ವರ್ಕ್ಸ್’ಪ್ಲೇಸ್ ಎಂಬ ನೂತನ ಅಪ್ಲಿಕೇಷನ್ ಪರಿಚಯಿಸಲಿದೆ ಫೇಸ್’ಬುಕ್: ಏನೇನಿರುತ್ತೆ? ಇಲ್ಲಿದೆ ಮಾಹಿತಿ

2016ರ ಅಕ್ಟೋಬರ್’ನಲ್ಲಿ ಫೇಸ್’ಬುಕ್ ವರ್ಕ್ ಪ್ಲೇಸ್ ಲಾಂಚ್ ಆಗಿತ್ತು. ಈಗಾಗಲೇ ಲಕ್ಷಾಂತರ ಮಂದಿ ಇದರ ಚಂದಾದಾರರಾಗಿದ್ದಾರೆ.

By Precilla Dias
|

ಇನ್ಮುಂದೆ ನೀವು ಆಫೀಸ್’ನಲ್ಲಿ ಕದ್ದು ಮುಚ್ಚಿ ಫೇಸ್ಬುಕ್ ಬಳಸುವ ಅಗತ್ಯವೇ ಇಲ್ಲ. ಯಾಕೆ ಅಂತೀರಾ ಇನ್ಮುಂದೆ ನಿಮ್ಮ ಕಂಪನಿಯಲ್ಲೇ ಅದರಲ್ಲೂ ನಿಮ್ಮ ಆಫೀಸ್’ನಲ್ಲಿ ಇರುವವರೊಂದಿಗೆ ಸಂಪರ್ಕ ಸಾಧಿಸಲು ಫೇಸ್ಬುಕ್ ಅನ್ನು ಬಳಸಬಹುದಾಗಿದೆ. ಇದಕ್ಕಾಗಿಯೇ ಫೇಸ್’ಬುಕ್ ವರ್ಕ್ ಪ್ಲೇಸ್ ಫ್ರೀ ವರ್ಷನ್ ಬಿಡುಗಡೆ ಮಾಡಿದೆ. ಇದರ ಸಹಾಯದಿಂದ ನೀವು ನಿಮ್ಮ ಆಫೀಸ್’ನಲ್ಲಿ ಇರುವವರೊಂದಿಗೆ ಚಾಟ್ ಮಾಡಬಹುದಾಗಿದೆ.

ಫೇಸ್’ಬುಕ್’ನಿಂದ ವರ್ಕ್ಸ್’ಪ್ಲೇಸ್ ಎಂಬ ಹೊಸ ಅಪ್ಲಿಕೇಷನ್!

2016ರ ಅಕ್ಟೋಬರ್’ನಲ್ಲಿ ಫೇಸ್’ಬುಕ್ ವರ್ಕ್ ಪ್ಲೇಸ್ ಲಾಂಚ್ ಆಗಿತ್ತು. ಈಗಾಗಲೇ ಲಕ್ಷಾಂತರ ಮಂದಿ ಇದರ ಚಂದಾದಾರರಾಗಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಫೇಸ್’ಬುಕ್ ವರ್ಕ್ ಪ್ಲೇಸ್’ನ್ನು ಹೆಚ್ಚು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಇದರ ಉಚಿತ ಆವೃತ್ತಿಯನ್ನು ಬಿಡುಗಡೆ ಮಾಡಲು ಫೇಸ್’ಬುಕ್ ಮುಂದಾಗಿದೆ.

ಹೇಗೆ ಕಾರ್ಯ ನಿರ್ವಹಿಸುತ್ತದೆ?

ವರ್ಕ್ ಪ್ಲೇಸ್ ಕೂಡಾ ಫೇಸ್’ಬುಕ್’ನಂತಯೇ ಕಾರ್ಯ ನಿರ್ವಹಿಸುವುದರಿಂದ, ನೋಡಲು ಕೂಡಾ ಫೇಸ್’ಬುಕ್ ನಂತೆಯೇ ಇರಲಿದೆ. ವರ್ಕ್ ಪ್ಲೇಸ್ ಬಳಕೆದಾರರು ಇಲ್ಲಿ ಸಹ ಗ್ರೂಪ್ ಕ್ರಿಯೇಟ್ ಮಾಡಿಕೊಳ್ಳುವದರೊಂದಿಗೆ ಆಪ್’ಡೇಟ್’ಗಳನ್ನು ಪೋಸ್ಟ್ ಮಾಡಬಹುದಾಗಿದೆ. ಅಲ್ಲದೇ ಸ್ನೇಹಿತರನ್ನು ಟ್ಯಾಗ್ ಮಾಡುವುದು, ಫೈಲ್’ಗಳನ್ನು ಶೇರ್ ಮಾಡುವುದು, ಹಾಗು ಒಂದೇ ಸಮಯದಲ್ಲಿ ಹಲವರೊಂದಿಗೆ ಚಾಟ್ ಮಾಡು ಸೌಲಭ್ಯವೂ ಇರಲಿದೆ.

ಓದಿರಿ: ರಾಕೆಟ್‌ ಐಕಾನ್ ಪರಿಚಯಿಸಿದ ಫೇಸ್‌ಬುಕ್‌..ಏನಿದು ರಾಕೆಟ್‌ ಪ್ರಯೋಗ?

ಇದರಲ್ಲಿರುವ ಮೆಸೆಂಜರ್ ಕೂಡಾ ವರ್ಕ್ ಚಾಟ್ ನಂತೆ ಕಾರ್ಯ ನಿರ್ವಹಿಸಲಿದ್ದು, ವಿಡಿಯೋ ಕಾಲ್, ಗ್ರೂಪ್ ಆಡಿಯೋ ಕಾಲ್ ಮಾಡಬಹುದಾಗಿದೆ. ಸದ್ಯ ಫೇಸ್’ಬುಕ್ ಮಾದರಿಯಲ್ಲೇ ವರ್ಕ್ ಪ್ಲೇಸ್’ನ್ನು ಜನಪ್ರಿಯಗೊಳಿಸುವ ಸಲುವಾಗಿ ಇದರ ಉಚಿತ ಆವೃತ್ತಿ ಬಿಡುಗಡೆಯಾಗುತ್ತಿದೆ.

ಈ ಉಚಿತ ಆವೃತ್ತಿಯನ್ನು ವರ್ಕ್ ಪ್ಲೇಸ್ ಸ್ಟಾಂಡರ್ಡ್ ಎಂದು ಕರೆಯಲಾಗುತ್ತಿದ್ದು, ಇದರಲ್ಲಿಯೇ ವರ್ಕ್ ಪ್ಲೇಸ್ ಪ್ರೀಮಿಯಮ್ ಎಂಬ ಮತ್ತೊಂದು ಆವೃತ್ತಿಯನ್ನೂ ಸೇರಿಸಲಾಗಿದೆ. ಆದರೆ ಪ್ರೀಮಿಯಮ್ ಆವೃತ್ತಿಯನ್ನು ಬಳಸಬೇಕಾದರೆ ಹಣ ಪಾವತಿ ಮಾಡಬೇಕಾಗುತ್ತದೆ. ಸದ್ಯ ಅಭಿವೃದ್ಧಿ ಹಂತದಲ್ಲಿರುವ ಉಚಿತ ಆವೃತ್ತಿ ಲಿಮಿಟೆಡ್ ರೂಪದಲ್ಲಿ ದೊರೆಯುತ್ತಿದೆ. ನೋಡಲು ಪ್ರೀಮಿಯಮ್ ಆವೃತ್ತಿಯಂತಿರುವ ಇದರಲ್ಲಿ ಆಯ್ಕೆಗಳು ಮಾತ್ರ ಕಡಿಮೆ ಇವೆ.

ಒಂದು ವೇಳೆ ನಿಮ್ಮ ಕಂಪನಿಯಲ್ಲೂ ಫೇಸ್’ಬುಕ್ ವರ್ಕ್ ಪ್ಲೇಸ್ ಬಳಕೆಯನ್ನು ಆರಂಭಿಸಿದರೆ ನೀವು ಕದ್ದು ಮುಚ್ಚಿ ಫೇಸ್’ಬುಕ್ ಅಗತ್ಯವ ಇರುವುದಿಲ್ಲ. ಹೀಗಾಗಿ ಆಫೀಸ್’ನಲ್ಲಿ ವರ್ಕ್ ಪ್ಲೇಸ್ ಬಳಸುವಂತೆ ನಿಮ್ಮ ಬಾಸ್’ಗೆ ನೀವೇ ಸಲಹೆ ನೀಡಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Facebook is coming up with a free version of its business social media network Workplace.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X