ಗೂಗಲ್‌ನ ವಿಸ್ಮಯ ಜಗತ್ತನ್ನು ನೋಡ ಬನ್ನಿ

By Shwetha
|

ವಿಜ್ಞಾನ ತಂತ್ರಜ್ಞಾನ ಮುಂದುವರಿದಂತೆ ನಾವೂ ಮುಂದುವರಿಯಬೇಕು. ಜಗತ್ತಿನ ವೇಗಕ್ಕೆ ಸರಿಯಾಗಿ ನಾವೂ ಹೆಜ್ಜೆ ಹಾಕಬೇಕು. ಈ ಹೆಜ್ಜೆ ದೃಢವಾಗಿದ್ದಷ್ಟೂ ನಮ್ಮ ಕಲಿಯುವಿಕೆ ಹೆಚ್ಚಾಗುತ್ತದೆ ಮತ್ತು ನಾವು ಮಾರ್ಪಾಡಾಗುತ್ತೇವೆ.

ಪ್ರಪಂಚದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಗಳು ಮಾನವ ಜೀವನವನ್ನು ನವೀಕರಿಸುವ ಪ್ರಯತ್ನದಲ್ಲಿ ಯಾವಾಗಲೂ ತೊಡಗಿರುತ್ತವೆ. ಯಾವುದೇ ಅಡೆತಡೆ ಬಂದರೂ ಅದನ್ನು ನಿವಾರಿಸುವ ಮನಸ್ಸತ್ವವನ್ನು ಈ ಅಪ್‌ಡೇಶನ್ ನಮಗೆ ನೀಡುತ್ತದೆ. ಪೃಕೃತಿ ಯಾವುದೇ ರೀತಿಯ ಸಮಸ್ಯೆಯನ್ನು ತಂದೊಡ್ಡಿದರೂ ಅದನ್ನು ನಿವಾರಿಸುವ ಶಕ್ತಿ ನಮಲ್ಲಿ ಸ್ವತಃ ಉದ್ಭವಗೊಳ್ಳುತ್ತದೆ.

ಉದಾಹರಣೆಗೆ ಗೂಗಲ್ ತಂತ್ರಜ್ಞಾನದೆಡೆಗೆ ನಾವು ನೋಡಿದಾಗ ನಮ್ಮ ಕೈಯಲ್ಲಿರುವ ಸಣ್ಣ ಫೋನ್‌ನ ಮೂಲಕ ಏನೆಲ್ಲಾ ಪ್ರಯತ್ನಗಳನ್ನು ಮಾಡಲು ಅದು ಉತ್ಸುಕವಾಗಿರುತ್ತದೆ ಎಂಬುದು ಅದರ ಹೊಸ ತಂತ್ರಜ್ಞಾನಗಳಿಂದ ನಮಗೆ ತಿಳಿದು ಬರುತ್ತದೆ. ಕಂಪ್ಯೂಟರ್, ಟ್ಯಾಬ್ಲೆಟ್, ಸ್ಮಾರ್ಟ್‌ಫೋನ್ ಹೀಗೆ ಒಂದಿಲ್ಲೊಂದು ಡಿವೈಸ್‌ನಲ್ಲಿ ಅದು ಮಾಡುವ ಕಾರುಬಾರಿಗೆ ಸೆಲ್ಯೂಟ್ ಹೊಡೆಯಲೇಬೇಕು.

ತನ್ನ ಪ್ರತಿಯೊಂದು ಅಪ್ಲಿಕೇಶನ್‌ನಲ್ಲೂ ಹೊಸತನವನ್ನು ತರಲು ಪ್ರಯತ್ನಿಸುವ ಗೂಗಲ್ ಬೇರೆಯದಕ್ಕಿಂತ ಕೊಂಚ ಭಿನ್ನವಾಗಿ ಆಲೋಚಿಸುತ್ತದೆ. ಅದರ ಚಿಂತನೆಯ ಸಾಮರ್ಥ್ಯ ನಮ್ಮ ಅಳತೆಗೂ ಮೀರಿದ್ದು ಎಂಬುದು ಅದರ ಹೊಸ ಹೊಸ ಅಪ್ಲಿಕೇಶನ್‌ಗಳ ಸಾಲು ಬರುವಾಗಲೇ ಅರ್ಥವಾಗುತ್ತದೆ.

ಹುಡುಕಾಟದ ಮೂಲಕ ನಾವು ಮಾಹಿತಿ ಸಂಗ್ರಹಿಸುವ ವಿಧಾನವನ್ನು ಈಗಾಗಲೇ ಗೂಗಲ್ ಬದಲಾಯಿಸಿದೆ, ಕ್ರೋಮ್‌ಕಾಸ್ಟ್‌ನೊಂದಿಗೆ ಮಾಧ್ಯಮ ವಿಷಯವನ್ನು ನಾವು ಅರಿತುಕೊಳ್ಳುತ್ತೇವೆ ಎಂಬುದನ್ನು ಅದು ಬದಲಾಯಿಸಿದೆ, ಹಾಗೂ ಗ್ಲಾಸ್‌ನೊಂದಿಗೆ ಮಾಹಿತಿಯನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎಂಬುದನ್ನು ಅದು ಈಗಾಗಲೇ ಬದಲಾಯಿಸುತ್ತಿದೆ.

ಗೂಗಲ್‌ನ ಮೂನ್‌ಶಾಟ್ ಲ್ಯಾಬ್‌ ಕೂಡ ಇದೀಗ ಪ್ರಸಿದ್ಧಿಗೆ ಬಂದಿದ್ದು ಪರಿಗಣನೆಗೆ ಬರುವಂತಹ ಸಂಶೋಧನಾ ಉತ್ಪನ್ನಗಳನ್ನು ಅದು ಅಲ್ಲಿ ನಿರ್ವಹಿಸುತ್ತಿರುತ್ತದೆ.

#1

#1

ಗೂಗಲ್‌ನ ಚಾಲಕ ರಹಿತ ಕಾರಿನ ಮೂಲಕ ಹೊಸ ಸಂಶೋಧನೆಯನ್ನು ಅದು ಜಗತ್ತಿಗೆ ನೀಡಿದೆ ಇದರಿಂದ ಟ್ರಾಫಿಕ್‌ನಲ್ಲಿ ಮಹತ್ತರ ಬದಲಾವಣೆಗಳನ್ನು ಖಂಡಿತ ನಾವು ನೋಡಬಹುದು. ಮಾನವ ನಿಯಂತ್ರಣವಿಲ್ಲದೆ ಚಲಿಸುವ ಈ ಕಾರು ನಿಜಕ್ಕೂ ಭವಿಷ್ಯದ ದಿಕ್ಕನೇ ಬದಲಾಯಿಸಬಹುದು.

#2

#2

ಅಯಸ್ಕಾಂತವನ್ನು ಬಳಸಿಕೊಂಡು ಗೂಗಲ್ ಎಕ್ಸ್ ಹೋವರ್ ಬೋರ್ಡ್ ಚಾಲನೆಯಾಗುತ್ತದೆ. ಇದು ಹಾರುವ ಸಾಮರ್ಥ್ಯವನ್ನು ಕೂಡ ಹೊಂದಿದೆ.

#3

#3

ಸೈಕಲ್‌ನಲ್ಲೇ ಸರ್ಕಸ್ ಅನ್ನು ನೀವೂ ಮಾಡಬಹುದು ಅಂತಹದ್ದೊಂದು ಪರಿಕಲ್ಪನೆಗೆ ಮುನ್ನುಡಿ ಬರೆಯಲಿದೆ ಗೂಗಲ್. ಯಾವಾಗಲಾದರೂ ದಾರಿ ಬದಿಯಲ್ಲಿ ಈ ರೀತಿಯ ಸರ್ಕಸ್ ಮಾಡುವವರನ್ನು ನೀವು ನೋಡಿರಬಹುದು ಆಗ ನಮ್ಮ ಮನದಲ್ಲಿ ನಾವು ಹೀಗೆ ಮಾಡಿದರೆ ಎಂಬ ಕಲ್ಪನೆ ಬಂದೇ ಬರುತ್ತದೆ ಈ ಕಲ್ಪನೆಯನ್ನು ಗೂಗಲ್ ಖಂಡಿತ ಸಾಕಾರಗೊಳಿಸಲಿದೆ.

#4

#4

ಗೂಗಲ್ ತನ್ನದೇ ಆದ ಹೊಸ ಕಂಪೆನಿಯೊಂದನ್ನು ಆರಂಭಿಸಿ ತನ್ನ ಕಾರ್ಯವನ್ನು ನಿಲ್ಲಿಸಲಿದೆ. ಕ್ಯಾಲಿಕೋ ಎಂಬ ಹೆಸರಿನ ಕಂಪೆನಿ ಇದಾಗಿದೆ.

#5

#5

ಗೂಗಲ್ ಗ್ಲಾಸ್ ಬಳಸಿಕೊಂಡು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರನ್ನು ಪರೀಕ್ಷಿಸಬಹುದಾಗಿದೆ. ಇದು ತಂತ್ರಜ್ಞಾನಕ್ಕೆ ನಮ್ಮನ್ನು ಇನ್ನೂ ಹತ್ತಿರವಾಗಿಸಲಿದೆ.

#6

#6

ಸ್ಮಾರ್ಟ್ ಕಾಂಟ್ಯಾಕ್ಟ್ ಲೆನ್ಸ್ ಅನ್ನು ಅಭಿವೃದ್ಧಿಪಡಿಸಲಿರುವ ಗೂಗಲ್ ಇದು ಮಧುಮೇಹಿಗಳಿಗೆ ತಮ್ಮ ಗ್ಲೂಕೋಸ್ ಹಂತವನ್ನು ನಿಯಂತ್ರಣದಲ್ಲಿಡುವ ಸಹಕಾರವನ್ನು ಒದಗಿಸಲಿದೆ.

#7

#7

ಸಂಪೂರ್ಣ ಜಗತ್ತಿಗೆ ಅಂತರ್ಜಾಲವನ್ನು ಒದಗಿಸುವ ಮಹತ್ತರ ಸೇವೆಯನ್ನು ಪ್ರೊಜೆಕ್ಟ್ ಲೂನ್ ಬಳಕೆದಾರರಿಗೆ ಒದಗಿಸಲಿದೆ.

#8

#8

ಇದೊಂದು ಸ್ಮಾರ್ಟ್‌ಫೋನ್ ಆಗಿದ್ದು ತಮ್ಮ ಎಲ್ಲಾ ಬಯಕೆಗಳನ್ನು ಬಳಕೆದಾರರು ಇದರ ಮೂಲಕ ಸಾಧಿಸಬಹುದಾಗಿದೆ.

#9

#9

ಬಾಹ್ಯಾಕಾಶಕ್ಕೆ ಎಲಾವೇಟರ್ ಅನ್ನು ಸಂಪರ್ಕಪಡಿಸುವ ಮಹತ್ತರ ಕಾರ್ಯವನ್ನು ಗೂಗಲ್ ಮಾಡಲಿದೆ. ಯಾರಿಗೆ ಗೊತ್ತು ಗೂಗಲ್ ಖಂಡಿತ ಈ ಪ್ರಯತ್ನವನ್ನು ಸಾಧಿಸಿ ತೋರಿಸಲಿದೆ.

#10

#10

ಆಂಡ್ರಾಯ್ಡ್ ಅನ್ನು ವಾಚ್‌ಗೆ ಪರಿವರ್ತಿಸುವ ಕಾರ್ಯದಲ್ಲಿ ಸ್ವಲ್ಪ ಬ್ಯುಸಿಯಾಗಿರುವ ಗೂಗಲ್ ಸದ್ಯದಲ್ಲೇ ಈ ಕಾರ್ಯದಲ್ಲಿ ಜಯವನ್ನು ಗಳಿಸಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X