ಜಿಯೋ ವರ್ಸಸ್ ಏರ್‌ಟೆಲ್ 4ಜಿ, ನಿಮ್ಮ ಮತ ಯಾರಿಗೆ?

By Shwetha
|

ಪ್ರಸ್ತುತ ಜಿಯೋ ದೇಶದಲ್ಲಿ ಬಿಸಿ ಬಿಸಿ ದೋಸೆಯಂತೆ ಪ್ರಚಾರವನ್ನು ಗಿಟ್ಟಿಸಿಕೊಳ್ಳುತ್ತಿದ್ದು ಇತರ ಟೆಲಿಕಾಂ ಸಂಸ್ಥೆಗಳಿಗೆ ಭರ್ಜರಿ ಪೈಪೋಟಿಯನ್ನು ನೀಡುವ ಮೂಲಕ ಜಿಯೋ ಜ್ವರ ವ್ಯಾಪಕವಾಗಿ ಹಬ್ಬಿದೆ. ಜಿಯೋಗೆ ಪ್ರಬಲ ಸ್ಪರ್ಧೆಯನ್ನು ಒಡ್ಡಲು ಇತರ ಟೆಲಿಕಾಂಗಳ ಭರ್ಜರಿ ಸಿದ್ಧತೆಯನ್ನೇ ಮಾಡಿಕೊಂಡಿದ್ದು ಜಿಯೋ ಯೋಜಿಸದೇ ಇರುವ ದಾಳವನ್ನೇ ಬಳಸಿಕೊಂಡು ಆಟದ ಕಣಕ್ಕೆ ಇಳಿದಿವೆ.

ಓದಿರಿ: ದೀಪಾವಳಿಗಾಗಿ ಬಿಎಸ್ಎನ್‌ಎಲ್‌ನಿಂದ ಬಂಪರ್ ಆಫರ್

ಏರ್‌ಟೆಲ್ ಸದ್ಯಕ್ಕೆ ಜಿಯೋಗೆ (jio) ಕಠಿಣ ಪೈಪೋಟಿಯನ್ನು ಒಡ್ಡುತ್ತಿದ್ದು ಇಂದಿನ ಲೇಖನದಲ್ಲಿ ಜಿಯೋ ಮತ್ತು ಏರ್‌ಟೆಲ್ (Airtel) 4ಜಿ ಗಿರುವ ವ್ಯತ್ಯಾಸವನ್ನು ಅರಿತುಕೊಳ್ಳೋಣ.

ಓದಿರಿ: ವಾಟ್ಸಾಪ್‌ನಲ್ಲಿರುವ ಮೋಸದ ಬಲೆಯಿಂದ ಹೊರಬರುವುದು ಹೇಗೆ?

ಬ್ಯಾಂಡ್‌ಗಳ ವ್ಯತ್ಯಾಸ

ಬ್ಯಾಂಡ್‌ಗಳ ವ್ಯತ್ಯಾಸ

ಏರ್‌ಟೆಲ್ 15 ಟೆಲಿಕಾಂ ದೇಶಗಳಲ್ಲಿ 2300MHZ ಸ್ಪೆಕ್ಟ್ರಮ್ ಅನ್ನು ಬಳಸಿಕೊಳ್ಳುತ್ತಿದ್ದು 22 ವಲಯಗಳಲ್ಲಿ 4ಜಿ ಸೇವೆಗಳನ್ನು ಒದಗಿಸುತ್ತಿದೆ. ಇನ್ನು ಜಿಯೋ, 2300MHZ ಆಕ್ಸೆಸ್ ಅನ್ನು ದೇಶಾದ್ಯಂತ ಪಡೆದುಕೊಂಡಿದೆ.

1800MHZ ಹೆಚ್ಚು ಶಕ್ತಿಯುತ ಬ್ಯಾಂಡ್

1800MHZ ಹೆಚ್ಚು ಶಕ್ತಿಯುತ ಬ್ಯಾಂಡ್

ಪ್ರಪಂಚದಲ್ಲೇ 1800MHZ ಹೆಚ್ಚು ಜನಪ್ರಿಯ 4ಜಿ ಎಲ್‌ಟಿಇ ಬ್ಯಾಂಡ್ ಎಂದೆನಿಸಿದೆ. ಇತ್ತೀಚಿನ ಸರ್ವೆಯ ಪ್ರಕಾರ 44 ಶೇಕಡಾದಷ್ಟು 4ಜಿ ನೆಟ್‌ವರ್ಕ್ 1800MHZ ಬ್ಯಾಂಡ್‌ನಲ್ಲೇ ನಡೆಯುತ್ತಿದೆಯಂತೆ.

1800MHZ ಬ್ಯಾಂಡ್ 2300MHZ ಗಿಂತ ಉತ್ತಮ ಏಕೆ

1800MHZ ಬ್ಯಾಂಡ್ 2300MHZ ಗಿಂತ ಉತ್ತಮ ಏಕೆ

1800MHZ ಕಡಿಮೆ ಟವರ್‌ಗಳನ್ನು ಬಳಸಿಕೊಳ್ಳುತ್ತಿದ್ದು 2300MHZ ಗೆ ಹೋಲಿಸಿದಾಗ ಇದು ಬಳಸಿಕೊಳ್ಳುವ ಟವರ್‌ಗಿಂತ 1800MHZ ಕಡಿಮೆ ಆಗಿದೆ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಕಡಿಮೆ ಟವರ್‌ಗಳನ್ನು ಬಳಸಿಕೊಳ್ಳುವ 1800MHZ ಉತ್ತಮ ಆಯ್ಕೆಯಾಗಿರುತ್ತದೆ.

ಟಿಡಿಡಿ/ಎಫ್‌ಡಿಡಿ ಇಕೋ ಸಿಸ್ಟಮ್

ಟಿಡಿಡಿ/ಎಫ್‌ಡಿಡಿ ಇಕೋ ಸಿಸ್ಟಮ್

ಏರ್‌ಟೆಲ್ ಟಿಡಿಡಿ ಎಲ್‌ಟಿಇ ತಂತ್ರಜ್ಞಾವನ್ನು ಬಳಸಿಕೊಳ್ಳುತ್ತಿದ್ದರೆ ರಿಲಾಯನ್ಸ್ಈಗಾಗಲೇ 1800 MHZ ನೊಂದಿಗೆ ಎಫ್‌ಡಿಡಿ ಎಲ್‌ಟಿಇ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ.

ಎಫ್‌ಡಿಡಿ ಡಿವೈಸ್‌ಗಳ ಪ್ರಮಾಣ ಅಧಿಕ

ಎಫ್‌ಡಿಡಿ ಡಿವೈಸ್‌ಗಳ ಪ್ರಮಾಣ ಅಧಿಕ

ಟಿಡಿಡಿಗೆ ಹೋಲಿಸಿದಾಗ ಎಫ್‌ಡಿಡಿಯಲ್ಲಿ 1800 MHZ ಅನ್ನು ಬೆಂಬಲಿಸುವ ಡಿವೈಸ್‌ಗಳೇ ಅಧಿಕವಾಗಿದೆ.

ಜಿಯೋ 4ಜಿ ಯನ್ನು ಎಲ್‌ಟಿಇ ಯಲ್ಲಿ ನೀಡುತ್ತಿದೆ

ಜಿಯೋ 4ಜಿ ಯನ್ನು ಎಲ್‌ಟಿಇ ಯಲ್ಲಿ ನೀಡುತ್ತಿದೆ

ಏರ್‌ಟೆಲ್ ಎಲ್ಲಾ ನೆಟ್‌ವರ್ಕ್‌ಗಳಲ್ಲಿ ತನ್ನ ಸೇವೆಯನ್ನು ಒದಗಿಸುತ್ತಿದೆ ಆದರೆ ಜಿಯೋ 4ಜಿ ಎಲ್‌ಟಿಇ ನೆಟ್‌ವರ್ಕ್ ಅನ್ನು ಮಾತ್ರ ಒದಗಿಸುತ್ತಿದೆ. ವಾಯ್ಸ್ ಕಾಲ್ ಅನ್ನು ವೋಲ್ಟ್‌ನಲ್ಲಿ ಮಾಡಬಹುದು ಎಂಬುದಾಗಿ ಜಿಯೋ ನಂಬಿದೆ. ಕರೆ ಮಾಡುವ ಕ್ಷೇತ್ರದಲ್ಲೇ ಇದೊಂದು ಅದ್ಭುತ ಪ್ರಗತಿ ಎಂದೆನಿಸಲಿದೆ.

ಜಿಯೋದಲ್ಲಿ ಉತ್ತಮ ಡೌನ್‌ಲೋಡ್

ಜಿಯೋದಲ್ಲಿ ಉತ್ತಮ ಡೌನ್‌ಲೋಡ್

ಸ್ಪೀಡ್ ವಿಷಯದಲ್ಲಿ ಏರ್‌ಟೆಲ್‌ಗಿಂತಲೂ ಜಿಯೋ ಮುಂದಿದ್ದು ಡೌನ್‌ಲೋಡ್ ಅತೀ ಹೆಚ್ಚು ವೇಗದಲ್ಲಿ ಜಿಯೋದಲ್ಲಿ ನಡೆಯುತ್ತದೆ.

Best Mobiles in India

English summary
Here are the seven differences between Reliance Jio and Airtel 4G which will shock you.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X