ಗೂಗಲ್ ನೌ ಲಾಂಚರ್ ಶೀಘ್ರವೇ ಸ್ಥಗಿತಗೊಳ್ಳಲಿದೆ....!

ಶೀಘ್ರವೇ ಗೂಗಲ್ ನೌ ಲಾಂಚರ್ ಅನ್ನು ಸ್ಥಗಿತಗೊಳಿಸಲಿದೆ. ಮಾರ್ಚ್‌ 1 ರಿಂದ ಗೂಗಲ್ ನೌ ಲಾಂಚರ್ ಬಳಸುತ್ತಿರುವವರು ಶೀಘ್ರವೇ ಬೇರೆ ಲಾಂಚರ್ ಬಳಸುವಂತೆ ತಿಳಿಸಲಾಗಿದೆ.

|

ಸ್ಮಾರ್ಟ್‌ಪೋನ್‌ ಮತ್ತು ಟ್ಯಾಬ್ಲೆಟ್ ಬಳಕೆದಾರರ ಬಹು ಮೆಚ್ಚುಗೆಗಳಿಸಿದ 'ಗೂಗಲ್ ನೌ ಲಾಂಚರ್' ಇನ್ನು ಕೆಲವೇ ದಿನಗಳಲ್ಲಿ ಕಾರ್ಯ ನಿಲ್ಲಿಸಲಿದೆ. ಈ ಕುರಿತು ಗೂಗಲ್ ಕಡೆಯಿಂದ ಅಧಿಕೃತ ಮಾಹಿತಿ ಹೊರ ಬಂದಿದ್ದು, ಈ ವರ್ಷದ ಮಾರ್ಚ್ ಅಂತ್ಯದ ವೇಳೆಗೆ ಗೂಗಲ್ ಪ್ಲೇ ಸ್ಟೋರಿನಿಂದ ಗೂಗಲ್ ಲಾಂಚರ್ ತೆಗೆಯಲಾಗುವುದು ಎನ್ನಲಾಗಿದೆ.

ಗೂಗಲ್ ನೌ ಲಾಂಚರ್ ಶೀಘ್ರವೇ ಸ್ಥಗಿತಗೊಳ್ಳಲಿದೆ....!

ಓದಿರಿ: ಹೆದರಬೇಡಿ..! ಜಿಯೋ ಉಚಿತ ಕೊಡುಗೆ ಕೊನೆಯಾಗುವುದಿಲ್ಲ, ಟ್ರಾಯ್‌ ಕೊಟ್ಟಿದೆ ಗ್ರೀನ್‌ ಸಿಗ್ನಲ್

ಶೀಘ್ರವೇ ಗೂಗಲ್ ನೌ ಲಾಂಚರ್ ಅನ್ನು ಸ್ಥಗಿತಗೊಳಿಸಲಿದೆ. ಮಾರ್ಚ್‌ 1 ರಿಂದ ಗೂಗಲ್ ನೌ ಲಾಂಚರ್ ಬಳಸುತ್ತಿರುವವರು ಶೀಘ್ರವೇ ಬೇರೆ ಲಾಂಚರ್ ಬಳಸುವಂತೆ ತಿಳಿಸಲಾಗಿದ್ದು, ಇಲ್ಲವಾದರೆ ಗೂಗಲ್ ಸರ್ಚ್ ಅನ್ನು ಅಪ್ಡೇಟ್ ಮಾಡಿಕೊಳ್ಳುವಂತೆ ಮನವಿ ನೀಡಲಾಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಅನೇಕ ಲಾಂಚರ್‌ಗಳು ಲಭ್ಯವಿದ್ದು, ಈಗಾಗಲೇ ಥರ್ಡ್ ಪಾರ್ಟಿ ಆಂಡ್ರಾಯ್ಡ್ ಡಿವೈಸ್‌ಗಳು ಗೂಗಲ್ ನೌ ಲಾಂಚರ್‌ಗಳನ್ನು ಬಳಸುತ್ತಿಲ್ಲ ಬದಲಿಗೆ ಬೇರೆ ಬೇರೆ ಲಾಂಚರ್‌ಗಳನ್ನು ಬಳಸುತ್ತಿದ್ದಾರೆ. ಆ ಹಿನ್ನಲೆಯಲ್ಲಿ ಗೂಗಲ್ ನೌ ಅವಶ್ಯಕತೆ ಇಲ್ಲ ಎಂದು ತೀರ್ಮಾನಿಸಿ ಈ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತಿದೆ.

ಗೂಗಲ್ ನೌ ಲಾಂಚರ್ ಶೀಘ್ರವೇ ಸ್ಥಗಿತಗೊಳ್ಳಲಿದೆ....!

ಓದಿರಿ: ವಾಟ್ಸಪ್‌ನಲ್ಲಿ ಕಳುಹಿಸಿದ್ದ ಮೇಸೆಜ್ ಡಿಲೀಟ್-ಎಡಿಟ್ ಮಾಡುವುದು ಹೇಗೆ..?

2014 ಫೆಬ್ರವರಿಯಲ್ಲಿ ಗೂಗಲ್ ಲಾಂಚರ್ ಬಿಡುಗಡೆಗೊಂಡಿತ್ತು. ಮೊದಲು ಅನೇಕ ಜನರು ಈ ಲಾಂಚರ್ ಅನ್ನು ಬಳಸುತ್ತಿದ್ದರು, ಆದರೆ ದಿನ ಕಳೆದಂತೆ ಇದರ ಜನಪ್ರಿಯತೆಯನ್ನು ಕಳೆದುಕೊಂಡಿತ್ತು. ಇದಲ್ಲದೇ ಗೂಗಲ್ ಹೊಸ ಪಿಕ್ಸಲ್ ಪೋನು ಬಿಡುಗಡೆಗೊಂಡ ನಂತರ ಹೊಸದಾಗಿ ಪಿಕ್ಸಲ್ ಲಾಂಚರ್ ಅನ್ನು ಬಿಡುಗಡೆಗೊಳಿಸಿತ್ತು. ಈ ಹಿನ್ನಲೆಯಲ್ಲಿ ಗೂಗಲ್ ನೌ ಲಾಂಚರ್ ಸೇವೆಯನ್ನು ನಿಲ್ಲಿಸಲಾಗುತ್ತಿದೆ.

Best Mobiles in India

Read more about:
English summary
Google is planning to kill off its Now launcher. The memo reveals that the launcher will no longer be available on Play Store after Q1 2017. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X