ಕ್ರೋಮ್‌ ಓಎಸ್ ಹ್ಯಾಕ್‌ ಮಾಡಿ ಬಹುಮಾನ ಗೆಲ್ಲಿ!

By Ashwath
|

ಇಂಟರ್‌ನೆಟ್‌ ದೈತ್ಯ ಗೂಗಲ್‌ ತನ್ನ ಕ್ರೋಮ್‌ ಆಪರೇಟಿಂಗ್‌ ಸಿಸ್ಟಂ ಸುರಕ್ಷತೆಗಾಗಿ ಮತ್ತು ಪ್ರಚಾರಕ್ಕಾಗಿ ಹ್ಯಾಕಿಂಗ್‌ ಸ್ಪರ್ಧೆ‌ಯನ್ನು ಆಯೋಜಿಸಿದೆ. ಓಎಸ್‌ನ್ನು ಹ್ಯಾಕ್‌‌ ಮಾಡಿದ ಹ್ಯಾಕರ್‌ಗಳಿಗೆ ಲಕ್ಷ ಲಕ್ಷ ಡಾಲರ್‌ನ್ನು ಬಹುಮಾನ ನೀಡುವುದಾಗಿ ಗೂಗಲ್‌ ಪ್ರಕಟಿಸಿದೆ.

ಓಎಸ್‌ನ್ನು ಹ್ಯಾಕ್‌ ಮಾಡಿದ ಹ್ಯಾಕರ್‌ಗಳಿಗೆ ಗೂಗಲ್‌ 1.10 ಲಕ್ಷ ಡಾಲರ್‌ ಮತ್ತು1.50 ಲಕ್ಷ ಡಾಲರ್‌‌ ನಗದು ಹಣವನ್ನು ಗೂಗಲ್‌ ಘೋಷಿಸಿದೆ. ಇಷ್ಟೇ ಅಲ್ಲದೇ ಅತಿ ಹೆಚ್ಚು ಕ್ರೋಮ್‌ ಓಎಸ್‌‌ನಲ್ಲಿದ್ದ ತಪ್ಪು ಕೋಡ್‌ನ್ನು ಪತ್ತೆ ಹಚ್ಚಿದ ವ್ಯಕ್ತಿಗೆ ಎಚ್‌ಪಿ ಅಥವಾ ಏಸರ್‌ ಕ್ರೋಮ್‌ ಬುಕ್‌ ನೀಡುವುದಾಗಿ ಗೂಗಲ್‌ ಪ್ರಕಟಿಸಿದೆ.

 ಕ್ರೋಮ್‌ ಓಎಸ್ ಹ್ಯಾಕ್‌ ಮಾಡಿ ಬಹುಮಾನ ಗೆಲ್ಲಿ!

ಈ ಸ್ಪರ್ಧೆ‌‌ ಮಾರ್ಚ್‌ 12 ಒಂದೇ ದಿನ ನಡೆಯಲಿದ್ದು, ಹ್ಯಾಕರ್‌ಗಳು ಅದೇ ದಿನ ಕ್ರೋಮ್‌ ಓಸ್‌ನಲ್ಲಿದ್ದ ತಪ್ಪು ಕೋಡ್‌‌‌ನ್ನು ಕಳುಹಿಸಬೇಕು.ಸ್ಪರ್ಧೆ‌ಯಲ್ಲಿ ಭಾಗವಹಿಸುವವರು ಮಾರ್ಚ್‌‌ 10 ರೊಳಗೆ ಹೆಸರು ನೊಂದಾಯಿಸಬೇಕು ಎಂದು ಗೂಗಲ್‌ ತನ್ನ chromium.org ಪೇಜ್‌ನಲ್ಲಿ ತಿಳಿಸಿದೆ.

ಫೇಸ್‌ಬುಕ್‌ ಗೂಗಲ್‌ ಸೇರಿದಂತೆ ಕೆಲವು ಟೆಕ್‌ ಕಂಪೆನಿಗಳು ತಮ್ಮ ಉತ್ಪನ್ನದ ಸುರಕ್ಷತೆಗಾಗಿ ಹ್ಯಾಕರ್‌ಗಳಿಗೆ ಪ್ರೋತ್ಸಾಹ ನೀಡುತ್ತಿವೆ. ಬ್ರೌಸರ್‌ ಅಥವಾ ವೆಬ್‌ಸೈಟ್‌ನ್ನು ಹ್ಯಾಕ್‌ ಮಾಡದೇ ಕಂಪೆನಿಗಳಿಗೆ ಹ್ಯಾಕರ್‌‌ಗಳು ಎರರ್‌ ಕೋಡ್‌ಗಳನ್ನು ತಿಳಿಸಿದ್ದಲ್ಲಿ,ಹ್ಯಾಕರ್‌ಗಳು ಕಳುಹಿಸಿದ ಮಾಹಿತಿ ಸರಿಯಾಗಿದ್ದಲ್ಲಿ ಕಂಪೆನಿಗಳು ಹ್ಯಾಕರ್‌ಗಳಿಗೆ ಬಹುಮಾನ ನೀಡುತ್ತವೆ.

ಈ ಹಿಂದೆ ಪ್ಯಾಲೆಸ್ಟೈನ್‌ ಹ್ಯಾಕರ್‌ ಒಬ್ಬ ಟೈಮ್‌ ಲೈನ್‌ನಲ್ಲಿದ್ದ ಎರರ್‌ ಬಗ್ಗೆ ಫೇಸ್‌ಬುಕ್‌ಗೆ ಮಾಹಿತಿ ತಿಳಿಸಿದ್ದ. ಫೇಸ್‌ಬುಕ್ಗೆ ಇವನ ಹ್ಯಾಕಿಂಗ್‌ ಮಾಹಿತಿಗೆ ಸರಿಯಾಗಿ ಪ್ರತಿಕ್ರಿಯಿಸದೇ ಬಹುಮಾನ ನೀಡದ್ದಕ್ಕಾಗಿ ಆ ಹ್ಯಾಕರ್‌ ಫೇಸ್‌ಬುಕ್‌ ಸಂಸ್ಥಾಪಕ ಜುಕರ್‌ಬರ್ಗ್‌ ಅಕೌಂಟನ್ನೇ ಹ್ಯಾಕ್‌ ಮಾಡಿದ್ದ.

ಇದನ್ನೂ ಓದಿ: ಜರ್ಮ‌ನಿಯ ಹ್ಯಾಕರ್‌ಗಳಿಂದ ಐಫೋನಿನ ಫಿಂಗರ್‌ಪ್ರಿಂಟ್ ತಂತ್ರಜ್ಞಾನ ಹ್ಯಾಕ್‌

ಇದನ್ನೂ ಓದಿ: ಗೂಗಲ್ ನ್ಯೂಸ್‌ನಲ್ಲಿ ಕನ್ನಡ ಬೇಕು ಗೂಗಲ್‌ನ್ನು ಕೇಳಿ!

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X