18 ವರ್ಷದೊಳಗಿನವರು ರಿಲಾಯನ್ಸ್ ಜಿಯೋ ಸಿಮ್ ಖರೀದಿಸುವುದು ಹೇಗೆ?

ಗುಡ್‌ ನ್ಯೂಸ್‌: 18 ವರ್ಷದೊಳಗಿನವರು ಸಹ ರಿಲಾಯನ್ಸ್ ಜಿಯೋ ಸಿಮ್ ಖರೀದಿಸಬಹುದು.

Written By:

ಮುಕೇಶ್‌ ಅಂಬಾನಿ ಮಾಲೀಕತ್ವದ ರಿಲಾಯನ್ಸ್ ಜಿಯೋ ಲಾಂಚ್‌ ಆಗಿ ಇನ್ನೇನು 2 ತಿಂಗಳುಗಳೇ ಕಳೆದಿದೆ. ಆದರೇ ಇನ್ನೂ ಹಲವರು ಜಿಯೋ 4G ಸಿಮ್ ಖರೀದಿಸಲು ಸಮಸ್ಯೆ ಎದುರಿಸುತ್ತಲೇ ಇದ್ದಾರೆ.

18 ವರ್ಷ ಒಳಗಿನವರಾಗಿದ್ದಲ್ಲಿ, ಜಿಯೋ ಸಿಮ್ ಖರೀದಿಸುವುದು ಸ್ವಲ್ಪ ಕಷ್ಟವೇ. ಸಿಮ್ ಖರೀದಿಸಲು ಕಾನೂನಿನ ಪ್ರಕಾರ 18 ವರ್ಷ ನಾಗರಿಕ ವಯಸ್ಸು ಆಗಿರಬೇಕು. ಆದರೆ ರಿಲಾಯನ್ಸ್ ಜಿಯೋ(Reliance Jio) ಖರೀದಿಯಲ್ಲಿ ಈ ಸಮಸ್ಯೆ ಎದುರಾಗುವುದಿಲ್ಲ. 18 ವರ್ಷ ಆಗಿಲ್ಲದಿದ್ದರೂ, ಈ ಕೆಳಗಿನ ಹಂತಗಳನ್ನು ಫಾಲೋ ಮಾಡುವ ಮುಖಾಂತರ ಸಿಮ್‌ ಖರೀದಿಸಬಹುದು.

ಡಿಸೆಂಬರ್ 3'ರ ಒಳಗೆ ರಿಲಾಯನ್ಸ್ ಜಿಯೋ 4G ಸಿಮ್ ಖರೀದಿಸಿದವರೇ ಜಾಣರು!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಜಿಯೋ ಆಫರ್‌ ಕೋಡ್ ಜೆನೆರೇಟ್ ಮಾಡಿ

ಮೊದಲಿಗೆ ಮೈಜಿಯೋ ಆಪ್‌ ಇನ್‌ಸ್ಟಾಲ್‌ ಮಾಡಿ, ಜಿಯೋ ಆಫರ್‌ ಕೋಡ್‌ ಅನ್ನು ಜೆನೆರೇಟ್ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಿಲಾಯನ್ಸ್ ಡಿಜಿಟಲ್ ಸ್ಟೋರ್‌ ಅಥವಾ ಡಿಎಕ್ಸ್ ಮಿನಿ ಸ್ಟೋರ್‌ಗೆ ಭೇಟಿ ನೀಡಿ

ಬಾರ್‌ಕೋಡ್‌ ಜೆನೆರೇಟ್ ಆದ ನಂತರ ನಿಮ್ಮ ಹತ್ತಿರದ ರಿಲಾಯನ್ಸ್ ಡಿಜಿಟಲ್ ಸ್ಟೋರ್‌ ಅಥವಾ ಡಿಎಕ್ಸ್ ಮಿನಿ ಸ್ಟೋರ್‌ಗೆ ಕೆಳಗಿನ ಡಾಕ್ಯುಮೆಂಟ್ಸ್‌ ಸಹಿತ ಭೇಟಿ ನೀಡಿ.

ಕಾಲೇಜ್‌ ಅಥವಾ ಶಾಲೆಯಲ್ಲಿ ನೀಡಿದ ಐಡಿ ಕಾರ್ಡ್ ನೀಡಿ

ರಿಲಾಯನ್ಸ್ ಜಿಯೋ ಸಿಮ್ ಪಡೆಯಲು ರಿಲಾಯನ್ಸ್ ಡಿಜಿಟಲ್ ಸ್ಟೋರ್‌ಗೆ ಹೋಗುವಾಗ ಮುಖ್ಯವಾಗಿ ಕಾಲೇಜ್‌ ಅಥವಾ ಶಾಲೆಯಲ್ಲಿ ನೀಡಿದ ಐಡಿಯ ಫೋಟೋ ಕಾಪಿಯನ್ನು ತೆಗೆದುಕೊಂಡು ಹೋಗಿ.

18 ವರ್ಷದೊಳಗಿನವರಾಗಿದ್ದಲ್ಲಿ ಇತರೆ ಯಾವ ಡಾಕ್ಯುಮೆಂಟ್ ನೀಡಬೇಕು?

ನಿಮ್ಮ ಶಿಕ್ಷಣ ಸಂಸ್ಥೆಯು ನೀಡಿದ ವ್ಯಾಲಿಡ್ ಐಡಿ ಕಾರ್ಡ್, ವಿಳಾಸ ಮತ್ತು ನಿಮ್ಮ ಪೋಷಕರ ಐಡಿ ಪ್ರೂಫ್. ಅಂದಹಾಗೆ ಜಿಯೋ ಸಿಮ್ ಕಾರ್ಡ್‌ ಅನ್ನು ನಿಮ್ಮ ಫೋಷಕರ ಮೇಲ್ವಿಚಾರಣೆಯಲ್ಲಿ ಖರೀದಿಸುತ್ತಿರುವ ಬಗ್ಗೆ ಎಚ್ಚರವಿರಲಿ. ಅಲ್ಲದೇ ನಿಮ್ಮ ಸ್ವಂತ ಐಡಿ ಕಾರ್ಡ್‌ ಜೊತೆಗೆ ಪಾಸ್‌ಪೋರ್ಟ್‌ ಸೈಜ್‌ ಫೋಟೋವನ್ನು ತೆಗೆದುಕೊಂಡು ಹೋಗಿ.

ಹೆಚ್ಚುವರಿ ವೈಫೈ ಡಾಟಾ ಬೆನಿಫಿಟ್ ಪಡೆಯಿರಿ

ಸ್ಟೂಡೆಂಟ್ ಸಿಮ್‌ ಸ್ಕೀಮ್‌ನಲ್ಲಿ, ರಿಲಾಯನ್ಸ್ ಜಿಯೋ 25 ಶೇಕಡ ಹೆಚ್ಚುವರಿ ವೈಫೈ ಡಾಟಾ ಬೆನಿಫಿಟ್ ಅನ್ನು ಪ್ರತಿ ರೀಚಾರ್ಜ್‌ಗೆ ನೀಡುತ್ತಿದೆ. ವೈಫೈ ಡಾಟಾವು ಉಚಿತವಾಗಿ ನೀಡುವ ಇಂಟರ್ನೆಟ್ ಡಾಟಾವಾಗಿದ್ದು, ಪಬ್ಲಿಕ್ ಜಿಯೋ ಹಾಟ್‌ಸ್ಪಾಟ್‌ಗಳಿಗೆ ಕನೆಕ್ಟ್ ಆಗಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 Read more about:
English summary
How to Get a Reliance Jio SIM Card if You're Below 18 Years of Age. To know more visit kannada.gizbot.com
Please Wait while comments are loading...
Opinion Poll

Social Counting