ಇಂಟರ್‌ನೆಟ್‌ನತ್ತ ಮಹಿಳೆಯರನ್ನು ಆಕರ್ಷಿಸಲು ಗೂಗಲ್‌‌ ಯೋಜನೆ

By Ashwath
|

ಭಾರತದಲ್ಲಿ ಮಹಿಳಾ ಇಂಟರ್‌ನೆಟ್‌ ಬಳಕೆದಾರರ ಸಂಖ್ಯೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಇಂಟರ್‌ನೆಟ್‌ನತ್ತ ಮಹಿಳೆಯರನ್ನು ಆಕರ್ಷಿಸಲು ಗೂಗಲ್‌ ಹೊಸ ಪ್ರಚಾರ ಕಾರ್ಯವನ್ನು ಆರಂಭಿಸಿದೆ.

ವಿಶ್ವದ ಇಂಟರ್‌ನೆಟ್‌ ಬಳಸುವ ದೇಶಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದ್ದು,20 ಕೋಟಿ ಜನ ಇಂಟರ್‌ನೆಟ್‌‌ ಬಳಸುತ್ತಿದ್ದಾರೆ. 2014ರ ವೇಳೆಗೆ ಈ ಸಂಖ್ಯೆ 24.3 ಕೋಟಿಗೆ ತಲುಪುವ ಸಾಧ್ಯತೆ ಇದ್ದು ಅಮೆರಿಕವನ್ನು ಸೋಲಿಸಿ ಎರಡನೇ ಸ್ಥಾನವನ್ನು ಭಾರತ ಪಡೆಯಬಹುದು ಎಂದು ಅಧ್ಯಯನಗಳು ತಿಳಿಸಿದೆ.

ಭಾರತದಲ್ಲಿ ಇಂಟರ್‌ನೆಟ್‌ ಬಳಸುವ ಮಂದಿ ಹೆಚ್ಚಾಗುತ್ತಿದ್ದರೂ ಇಂಟರ್‌ನೆಟ್‌ ಬಳಸುವ ಮಹಿಳೆಯರ ಸಂಖ್ಯೆ ಕಡಿಮೆಯಿದೆ. ಪ್ರಸ್ತುತ ದೇಶದ ಆರು ಕೋಟಿ ಮಹಿಳೆಯರು ಮಾತ್ರ ಇಂಟರ್‌ನೆಟ್‌ ಬಳಸುತ್ತಿದ್ದಾರೆ. ಈ ಸಂಖ್ಯೆಯನ್ನು ಹೆಚ್ಚಿಸಲು ಗೂಗಲ್‌ ಮಹಿಳೆಯರಿಗಾಗಿ ವೆಬ್‌ಸೈಟ್‌ ಮತ್ತು ಸಹಾಯವಾಣಿಯನ್ನು ಆರಂಭಿಸಿದೆ.

ಇಂಟರ್‌ನೆಟ್‌ನತ್ತ ಮಹಿಳೆಯರನ್ನು ಆಕರ್ಷಿಸಲು ಗೂಗಲ್‌‌ ಯೋಜನೆ

ಇಂದಿನ ದಿನದಲ್ಲಿ ಮಹಿಳೆಯ ಸರ್ವಾಂಗೀಣ ಅಭಿವೃದ್ಧಿಗೆ ಇಂಟರ್‌ನೆಟ್‌ ಅಗತ್ಯವಾಗಿರುವುದರಿಂದ,ಗೂಗಲ್‌ ಮುಂದಿನ ವರ್ಷ ಹೊಸದಾಗಿ 5 ಕೋಟಿ ಮಹಿಳೆಯರನ್ನು ಡಿಜಿಟಲ್‌ ಲೋಕಕ್ಕೆ ಸೇರಿಸುವ ಗುರಿಯನ್ನು ಇಟ್ಟುಕೊಂಡಿದೆ.

ಈ ಸಂಬಂಧ ಗೂಗಲ್‌ ಜೊತೆಗೆ ಎಚ್‌ಯುಎಲ್‌(HUL),ಆಕ್ಸಿಸ್‌ ಬ್ಯಾಂಕ್‌,ಇಂಟೆ‌ಲ್‌ ಕೈ ಜೋಡಿಸಿದೆ. ಗೂಗಲ್‌ ಮಹಿಳೆಯರಿಗಾಗಿ ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಿರುವ www.hwgo.com ಪ್ರತ್ಯೇಕ ವೆಬ್‌ಸೈಟ್‌ ಆರಂಭಿಸಿದ್ದು, ಸುರಕ್ಷಿತವಾಗಿ ಇಂಟರ್‌ನೆಟ್‌ ಬಳಸುವ ವಿಧಾನ, ಮಕ್ಕಳ ರಕ್ಷಣೆ, ಸೌಂದರ್ಯ, ಹಣಕಾಸು ಮತ್ತಿತ್ತರ ವಿಚಾರಕ್ಕೆ ಸಂಬಂಧಿಸಿದಂತೆ ಸಲಹೆ ನೀಡುವ ಲೇಖನಗಳು ಈ ವೆಬ್‌ಸೈಟ್‌ನಲ್ಲಿದೆ.

ಅಷ್ಟೇ ಅಲ್ಲದೇ ಉಚಿತ ಹೆಲ್ಪ್‌ಲೈನ್‌ ಆರಂಭಿಸಿದ್ದು,1800 41 999 77 ನಂಬರ್‌ಗೆ ಕರೆ ಮಾಡುವ ಮೂಲಕ ಮಹಿಳೆಯರು ಇಂಟರ್‌ನೆಟ್‌ ಬಳಕೆಗೆ ಸಂಬಂಧಿಸಿದ ಪ್ರಶ್ನೆಗೆ ಕೇಳಿ ಉತ್ತರ ಪಡೆಯಬಹುದು ಎಂದು ಗೂಗಲ್‌ ಹೇಳಿದೆ.

ಇದನ್ನೂ ಓದಿ: ಬಲೂನಿಂದ ಇಂಟರ್‌ನೆಟ್‌: ಅಂತಿಮ ಹಂತದಲ್ಲಿ ಗೂಗಲ್‌ ಸಂಶೋಧನೆ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X