'ಫ್ರೀಡಮ್ 251' ತಯಾರಕ 'ರಿಂಗಿಂಗ್ ಬೆಲ್ಸ್' ಕಂಪನಿ ಮುಚ್ಚುವ ವರದಿ ವಿರೋಧಿಸಿದೆ: ಹೇಳಿದ್ದೇನು?

70,000 ಫ್ರೀಡಮ್ 251 ಸ್ಮಾರ್ಟ್‌ಫೋನ್‌ಗಳನ್ನು ಡೆಲಿವರಿಯನ್ನು ಹಲವು ರಾಜ್ಯಗಳಲ್ಲಿ ಮಾಡಿದ್ದರೂ ಸಹ, ಪ್ರಸ್ತುತದಲ್ಲಿ ಕಂಪನಿಯ ಅಧಿಕೃತ ವೆಬ್‌ಸೈಟ್ ವರ್ಕ್‌ ಆಗುತ್ತಿಲ್ಲ.

By Suneel
|

ರಿಂಗಿಂಗ್ ಬೆಲ್ಸ್ ಸ್ಮಾರ್ಟ್‌ಫೋನ್‌ ನೀಡುವ ತನ್ನ ಚಟುವಟಿಕೆಯನ್ನು ಮುಚ್ಚುತ್ತಿದೆ ಎಂಬ ವರದಿಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. ಆದರೆ ಕಂಪನಿ ಈ ವರದಿಗಳನ್ನು ಗುರುವಾರ ಅಲ್ಲಗಳೆದಿದೆ.

ಟೆಲಿಅನಾಲಿಸಿಸ್, ಫ್ರಿಡಮ್ 251 ಸ್ಮಾರ್ಟ್‌ಫೋನ್‌ ತಯಾರಕರು ಎಂಡಿಎಂ ಎಲೆಕ್ಟ್ರಾನಿಕ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನ ಇನ್ನೊಂದು ಕಂಪನಿ ಅನ್ನು ಸ್ಥಾಪಿಸಿದ್ದು, ದೆಹಲಿಯಲ್ಲಿ ಮಳಿಗೆಯನ್ನು ವ್ಯವಸ್ಥೆಗೊಳಿಸಿದೆ. ಅಲ್ಲದೇ ರಿಂಗಿಂಗ್ ಬೆಲ್ಸ್ ಮೇಲೆ ಸಂಪೂರ್ಣವಾಗಿ ಪರದೆ ಎಳೆದು ಮುಚ್ಚಿದೆ ಎಂದು ವರದಿ ಮಾಡಿತ್ತು. ಆದರೆ ಭಾರತದ ಕಂಪನಿ ಸ್ಮಾರ್ಟ್‌ಫೋನ್ ಮಾರಾಟ ಚಟುವಟಿಕೆ ನಿಲ್ಲಿಸುವ ಈ ಎಲ್ಲಾ ವರದಿಗಳನ್ನು ಅಲ್ಲಗಳೆದಿದ್ದು, "ಮಾರುಕಟ್ಟೆಯಲ್ಲಿ ಉತ್ತಮವಾಗಿದ್ದು, ಎಂದಿನಂತೆ ಆಪರೇಟಿಂಗ್ ಮಾಡಲಾಗುತ್ತಿದೆ" ಎಂದು ಸ್ಪಷ್ಟಪಡಿಸಿದೆ.

'ಮೊಟೊ ಎಂ' ಖರೀದಿಗೆ ಫ್ಲಿಪ್‌ಕಾರ್ಟ್‌ನಲ್ಲಿ ರೂ.15,000 ವರೆಗೆ ಎಕ್ಸ್‌ಚೇಂಜ್‌ ಆಫರ್: ಇಂದಿನಿಂದ ಲಭ್ಯ..!

ರಿಂಗಿಂಗ್ ಬೆಲ್ಸ್ ವಕ್ತಾರ ಹೇಳಿದ್ದೇನು?

ರಿಂಗಿಂಗ್ ಬೆಲ್ಸ್ ವಕ್ತಾರ ಹೇಳಿದ್ದೇನು?

ರಿಂಗಿಂಗ್ ಬೆಲ್ಸ್ ವಕ್ತಾರ ಇಮೇಲ್‌ ಕಳುಹಿಸಿದ್ದು, 'ಎಂಡಿಎಂ ಎಲೆಕ್ಟ್ರಾನಿಕ್ಸ್ ರಿಂಗಿಂಗ್ ಬೆಲ್ಸ್‌ನ ಒಂದು ಪ್ರತ್ಯೇಕ ಘಟಕವಾಗಿದ್ದು, ತನ್ನ ಸ್ವಂತ ಉದ್ದೇಶಗಳೊಂದಿಗೆ ಬಂದಿದೆ' ಎಂದು ಹೇಳಿದ್ದಾರೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಿಂಗಿಂಗ್ ಬೆಲ್ಸ್ ಅಭಿವೃದ್ದಿಗಾಗಿ ಕ್ರಮ

ರಿಂಗಿಂಗ್ ಬೆಲ್ಸ್ ಅಭಿವೃದ್ದಿಗಾಗಿ ಕ್ರಮ

"ರಿಂಗಿಂಗ ಬೆಲ್ಸ್‌ನಲ್ಲಿ ಸ್ಪಷ್ಟವಾದ ವ್ಯವಹಾರ ಉದ್ದೇಶಗಳನ್ನು ನಾವು ಇಟ್ಟುಕೊಂಡಿದ್ದು, ಇದನ್ನು ಇತ್ತಿಚೆಗೆ ಎಲ್ಲರೊಂದಿಗೆ ಹಂಚಿಕೊಂಡಿದ್ದೇವೆ. ನಾವು ಅದೇ ಚಟುವಟಿಕೆಗಳಿಗೆ ಬದ್ಧವಾಗಿದ್ದೇವೆ" ರಿಂಗಿಂಗ್ ಬೆಲ್ಸ್ ವಕ್ತಾರ ಹೇಳಿದ್ದಾರೆ. "ಪ್ರಸ್ತುತದಲ್ಲಿ ರಿಂಗಿಂಗ್ ಬೆಲ್ಸ್ ಸಂಸ್ಥಾಪಕ ನಿರ್ದೇಶಕ ಅನ್ಮೋಲ್ ಗೋಯೆಲ್, ಕಂಪನಿಯ ಅಭಿವೃದ್ದಿ ಮತ್ತು ಯಶಸ್ವಿಗಾಗಿ ಕ್ರಮಕೈಗೊಂಡಿದ್ದಾರೆ" ಎಂದು ಕಂಪನಿ ವಕ್ತಾರ ಸಿಇಓ ಧರ್ನಾ ಗೋಯೆಲ್‌'ರವರ ರಾಜೀನಾಮೆ ಸುದ್ದಿ ವೇಳೆ ಸ್ಪಷ್ಟಪಡಿಸಿದ್ದಾರೆ.

 70,000 ಫ್ರೀಡಮ್ 251 ಸ್ಮಾರ್ಟ್‌ಫೋನ್‌ ಡೆಲಿವರಿ

70,000 ಫ್ರೀಡಮ್ 251 ಸ್ಮಾರ್ಟ್‌ಫೋನ್‌ ಡೆಲಿವರಿ

ಸುಮಾರು 70,000 ಫ್ರೀಡಮ್ 251 ಸ್ಮಾರ್ಟ್‌ಫೋನ್‌ಗಳನ್ನು ಪಶ್ಚಿಮ ಬಂಗಾಳ, ಹರಿಯಾಣ, ಹಿಮಾಚಲ್, ಬಿಹಾರ, ಉತ್ತರಖಾಂಡ್, ದೆಹಲಿ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಜಾರ್ಖಂಡ್, ರಾಜಸ್ತಾನ ಮತ್ತು ಉತ್ತರ ಪ್ರದೇಶಗಳಲ್ಲಿ ಡೆಲಿವರಿ ನೀಡಿರುವ ಬಗ್ಗೆ ಕಂಪನಿ ಹೇಳಿದೆ. ಪ್ರಸ್ತುತದಲ್ಲಿ ರಿಂಗಿಂಗ್ ಬೆಲ್ಸ್ ವೆಬ್‌ಸೈಟ್ ಮಾತ್ರ ಕಾರ್ಯಾಚರಣೆ ಆಗುತ್ತಿಲ್ಲ.

ಆನ್‌ಲೈನ್‌ನಲ್ಲಿ ಪ್ರಾಡಕ್ಟ್ ಮಾರಾಟ

ಆನ್‌ಲೈನ್‌ನಲ್ಲಿ ಪ್ರಾಡಕ್ಟ್ ಮಾರಾಟ

ಫ್ರೀಡಮ್ 251 ಸ್ಮಾರ್ಟ್‌ಫೋನ್‌ ಅಸ್ತಿತ್ವಕ್ಕೆ ಬಂದಾಗಿನಿಂದಲು ವಿವಾದಗಳನ್ನು ಮೆಚ್ಚಿಸುವ ಕೆಲಸ ಮಾಡುತ್ತಿದೆ. ಇತ್ತಿಚಿನ ವಿವಾದ ಎಂದರೆ ರೂ.2 ಕೋಟಿಯ ಚೆಕ್‌ ಬೌನ್ಸ್. ಸೆಪ್ಟೆಂಬರ್‌ನಲ್ಲಿ ರಿಂಗಿಂಗ್ ಬೆಲ್ಸ್ ಅಮೆಜಾನ್‌ ಇಂಡಿಯಾದಲ್ಲಿ ತನ್ನ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡಲು ಆರಂಭಿಸಿತ್ತು. ಆಯ್ಕೆ ಸ್ಮಾರ್ಟ್‌ಫೋನ್‌, ಫೀಚರ್‌ ಫೋನ್‌ಗಳು, ಇತ್ತಿಚೆಗೆ ಪವರ್ ಬ್ಯಾಂಕ್‌ ಅನ್ನು ಇಕಾಮರ್ಸ್‌ ಸೈಟ್‌ನಲ್ಲಿ ನೀಡಲಾಗಿದೆ.

ವೆಬ್‌ಸೈಟ್ ವರ್ಕ್‌ ಆಗುತ್ತಿಲ್ಲ

ವೆಬ್‌ಸೈಟ್ ವರ್ಕ್‌ ಆಗುತ್ತಿಲ್ಲ

70,000 ಫ್ರೀಡಮ್ 251 ಸ್ಮಾರ್ಟ್‌ಫೋನ್‌ಗಳನ್ನು ಡೆಲಿವರಿಯನ್ನು ಹಲವು ರಾಜ್ಯಗಳಲ್ಲಿ ಮಾಡಿದ್ದರೂ ಸಹ, ಪ್ರಸ್ತುತದಲ್ಲಿ ಕಂಪನಿಯ ಅಧಿಕೃತ ವೆಬ್‌ಸೈಟ್ ವರ್ಕ್‌ ಆಗುತ್ತಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Freedom 251 Maker Ringing Bells Refutes Reports of Shutting Down. To know about this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X