿರ್ವಹಿಸುತ್ತವೆ?

ಯಾವ ಬ್ಯಾಂಡಿನಲ್ಲಿ ಕಾರ್ಯನಿರ್ವಹಿಸುತ್ತವೆ?

ಬ್ರಾಡ್ ಬ್ಯಾಂಡ್ ವೈರ್ ಲೆಸ್ ಗೆ ಏರ್ ಟೆಲ್ 2300MHz ಸ್ಪೆಕ್ಟ್ರಂ ಅನ್ನು ಉಪಯೋಗಿಸಿಕೊಂಡು ಭಾರತದ 22 ವೃತ್ತಗಳಲ್ಲಿ 4ಜಿ ಸೇವೆಯನ್ನು ನೀಡುತ್ತಿದೆ. ಉಳಿದ ನಗರಗಳಲ್ಲಿ 4ಜಿ ಕೊಡುವ ಸಲುವಾಗಿ ಏರ್ ಟೆಲ್ 1800MHz ನಲ್ಲಿ 97MHz ಅನ್ನು ಖರೀದಿಸಿದೆ.

ರಿಲಯನ್ಸಿನ ವಿಷಯಕ್ಕೆ ಬಂದರೆ, ಮುಖೇಶ್ ಅಂಬಾನಿಯ ಕಂಪನಿಗೆ ದೇಶಾದ್ಯಂತ 2300MHz ಸಿಕ್ಕಿದೆ. ಜೊತೆಗೆ, 10 ವೃತ್ತಗಳಲ್ಲಿ 800MHz ಮತ್ತು ಆರು ವೃತ್ತಗಳಲ್ಲಿ 1800MHz ಖರೀದಿಸಿದೆ.

1800MHz ಬ್ಯಾಂಡ್ ಜನಪ್ರಿಯ 4ಜಿ ಬ್ಯಾಂಡ್.

1800MHz ಬ್ಯಾಂಡ್ ಜನಪ್ರಿಯ 4ಜಿ ಬ್ಯಾಂಡ್.

ವಿಶ್ವದಾದ್ಯಂತ 1800MHz ಬ್ಯಾಂಡ್ ಜನಪ್ರಿಯ 4ಜಿ ಎಲ್.ಟಿ.ಇ ಬ್ಯಾಂಡ್ ಆಗಿರುವುದು ಗೊತ್ತೇ ಇದೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ, ಪ್ರಪಂಚದೆಲ್ಲೆಡೆ ಇರುವ 4ಜಿ ನೆಟ್ ವರ್ಕ್ ನಲ್ಲಿ 44 ಪ್ರತಿಶತಃದಷ್ಟು ನೆಟ್ ವರ್ಕ್ ಗಳು ಉಪಯೋಗಿಸುವುದು 1800MHz ಬ್ಯಾಂಡನ್ನು. 2300MHz ಬ್ಯಾಂಡಿಗೆ ಹೋಲಿಸಿದರೆ ಇದರಲ್ಲಿ ಹಲವು ಉಪಯೋಗಗಳಿವೆ.

2300MHz ಬ್ಯಾಂಡಿಗಿಂತ 1800MHz ಬ್ಯಾಂಡ್ ಯಾಕೆ ಉತ್ತಮ?

2300MHz ಬ್ಯಾಂಡಿಗಿಂತ 1800MHz ಬ್ಯಾಂಡ್ ಯಾಕೆ ಉತ್ತಮ?

ಇದನ್ನೊಂದು ಕಾಲ್ಪನಿಕ ಪ್ರಶ್ನೆ ಎಂದು ಕೊಳ್ಳಿ. ದುಬಾರಿ ಬೆಲೆಯ ಫ್ಲಾಗ್ ಶಿಪ್ ಫೋನಿನಲ್ಲಿರುವ ಎಲ್ಲಾ ಸೌಕರ್ಯಗಳೂ ನಿಮಗೆ ಹತ್ತು ಸಾವಿರ ರುಪಾಯಿಯ ಫೋನಿನಲ್ಲೇ ಸಿಕ್ಕಿದರೆ ನೀವೇನು ಮಾಡುತ್ತೀರಿ? ಇದು ಅದೇ ರೀತಿಯ ಸಂದರ್ಭ.

1800MHz ಬ್ಯಾಂಡಿಗೆ 2300MHz ಬ್ಯಾಂಡಿಗೆ ಬೇಕಿರುವುದಕ್ಕಿಂತ 30 ಪರ್ಸೆಂಟ್ ಟವರ್ರುಗಳು ಕಡಿಮೆ ಸಾಕು. ಭಾರತದಂತಹ ದೇಶಕ್ಕೆ 1800MHz ಬ್ಯಾಂಡ್ ಇರುವುದೇ ಉತ್ತಮ.

ಟಿ.ಡಿ.ಡಿ/ಎಫ್.ಡಿ.ಡಿ ಇಕೋಸಿಸ್ಟಮ್.

ಟಿ.ಡಿ.ಡಿ/ಎಫ್.ಡಿ.ಡಿ ಇಕೋಸಿಸ್ಟಮ್.

ಇದು ಬಹಳ ಮುಖ್ಯವಾದ ವ್ಯತ್ಯಾಸ. ಏರ್ ಟೆಲ್ ಟಿ.ಡಿ.ಡಿ - ಎಲ್.ಟಿ.ಇ ತಂತ್ರಜ್ಞಾನವನ್ನು ಉಪಯೋಗಿಸುತ್ತಿದ್ದರೆ ರಿಲಯನ್ಸ್ ಈಗಾಗಲೇ 1800MHz ಬ್ಯಾಂಡ್ ಜೊತೆಗೆ ಎಫ್.ಡಿ.ಡಿ - ಎಲ್.ಟಿ.ಇ ತಂತ್ರಜ್ಞಾನವನ್ನು ಉಪಯೋಗಿಸುತ್ತಿದೆ.

ಟಿ.ಡಿ.ಡಿ ಸಾಧನಗಳಿಗಿಂತ ಎಫ್.ಡಿ.ಡಿ ಸಾಧನಗಳು ಹೆಚ್ಚಿವೆ.

ಟಿ.ಡಿ.ಡಿ ಸಾಧನಗಳಿಗಿಂತ ಎಫ್.ಡಿ.ಡಿ ಸಾಧನಗಳು ಹೆಚ್ಚಿವೆ.

ಇಲ್ಲಿಯವರೆಗೆ ನಡೆದಿರುವ ಎಲ್ಲಾ ಸಮೀಕ್ಷೆಗಳೂ 1800MHz ಬ್ಯಾಂಡಿನ ಎಫ್.ಡಿ.ಡಿ ಸಾಧನಗಳು ಟಿ.ಡಿ.ಡಿ ಸಾಧನಗಳಿಗಿಂತ ಹೆಚ್ಚಿವೆ ಎಂದೇ ತಿಳಿಸಿವೆ.

ರಿಲಯನ್ಸ್ ಜಿಯೋದಲ್ಲಿ 4ಜಿ ಎಲ್.ಟಿ.ಇ ಮಾತ್ರ ಇದೆ.

ರಿಲಯನ್ಸ್ ಜಿಯೋದಲ್ಲಿ 4ಜಿ ಎಲ್.ಟಿ.ಇ ಮಾತ್ರ ಇದೆ.

ಎರಡು ಬೃಹತ್ ನೆಟ್ ವರ್ಕ್ ಗಳ ನಡುವಿರುವ ಆಸಕ್ತಿದಾಯಕ ವ್ಯತ್ಯಾಸವಿದು. ಏರ್ ಟೆಲ್ ತನ್ನ ಸೇವೆಯನ್ನು ಎಲ್ಲಾ ನೆಟ್ ವರ್ಕ್ ಗಳಲ್ಲಿ - 2ಜಿ, 3ಜಿ ಮತ್ತು 4ಜಿ ಎಲ್.ಟಿ.ಇಯಲ್ಲಿ ನೀಡುತ್ತಿದ್ದರೆ, ರಿಲಯನ್ಸ್ ತನ್ನ ಸೇವೆಯನ್ನು 4ಜಿ ಎಲ್.ಟಿ.ಇಯಲ್ಲಿ ಮಾತ್ರ ನೀಡುತ್ತಿದೆ.

ರಿಲಯನ್ಸಿನ ನಂಬಿಕೆಯ ಪ್ರಕಾರ ವೋಲ್ಟೇ (Voice over LTE) ಉಪಯೋಗಿಸಿಕೊಂಡು ಮಾತ್ರ ವಾಯ್ಸ್ ಕರೆ ಮಾಡಲು ಸಾಧ್ಯ.

ಡೌನ್ ಲೋಡ್ ವೇಗ ರಿಲಯನ್ಸ್ ಜಿಯೋದಲ್ಲಿ ಉತ್ತಮವಾಗಿದೆ.

ಡೌನ್ ಲೋಡ್ ವೇಗ ರಿಲಯನ್ಸ್ ಜಿಯೋದಲ್ಲಿ ಉತ್ತಮವಾಗಿದೆ.

ಈ ಅಂಶದಲ್ಲಿ ಚರ್ಚೆಯನ್ನು ಕೊನೆ ಮಾಡಬಹುದು. ಒಟ್ಟಾರೆ ವೇಗದಲ್ಲಿ ರಿಲಯನ್ಸ್ ಜಿಯೋ ಏರ್ ಟೆಲ್ 4ಜಿಯನ್ನು ಹಿಂದಿಕ್ಕುತ್ತಿದೆ. ಗಿಜ್ ಬಾಟ್ ನಲ್ಲಿ ನಾವು ಇತ್ತೀಚೆಗೆ ರಿಲಯನ್ಸ್ ಜಿಯೋ ಸಿಮ್ ಕಾರ್ಡನ್ನು ಉಪಯೋಗಿಸಿದ್ದೆವು. ಭಾರತದ ಎಲ್ಲಾ ನೆಟ್ ವರ್ಕ್ ಗಳ ವೇಗವನ್ನೂ ಪರೀಕ್ಷಿಸುತ್ತಿದ್ದೀವಿ. ನಿರೀಕ್ಷಿಸಿ.

Best Mobiles in India

English summary
Reliance hasn't been official yet, but the response from the customers towards the trial phase is overwhelming. Reliance has been offering customers to experience the preview offer if they own a Samsung, LG, Asus, Panasonic, Micromax, TCL, and YU smartphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X