ಜಿಯೋ ಸಿಮ್: ಅನುಕೂಲ ಮತ್ತು ಅನಾನುಕೂಲಗಳು

ಇಂದಿನ ಲೇಖನದಲ್ಲಿ ಜಿಯೋದಿಂದ ಉಂಟಾಗುವ ಲಾಭ ಮತ್ತು ನಷ್ಟಗಳ ಅವಲೋಕವನ್ನು ಮಾಡೋಣ.

Written By:

ಜಿಯೋ ಸಿಮ್ ಕಾರ್ಡ್‌ನ ಆಕ್ಟಿವೇಶನ್‌ನಲ್ಲಿ ಹೆಚ್ಚಿನ ಬಳಕೆದಾರರು ತೊಂದರೆಗಳನ್ನು ಅನುಭವಿಸುತ್ತಿದ್ದು ಇನ್ನು ಕೆಲವರು ಸಿಮ್ ಅನ್ನು ಪಡೆದುಕೊಳ್ಳುವಲ್ಲಿ ಅಸಮರ್ಥರಾಗುತ್ತಿದ್ದಾರೆ. ಇನ್ನೊಂದು ಸುದ್ದಿಯ ಪ್ರಕಾರ ಕಂಪೆನಿಯು ಸಿಮ್ ಇಶ್ಯೂ ಮಾಡುವುದನ್ನು ನಿಲ್ಲಿಸಿದೆ ಎಂಬ ಮಾಹಿತಿ ಕೂಡ ಇದೆ.

ಓದಿರಿ: ರಿಲಾಯ್ಸ್ ಜಿಯೋ:ಸತ್ಯ ಮತ್ತು ಮಿಥ್ಯಗಳ ಅವಲೋಕನ

ಪ್ರಿವ್ಯೂ ಆಫರ್‌ನಲ್ಲಿ ದೊರೆಯುತ್ತಿದ್ದ ಡೇಟಾ ಸ್ಪೀಡ್ ಈಗ ದೊರೆಯುತ್ತಿಲ್ಲ ಎಂಬುದು ಇನ್ನು ಕೆಲವು ಬಳಕೆದಾರರ ಗೋಳಾದರೆ, ಇನ್ನು ಕೆಲವರು ಬೇರೆ ಮತ್ತಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಇಂದಿನ ಲೇಖನದಲ್ಲಿ ಜಿಯೋದಿಂದ ಉಂಟಾಗುವ ಲಾಭ ಮತ್ತು ನಷ್ಟಗಳ ಅವಲೋಕವನ್ನು ಮಾಡೋಣ.

ಓದಿರಿ: ಜಿಯೋ ಸಿಮ್ ಕುರಿತ ಸಕಲ ಗೊಂದಲಗಳಿಗೆ ಇಲ್ಲಿದೆ ಉತ್ತರ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಎಲ್‌ಟಿಇ ಮಾತ್ರ ನೆಟ್‌ವರ್ಕ್: ಪ್ರಯೋಜನಗಳು

ರಿಲಾಯನ್ಸ್ ಜಿಯೋ ಭಾರತದ ಪ್ರಥಮ ಎಲ್‌ಟಿಇ ಓನ್ಲೀ ನೆಟ್‌ವರ್ಕ್ ಎಂದೆನಿಸಿದೆ. ಇದು 2ಜಿ ಅಥವಾ 3ಜಿ ನಲ್ಲಿ ನೆಟ್‌ವರ್ಕ್ ಡ್ರಾಪಿಂಗ್ ಸಮಸ್ಯೆಯನ್ನು ಎದುರುಗೊಳ್ಳುವುದಿಲ್ಲ. ಬೇರೆ ನೆಟ್‌ವರ್ಕ್‌ಗಳು 4ಜಿ ಗೆ ಪುಶ್ ಮಾಡುವಾಗ 2ಜಿ ಅಥವಾ 3ಜಿ ನೆಟ್‌ವರ್ಕ್ ಡ್ರಾಪಿಂಗ್ ಸಮಸ್ಯೆಯನ್ನು ಎದುರುಗೊಳ್ಳಲಿವೆ.

ವೋಲ್ಟ್ ಕಾಲ್ಸ್: ಪ್ರಯೋಜನ

ಲಾಂಚ್ ಸಮಯದಲ್ಲಿ ಮುಕೇಶ್ ಅಂಬಾನಿಯವರು ಬಳಕೆದಾರರು ಡೇಟಾಗೆ ಮಾತ್ರ ಪಾವತಿಸಿದರೆ ಸಾಕು ಎಂಬುದಾಗಿ ಸ್ಪಷ್ಟಪಡಿಸಿದ್ದರು. ವಾಯ್ಸ್ ಕಾಲ್‌ಗಳನ್ನು ವಾಯ್ಸ್ ವೋವರ್ ಎಲ್‌ಟಿಇ ಮೂಲಕ ಮಾಡಬಹುದಾಗಿದೆ. ಈ ಫೀಚರ್ ದೇಶದಲ್ಲಿ ಹೊಸದು, ಆದರೆ ಇದು ಗುಣಮಟ್ಟದ ಆಡಿಯೊವನ್ನು ನೀಡಲಿದೆ, ಇದು ಇತರ ಸಾಮಾನ್ಯ ಕರೆಗಳಿಂದ ಅತ್ಯುತ್ತಮ ಗುಣಮಟ್ಟವನ್ನು ಪಡೆದುಕೊಂಡಿದೆ.

ಎಸ್‌ಎಮ್‌ಎಸ್ ಮತ್ತು ಕರೆಗಳಿಗೆ ದರವಿಲ್ಲ: ಪ್ರಯೋಜನ

ಸೇವೆಯೊಂದಿಗೆ ಬರಲಿರುವ ವಾಯ್ಸ್ ಕಾಲ್ ಉಚಿತವಾಗಿದ್ದು ಎಸ್‌ಎಮ್‌ಎಸ್‌ಗೂ ಯಾವುದೇ ದರವಿಲ್ಲ. ನೆಟ್‌ವರ್ಕ್ ಕೂಡ ಉಚಿತ ಎಸ್‌ಎಮ್‌ಎಸ್ ಅನ್ನು ಒದಗಿಸಲಿದ್ದು TRAI ನಿಯಮಗಳ ಪ್ರಕಾರ ಬಳಕೆದಾರರು 100 ಎಸ್‌ಎಮ್‌ಎಸ್‌ಗಳನ್ನು ಬಳಸಬಹುದಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೇಶಾದ್ಯಂತ ಉಚಿತ ರೋಮಿಂಗ್: ಪ್ರಯೋಜನ

ಇದರಲ್ಲಿ ಬಂದಿರುವ ಒಂದು ಅದ್ಭುತ ಪ್ರಯೋಜನ ಎಂದರೆ, ದೇಶಾದ್ಯಂತ ಜಿಯೋ ಉಚಿತ ರೋಮಿಂಗ್ ಅನ್ನು ಒದಗಿಸಲಿದೆ. ನೀವು ಡೇಟಾಗೆ ಮಾತ್ರವೇ ಪಾವತಿಸಿದರೆ ಸಾಕು.

ವೈಫೈ ಡೇಟಾ ಪ್ಲಾನ್ಸ್: ಪ್ರಯೋಜನ

ಸೇವೆಯಲ್ಲಿರುವ ಟಾರಿಫ್ ಯೋಜನೆಗಳು ಮೂಲಕ ಬಳಕೆದಾರರು ಸ್ವಲ್ಪ ಪ್ರಮಾಣದ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ ಮತ್ತು ಕಂಪೆನಿಯು ಒದಗಿಸುತ್ತಿರುವ ವೈಫೈ ಹಾಟ್‌ಸ್ಪಾಟ್‌ಗಳ ಮೂಲಕ ಡೇಟಾವನ್ನು ಸಂಪರ್ಕಪಡಿಸಬಹುದಾಗಿದೆ.

ರೂ 50 ರ ಪ್ಯಾಕ್ ಇಲ್ಲ: ಅನಾನುಕೂಲ

ರೂ 50 ರ ಯಾವುದೇ ಡೇಟಾ ಪ್ಯಾಕ್ ಅನ್ನು ಜಿಯೋ ಹೊಂದಿಲ್ಲ. ಕಂಪೆನಿಯು ಹೇಳಿರುವ ಪ್ರಕಾರ 1 ಎಮ್‌ಬಿಗೆ 5 ಪೈಸೆ ದರವಿದ್ದು, ಇದು ರೂ 50/ಜಿಬಿಗೆ ದುಪ್ಪಟ್ಟಾಗಲಿದೆ. ಟಾರಿಫ್ ಪ್ಲಾನ್‌ನೊಂದಿಗೆ ಫೋನ್ ಅನ್ನು ನೀವು ರಿಚಾರ್ಜ್ ಮಾಡಿಲ್ಲ ಎಂದಾದಲ್ಲಿ ವಾಯ್ಸ್ ಕಾಲ್ಸ್ ಉಚಿತವಾಗಿರುವುದಿಲ್ಲ.

ಅನ್‌ಲಿಮಿಟೆಡ್ ರಾತ್ರಿ ಡೇಟಾದಲ್ಲಿ ಸಮಸ್ಯೆ: ಅನಾನುಕೂಲ

ರೂ 50 ರ ಯಾವುದೇ ಡೇಟಾ ಪ್ಯಾಕ್ ಅನ್ನು ಜಿಯೋ ಹೊಂದಿಲ್ಲ. ಕಂಪೆನಿಯು ಹೇಳಿರುವ ಪ್ರಕಾರ 1 ಎಮ್‌ಬಿಗೆ 5 ಪೈಸೆ ದರವಿದ್ದು, ಇದು ರೂ 50/ಜಿಬಿಗೆ ದುಪ್ಪಟ್ಟಾಗಲಿದೆ. ಟಾರಿಫ್ ಪ್ಲಾನ್‌ನೊಂದಿಗೆ ಫೋನ್ ಅನ್ನು ನೀವು ರಿಚಾರ್ಜ್ ಮಾಡಿಲ್ಲ ಎಂದಾದಲ್ಲಿ ವಾಯ್ಸ್ ಕಾಲ್ಸ್ ಉಚಿತವಾಗಿರುವುದಿಲ್ಲ.

ಅನ್‌ಲಿಮಿಟೆಡ್ ರಾತ್ರಿ ಡೇಟಾದಲ್ಲಿ ಸಮಸ್ಯೆ: ಅನಾನುಕೂಲ

ಟಾರಿಫ್ ಯೋಜನೆಗಳೊಂದಿಗೆ ಜಿಯೋ ಅನಿಯಮಿತ ನೈಟ್ ಡೇಟಾವನ್ನು ಒದಗಿಸುತ್ತಿದೆ. ಇಲ್ಲಿದೆ ಮುಖ್ಯ ಸಮಸ್ಯೆ. ನೈಟ್ ಡೇಟಾ ಬೆಳಗ್ಗೆ 2 ರಿಂದ 5 ರವರೆಗೆ ಮಾತ್ರ ಸೀಮಿತವಾಗಿದೆ. ನಂತರ ನಿಧಾನವಾಗಿ ಸ್ಲೋವಾಗುತ್ತದೆ.

ನಾನ್ ವೋಲ್ಟ್ ಫೋನ್‌ಗಳಿಗೆ ಕರೆಗಳಿಲ್ಲ: ಅನಾನುಕೂಲ

ಇನ್ನೊಂದು ನಷ್ಟವೆಂದರೆ 4ಜಿ ಎಲ್‌ಟಿಇ ಸಕ್ರಿಯಗೊಂಡಿರುವ ಸ್ಮಾರ್ಟ್‌ಫೋನ್ ಬಳಕೆದಾರರು ಜಿಯೋ ಸಿಮ್ ಕಾರ್ಡ್ ಅನ್ನು ಬಳಸಬಹುದಾಗಿದೆ, ಅದಾಗ್ಯೂ ವೋಲ್ಟ್ ಕರೆಗಳನ್ನು ಮಾಡಲು ಸಾಧ್ಯವಿಲ್ಲ. ಇದಕ್ಕಿರುವ ಪರಿಹಾರವೆಂದರೆ ಜಿಯೋ4ಜಿವಾಯ್ಸ್ ಅಪ್ಲಿಕೇಶನ್ ಅನ್ನು ಬಳಕೆದಾರರು ಡೌನ್‌ಲೋಡ್ ಮಾಡಬೇಕು

ವೆಲ್‌ಕಮ್ ಆಫರ್ ಡೇಟಾ ಕ್ಯಾಪ್‌ನೊಂದಿಗೆ ಬಂದಿದೆ: ಅನಾನುಕೂಲ

ನಮಗೆಲ್ಲಾ ತಿಳಿದಿರುವಂತೆ ಪ್ರಿವ್ಯೂ ಆಫರ್ ಅನ್ನು ವೆಲ್‌ಕಮ್ ಆಫರ್ ಎಂದೇ ಕರೆಯಲಾಗಿದ್ದು ಇದು ಎಲ್ಲಾ ಬಳಕೆದಾರರಿಗೂ ಡಿಸೆಂಬರ್ 31, 2016 ರವರೆಗೆ ಲಭ್ಯವಿದೆ. ಆದರೆ ಪ್ರಿವ್ಯೂ ಆಫರ್‌ನಗಿಂತ ಭಿನ್ನವಾಗಿ ವೆಲ್‌ಕಮ್ ಆಫರ್ ನಿಯಮಿತ 4ಜಿ ಡೇಟಾ ಕ್ಯಾಪ್‌ನೊಂದಿಗೆ ಬಂದಿದೆ.

ನೀವು ರಿಫಿಲ್ ಮಾಡದೇ ಇದ್ದರೆ ವಾಯ್ಸ್ ಕರೆಗಳಿಲ್ಲ: ಅನಾನುಕೂಲ

ಈ ಹಿಂದೆ ಹೇಳಿದಂತೆ, ಜಿಯೋದಲ್ಲಿರುವ ವಾಯ್ಸ್ ಕರೆಗಳು ಸಂಪೂರ್ಣವಾಗಿ ಉಚಿತವಾಗಿದ್ದು, ವಾಯ್ಸ್ ಕರೆಗಳನ್ನು ಮಾಡಲು ನೀವು ರಿಫಿಲ್ ಮಾಡಬೇಕು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 English summary
The telecom service might be new, but the company has already made its presence in the sector. Here are some of the advantages and disadvantages of the network.
Please Wait while comments are loading...
Opinion Poll

Social Counting