ಆಪಲ್ ಅಭಿಮಾನಿಗಳಿಗೆ ಸಿಹಿಸುದ್ದಿ!..ಐಫೋನ್ ಎಸ್‌5 ಬೆಲೆ ಭಾರಿ ಇಳಿಕೆ!!

ಆಪಲ್ ಕಂಪೆನಿ ಸ್ಮಾರ್ಟ್‌ಫೋನ್ ದರಗಳು ಇನ್ನು ಕೇವಲ 15 ಸಾವಿರ ರೂಪಾಯಿಗಳಿಂದ ಶುರುವಾಗಲಿದೆ ಎಂದು ಪ್ರಮುಖ ಇಂಗ್ಲೀಷ್ ಪತ್ರಿಕೆ ಎಕನಾಮಿಕ್ಸ್ ಟೈಮ್ಸ್ ವರದಿಮಾಡಿದೆ.!!

|

ಅಂತರಾಷ್ಟ್ರೀಯ ಸ್ಮಾರ್ಟ್‌ಫೋನ್ ದಿಗ್ಗಜ ಆಪಲ್ ಇದೀಗ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲು ಪ್ರಯತ್ನಿಸುತ್ತಿದೆ.! ಅದಕ್ಕಾಗಿ ಭಾರತದ ಮಿಡ್‌ರೇಂಜ್ ಸ್ಮಾರ್ಟ್‌ಫೋನ್‌ಗಳ ವಿರುದ್ದ ಆಪಲ್ ದರಸಮರ ಸಾರಿದ್ದು ಇದೀಗ ಆಪಲ್ ಕಂಪೆನಿ ಸ್ಮಾರ್ಟ್‌ಫೋನ್‌ಗಳ ಮೆಲೆ ಬೆಲೆ ಇಳಿಕೆಯಾಗುತ್ತದೆ.!!

ಹೌದು, ಭಾರತದಲ್ಲಿ ಒಂದು ವರ್ಗದ ಗ್ರಾಹಕರನ್ನು ಮಾತ್ರ ಹೊಂದಿದ್ದ ಆಪಲ್ ಇದೀಗ ಭಾರತದ ಮಧ್ಯಮ ವರ್ಗದವರನ್ನು ಸೆಳೆಯಲು ಮುಂದಾಗಿದೆ. ಹಾಗಾಗಿ, ಆಪಲ್ ಕಂಪೆನಿ ಸ್ಮಾರ್ಟ್‌ಫೋನ್ ದರಗಳು ಇನ್ನು ಕೇವಲ 15 ಸಾವಿರ ರೂಪಾಯಿಗಳಿಂದ ಶುರುವಾಗಲಿದೆ ಎಂದು ಪ್ರಮುಖ ಇಂಗ್ಲೀಷ್ ಪತ್ರಿಕೆ ಎಕನಾಮಿಕ್ಸ್ ಟೈಮ್ಸ್ ವರದಿಮಾಡಿದೆ.!!

ಐಫೋನ್ ಎಸ್‌5 ಬೆಲೆ ಇನ್ನೇನು ಕೆಲವೇ ದಿವಸಗಳಲ್ಲಿ 15 ಸಾವಿರ ರೂಪಾಯಿಗಳಿಗಿಂತ ಕಡಿಮೆಯಾಗುತ್ತದೆ ಎಂದು ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದ್ದು, ಮಾರುಕಟ್ಟೆಯಲ್ಲಿ ಐಫೋನ್ ಬೆಲೆ ಇಳಿಕೆ ಮಾಡುವುದಾಗಿ ಆಪಲ್ ಹೇಳಿರುವುದನ್ನು ಉಲ್ಲೇಕಿಸಿದೆ.!! ಹಾಗಾದರೆ, 15 ಸಾವಿರ ರೂ.ಗಿಂತ ಕಡಿಮೆ ಬೆಲೆಯನ್ನು ಹೊಂದುತ್ತಿರುವ ಆಪಲ್ ಐಫೋನ್ ಎಸ್‌5 ಫೀಚರ್ಸ್ ಹೇಗಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಪ್ರಸ್ತುತ ಬೆಲೆ ರೂ 23,999!!

ಪ್ರಸ್ತುತ ಬೆಲೆ ರೂ 23,999!!

ಮಾರುಕಟ್ಟೆಯಲ್ಲಿ ಐಫೋನ್ 5ಎಸ್ ಪ್ರಸ್ತುತ ಬೆಲೆ ರೂ 23,999 ಆಗಿದೆ. ಆದರೆ, ಒಪ್ಪೋ, ಶಿಯೋಮಿಯಂತಹ ಕಂಪೆನಿಗಳಿಗೆ ಸೆಡ್ಡು ಹೊಡೆಯಲು ಐಫೋನ್ 5ಎಸ್ ಸ್ಮಾರ್ಟ್‌ಫೋನ್ ಬೆಲೆಯನ್ನು ಇಳಿಸಲಾಗುತ್ತಿದೆ.!!

4 ಇಂಚ್ ಡಿಸ್‌ಪ್ಲೇ!!

4 ಇಂಚ್ ಡಿಸ್‌ಪ್ಲೇ!!

ಐಫೋನ್ 5ಎಸ್ 4 ಇಂಚಿನ ಐಪಿಎಸ್‌ ಸ್ಕ್ರೀನ್‌‌(1136x640 ಪಿಕ್ಸೆಲ್‌,326 ಪಿಪಿಐ) ಹೊಂದಿದ್ದು, ಆಪಲ್ ಕಂಪೆನಿಯ ನೂತನ ಫೋನ್‌ಗಳಿಗಿಂತ ಕಡಿಮೆ ಅಗಲದ ಡಿಸ್‌ಪ್ಲೇ ಹೊಂದಿದೆ.!!

ಪ್ರೊಸೆಸರ್ ಮತ್ತು ರ್ಯಾಮ್?

ಪ್ರೊಸೆಸರ್ ಮತ್ತು ರ್ಯಾಮ್?

ಆಪಲ್‌ ಐಫೋನ್ 5ಎಸ್ 1.3GHz ಡ್ಯುಯಲ್‌ ಕೋರ್‌ ಎ7 ಚಿಪ್‌ಸೆಟ್‌ ಹೊಂದಿದೆ. ಮತ್ತು ,1ಜಿಬಿ ರ್ಯಾಮ್ ಒಳಗೊಂಡಿದ್ದು, ಇದೀಗ ಮಧ್ಯಮ ಬಲೆಯ ಸ್ಮಾರ್ಟ್‌ಫೋನ್‌ಗಳ ಮಧ್ಯೆ ಪೈಪೋಟಿಗೆ ನಿಲ್ಲುತ್ತಿದೆ.! 16/32/ 64 ಜಿಬಿ ಆಂತರಿಕ ಮೆಮೊರಿ ಹೊಂದಿದ್ದು, ಹೆಚ್ಚುವರಿ ಮೆಮೊರಿಗೆ ಎಸ್‌ಡಿ ಕಾರ್ಡ್ ಸ್ಲಾಟ್‌‌ ಇಲ್ಲ

ಕ್ಯಾಮೆರಾ!!

ಕ್ಯಾಮೆರಾ!!

ಆಪಲ್‌ ಐಫೋನ್ 5ಎಸ್ 1.2 ಎಂಪಿ ಸೆಲ್ಫಿ ಕ್ಯಾಮೆರಾ ಹಾಗೂ 8MP ರಿಯರ್ ಕ್ಯಾಮೆರಾ ಹೊಂದಿದೆ. ಒಟ್ಟಿನಲ್ಲಿ ಆಪಲ್ ಕಂಪೆನಿ ಹೆಸರು ಬಿಟ್ಟರೆ ಇನ್ನೇನು ಹೇಳಿಕೊಳ್ಳುವಂತಹ ಫೀಚರ್ಸ್ ಆಪಲ್‌ ಐಫೋನ್ 5ಎಸ್ನಲ್ಲಿಲ್ಲ.!!

Best Mobiles in India

English summary
Apple Inc likely to slash online price to expand loyalty base in India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X