ಅಪ್ಲಿಕೇಶನ್ ನಿರ್ಬಂಧಿಸಿ ಹೆಚ್ಚುವರಿ ಡೇಟಾಗೆ ಕಡಿವಾಣ ಹೇಗೆ?

ನಿಮ್ಮ ಫೋನ್‌ನಲ್ಲಿ ಹಿನ್ನಲೆಯಲ್ಲಿ ಚಾಲನೆಯಲ್ಲಿರುವ ಅಪ್ಲಿಕೇಶನ್‌ಗಳನ್ನು ನಿಯಂತ್ರಿಸಿಕೊಂಡು ಹೆಚ್ಚುವರಿ ಡೇಟಾಗೆ ಕಡಿವಾಣ ಹಾಕುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳಲಿದ್ದೇವೆ.

By Shwetha
|

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಚಾಲನೆಯಲ್ಲಿರುವ ಅಪ್ಲಿಕೇಶನ್‌ಗಳು ಹೆಚ್ಚು ಖತರ್‌ನಾಕ್ ಆಗಿರುತ್ತವೆ. ಏಕೆಂದರೆ ಇವು ನಿಮಗೆ ಗೊತ್ತಿಲ್ಲದೆಯೇ ಮೊಬೈಲ್ ಡೇಟಾವನ್ನು ನುಂಗಿಬಿಡುತ್ತವೆ. ನಿಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ಅಪ್ಲಿಕೇಶನ್‌ಗಳ ಹಾವಳಿಯಿಂದ ನೀವು ನಷ್ಟವನ್ನೇ ಅನುಭವಿಸುತ್ತೀರಿ.

ಓದಿರಿ: ಎಚ್ಚರ: ಜಿಯೋದಲ್ಲಿ ಕಂಡುಬರುತ್ತಿದೆ ಹೊಸ ಹೊಸ ಸಮಸ್ಯೆಗಳು

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡೀಫಾಲ್ಟ್ ಅಪ್ಲಿಕೇಶನ್‌ಗಳು ಯಾವ ತರಹ ಕೆಲಸ ಮಾಡುತ್ತಿದೆ ಎಂಬುದನ್ನು ಟ್ರ್ಯಾಕ್ ಮಾಡಿಕೊಳ್ಳುತ್ತಿರಿ. ಇನ್ನು ನಿಮಗೆ ಬೇಕಾಗಿರದ ಅಪ್ಲಿಕೇಶನ್‌ಗಳನ್ನು ನಿಲ್ಲಿಸಿಬಿಡಿ. ಇದೂ ಕೂಡ ಹೆಚ್ಚುವರಿ ಡೇಟಾವನ್ನು ಮುಗಿಸಿಬಿಡಬಹುದು. ಇಂದಿನ ಲೇಖನದಲ್ಲಿ ಇಂತಹ ಅಪ್ಲಿಕೇಶನ್‌ಗಳಿಂದ ಮೊಬೈಲ್ ಡೇಟಾವನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದನ್ನು ನಾವು ಅರಿತುಕೊಳ್ಳಲಿದ್ದೇವೆ.

ಓದಿರಿ: ಹ್ಯಾಕರ್‌ಗಳಿಂದ ಜಿಮೇಲ್ ಸಂರಕ್ಷಣೆ ಹೇಗೆ?

ಅವಾಸ್ತ್ ಮೊಬೈಲ್ ಆಂಟಿವೈರಸ್ ಮತ್ತು ಮೊಬೈಲ್ ಸೆಕ್ಯುರಿಟಿ

ಅವಾಸ್ತ್ ಮೊಬೈಲ್ ಆಂಟಿವೈರಸ್ ಮತ್ತು ಮೊಬೈಲ್ ಸೆಕ್ಯುರಿಟಿ

ಇದು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಹಿನ್ನಲೆಯಲ್ಲಿ ಚಾಲನೆಯಾಗುತ್ತಿರುವ ಅಪ್ಲಿಕೇಶನ್‌ಗಳಿಗೆ ಕಡಿವಾಣ ಹಾಕುತ್ತದೆ. "ಫೈರ್‌ವಾಲ್" ಎಂಬುದಾಗಿ ಇದನ್ನು ಕರೆಯಲಾಗುತ್ತಿದ್ದು ಫೇಸ್‌ಬುಕ್, ಟ್ವಿಟ್ಟರ್, ಮತ್ತು ಇತರ ಅಪ್ಲಿಕೇಶನ್‌ಗಳ ಇಂಟರ್ನೆಟ್ ನುಂಗುವಿಕೆಯನ್ನು ಕಡಿತಗೊಳಿಸಬಹುದಾಗಿದೆ.

ನೊರೂಟ್ ಫೈರ್‌ವಾಲ್

ನೊರೂಟ್ ಫೈರ್‌ವಾಲ್

ಹೆಸರೇ ಸೂಚಿಸುವಂತೆ, ಅಪ್ಲಿಕೇಶನ್ ಹೋಮ್ ಸ್ಕ್ರೀನ್‌ನಲ್ಲಿ ಮೂರು ಆಪ್ಶನ್‌ಗಳು ನಿಮಗೆ ಲಭ್ಯವಾಗಲಿವೆ. ಹೋಮ್, ಪೆಂಡಿಂಗ್ ಆಕ್ಸೆಸ್ ಮತ್ತು ಆಪ್ಸ್ ಎಂಬುದಾಗಿ ಇವೆ. ಪೆಂಡಿಂಗ್ ಆಕ್ಸೆಸ್ ಇಂಟರ್ನೆಟ್ ಪ್ರವೇಶಕ್ಕೆ ನಿಮ್ಮ ಅನುಮತಿಯನ್ನು ಕಾಯುತ್ತವೆ ಮತ್ತು ಆಪ್ಸ್ ಟ್ಯಾಬ್ ಅಪ್ಲಿಕೇಶನ್‌ಗಳ ಪಟ್ಟಿಯನ್ನು ತೋರಿಸುತ್ತದೆ ನಿಮಗೆ ಹೇಗೇ ಬೇಕೂ ಅಂತೆಯೇ ಇಲ್ಲಿ ಟ್ಯಾಬ್‌ಗಳನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ.

ನೊರೂಟ್ ಡೇಟಾ ಫೈರ್‌ವಾಲ್

ನೊರೂಟ್ ಡೇಟಾ ಫೈರ್‌ವಾಲ್

ಇದು ಇನ್ನೊಂದು ಅಪ್ಲಿಕೇಶನ್ ಆಗಿದ್ದು ರೂಟಿಂಗ್ ಮಾಡದೆಯೇ ಅಪ್ಲಿಕೇಶನ್‌ಗಳಿಗೆ ಇಂಟರ್ನೆಟ್ ಆಕ್ಸೆಸ್ ಅನ್ನು ಬ್ಲಾಕ್ ಮಾಡಲು ಇದು ಸಹಕಾರಿಯಾಗಲಿದೆ. ಬ್ಯಾಕ್‌ಗ್ರೌಂಡ್ ಡೇಟಾವನ್ನು ಮಾತ್ರ ನಿಮಗಿಲ್ಲಿ ಬ್ಲಾಕ್ ಮಾಡಬಹುದಾಗಿದೆ ಅಂತೆಯೇ ಫಾರ್‌ಗ್ರೌಂಡ್‌ನದ್ದಲ್ಲ. ಅಪ್ಲಿಕೇಶನ್‌ನ ಡೇಟಾ ಬಳಕೆಯನ್ನು ಇಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದೆ.

ಡ್ರಾಯ್ಡ್‌ವಾಲ್ - ಆಂಡ್ರಾಯ್ಡ್ ಫೈರ್‌ವಾಲ್

ಡ್ರಾಯ್ಡ್‌ವಾಲ್ - ಆಂಡ್ರಾಯ್ಡ್ ಫೈರ್‌ವಾಲ್

ನೀವು ಅನಿಯಮಿತ ಡೇಟಾ ಪ್ಲಾನ್ ಅನ್ನು ಪಡೆದುಕೊಂಡಿಲ್ಲ ಎಂದಾದಲ್ಲಿ ಇದು ಸೂಕ್ತ ಪರಿಹಾರವನ್ನು ನೀಡುತ್ತದೆ. ಇದನ್ನು ಅನ್‌ರೂಟೆಡ್ ಫೋನ್‌ಗಳಿಗಾಗಿ ಸಿದ್ಧಪಡಿಸಲಾಗಿದ್ದು ವೈಫೈ ಅಥವಾ ಸೆಲ್ಯುಲಾರ್ ಡೇಟಾವನ್ನು ಬಳಸಿಕೊಳ್ಳಲು ಅಪ್ಲಿಕೇಶನ್ ಮಿತಿಯನ್ನು ಇದು ಸೂಚಿಸುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
In this article we are giving you some tips on here is a way to save your mobile data by blocking the internet access apps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X