ಕರ್ನಾಟಕದ ಇಂಟರ್‌ನೆಟ್ ಬಳಕೆಯ ಕಥೆ ಹೇಳುವ ಡಿಜಿಟಲ್ ದೇಶ್ ಡ್ರೈವ್ 3.0

ನಮ್ಮ ಕರ್ನಾಟಕ ರಾಜ್ಯದಲ್ಲಿ ನೌ ಪ್ಲೋಟ್ ಸಂಸ್ಥೆಯೂ ಒಂದು ಸರ್ವೆಯನ್ನು ನಡೆಸಿದ್ದು, ' ಡಿಜಿಟಲ್ ದೇಶ್ 3.0: ಇನ್‌ ಸೈಡ್ ದಿ ಇಂಟರ್ನೆಟ್ ಆಫ್ ಕರ್ನಾಟಕ' ಎಂಬ ಬುಕ್ ವೊಂದನ್ನು ಬಿಡುಗಡೆ ಮಾಡಿದೆ.

|

ದೇಶದಲ್ಲಿ ಸದ್ಯ ಇಂಟರ್ನೆಟ್ ಬಳಕೆಯೂ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲಿ ನೌ ಪ್ಲೋಟ್ ಸಂಸ್ಥೆಯೂ ಒಂದು ಸರ್ವೆಯನ್ನು ನಡೆಸಿದ್ದು, 'ಡಿಜಿಟಲ್ ದೇಶ್ ಡ್ರೈವ್ 3.0: ಇನ್‌ ಸೈಡ್ ದಿ ಇಂಟರ್ನೆಟ್ ಆಫ್ ಕರ್ನಾಟಕ' ಎಂಬ ಬುಕ್ ವೊಂದನ್ನು ಬಿಡುಗಡೆ ಮಾಡಿದ್ದು, ಈ ಮೂಲಕ ಇಂಟರ್ ನೆಟ್ ಸೇವೆಯು ಕರ್ನಾಟಕದಲ್ಲಿ ಮಾಡಿರುವ ಬದಲಾವಣೆಯನ್ನು ಜನರ ಮುಂದೆ ಇಡುವ ಪ್ರಯತ್ನವನ್ನು ಮಾಡಿದೆ.

ಕರ್ನಾಟಕದ ಇಂಟರ್‌ನೆಟ್ ಬಳಕೆಯ ಕಥೆ ಹೇಳುವ ಡಿಜಿಟಲ್ ದೇಶ್ ಡ್ರೈವ್ 3.0

ಡಿಜಿಟಲ್ ದೇಶ್ ಈಗಾಗಲೇ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಿದ್ದು, ಇದು ಮೂರನೇ ಪುಸ್ತಕವಾಗಿದೆ. ಇದನ್ನು ಕರ್ನಾಟಕ ರಾಜ್ಯದಲ್ಲಿ ಒಂದು ತಿಂಗಳು ಪ್ರವಾಸವನ್ನು ಮಾಡಿ, ಸರ್ವೆಯನ್ನು ನಡೆಸಿ ರಚಿಸಲಾಗಿದೆ. ಕರ್ನಾಟಕದಲ್ಲಿರುವ ಸಣ್ಣ ವ್ಯಾಪಾರಿಗಳು ಹೇಗೆ ಇಂಟರ್ನೆಟ್ ಸಹಾಯದಿಂದ ತಮ್ಮ ಉದ್ಯಮವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ ಮತ್ತು ಹೆಚ್ಚಿನ ಆದಾಯವನ್ನು ಗಳಿಸುತ್ತಿದ್ದಾರೆ ಎಂಬ ಯಶಸ್ವಿ ಸ್ಟೋರಿಗಳನ್ನು ಈ ಪುಸ್ತಕದಲ್ಲಿ ತಿಳಿಸಲಾಗಿದೆ.

ಈ ಕುರಿತು ಮಾಹಿತಿಯನ್ನು ನೀಡಿದ ನೌ ಪ್ಲೋ ಕಂಪನಿಯ ಸಿಇಓ ಜಸ್ಮಿಂದರ್ ಸಿಂಗ್, ಡಿಜಿಟಲ್ ದೇಶ್ ಡ್ರೈವ್'ನ ಪ್ರಮುಖ ಉದ್ದೇಶವೇ ದೇಶದಲ್ಲಿ ಇಂಟರ್ನೆಟ್ ಬಳಕೆಯು ಹೇಗೆ ಸಾಮಾನ್ಯ ಜನರ ಜೀವನದಲ್ಲಿ ಹೊಸ ಬದಲಾವಣೆಯನ್ನು ಹೇಗೆ ತಂದಿದೆ ಎಂಬುದನ್ನು ತಿಳಿಸಲು ಮತ್ತು ಅವರ ಯಶಸ್ವಿ ಕಥೆಯನ್ನು ನಾಲ್ಕು ಜನರಿಗೆ ಸ್ಪೂರ್ತಿಯಾಗಲಿ ಎಂದು ತಿಳಿಸುವುದು ಆಗಿತ್ತು ಎಂದಿದ್ದಾರೆ.

ಈ ಪುಸ್ತಕದಲ್ಲಿ ಕರ್ನಾಟಕದ ರಾಮನಗರ, ಮಂಡ್ಯ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ದಾವಣಗೆರೆ, ಹಾವೇರಿ, ಗದಗ, ಬಾಗಲಕೋಟೆ, ಬೆಳಗಾವಿ, ಉತ್ತರ ಕರ್ನಾಟಕ, ಧಾರವಾಡ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸಂಚರಿಸಿ ಅನೇಕ ವ್ಯಕ್ತಿಗಳ ಯಶಸ್ಸಿನ ಸ್ಟೋರಿಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ನೀಡಲಾಗಿದೆ.

ಕರ್ನಾಟಕದ ಇಂಟರ್‌ನೆಟ್ ಬಳಕೆಯ ಕಥೆ ಹೇಳುವ ಡಿಜಿಟಲ್ ದೇಶ್ ಡ್ರೈವ್ 3.0

ಹೇಗೆ ಇಂಟರ್ನೆಟ್ ಮತ್ತು ತಂತ್ರಜ್ಞಾನದ ಸಹಾಯದಿಂದ ತಮ್ಮ ಸಣ್ಣ ಪ್ರಮಾಣದ ವ್ಯಾಪರವನ್ನು ಇತರರಿಗಿಂತ ದೊಡ್ಡದಾಗಿ ವಿಸ್ತರಿಸಿಕೊಂಡಿದ್ದಾರೆ ಎಂಬುದನ್ನು ನಾಲ್ಕು ಜನರಿಗೆ ತಿಳಿಸುವದರೊಂದಿಗೆ ಸಣ್ಣ ವ್ಯಾಪರಿಗಳ ಅವಶ್ಯಕತೆ ಏನು..? ಏನನ್ನು ಅವರಿಗೆ ತಲುಪಿಸಬೇಕು ಎಂಬುದನ್ನು ಅರಿಯಲು ಈ ಪುಸ್ತಕ ಸಹಾಯವಾಗಲಿದೆ.

ನೌ ಪ್ಲೋಟ್ ಸಂಸ್ಥೆಯೂ ಸಣ್ಣ ನಗರಗಳಲ್ಲಿರುವ ಮತ್ತು ಗ್ರಾಮೀಣ ಭಾಗದಲ್ಲಿರುವ ಜನರಿಗೆ ಟೆಕ್ನಲಾಜಿಯ ಸಹಾಯದಿಂದ ಬೆಳೆವಣಿಗೆ ಸಾಧಿಸಲು ಅವಶ್ಯವಿರುವ ಅಂಶಗಳು ತಿಳಿಸುವ ಪ್ರಯತ್ನ ಮಾಡುವದರೊಂದಿಗೆ ಅವರ ಸಣ್ಣ ಉದ್ಯಮಗಳನ್ನು ಡೊಡ್ಡಮಟ್ಟದಲ್ಲಿ ಬೆಳೆಸಲು ಸಹಾಯ ಮಾಡುತ್ತಿದ್ದು, ಸಣ್ಣ ಉದ್ಯಮಗಳನ್ನು ಜಾಗತಿಕವಾಗಿ ಬಿಂಬಿಸಲು ವಬ್ ಸೈಟ್ ನಿರ್ಮಿಸುವ ಕಾರ್ಯವನ್ನು ಮಾಡುತ್ತಿದೆ. ಇದು ಆಪ್ ಮತ್ತು ವೆಬ್ ತಾಣವನ್ನು ನಿರ್ಮಿಸುವ ಕಾರ್ಯವನ್ನು2012 ರಿಂದ ಆರಂಭಿಸಿದೆ. ಈಗಾಗಲೇ ಸುಮಾರು 2.5 ಲಕ್ಷ ಬಿಸ್ನೆಸ್ ಗಳಿಗೆ ಆನ್‌ಲೈನ್ ವೇದಿಕೆಯನ್ನು ನಿರ್ಮಿಸಿಕೊಟ್ಟಿದೆ.

Best Mobiles in India

Read more about:
English summary
launches its third book - Digital Desh Drive 3.0, Inside the Internet of Karnataka. The book encapsulates a month long journey in Karnataka and illustrates the impact of digitization and internet penetration, backed by real life stories as case studies. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X