ದೇಶೀಯ ಸ್ಮಾರ್ಟ್‌ಫೋನ್‌ ಕಂಪೆನಿ ಆರಂಭಿಸಲಿರುವ ಆಪಲ್‌ನ ಮಾಜಿ ಸಿಇಒ

By Ashwath
|

ಸ್ಮಾರ್ಟ್‌‌‌ಫೋನ್‌ ಮಾರುಕಟ್ಟೆಯಲ್ಲಿ ವಿಶ್ವದ ಟಾಪ್‌ ಕಂಪೆನಿಗಳಿಗೆ ಸೆಡ್ಡು ಹೊಡೆದಿರುವ ಭಾರತೀಯ ಕಂಪೆನಿಗಳಿಗೆ ಈಗ ಸೆಡ್ಡು ಹೊಡೆಯಲು ಮತ್ತೊಂದು ಸ್ಮಾರ್ಟ್‌‌ಫೋನ್‌ ಕಂಪೆನಿ ಸದ್ಯದಲ್ಲೇ ಸ್ಥಾಪನೆಯಾಗಲಿದೆ.

ಆಪಲ್‌ ಕಂಪೆನಿಯ ಮಾಜಿ ಸಿಇಒ ಜಾನ್‌ ಸ್ಕಲ್ಲೆ(John Sculley) ಭಾರತದಲ್ಲಿ ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿಯನ್ನು ಆರಂಭಿಸಲು ಮುಂದಾಗುತ್ತಿದ್ದಾರೆ.ಏಪ್ರಿಲ್‌ನಲ್ಲಿ ಈ ಕಂಪೆನಿ ಆರಂಭವಾಗಲಿದ್ದು ಮೈಕ್ರೋಮ್ಯಾಕ್ಸ್ ಸ್ಮಾರ್ಟ್‌‌ಫೋನ್‌ ವಿಭಾಗದ ಮಾಜಿ ಮುಖ್ಯಸ್ಥ ಅಜಯ್‌ ಶರ್ಮ‌ ಜೊತೆಗೂಡಿ ದೇಶೀಯ ಸ್ಮಾರ್ಟ್‌ಫೋನ್‌ ಕಂಪೆನಿ ಆರಂಭಿಸಲು ತಯಾರಿ ನಡೆಸಿದ್ದಾರೆ.

ಮೈಕ್ರೋಮ್ಯಾಕ್ಸ್‌ಗೆ ಸೇರುವ ಮೊದಲು ಎಚ್‌ಟಿಸಿ ಭಾರತದ ಮುಖ್ಯಸ್ಥರಾಗಿದ್ದ ಅಜಯ್‌ ಶರ್ಮ‌, ಈಗ ಎಚ್‌ಟಿಸಿ ಮತ್ತು ಮೈಕ್ರೋಮ್ಯಾಕ್ಸ್‌‌ನಲ್ಲಿದ್ದ ಆಪ್ತರನ್ನು ಉದ್ಯೋಗಳಾಗಿ ನೇಮಿಸುವ ಮೂಲಕ ಸ್ಮಾರ್ಟ್‌ಫೋನ್‌‌ ಕಂಪೆನಿಯನ್ನು ಕಟ್ಟುತ್ತಿದ್ದಾರೆ.

ಹೊಸ ಕಂಪೆನಿ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ಗಳ ನಿರ್ಮಾಣಕ್ಕೆ ಕೈ ಹಾಕದೇ ಐದರಿಂದ 15ಸಾವಿರದೊಳಗಿರುವ ಸ್ಮಾರ್ಟ್‌‌‌ಫೋನ್‌ ಮತ್ತು ಫೀಚರ್‌ ಫೋನ್‌ ನಿರ್ಮಾಣದ ಯೋಜನೆ ರೂಪಿಸಿದೆ. ಸಿಂಗಾಪುರ್‌ ಇನ್‌‌ಫ್ಲೆಕ್ಸನ್‌ಪಾಯಿಂಟ್‌‌‌( Inflexionpoint) ಐಟಿ ಕಂಪೆನಿ ಹೊಸ ಸ್ಮಾರ್ಟ್‌‌‌ಫೋನ್‌ ಕಂಪೆನಿಗೆ ಬಂಡವಾಳ ಹೂಡಿದೆ.

 ದೇಶೀಯ ಸ್ಮಾರ್ಟ್‌ಫೋನ್‌ ಕಂಪೆನಿ ಆರಂಭಿಸಲಿರುವ ಆಪಲ್‌ನ ಮಾಜಿ ಸಿಇಒ

John Sculley ಈ ಹಿಂದೆ 1977 ರಿಂದ1983ರವರಗೆ ಪೆಪ್ಸಿ ಕೋ ಕಂಪೆನಿ ಅಧ್ಯಕ್ಷರಾಗಿದ್ದು, 1983ರಿಂದ 1993ರವರೆಗೆ ಆಪಲ್‌ ಕಂಪೆನಿಯ ಸಿಇಒ ಆಗಿ ಕಾರ್ಯ‌ನಿರ್ವ‌ಹಿಸಿದ್ದಾರೆ. ಇನ್‌‌ಫ್ಲೆಕ್ಸನ್‌ಪಾಯಿಂಟ್‌ ಕಂಪೆನಿಯ ಸಹ ಸಂಸ್ಥಾಪಕರಾಗಿದ್ದಾರೆ.

ಐಡಿಸಿ ವರದಿ ಪ್ರಕಾರ 2012ರಲ್ಲಿ 1.62 ಕೋಟಿ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಮಾರಾಟವಾಗಿದ್ದರೆ, 2013ರಲ್ಲಿ 4.4 ಕೋಟಿ ಸ್ಮಾರ್ಟ್‌ಫೋನ್‌‌ ಮಾರಾಟವಾಗಿತ್ತು.ಭಾರತದಲ್ಲಿ ಗಣನೀಯ ಪ್ರಮಾಣದಲ್ಲಿ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ John Sculley ಭಾರತದಲ್ಲಿ ಸ್ಮಾರ್ಟ್‌ಫೋನ್‌ ಕಂಪೆನಿಯನ್ನು ಆರಂಭಿಸಲು ಮುಂದಾಗಿದ್ದಾರೆ.

ಮೈಕ್ರೋಮ್ಯಾಕ್ಸ್‌,ಝೋಲೋ,ಕಾರ್ಬ‌ನ್‌,ಐಬಾಲ್,ಸೆಲ್ಕಾನ್,ವಿಡಿಯೋಕಾನ್‌,ಇಂಟೆಕ್ಸ್‌,ಮ್ಯಾಕ್ಸ್‌‌,ಲಾವಾ,ಸ್ಪೈಸ್‌,ಬಿಯಾಂಡ್‌,ಎಚ್‌ಸಿಎಲ್‌,ಸಿಮ್‌ಟ್ರಾನಿಕ್ಸ್‌ನಂತಹ ದೇಶೀಯ ಕಂಪೆನಿಗಳು ಮಾರುಕಟ್ಟೆಗೆ ಕಡಿಮೆ ಬೆಲೆಯ ಸ್ಮಾರ್ಟ್‌‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ.

ದೇಶೀಯ ಕಂಪೆನಿಗಳ ಪೈಕಿ ಮೈಕ್ರೋಮ್ಯಾಕ್ಸ್‌ ಒಂದೇ ಭಾರತದಲ್ಲಿ ಸ್ಮಾರ್ಟ್‌ಫೋನ್‌ ಉತ್ಪಾದಿಸಲು ಆರಂಭಿಸಿದೆ.ಉಳಿದ ಕಂಪೆನಿಗಳ ಸ್ಮಾರ್ಟ್‌‌ಫೋನ್‌ ಹಾರ್ಡ್‌‌ವೇರ್‌ ಭಾಗಗಳು ಚೀನಾದಲ್ಲೇ ಹೆಚ್ಚಾಗಿ ತಯಾರಾಗುತ್ತದೆ.ಮೈಕ್ರೋಮ್ಯಾಕ್ಸ್‌ ಬಿಟ್ಟರೆ ಸ್ಯಾಮ್‌ಸಂಗ್‌ ಮತ್ತು ನೋಕಿಯಾ ಕಂಪೆನಿಯ ಫ್ಯಾಕ್ಟರಿಗಳು ಭಾರತದಲ್ಲಿದೆ. ಸ್ಯಾಮ್‌ಸಂಗ್‌ ಫ್ಯಾಕ್ಟರಿ ಉತ್ತರ ಪ್ರದೇಶದ ನೋಯ್ಡಾದಲ್ಲಿದ್ದರೆ, ನೋಕಿಯಾ ಫ್ಯಾಕ್ಟರಿ ತಮಿಳುನಾಡಿನ ಚೆನ್ನೈನಲ್ಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X