ಜಿಯೋ ಬಳಕೆದಾರರಿಗೆ ಸಿಹಿ ಸುದ್ದಿ: ಇನ್ನು ಆಫ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿ

ರಿಲಾಯನ್ಸ್ ಜಿಯೋ, ಪೇಟಿಎಂ ಅಂತಹ ಸೇವೆಗಳು ಪ್ರಯಾಣಿಕರಿಗೆ ಹೆಚ್ಚು ಸಹಾಯಕರವಾಗಿವೆ. ಯಾವುದೇ ಹೆಚ್ಚುವರಿ ಹಣವನ್ನು ಪಾವತಿಸದೇ ಇಲ್ಲಿ ನೀವು ಪ್ರಯಾಣದ ಟಿಕೆಟ್ ಬುಕ್‌ ಮಾಡಬಹುದಾಗಿದೆ.

By Bhaskar N J
|

ನೀವು ಈಗ ಏನೇ ಮಾಡಿ ಅದ್ರೆ ಕ್ಯಾಶ್‌ಲೆಸ್ ವ್ಯವಹಾರ ಮಾತ್ರ ಮಾಡಿ!. ಹೌದು 500 ಮತ್ತು 1000 ರುಪಾಯಿಗಳು ಬ್ಯಾನ್ ಆದಮೇಲೆ ಹಣದ ವಿನಿಮಯ ಕಡಿಮೆಯಾಗಿದೆ. ಇರುವ ಚಿಲ್ಲರೆ ಹಣವನ್ನು ಖರ್ಚು ಮಾಡಿಕೊಂಡರೆ ಮತ್ತೆ ಹಣವನ್ನು ಹೊಂದಿಸುವುದು ಕಷ್ಟವಾಗುತ್ತದೆ ಎನ್ನುವ ಭಯ ಎಲ್ಲರನ್ನು ಕಾಡುತ್ತಿದೆ. ಇನ್ನು ಎಟಿಎಂ ಮುಂದೆ ಜನರ ಕ್ಯೂ ನೋಡಿದರಂತೂ ಒಂದು ರೂಪಾಯಿ ಖರ್ಚು ಮಾಡಲು ಹೆದರಿಕೆಯಾಗುತ್ತದೆ.

ಹಣಕ್ಕಾಗಿ ಕ್ಯೂ ನಿಲ್ಲದಿರಿ..ಮೊಬೈಲ್ ಆಪ್‌ ಮೂಲಕ ಹಣ ಇರುವ ATM ಹುಡುಕಿ!

ಜಿಯೋ ಬಳಕೆದಾರರಿಗೆ ಸಿಹಿ ಸುದ್ದಿ: ಇನ್ನು ಆಫ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿ

ಶಾಪಿಂಗ್, ಟಿಕೆಟ್ ಬುಕ್, ಅಥವಾ ಇನ್ನೇನೇ ವ್ಯವಹಾರಗಳನ್ನು ಎಲ್ಲರೂ ಕ್ಯಾಶ್‌ಲೆಸ್ ಮೂಲಕ ನಡೆಸುತ್ತಿದ್ದಾರೆ. ಇದು ಆನ್‌ಲೈನ್‌ ಕಂಪೆನಿಗಳಿಗೆ ವರವಾಗಿ ಪರಿಣಮಿಸಿದೆ. ಹಾಗಾಗಿ ಆನ್‌ಲೈನ್‌ ವ್ಯವಹಾರಕ್ಕೆ ನೂತನವಾಗಿ ರಿಲಾಯನ್ಸ್ ಜಿಯೋ ಹೊಸದಾಗಿ ಸೇರ್ಪಡೆಯಾಗಿದೆ! ಹೌದು, ನಗದು ವ್ಯವಹಾರ ಕಡಿಮೆಯಾದಮೇಲಂತೂ ರಿಲಾಯನ್ಸ್ ಜಿಯೋ, ಪೇಟಿಎಂ, ಫ್ರೀ ರೀಚಾರ್ಜ, ಏರ್‌ಟೆಲ್ ಮನಿ ಅಂತಹ ಸೇವೆಗಳು ಪ್ರಯಾಣಿಕರಿಗೆ ಹೆಚ್ಚು ಸಹಾಯಕರವಾಗಿವೆ. ಯಾವುದೇ ಹೆಚ್ಚುವರಿ ಹಣವನ್ನು ಪಾವತಿಸದೇ ಇಲ್ಲಿ ನೀವು ಪ್ರಯಾಣದ ಟಿಕೆಟ್ ಬುಕ್‌ ಮಾಡಬಹುದಾಗಿದೆ.

ಜಿಯೋ ಬಳಕೆದಾರರಿಗೆ ಸಿಹಿ ಸುದ್ದಿ: ಇನ್ನು ಆಫ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿ

ಪ್ರಯಾಣಿಸುವಾಗ ಕಾಯುವುದು ಬೇಡ!

ಎಲ್ಲಾದರೂ ಹೊರಗಡೆ ಪ್ರಯಾಣಿಸುವಾಗ ಟಿಕೆಟ್ ತೆಗೆದುಕೊಳ್ಳ ಮಾಡಬೇಕಾದ ಪ್ರಯತ್ನ ಅಷ್ಟಿಷ್ಟಲ್ಲ!. ಇನ್ನು ನಿಮ್ಮ ಬಳಿ ಚೇಂಜ್ ಇಲ್ಲದಿದ್ದರಂತೂ ಆ ವನವಾಸವೇ ಬೇಡ ಎಂಬತಾಗಿರುತ್ತದೆ. ಹಾಗಾಗಿ ಟಿಕೆಟ್ ಬುಕ್ ಮಾಡಲು ರಿಲಾಯನ್ಸ್ ಜಿಯೋ ಮತ್ತು ಪೇಟಿಎಂಗಳನ್ನು ನೀವು ಉಪಯೋಗಿಸಿಕೊಳ್ಳಬಹುದು. ಇವು ನಿಮ್ಮ ಪ್ರಯಾಣವನ್ನು ಸುಖಕರವಾಗಿಸಬಹುದು!

ಜಿಯೋ ಬಳಕೆದಾರರಿಗೆ ಸಿಹಿ ಸುದ್ದಿ: ಇನ್ನು ಆಫ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿ

ಟ್ರಾವೆಲ್‌ಯಾರಿ (Travelyaari ) ಜೊತೆಗೆ ರಿಲಾಯನ್ಸ್ ಜಿಯೋ ಟೈ ಅಪ್

ಟ್ರಾವೆಲ್‌ಯಾರಿ ಟಿಕೆಟ್ ಬುಕ್ಕಿಂಗ್ ಆಪ್ ಜೊತೆ ರಿಲಾಯನ್ಸ್ ಜಿಯೋ ಜೊತೆಗೆ ಟೈ ಅಪ್ ಮಾಡಿಕೊಂಡಿದೆ. ಈ ಎರಡೂ ಆಪ್‌ಗಳು ERP ಎನ್ನುವ ಸಿಸ್ಟಮ್ ಹೊಂದಿದ್ದು ಇದರಿಂದಾಗಿ ಜಿಯೋ ಬಳಕೆದಾರರು ಟ್ರಾವೆಲ್‌ಯಾರಿ ಮೂಲಕ ಆಫ್‌ಲೈನ್ ಟಿಕೆಟ್ ಬುಕ್ ಮಾಡಬಹುದು. ಟಿಕೆಟ್ ಬುಕ್ ಮಾಡುವ ವಿಧಾನ ಸುಲಭವಾಗಿದ್ದು, ನಿಮಗೆ ಸಹಕಾರಿಯಾಗಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿಯೋ ಬಳಕೆದಾರರಿಗೆ ಸಿಹಿ ಸುದ್ದಿ: ಇನ್ನು ಆಫ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿ

ಟ್ರಾವೆಲ್‌ಯಾರಿ ಜೊತೆಗೆ ಪೇಟಿಎಂ ಟೈ ಅಪ್

ನಿಮ್ಮ ಮೊಬೈಲ್‌ನಲ್ಲಿ ಪೇಟಿಎಂ ಆಪ್ ಇದ್ದರೆ ನೀವು ಟ್ರಾವೆಲ್‌ಯಾರಿ ಮೂಲಕ ಟಿಕೆಟ್ ಬುಕ್ ಮಾಡಬಹುದು. ಯಾವುದೇ ಸಮಯದಲ್ಲಿ ನೀವು ಟಿಕೆಟ್ ಬುಕ್ ಮಾಡುವ ಸೌಲಭ್ಯವನ್ನು ಈ ಎರಡು ಆಪ್‌ಗಳು ನಿಮಗೆ ನೀಡಿವೆ.

ಜಿಯೋ ಬಳಕೆದಾರರಿಗೆ ಸಿಹಿ ಸುದ್ದಿ: ಇನ್ನು ಆಫ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿ

ಟ್ರಾವೆಲ್‌ಯಾರಿಯಲ್ಲಿ ಟಿಕೆಟ್ ಬುಕ್ ಮಾಡಿ ಡಿಸ್ಕೌಂಟ್ ಪಡೆಯಿರಿ!

ಜಿಯೋ ಬಳಕೆದಾರರು ಆಫ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡುವುದಲ್ಲದೇ ಟ್ರಾವೆಲ್‌ಯಾರಿ ಮೂಲಕ ಟಿಕೆಟ್ ಮೇಲೆ ಶೇ 20 ರಿಂ 30 % ಡಿಸ್ಕೌಂಟ್ ಸಹ ಪಡೆಯಬಹುದು.

ಜಿಯೋ ಬಳಕೆದಾರರಿಗೆ ಸಿಹಿ ಸುದ್ದಿ: ಇನ್ನು ಆಫ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
No cash to book tickets due to the ban on Rs. 500 and Rs. 1,000? Here's how you can book tickets from offline counters without cash. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X