ಸ್ಟೇರಿಂಗ್ ಬ್ರೇಕ್ ಇಲ್ಲದ ಗೂಗಲ್ ಕಾರು ಕರಾಮತ್ತು

By Shwetha
|

ಗೂಗಲ್ ಹಲವಾರು ವರ್ಷಗಳಿಂದ ಸೆಲ್ಫ್ ಡ್ರೈವಿಂಗ್ ಕಾರ್ ಅನ್ನು ನಿರ್ಮಿಸುತ್ತಿದ್ದು ಅದಕ್ಕಾಗಿ ಹಲವರು ಪ್ರಯೋಗಗಳನ್ನು ಮಾಡುತ್ತಿದೆ. ಆದರೆ ತನ್ನ ಪ್ರಯೋಗದಲ್ಲಿ ಜಯಗಳಿಸಿರುವಂತಹ ಗೂಗಲ್ ಕೊನೆಗೂ ಸೆಲ್ಫ್ ಡ್ರೈವಿಂಗ್ ಕಾರನ್ನು ಹೊರತರುವಲ್ಲಿ ವಿಜಯಿಯಾಗಿದೆ.

ಗೂಗಲ್ ತಾನು ಹಾಗೂ ತನ್ನ ಪಾಲುದಾರರ ಜೊತೆಗೂಡಿ ಈ ಸೆಲ್ಫ್ ಡ್ರೈವಿಂಗ್ ಕಾರ್‌ ಅನ್ನು ನಿರ್ಮಿಸಿದೆ. ಕಸ್ಟಮ್ ರಚನೆಯಿರುವ ಈ ಸೆಲ್ಫ್ ಕಾರು ಚಲಾಯಿಸಲು ತುಂಬಾ ಸರಳವಾಗಿದೆ. ಈ ಕಾರು ಸ್ಟೀರಿಂಗ್ ವ್ಹೀಲ್ ಅನ್ನು ಹೊಂದಿಲ್ಲ ಎಕ್ಸಲೇಟರ್ ಅಥವಾ ಬ್ರೇಕ್ ಇಲ್ಲ. ಇದು ಹೆಚ್ಚಿನ ಸೆನ್ಸಾರ್‌ಗಳನ್ನು ಹೊಂದಿದ್ದು ಬೇರೆ ವಾಹನಗಳಿಗಿಂತ ಭಿನ್ನವಾಗಿದೆ.

ಸ್ಟೇರಿಂಗ್ ಬ್ರೇಕ್ ಇಲ್ಲದ ಗೂಗಲ್ ಕಾರು ಕರಾಮತ್ತು

ಕಾರಿನಲ್ಲಿ ದೊಡ್ಡದಾದ "ಸ್ಟಾಪ್" ಬಟನ್ ಇದ್ದು ಈ ಎಲ್ಲಾ ತಂತ್ರಜ್ಞಾನಗಳ ಮೂಲಕ ಇದೊಂದು ವಿಶಿಷ್ಟ ಸೆಲ್ಫ್ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗೂಗಲ್‌ನ ಈ ಸ್ವಯಂಚಾಲಿತ ಕಾರು ಆಂತರಿಕ ಪವರ್ ಅನ್ನು ಒಳಗೊಂಡಿದ್ದು ಸ್ಟೀರಿಂಗ್ ಹಾಗೂ ಪವರ್ ಬ್ರೇಕ್ಸ್ ಇದರ ಇನ್ನೊಂದು ವಿಶೇಷತೆಯಾಗಿದೆ. ಸೆನ್ಸಾರ್ ಮತ್ತು ಸಾಫ್ಟ್‌ವೇರ್ ಕಾರಿನ ಚಲಾವಣೆಯಲ್ಲಿ ಕೆಲಸ ಮಾಡುತ್ತವೆ ಎಂಬುದು ಕಾರಿಗಿರುವ ವಿಶೇಷತೆಯಾಗಿದೆ. ಬಟನ್ ಪುಶ್ ನೆರವಿನಿಂದ ನಿಮಗೆ ಎಲ್ಲಿ ಬೇಕೋ ಅಲ್ಲಿಗೆ ಈ ಕಾರಿನಲ್ಲಿ ಪ್ರಯಾಣಿಸಬಹುದಾಗಿದೆ.

ಸೆಲ್ಫ್ ಡ್ರೈವಿಂಗ್ ಕಾರು ಪ್ರೊಜೆಕ್ಟ್‌ನ ಡೈರೆಕ್ಟರ್ ಕ್ರಿಸ್ ಆರ್ಮ್‌ಸನ್ ಹೇಳುವ ಪ್ರಕಾರ, ಇಂತಹ ನೂರು ಪ್ರಕಾರದ ಕಾರುಗಳನ್ನು ಈ ಬೇಸಿಗೆಯ ನಂತರ ನಿರ್ಮಿಸುವ ಇರಾದೆ ಕಂಪೆನಿಗಿದ್ದು ರಸ್ತೆ ಸುರಕ್ಷತೆ ಮತ್ತು ಜನರಿಗೆ ನೆರವಾಗುವ ನಿಟ್ಟಿನಲ್ಲಿ ಕಾರನ್ನು ತಯಾರಿಸಲಾಗಿದೆ. ಹೆಚ್ಚು ಲಕ್ಸುರಿಯಲ್ಲದ ಈ ಕಾರಿಗೆ ಡ್ರೈವರ್ ಅಚಶ್ಯಕತೆಯಿಲ್ಲ, ಡ್ರೈವಿಂಗ್ ಬೇಕಾಗಿಲ್ಲ.

ಈಗಾಗಲೇ ಕಾರಿನ ಟೆಸ್ಟ್ ಡ್ರೈವ್ ಅನ್ನು ಕಂಪೆನಿಯ ಸಿಬ್ಬಂದಿಗಳು ನಡೆಸುತ್ತಿದ್ದು ಪ್ರಯೋಗದಲ್ಲಿ ಯಶಸ್ವಿಯಾದರೆ ವಿಶ್ವದಾದ್ಯಂತ ಈ ಕಾರನ್ನು ಹೊರತರುವ ಆಲೋಚನೆ ಕಂಪೆನಿಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X