ಬರಲಿದೆ 4ಜಿಗಿಂತ 20 ಪಟ್ಟು ವೇಗ ಅಧಿಕವಾಗಿರುವ 5ಜಿ

By Shwetha
|

ಇಂದಿನ ಆಧುನಿಕ ಜಗತ್ತು ಹೆಚ್ಚೆಚ್ಚು ವೇಗದಲ್ಲಿ ಇಂಟರ್ನೆಟ್ ಅನ್ನು ಬಳಸಿಕೊಳ್ಳುವ ವ್ಯವಸ್ಥೆಯನ್ನು ತಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿವೆ. 2ಜಿಯಿಂದ ನಿಧಾನವಾಗಿ 3ಜಿ ಈಗ 4ಜಿ ಇನ್ನೂ ಮುಂದಕ್ಕೆ 5ಜಿ ವೇಗದಲ್ಲಿ ಇಂಟರ್ನೆಟ್‌ನ ಸೌಲಭ್ಯವನ್ನು ಬಳಕೆದಾರರು ತಮ್ಮ ಫೋನ್‌ಗಳಲ್ಲಿ ಪಡೆದುಕೊಳ್ಳಬಹುದಾಗಿದೆ. ಐದನೇ ಜನರೇಶನ್ ವೈರ್‌ಲೆಸ್ ತಂತ್ರಜ್ಞಾನ ಎಂದೆನಿಸಿಕೊಂಡಿರುವ 5ಜಿಯು 3ಜಿ ಮತ್ತು 4ಜಿಗಿಂತಲೂ ಹೆಚ್ಚು ವೇಗವಾಗಿ ಕ್ಷಿಪ್ರವಾಗಿ ಕಾರ್ಯನಿರ್ವಹಿಸಲಿದೆ.

ಓದಿರಿ: ಏರ್‌ಟೆಲ್‌ನಲ್ಲಿ ಉಚಿತವಾಗಿ 60 ಜಿಬಿ 4ಜಿ ಡೇಟಾ ಪಡೆದುಕೊಳ್ಳುವುದು ಹೇಗೆ?

ಇಂದಿನ ಲೇಖನದಲ್ಲಿ 5ಜಿ ತಂತ್ರಜ್ಞಾನದ ಮುಖ್ಯ ಅಂಶಗಳನ್ನು ನಾವು ತಿಳಿದುಕೊಳ್ಳಲಿದ್ದು ಇದು ನಿಮ್ಮನ್ನು ಆಶ್ಚರ್ಯಚಕಿತರನ್ನಾಗಿಸುವುದು ಖಂಡಿತ.

ತಂತ್ರಜ್ಞಾನ

ತಂತ್ರಜ್ಞಾನ

ಮೊಬೈಲ್ ಇಂಟರ್ನೆಟ್ ಸಂಪರ್ಕದ ಆಚೆಗೆ ಈ ತಂತ್ರಜ್ಞಾನ ಮುಂದುವರಿಯಲಿದೆ. ಕಿಲೋಮೀಟರ್‌ಗಳಷ್ಟು ದೂರದಲ್ಲಿ ಮಿಲಿಯಗಟ್ಟಲೆ ಸಂಪರ್ಕಗಳನ್ನು ಪಡೆದುಕೊಳ್ಳಲು 5ಜಿ ನಿಮ್ಮನ್ನು ಅನುಮತಿಸಲಿದೆ. ಸ್ಮಾರ್ಟ್ ಸಿಟಿ ಮತ್ತು ಡಿವೈಸ್‌ಗಳು ಯಾವುದೇ ತೊಂದರೆಯಿಲ್ಲದೆ ಇಂಟರ್ನೆಟ್ ಸೌಲಭ್ಯವನ್ನು ಪಡೆದುಕೊಳ್ಳಲಿದೆ.

ಇಂಟರ್ನೆಟ್ ಸಂಪರ್ಕ

ಇಂಟರ್ನೆಟ್ ಸಂಪರ್ಕ

3ಜಿ ಅಥವಾ 4ಜಿ ನೆಟ್‌ವರ್ಕ್‌ಗಳಿಗೆ ಹೋಲಿಸಿದಾಗ 5ಜಿ ಬಳಕೆದಾರರು ಹೆಚ್ಚು ಜನನಿಬಿಡ ಸ್ಥಳಗಳಲ್ಲಿ ಯಾವುದೇ ತೊಂದರೆ ಇಲ್ಲದೆ ಇಂಟರ್ನೆಟ್ ಸಂಪರ್ಕವನ್ನು ಪಡೆದುಕೊಳ್ಳಲಿದ್ದಾರೆ

20 ಪಟ್ಟು ಅಧಿಕ ವೇಗ

20 ಪಟ್ಟು ಅಧಿಕ ವೇಗ

ಪ್ರಸ್ತುತ 4ಜಿ ನೆಟ್‌ವರ್ಕ್‌ಗಿಂತಲೂ 20 ಪಟ್ಟು ಅಧಿಕ ವೇಗದಲ್ಲಿ 5ಜಿ ಕಾರ್ಯನಿರ್ವಹಿಸಲಿದೆ. ಒಂದೇ ಸೆಕೆಂಡ್‌ನಲ್ಲಿ ಪೂರ್ಣವಾಗಿರುವ ಹೈ ಡೆಫಿನೇಶನ್ ಚಲನಚಿತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂಬುದಾಗಿ ತಜ್ಞರು ನುಡಿದಿದ್ದಾರೆ. ಒಂದು ಮಿಲಿಸೆಕೆಂಡ್‌ಗಿಂತಲೂ ಕಡಿಮೆ ಟೆಂಡೆನ್ಸಿಯಲ್ಲಿ 5ಜಿ ಬರಲಿದ್ದು ಪ್ರಸ್ತುತ 4ಜಿ ನೆಟ್‌ವರ್ಕ್ 10 ಮಿಲಿಸೆಕೆಂಡ್‌ಗಳ ಟೆಂಡೆನ್ಸಿಯನ್ನು ಪಡೆದುಕೊಂಡಿದೆ.

ವಾಣಿಜ್ಯವಾಗಿ 5ಜಿ ಯಾವಾಗ ಲಭ್ಯವಾಗಲಿದೆ

ವಾಣಿಜ್ಯವಾಗಿ 5ಜಿ ಯಾವಾಗ ಲಭ್ಯವಾಗಲಿದೆ

ಹೆಚ್ಚು ಕಡಿಮೆ 2020 ರ ವೇಳೆಗೆ 5ಜಿ ಬಳಕೆದಾರರಿಗೆ ಲಭ್ಯವಾಗಲಿದೆ. ಹೆಚ್ಚು ಕಡಿಮೆ 300 ಕಂಪೆನಿಗಳು, ಬ್ರಾಡರ್ ಮೊಬೈಲ್ ಇಕೋಸಿಸ್ಟಮ್, 5ಜಿ ಮೇಲೆ ತಮ್ಮ ಆಸಕ್ತಿಯನ್ನು ತೋರ್ಪಡಿಸಿದ್ದಾರೆ.

5ಜಿ ಸಂಬಂಧಿತ ಮೊಬೈಲ್ ತಂತ್ರಜ್ಞಾನ

5ಜಿ ಸಂಬಂಧಿತ ಮೊಬೈಲ್ ತಂತ್ರಜ್ಞಾನ

ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳು 5ಜಿ ಸಂಬಂಧಿತ ಮೊಬೈಲ್ ತಂತ್ರಜ್ಞಾನವನ್ನು ಪರಿಶೀಲನೆ ಮಾಡುತ್ತಿದ್ದು ಅಭಿವೃದ್ಧಿಗೊಳಿಸುತ್ತಿದೆ. ಈ ದೇಶಗಳಲ್ಲಿ ಹೆಚ್ಚು ಮಟ್ಟದ 4ಜಿ ಅಡಾಪ್ಶನ್ ಇದ್ದು ಸರಕಾರದ ಬೆಂಬಲದೊಂದಿಗೆ ನಾರ್ತ್ ಅಮೇರಿಕಾ ಮತ್ತು ಯುರೋಪ್ ದೇಶಗಳು 5ಜಿ ಸಂಪರ್ಕವನ್ನು ಪಡೆದುಕೊಳ್ಳುವತ್ತ ಮುನ್ನುಗ್ಗುತ್ತಿವೆ.

3ಜಿ ಮತ್ತು 4ಜಿ ಬಳಕೆದಾರ

3ಜಿ ಮತ್ತು 4ಜಿ ಬಳಕೆದಾರ

3ಜಿ ಮತ್ತು 4ಜಿ ಬಳಕೆದಾರರೊಂದಿಗೆ 5ಜಿ ಯನ್ನು ಹೋಲಿಸಿದಾಗ ಹೆಚ್ಚಿನ ಗುಂಪು ಇರುವ ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕವನ್ನು ಪಡೆದುಕೊಳ್ಳಲು ಬಳಕೆದಾರರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ.

Best Mobiles in India

English summary
Even while phone users are moving to 4G from 3G, phone are already focusing on the next generation of mobile communications - 5G - which is scheduled for a 2020 roll-out.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X