ಫೇಸ್‌ಬುಕ್ ವಿಪರೀತ ಬಳಕೆ ಚಟಕ್ಕೆ ಕಾರಣ

By Shwetha
|

ವಿಪರೀತವಾಗಿ ಸಾಮಾಜಿಕ ನೆಟ್‌ವರ್ಕ್‌ ಅನ್ನು ಬಳಸುವುದು ಬಳಸುವವರನ್ನು ವ್ಯಸನಿಯಾಗಿಸುವುದು ಮಾತ್ರವಲ್ಲ ಇತರ ಮಾನಸಿಕ ಅಸ್ವಸ್ಥೆಗಳಿಗೆ ಕಾರಣವಾಗಬಹುದು ಎಂದು ಹೊಸ ಸಂಶೋಧನೆ ದೃಢೀಕರಿಸಿದೆ.

ಇದನ್ನೂ ಓದಿ: ಖರೀದಿಗೆ ಅರ್ಹವಾಗಿರುವ ಅತ್ಯುತ್ತಮ ಆಂಡ್ರಾಯ್ಡ್ ಫೋನ್ಸ್

292 ಪದವಿ ಪೂರ್ವ ವಿದ್ಯಾರ್ಥಿಗಳನ್ನೊಳಗೊಂಡ ಅಧ್ಯಯನದಲ್ಲಿ 18 ವರ್ಷದವರು ಹೆಚ್ಚು ಭಾಗವಹಿಸಿದ್ದರು. ಇವರೆಲ್ಲಾ ನ್ಯೂಯಾರ್ಕ್‌ನ ಅಲ್ಬೇನಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದು ಅವರ ಮದ್ಯ ವ್ಯಸನದ ಗೀಳನ್ನು ಅಂದಾಜು ಮಾಡಲು ನಿರ್ಧರಿಸಲಾಗಿದೆ. ಅವರಲ್ಲಿ 90 ಶೇಕಡದಷ್ಟು ವಿದ್ಯಾರ್ಥಿಗಳು ಸಕ್ರಿಯ ಫೇಸ್‌ಬುಕ್ ಪ್ರೊಫೈಲ್ ಅನ್ನು ಹೊಂದಿದ್ದು ಸಾಮಾಜಿಕ ನೆಟ್‌ವರ್ಕಿಂಗ್ ಸೈಟ್‌ನಲ್ಲಿ ತಮ್ಮ ಆನ್‌ಲೈನ್ ಬ್ರೌಸಿಂಗ್‌ನ ಮೂರನೇ ಒಂದು ಭಾಗದಷ್ಟು ಅವರು ಕಳೆಯುತ್ತಿದ್ದಾರೆ.

ವಿಪರೀತ ಫೇಸ್‌ಬುಕ್ ಬಳಕೆ ಮಾಡಬಹುದು ಹಾನಿ

ಅವರಲ್ಲಿ 10 ಶೇಕಡದಷ್ಟು ಜನರು ಸಾಮಾಜಿಕ ಜಾಲತಾಣವನ್ನು ಅಸ್ತವ್ಯಸ್ತವಾಗಿ ಬಳಸುತ್ತಿದ್ದಾರೆ ಎಂದು ಸಂಶೋಧಕರು ಅಭಿಪ್ರಾಯಿಸಿದ್ದಾರೆ. ಇವರು ಫೇಸ್‌ಬುಕ್‌ನಲ್ಲಿ ಇಲ್ಲದಿರುವಾಗ ಕೂಡ ಮಾನಸಿಕ ಸಮತೋಲನ ಕಳೆದುಕೊಂಡಂತೆ ವರ್ತಿಸುತ್ತಿದ್ದು ಜಾಲತಾಣದಲ್ಲಿ ತಮ್ಮ ಹೆಚ್ಚಿನ ಸಮಯವನ್ನು ವ್ಯಯಿಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.

ಆದ್ದರಿಂದ ಫೇಸ್‌ಬುಕ್‌ನಂತಹ ಜಾಲತಾಣವನ್ನು ಬಳಸುವವರು ಹೆಚ್ಚು ಹೆಚ್ಚು ಚಟಕ್ಕೆ ಒಳಪಡುತ್ತಿದ್ದು ಜಾಲತಾಣದಲ್ಲೇ ತಮ್ಮ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ.

Best Mobiles in India

English summary
This article tells about Excessive online social networking is not only addictive but can be associated with other disorders involving poor impulse control that can lead to substance abuse, a new research shows.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X