ಗೂಗಲ್‌ ಪ್ರೊಜೆಕ್ಟ್‌ ಎರಾ:ಬೇಕಾದ ಭಾಗ ಹಾಕಿ ಸ್ಮಾರ್ಟ್‌ಫೋನ್‌ ನಿರ್ಮಿಸಿ

By Ashwath
|

ಮಾರುಕಟ್ಟೆಗೆ ಪ್ರತಿದಿನ ಹೊಸ ಹೊಸ ಸ್ಮಾರ್ಟ್‌‌ಫೋನ್‌ ಬಿಡುಗಡೆಯಾಗುತ್ತಿರುತ್ತದೆ. ಈ ಹೊಸ ಸ್ಮಾರ್ಟ್‌‌‌ಫೋನ್‌ ಖರೀದಿಸಿದರೂ ಕೆಲ ದಿನಗಳಲ್ಲಿ ಈ ಸ್ಮಾರ್ಟ್‌ಫೋನ್‌ ಹಳೇಯದಾಗುತ್ತದೆ. ಆದರೆ ಮುಂದಿನ ದಿನಗಳಲ್ಲಿ ನಿಮ್ಮ ಸ್ಮಾರ್ಟ್‌‌ಫೋನ್‌ನ್ನು ಯಾವಾಗಲೂ ಹೊಸ ಸ್ಮಾರ್ಟ್‌ಫೋನ್‌ನಂತೆ ಮಾಡಬಹುದು.!

ಹೌದು. ಸ್ಮಾರ್ಟ್‌ಫೋನಲ್ಲಿ ನಿಮಗೆ ಬೇಡವಾದ ಹಾರ್ಡ್‌ವೇರ್‌ ಭಾಗಗಳನ್ನು ನೀವೇ ಬದಲಾಯಿಸಿ ಹೊಸ ಮಾದರಿಯನ್ನು ಅಳವಡಿಸುವ ಯೋಜನೆ ಇದು. ಈ ಹೊಸ ಯೋಜನೆಯ ಸ್ಮಾರ್ಟ್‌‌ಫೋನ್‌ನ್ನು ಬಿಡುಗಡೆ ಮಾಡಲು ಮುಂದಾಗುತ್ತಿರುವ ಮೊದಲ ಕಂಪೆನಿ ಗೂಗಲ್‌. ಟೆಕ್‌ ದಿಗ್ಗಜ ಗೂಗಲ್‌ 'ಪ್ರೊಜೆಕ್ಟ್‌ ಎರಾ' ಎನ್ನುವ ಗ್ರಾಹಕರ ಕಲ್ಪನೆಯ ಸ್ಮಾರ್ಟ್‌‌ಫೋನ್‌ ಯೋಜನೆ ರೂಪಿಸಿದ್ದು, ಬಳಕೆದಾರರು ತಮಗೆ ಬೇಕಾದ ಅಳತೆಯ ಸ್ಕ್ರೀನ್‌‌,ಕ್ಯಾಮೆರಾ,ಪ್ರೊಸೆಸರ್‌, ಸೆನ್ಸರ್‌‌,ಬ್ಯಾಟರಿಯನ್ನು ಹಾಕಿ ಸ್ಮಾರ್ಟ್‌‌ಫೋನ್‌ ನಿರ್ಮಿಸಬಹುದಾಗಿದೆ.

ಇಲ್ಲಿಯವರೆಗೆ ಸ್ಮಾರ್ಟ್‌ಫೋನ್‌ ತಯಾರಕಾ ಕಂಪೆನಿ ಒಂದು ಸ್ಮಾರ್ಟ್‌‌ಫೋನ್‌ ತಯಾರಿಸಿದ್ದರೆ, ಆ ಸ್ಮಾರ್ಟ್‌ಫೋನಿನ ಒಳಗಡೆ ಇರುವ ಭಾಗಗಳನ್ನು ಬದಲಾಯಿಸಲು ಸಾಧ್ಯವಿರಲಿಲ್ಲ. ಆದರೆ ಈ ಹೊಸ ಯೋಜನೆಯಲ್ಲಿ ವಿವಿಧ ಕಂಪೆನಿಗಳ ಸ್ಮಾರ್ಟ್‌ಫೋನ್‌‌ಗಳಲ್ಲಿ ಇಷ್ಟವಾದ ಭಾಗಗಗಳನ್ನು ಖರೀದಿಸಿ ನಿಮ್ಮದೇ ಕಲ್ಪನೆಯ ಸ್ಮಾರ್ಟ್‌‌ಫೋನ್‌‌‌‌ ರೂಪಿಸಬಹುದಾಗಿದೆ.

ಇದನ್ನೂ ಓದಿ:ಗೂಗಲ್ ನ್ಯೂಸ್‌ನಲ್ಲಿ ಕನ್ನಡ ಬೇಕು ಎಂದು ಗೂಗಲ್‌ನ್ನು ಕೇಳಿ

ಬೇಕಾದ ಭಾಗ ಹಾಕಿ ಸ್ಮಾರ್ಟ್‌ಫೋನ್‌ ನಿರ್ಮಿಸಿ

ಬೇಕಾದ ಭಾಗ ಹಾಕಿ ಸ್ಮಾರ್ಟ್‌ಫೋನ್‌ ನಿರ್ಮಿಸಿ


ಈ ಹೊಸ ರೀತಿಯ ಸ್ಮಾರ್ಟ್‌ಫೋನ್‌ ಕಲ್ಪನೆಯನ್ನು ವಿಶ್ವಕ್ಕೆ ಪರಿಚಯಿಸಿದ್ದು ಫೋನ್‌‌ಬ್ಲಾಕ್‌ ಕಂಪೆನಿ. ಈ ಕಂಪೆನಿಯ ವಿನೂತನ ಸ್ಮಾರ್ಟ್‌‌ಫೋನ್‌ ನಿರ್ಮಾಣದ ಯೋಜನೆ ಗೂಗಲ್‌ಗೆ ಮೆಚ್ಚುಗೆಯಾಗಿ 2013 ಅಕ್ಟೋಬರ್‌ನಿಂದ ಈ ಕಂಪೆನಿಯ ಸಹಯೋಗದೊಂದಿಗೆ ಪ್ರೊಜೆಕ್ಟ್‌ ಎರಾ ಸ್ಮಾರ್ಟ್‌ಫೋನ್‌ನ್ನು ನಿರ್ಮಾಣ ಮಾಡುತ್ತಿದೆ.

ಬೇಕಾದ ಭಾಗ ಹಾಕಿ ಸ್ಮಾರ್ಟ್‌ಫೋನ್‌ ನಿರ್ಮಿಸಿ

ಬೇಕಾದ ಭಾಗ ಹಾಕಿ ಸ್ಮಾರ್ಟ್‌ಫೋನ್‌ ನಿರ್ಮಿಸಿ


ಮೋಟರೋಲಾವನ್ನು ಚೀನಾದ ಲೆನೊವೊಗೆ ಕಂಪೆನಿಗೆ ಗೂಗಲ್‌ ಮಾರಾಟ ಮಾಡಿದ್ದರೂ,ಮೋಟರೋಲಾದ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗ (Research and Development Department) ಇನ್ನೂ ಗೂಗಲ್‌ ಹಿಡಿತದಲ್ಲಿದೆ.ಈ ವಿಭಾಗದ ಸಂಶೋಧಕರು ಈ ಸ್ಮಾರ್ಟ್‌‌ಫೋನ್‌ ನಿರ್ಮಾಣದಲ್ಲಿ ತೊಡಗಿದ್ದಾರೆ.

ಬೇಕಾದ ಭಾಗ ಹಾಕಿ ಸ್ಮಾರ್ಟ್‌ಫೋನ್‌ ನಿರ್ಮಿಸಿ

ಬೇಕಾದ ಭಾಗ ಹಾಕಿ ಸ್ಮಾರ್ಟ್‌ಫೋನ್‌ ನಿರ್ಮಿಸಿ

ಸಂಶೋಧಕರು ಈ ಸ್ಮಾರ್ಟ್‌ಫೋನ್‌ ವಿವಿಧ ಮಾದರಿಗಳನ್ನು ಪರೀಕ್ಷಿಸಿದ್ದು,ಯೋಜನೆ ಅಂತಿಮ ಹಂತದಲ್ಲಿದೆ ಎಂದು ಮಧ್ಯಮಗಳು ವರದಿ ಮಾಡಿವೆ. ಈ ರೀತಿ ವಿನ್ಯಾಸದಲ್ಲಿ ಬಿಡುಗಡೆಯಾಗಲಿರುವ ಮೊದಲ ಸ್ಮಾರ್ಟ್‌‌ಫೋನ್‌ಗಳು 'ಗ್ರೇಫೋನ್‌' ಹೆಸರಿನಲ್ಲಿ ಮಾರುಕಟ್ಟೆಗೆ ಬರಲಿದೆ .

ಬೇಕಾದ ಭಾಗ ಹಾಕಿ ಸ್ಮಾರ್ಟ್‌ಫೋನ್‌ ನಿರ್ಮಿಸಿ

ಬೇಕಾದ ಭಾಗ ಹಾಕಿ ಸ್ಮಾರ್ಟ್‌ಫೋನ್‌ ನಿರ್ಮಿಸಿ


ಈ ಸ್ಮಾರ್ಟ್‌ಫೋನ್‌ಗಳು ಗೂಗಲ್‌ ಕಡಿಮೆ ಬೆಲೆಯನ್ನು ನಿಗದಿ ಪಡಿಸಲಿದ್ದು 50 ಡಾಲರ್‌( ಅಂದಾಜು 3 ಸಾವಿರ) ಬೆಲೆಯಲ್ಲಿ 2015 ಆರಂಭದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.

ಬೇಕಾದ ಭಾಗ ಹಾಕಿ ಸ್ಮಾರ್ಟ್‌ಫೋನ್‌ ನಿರ್ಮಿಸಿ


ಇದುವರೆಗೆ ಗೂಗಲ್‌ ಒಂದೇ ಈ ರೀತಿಯ ಸ್ಮಾರ್ಟ್‌ಫೋನ್‌ ನಿರ್ಮಾಣಕ್ಕೆ ಆಸಕ್ತಿ ತೋರಿಸಿದ್ದು ಉಳಿದ ಕಂಪೆನಿಗಳು ಈ ಸ್ಮಾರ್ಟ್‌ಫೋನಿನ ಸಾಧಕ ಬಾಧಕಗಳ ಬಗ್ಗೆ ಚರ್ಚೆ‌ ನಡೆಸುತ್ತಿವೆ.

ಬೇಕಾದ ಭಾಗ ಹಾಕಿ ಸ್ಮಾರ್ಟ್‌ಫೋನ್‌ ನಿರ್ಮಿಸಿ


ಸದ್ಯ ಸ್ಮಾರ್ಟ್‌ಫೋನ್‌‌ನಲ್ಲಿ ಏನಾದ್ರೂ ದೋಷ ಕಂಡು ಬಂದರೆ ಅದನ್ನು ರಿಪೇರಿ ಮಾಡಲು ಕಂಪೆನಿಯದ್ದೇ ಆದ ಸರ್ವಿಸ್‌ ಸೆಂಟರ್‌‌ಗಳಿವೆ. ಆದರೆ ಈ ಸ್ಮಾರ್ಟ್‌‌ಫೋನ್‌ಲ್ಲಿ ಎಲ್ಲಾ ಕಂಪೆನಿಗಳ ಒಂದೊಂದೆ ಭಾಗವನ್ನು ಹಾಕಿ ನಿರ್ಮಾ‌ಣ ಮಾಡುವುದರಿಂದಸ್ಮಾರ್ಟ್‌ಫೋನ್‌ ಹಾಳಾದ್ರೆ ಅದನ್ನು ರಿಪೇರಿ ಮಾಡುವುದು ಹೇಗೆ ಎನ್ನುವ ಗೊಂದಲವಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X