ಆಧಾರ್, ಸ್ಮಾರ್ಟ್‌ಫೋನ್ ಮೂಲಕ ಹಣ ವ್ಯವಹಾರ!.. ರೆಡಿಯಾಗಿದೆ ಮೋದಿ ಪ್ಲಾನ್?

ಉತ್ಪಾದನೆಯಾಗಲಿರುವ ಎಲ್ಲಾ ಮೊಬೈಲ್‌ಗಳಿಗೂ ಇಂತಹ ಫೀಚರ್ ಅಳವಡಿಸುವ ಬಗ್ಗೆ ಕೇಳಿರುವುದಾಗಿ ನೀತಿ ಆಯೋಗದ ಕಾರ್ಯನಿರ್ವಹಕ ಅಧಿಕಾರಿ ಸಮೀತಾಬ್ ಹೇಳಿದ್ದಾರೆ.

|

ಕ್ಯಾಶ್‌ಲೆಸ್ ಸಮಾಜ ನಿರ್ಮಾಣ ಮಾಡಬೇಕು ಎಂದು ಹಲವು ಯೋಜನೆಗಳನ್ನು ಹಾಕಿಕೊಳ್ಳುತ್ತಿರುವ ಮೋದಿ ಸರ್ಕಾರ ಇದೀಗ ಇದಕ್ಕಾಗಿ ಆಧಾರ್ ಕಾರ್ಡ್ ನಂಬರ್ ಉಪಯೋಗಿಸಲು ಚಿಂತಿಸಿದೆ. ಈ ಮೂಲಕ ಕಾರ್ಡ್‌ ಮತ್ತು ಪಿನ್‌ಗಳ ಅವಶ್ಯಕತೆ ಇಲ್ಲದೆ ದೇಶದೆಲ್ಲಡೆ ಹಣ ಪಡೆಯುವ ವ್ಯವಸ್ಥೆ ಇನ್ನೇನು ಕೆಲವೇ ದಿವಸಗಳಲ್ಲಿ ಜಾರಿಗೆ ಬರಲಿದೆ ಎನ್ನಲಾಗಿದೆ. .

ಸ್ಮಾರ್ಟ್‌ಫೋನ್ ಹೊಂದಿರುವವರು ಆಧಾರ್ ನಂಬರ್ ದೃಡೀಕರಿಸಿ, ಹೆಬ್ಬೆರಳು ಮತ್ತು ಕಣ್ಣು ಗುರುತಿನ ಮೂಲಕ ಹಣದ ವ್ಯವಹಾರ ನಡೆಸಬಹುದು ಎಂದು ಯುಎಐಡಿಐ(unique identification authority of india)ನಿರ್ದೇಶಕ ಅಜಯ್ ಪಾಂಡೆ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ. ಈ ಮೂಲಕ ಇನ್ನು ಹಣವರ್ಗಾವಣೆ ,ಠೇವಣಿ ಮತ್ತು ಹಣ ಬಿಡಿಸುವುದನ್ನು ಆಧಾರ್ ಮೂಲಕವೆ ಮಾಡಬಹುದಾಗಿದೆ. ಮುಂದೆ ಓದಿ

ಆಧಾರ್, ಸ್ಮಾರ್ಟ್‌ಫೋನ್ ಮೂಲಕ ಹಣ ವ್ಯವಹಾರ!.. ರೆಡಿಯಾಗಿದೆ ಮೋದಿ ಪ್ಲಾನ್?

2017 ಕ್ಕೆ ಬರುತ್ತಿದೆ ನೋಕಿಯಾ ಆಂಡ್ರಾಯ್ಡ್ !? ಸ್ಮಾರ್ಟ್‌ಫೊನ್ ಫೀಚರ್ ಏನು? ಬೆಲೆ ಎಷ್ಟು?

ಆಧಾರ್ ಮೂಲಕ ಮೂಲಕ ಹಣದ ವಹಿವಾಟಿಗಾಗಿ ಎಲ್ಲಾ ಮೊಬೈಲ್ ಉತ್ಪಾದಕ ಕಂಪೆನಿಗಳೊಂದಿಗೆ ಮಾತನಾಡಿದ್ದು, ಇನ್ನು ಉತ್ಪಾದನೆಯಾಗಲಿರುವ ಎಲ್ಲಾ ಮೊಬೈಲ್‌ಗಳಿಗೂ ಇಂತಹ ಫೀಚರ್ ಅಳವಡಿಸುವ ಬಗ್ಗೆ ಕೇಳಿರುವುದಾಗಿ ನೀತಿ ಆಯೋಗದ ಕಾರ್ಯನಿರ್ವಹಕ ಅಧಿಕಾರಿ ಸಮೀತಾಬ್ ಹೇಳಿದ್ದಾರೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಧಾರ್, ಸ್ಮಾರ್ಟ್‌ಫೋನ್ ಮೂಲಕ ಹಣ ವ್ಯವಹಾರ!.. ರೆಡಿಯಾಗಿದೆ ಮೋದಿ ಪ್ಲಾನ್?

ಇನ್ನು ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಆಪ್ ಒಂದನ್ನು ತಯಾರಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಆಪ್ ಮೂಲಕ ವ್ಯಕ್ತಿಯೋರ್ವರ ಎಲ್ಲಾ ಹಣ ವ್ಯವಹಾರವನ್ನು ಒಂದೇ ಕಡೆ ನಡೆಸಬಹುದು ಎನ್ನಲಾಗಿದೆ.

ಆಧಾರ್, ಸ್ಮಾರ್ಟ್‌ಫೋನ್ ಮೂಲಕ ಹಣ ವ್ಯವಹಾರ!.. ರೆಡಿಯಾಗಿದೆ ಮೋದಿ ಪ್ಲಾನ್?

ಈಗಾಗಲೆ ದೇಶದಲ್ಲಿ 93 ರಷ್ಟು ವಯಸ್ಕರು ಆಧಾರ್ ನಂಬರ್ ಪಡೆದಿದ್ದಾರೆ ಎಂದು ಯುಎಐಡಿಐ ತಿಳಿಸಿದ್ದು, ಆಧಾರ್‌ ಯೋಜನೆ ಶೀಘ್ರದಲ್ಲಿಯೇ ಜಾರಿಯಾಗಬಹುದು. ಇದು ಕೂಡ ಮೋದಿ ಕಪ್ಪುಹಣವನ್ನು ತಡೆಗಟ್ಟುವ ಪ್ಲಾನ್ ಆಗಿರಬಹುದು!!

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Aadhaar number enabled transactions are card-less and pin-less.to know more visit to kannda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X