ಆಪತ್ಕಾಲದಲ್ಲಿ ನೆರವಾಗುವ ಆಪತ್ಬಾಂಧವ: ವಾಟ್ಸಾಪ್ ವಾಯ್ಸ್ ಕಾಲಿಂಗ್

By Shwetha
|

ಎಲ್ಲಾ ಆಂಡ್ರಾಯ್ಡ್ ಬಳಕೆದಾರರಿಗೆ ವಾಟ್ಸಾಪ್ ವಾಯ್ಸ್ ಕಾಲಿಂಗ್ ಫೀಚರ್ ಅನ್ನು ಬಿಡುಗಡೆ ಮಾಡುತ್ತಿದೆ. 700 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಇತ್ತೀಚೆಗೆ ಬಿಡುಗಡೆ ಮಾಡಿರುವ ಫೀಚರ್‌ಗಳು ಕೇವಲ ಕೆಲವೇ ಬಳಕೆದಾರರಿಗೆ ಲಭ್ಯವಿದೆ. ಅದಾಗ್ಯೂ ಎಲ್ಲಾ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗುವಂತೆ ವಾಟ್ಸಾಪ್ ವಾಯ್ಸ್ ಕಾಲಿಂಗ್ ಫೀಚರ್ ಅನ್ನು ಪರಿಚಯಿಸುತ್ತಿದೆ.

ಓದಿರಿ: ವೈಫೈ ಕುರಿತು ನೀವು ಅರಿಯದ 10 ಸಂಗತಿಗಳು

ಇಂದಿನ ಲೇಖನದಲ್ಲಿ ಈ ವಿಶೇಷ ಸೌಲಭ್ಯವನ್ನು ಸಕ್ರಿಯಗೊಳಿಸುವುದು ಹೇಗೆ ಎಂಬುದನ್ನು ಕೆಲವೊಂದು ಸರಳ ಸಲಹೆಗಳ ಮೂಲಕ ನೋಡೋಣ.

ವಾಟ್ಸಾಪ್‌

ವಾಟ್ಸಾಪ್‌

ಈ ಲಿಂಕ್ ಮೂಲಕ ವಾಟ್ಸಾಪ್‌ನ ಇತ್ತೀಚಿನ ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್‌ಸೈಟ್‌ನ ಇತ್ತೀಚಿನ ಆವೃತ್ತಿ

ವೆಬ್‌ಸೈಟ್‌ನ ಇತ್ತೀಚಿನ ಆವೃತ್ತಿ

ವಾಟ್ಸಾಪ್ ವೆಬ್‌ಸೈಟ್‌ನ ಇತ್ತೀಚಿನ ಆವೃತ್ತಿ 2.12.14 ಆಗಿದೆ. ನೀವು ಗೂಗಲ್ ಪ್ಲೇನಿಂದ ಡೌನ್‌ಲೋಡ್ ಮಾಡುತ್ತಿದ್ದೀರಿ ಎಂದಾದಲ್ಲಿ ಆವೃತ್ತಿ 2.11.561 ಆಗಿದೆ.

ವಾಟ್ಸಾಪ್ ಕರೆ

ವಾಟ್ಸಾಪ್ ಕರೆ

ಇತ್ತೀಚಿನ ವಾಟ್ಸಾಪ್ ಆವೃತ್ತಿಯನ್ನು ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಹೊಂದಿದ ನಂತರ, ನಿಮ್ಮ ಸಂಖ್ಯೆಗೆ ವಾಟ್ಸಾಪ್ ಕರೆ ಸಕ್ರಿಯಗೊಳಿಸಿರುವ ಯಾರಿಗಾದರೂ ಕರೆಮಾಡಲು ತಿಳಿಸಿ.

ವಾಟ್ಸಾಪ್ ವಾಯ್ಸ್ ಕಾಲಿಂಗ್‌

ವಾಟ್ಸಾಪ್ ವಾಯ್ಸ್ ಕಾಲಿಂಗ್‌

ನೆನಪಿರಲಿ ವಾಟ್ಸಾಪ್ ವಾಯ್ಸ್ ಕಾಲಿಂಗ್‌ನಲ್ಲಿ ಮಿಸ್ ಕಾಲ್ ಉಪಯೋಗವಾಗುವುದಿಲ್ಲ.

ಕರೆ

ಕರೆ

ಕರೆಯನ್ನು ನೀವು ಸ್ವೀಕರಿಸಲೇಬೇಕು ಮತ್ತು ವಾಟ್ಸಾಪ್ ವಾಯ್ಸ್ ಕಾಲಿಂಗ್ ಸಕ್ರಿಯಗೊಳಿಸಲು ಕರೆ ಡಿಸ್‌ಕನೆಕ್ಟ್ ಮಾಡುವ ಮುನ್ನ 5 ನಿಮಿಷಗಳ ಕಾಲ ನೀವು ಕಾಯಬೇಕು.

ಸ್ಮಾರ್ಟ್‌ಫೋನ್‌

ಸ್ಮಾರ್ಟ್‌ಫೋನ್‌

ನಿಮ್ಮ ಸ್ಮಾರ್ಟ್‌ಫೋನ್‌ಗೆ ಈ ಫೀಚರ್ ಸಕ್ರಿಯಗೊಂಡ ನಂತರ, ವಾಟ್ಸಾಪ್‌ನಲ್ಲಿ ಮೂರು ಟ್ಯಾಬ್‌ಗಳು ರಚನೆಯಾಗಿರುವುದನ್ನು ನಿಮಗೆ ಕಾಣಬಹುದು.

ಮೂರು ಟ್ಯಾಬ್‌

ಮೂರು ಟ್ಯಾಬ್‌

ಒಂದು ಟ್ಯಾಬ್ ಕರೆಗಾಗಿ, ಇನ್ನೊಂದು ಚಾಟ್‌ಗಾಗಿ ಮತ್ತೊಂದು ಸಂಪರ್ಕಗಳಿಗಾಗಿ.

ವಾಟ್ಸಾಪ್ ಬೀಟಾ ಆವೃತ್ತಿ

ವಾಟ್ಸಾಪ್ ಬೀಟಾ ಆವೃತ್ತಿ

ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಬೀಟಾ ಆವೃತ್ತಿಯನ್ನು ವಾಟ್ಸಾಪ್ ವೆಬ್‌ಸೈಟ್ ಮೂಲಕ ಹೊರತಂದಿದೆ ಈ ಆವೃತ್ತಿ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.

ವಾಲ್‌ಪೇಪರ್

ವಾಲ್‌ಪೇಪರ್

ವಾಟ್ಸಾಪ್ ಬೀಟಾ ಆವೃತ್ತಿಯಲ್ಲಿ ಬ್ಯಾಕ್‌ಗ್ರೌಂಡ್ ವಾಲ್‌ಪೇಪರ್ ಇದೀಗ ಬದಲಾಗಿದ್ದು ಸೆಟ್ಟಿಂಗ್ಸ್ ಹೋಗುವುದಕ್ಕೆ ಬದಲಾಗಿ ಚಾಟ್ ವಿಂಡೋದಲ್ಲಿ ನೇರವಾಗಿ ಈ ವಾಲ್‌ಪೇಪರ್ ಅನ್ನು ನಿಮಗೆ ಅಳವಡಿಸಿಕೊಳ್ಳಬಹುದಾಗಿದೆ.

ತಾಜಾ ಇಂಟರ್ಫೇಸ್

ತಾಜಾ ಇಂಟರ್ಫೇಸ್

ತಾಜಾ ಇಂಟರ್ಫೇಸ್ ನಿಮಗೆ ಇದರಲ್ಲಿ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
In this article we can see How to Activate WhatsApp Calling.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X