ವಾಟ್ಸಾಪ್‌ನಿಂದ, ಬಳಕೆದಾರರ ಸುರಕ್ಷತೆಗಾಗಿ ಉನ್ನತ ಮಟ್ಟದ ಫೀಚರ್ ಬಿಡುಗಡೆ!

ವಾಟ್ಸಾಪ್, ಬಳಕೆದಾರರ ಮಾಹಿತಿಗಳ ಉನ್ನತ ಮಟ್ಟದ ಸುರಕ್ಷತೆಗಾಗಿ ಹೊಸ ಫೀಚರ್‌ಗಳನ್ನು ಬಿಡುಗಡೆ ಮಾಡಲಿದೆ.

Written By:

ಪ್ರಪಂಚದಾದ್ಯಂತ ಹೆಚ್ಚು ಜನರು ಇಷ್ಟ ಪಡುವ ವಾಟ್ಸಾಪ್ ಆಪ್‌, ಇತ್ತೀಚೆಗೆ ತಾನೆ ಬಳಕೆದಾರರ ಹೆಚ್ಚಿನ ಅನುಭವಕ್ಕಾಗಿ ಮತ್ತು ಹೆಚ್ಚು ಬಳಸಲು ಹಲವು ಫೀಚರ್‌ಗಳನ್ನು ಬಿಡುಗಡೆ ಮಾಡಿತ್ತು. ಅವುಗಳಲ್ಲಿ ವಾಟ್ಸಾಪ್ ವೀಡಿಯೊ ಕರೆ ಫೀಚರ್‌ ಅನ್ನು ಆಂಡ್ರಾಯ್ಡ್ ಮತ್ತು ಐಓಎಸ್‌ ಬಳಕೆದಾರರಿಬ್ಬರಿಗೂ ಸಹ ಬಿಡುಗಡೆ ಮಾಡಿತ್ತು. ಜೊತೆಗೆ ಉತ್ತಮ ಸಂಭಾಷಣೆ ಮತ್ತು ಪ್ರತಿಕ್ರಿಯೆಗಾಗಿ ಹೊಸ ಡೂಡಲ್ ಮತ್ತು ಜಿಫ್ ಫೀಚರ್ ನೀಡಿತ್ತು.

ವಾಟ್ಸಾಪ್ ಹಲವು ಹೊಸ ಫೀಚರ್‌ಗಳನ್ನು ನೀಡುವ ಜೊತೆಗೆ ಬಳಕೆದಾರರ ಸುರಕ್ಷತೆ ಮಟ್ಟದ ಬಗ್ಗೆ ಪ್ರಶ್ನೆಗಳನ್ನು ಪಡೆದು ಈಗ ಸುದ್ದಿ ಆಗಿತ್ತು. ಆದ್ದರಿಂದ ವಾಟ್ಸಾಪ್‌(WhatsApp) ಈಗ ಬಳಕೆದಾರರ ಸುರಕ್ಷತೆ ದೃಷ್ಟಿಯಿಂದ ಮತ್ತು ಅವರ ಮಾಹಿತಿ ಗೌಪ್ಯತೆ ಉದ್ದೇಶದಿಂದ ಹೊಸ ಫೀಚರ್‌ಗಳನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ. ಆ ಫೀಚರ್‌ಗಳು ಯಾವುವು ಎಂದು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ವಾಟ್ಸಾಪ್ ಹ್ಯಾಕ್ ಮಾಡಿ, ಸ್ನೇಹಿತರ ಮೆಸೇಜ್, ಫೋಟೋ, ವೀಡಿಯೊ ಆಕ್ಸೆಸ್ ಹೇಗೆ?

ಸಿಮ್ ಕಾರ್ಡ್ ಇಲ್ಲದೆ, ಟ್ಯಾಬ್ಲೆಟ್‌ನಲ್ಲಿ ವಾಟ್ಸಾಪ್ ಬಳಸುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ವಾಟ್ಸಾಪ್‌ ಹೆಚ್ಚು ಸುರಕ್ಷತೆ ನೀಡಲಿದೆ

ವಾಟ್ಸಾಪ್ ಬಳಕೆದಾರರ ಸುರಕ್ಷತೆಗಾಗಿ ಹೊಸ ಫೀಚರ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಮೆಸೇಜಿಂಗ್ ಆಪ್ ಎರಡು ಅಂಶ ದೃಢೀಕರಣ ವೈಶಿಷ್ಟ್ಯದ ಮೇಲೆ ವರ್ಕ್ ಮಾಡುತ್ತಿದ್ದು, ವಾಟ್ಸಾಪ್‌ ಬಳಿಕೆದಾರರು ಉನ್ನತ ಮಟ್ಟದ ಸೆಕ್ಯೂರಿಟಿ ಹೊಂದಬಹುದು.

ವಾಟ್ಸಾಪ್‌ನಿಂದ ಎರಡು ಅಂಶ ದೃಢೀಕರಣ ವೈಶಿಷ್ಟ್ಯ ಬಿಡುಗಡೆ

ಅಂದಹಾಗೆ ಈ ಮಾಹಿತಿ ಸ್ಪ್ಯಾನಿಷ್ ವೆಬ್‌ಸೈಟ್ 'ಮೈಕ್ರೋಸಾಫ್ಟ್‌ಇನ್‌ಸೈಡರ್'ನಲ್ಲಿ ಬಿಡುಗಡೆ ಆಗಿದ್ದು, ವಾಟ್ಸಾಪ್ ಎರಡು ಅಂಶ ದೃಢೀಕರಣ ವೈಶಿಷ್ಟ್ಯ ಬಿಡುಗಡೆ ಮಾಡಲಿದೆ. ಈ ಹೊಸ ಫೀಚರ್‌ನಿಂದ ಬಳಕೆದಾರರು ಖಾತೆ, ಯೂಸರ್‌ನೇಮ್‌ ಮತ್ತು ಪಾಸ್‌ವರ್ಡ್‌ಗಳನ್ನು ಉನ್ನತ ಮಟ್ಟದಲ್ಲಿ ಸುರಕ್ಷತೆ ಹೊಂದುತ್ತಾರೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾಟ್ಸಾಪ್‌ನಿಂದ ಉನ್ನತ ಮಟ್ಟದ ಸುರಕ್ಷತೆ ಹೇಗೆ?

ಎರಡು ಅಂಶ ದೃಢೀಕರಣ ವೈಶಿಷ್ಟ್ಯ ಫೀಚರ್ ಬಿಡುಗಡೆಯಿಂದ, ಪರ್ಯಾಯ ದೃಢೀಕರಣ ವ್ಯವಸ್ಥೆಯನ್ನು ಕೋಡ್‌ ಮೂಖಾಂತರ ನೀಡಲಿದೆ. ಇದು ಬಳಕೆದಾರರ ಮೊಬೈಲ್‌ಗೆ ಮಾತ್ರ ಡೆಲಿವರಿ ಆಗಲಿದೆ. ವಾಟ್ಸಾಪ್ ಸೆಕ್ಯೂರಿಟಿ ಲೇಯರ್‌ನಲ್ಲಿ ಯೂಸರ್‌ನೇಮ್, ಪಾಸ್‌ವರ್ಡ್ ಅನ್ನು ಆಡ್‌ ಮಾಡಲಿದೆ.

ವಿಂಡೋಸ್ ಬಳಕೆದಾರರಿಗೆ ಈ ಫೀಚರ್

ವಾಟ್ಸಾಪ್‌ ಯಾವಾಗಲು ವಿಂಡೋಸ್ ಫೋನ್‌ಗೆ ಹೆಚ್ಚು ಸಪೋರ್ಟ್ ಮಾಡುತ್ತದೆ. ಅಂತೆಯೇ ಈ ಬಾರಿಯು ಸಹ ಎರಡು ಅಂಶ ದೃಢೀಕರಣ ವೈಶಿಷ್ಟ್ಯ ಫೀಚರ್ ಅನ್ನು ವಿಂಡೋಸ್‌ ಬಳಕೆದಾರರಿಗಾಗಿಯೇ ಬಿಡುಗಡೆ ಮಾಡುತ್ತಿದೆ.

ಅಧಿಕೃತ ಪ್ರಕಟಣೆ ಮಾಡಿಲ್ಲ

ಈವರೆಗೆ ವಾಟ್ಸಾಪ್‌ ಅಧಿಕೃತವಾಗಿ ಈ ಹೊಸ ಫೀಚರ್‌ಗಳ ಬಿಡುಗಡೆ ಬಗ್ಗೆ ಮಾಹಿತಿ ಪ್ರಕಟಣೆ ಮಾಡಿಲ್ಲ. ಆದರೆ ಶೀರ್ಘದಲ್ಲಿಯೇ ಈ ಫೀಚರ್‌ಗಳನ್ನು ಬಿಡುಗಡೆ ಮಾಡುವ ಬಗ್ಗೆ ಮೂಲಗಳಿಂದ ತಿಳಿಯಲಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
Here's How WhatsApp is Planning To Upgrade Security Level For Users. To know more visit kannada.gizbot.com
Please Wait while comments are loading...
Opinion Poll

Social Counting